ETV Bharat / entertainment

ಚಾಮರಾಜನಗರ: ವೆಂಕಟರಮಣಸ್ವಾಮಿ ದೇವಾಲಯಕ್ಕೆ ಅಣ್ಣಾವ್ರ ಕುಟುಂಬ ಭೇಟಿ - Venkataramanaswamy temple in chamarajanagara

ಬೂದುಬಾಳು ಗ್ರಾಮಕ್ಕೆ ರಾಜ್​ಕುಮಾರ್ ಕುಟುಂಬ ಭೇಟಿ - ವೆಂಕಟರಮಣಸ್ವಾಮಿ ದರ್ಶನ ಪಡೆದ ಅಣ್ಣಾವ್ರ ಕುಟುಂಬ - ದೇವರಿಗೆ ವಿಶೇಷ ಪೂಜೆ ಕೊಟ್ಟ ದೊಡ್ಮನೆ ಮಂದಿ.

rajkumar family
ರಾಜ್​ಕುಮಾರ್ ಕುಟುಂಬ
author img

By

Published : Dec 28, 2022, 2:26 PM IST

Updated : Dec 28, 2022, 3:00 PM IST

ವೆಂಕಟರಮಣಸ್ವಾಮಿ ದೇವಾಲಯಕ್ಕೆ ಭೇಟಿ ಕೊಟ್ಟ ರಾಜ್​ ಕುಟುಂಬ

ಚಾಮರಾಜನಗರ: ಚಿಕ್ಕ ತಿರುಪತಿ ಎಂದೇ ಕರೆಯಲ್ಪಡುವ ಹನೂರು ತಾಲೂಕಿನ ಸಿಂಗಾನಲ್ಲೂರು ಸಮೀಪದ ಬೂದುಬಾಳು ಗ್ರಾಮದ ವೆಂಕಟರಮಣಸ್ವಾಮಿ ದೇವಾಲಯಕ್ಕೆ ಇಂದು ಅಣ್ಣಾವ್ರ ಕುಟುಂಬ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದರು. ಅಶ್ವಿನಿ ಪುನೀತ್ ರಾಜ್​ಕುಮಾರ್, ರಾಘವೇಂದ್ರ ರಾಜ್​ಕುಮಾರ್, ವಿನಯ್ ರಾಜ್​ಕುಮಾರ್ ಸೇರಿದಂತೆ ಮನೆ ಮಂದಿ ಮನೆ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸೇವಿಸಿದ್ದಾರೆ.

ಶಿವ ರಾಜ್​ಕುಮಾರ್, ರಾಘವೇಂದ್ರ ರಾಜ್​ಕುಮಾರ್ ಹಾಗೂ ಪುನೀತ್ ರಾಜ್​ಕುಮಾರ್ ಮೂವರು ಒಟ್ಟಾಗಿ ಈ ದೇವಾಲಯಕ್ಕೆ ಬರಲು ದಿನಾಂಕ ನಿಗದಿಯಾಗಿತ್ತು. ಆದರೆ, ಅಷ್ಟರಲ್ಲಾಗಲೇ ಪುನೀತ್ ರಾಜ್​ಕುಮಾರ್​​ ಕೊನೆಯುಸಿರೆಳೆದರು. ಅಪ್ಪು ನಿಧನರಾಗಿ ಒಂದು ವರ್ಷದ ನಂತರ ಈಗ ಮನೆ ಮಂದಿ ಬಂದು ಮನೆ ದೇವರ ದರ್ಶನ ಪಡೆದಿದ್ದಾರೆ. ದೇವಾಲಯ ಕಂಡು ಎಲ್ಲರೂ ಸಂತಸ ಪಟ್ಟರು ಎಂದು ದೇವಾಲಯದ ಅರ್ಚಕರು ಮಾಹಿತಿ ನೀಡಿದ್ದಾರೆ.

ಇನ್ನು, ಅಣ್ಣಾವ್ರ ಕುಟುಂಬ ದೇವಾಲಯಕ್ಕೆ ಬಂದ ಮಾಹಿತಿ ತಿಳಿದು ಸಾವಿರಾರು ಸಂಖ್ಯೆಯಲ್ಲಿ ಜನರು ಬಂದು ಸೇರಿದ್ದರು. ದೊಡ್ಮನೆ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಹರಸಾಹಸ ಪಟ್ಟರು.

ಇದನ್ನೂ ಓದಿ: ನನಸಾಗಲಿಲ್ಲ ದೊಡ್ಮನೆ ಮಕ್ಕಳ ಆ ಕನಸು.. ತಮ್ಮನ ನೆನೆದು ಶಿವಣ್ಣ ಭಾವುಕ

Last Updated : Dec 28, 2022, 3:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.