ETV Bharat / entertainment

ತಾವು ಕೆಲಸ ನಿರ್ವಹಿಸಿದ್ದ ಬಿಎಂಟಿಸಿ ಡಿಪೋಗೆ ಭೇಟಿ ಕೊಟ್ಟ ರಜನಿಕಾಂತ್: ಸಿಬ್ಬಂದಿ ಫುಲ್​ ಖುಷ್

ಶಾಂತಿನಗರದ ಬಿಎಂಟಿಸಿ ಡಿಪೋ 4ಕ್ಕೆ ಇಂದು ಬೆಳಗ್ಗೆ ಸೂಪರ್ ಸ್ಟಾರ್ ರಜನಿಕಾಂತ್ ಸರ್ಪೈಸ್ ಭೇಟಿ ಕೊಟ್ಟಿದ್ದಾರೆ.

Rajinikanth visited the BMTC Depo
ಬಿಎಂಟಿಸಿ ಡಿಪೋಗೆ ಭೇಟಿ ಕೊಟ್ಟ ರಜನಿಕಾಂತ್
author img

By ETV Bharat Karnataka Team

Published : Aug 29, 2023, 1:40 PM IST

Updated : Aug 29, 2023, 7:59 PM IST

ಬಿಎಂಟಿಸಿ ಸಿಬ್ಬಂದಿ ಜೊತೆ ತಲೈವಾ

ಬೆಂಗಳೂರು: ನಗರ ಸಾರಿಗೆ ಬಸ್​ನಲ್ಲಿ ಕಂಡಕ್ಟರ್ ಆಗಿ ಸೇವೆ ಸಲ್ಲಿಸಿರುವ ರಜನಿಕಾಂತ್​ ಸದ್ಯ ಭಾರತೀಯ ಚಿತ್ರರಂಗದ ಸುಪ್ರಸಿದ್ಧ ನಟ. ಮನರಂಜನಾ ಕ್ಷೇತ್ರದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದು, ಸಾಕಷ್ಟು ಹೆಸರು ಸಂಪಾದಿಸಿರುವ ಬಹುಭಾಷಾ ನಟ ರಜನಿಕಾಂತ್ ಬದುಕು ಕಟ್ಟಿಕೊಳ್ಳಲು ವೃತ್ತಿಜೀವನ ಆರಂಭಿಸಿದ್ದ ಸ್ಥಳಕ್ಕೆ ಅಚ್ಚರಿಯ ಭೇಟಿ ಕೊಟ್ಟಿದ್ದಾರೆ. ಜೈಲರ್​ ಯಶಸ್ಸಿನಲ್ಲಿರುವ ನಟನನ್ನು ಕಂಡ ಬೆಂಗಳೂರು ಸಾರಿಗೆ ಸಿಬ್ಬಂದಿ ಆಶ್ಚರ್ಯಚಕಿತರಾದರು. ಒಂದು ಕ್ಷಣ ತಮ್ಮನ್ನೇ ತಾವು ನಂಬದಂತಾದರು.

ಕೆಲಸ ನಿರ್ವಹಿಸಿದ ದಿನಗಳ ಮೆಲುಕು.... ಶಾಂತಿನಗರ ಬಿಎಂಟಿಸಿ ಡಿಪೋ 4ಕ್ಕೆ ಇಂದು ಬೆಳಗ್ಗೆ ಸೂಪರ್ ಸ್ಟಾರ್ ರಜನಿಕಾಂತ್ ಸರ್ಪೈಸ್ ವಿಸಿಟ್ ಕೊಟ್ಟರು. ಸಾರಿಗೆ ಸಿಬ್ಬಂದಿಯನ್ನು ಭೇಟಿ ಮಾಡಿ, ಅವರೊಂದಿಗೆ ತಾವು ಕೆಲಸ ನಿರ್ವಹಿಸಿದ ದಿನಗಳನ್ನು ಮೆಲುಕು ಹಾಕಿದರು. ಈ ವೇಳೆ ಬಿಎಂಟಿಸಿ ಸಿಬ್ಬಂದಿ, ಅಧಿಕಾರಿ ವರ್ಗ ರಜನಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಬಳಿಕ ಗ್ರೂಪ್ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.

Rajinikanth visited the BMTC Depo
ಬಿಎಂಟಿಸಿ ಸಿಬ್ಬಂದಿ ಜೊತೆ ತಲೈವಾ

ರಜನಿಕಾಂತ್ ಭೇಟಿಗಾಗಿ ಗಣ್ಯರು ಸಾಕಷ್ಟು ಸಮಯ ಕಾಯುತ್ತಾರೆ. ಅಂತಹದ್ದರಲ್ಲಿ ತಾವಿರುವ ಸ್ಥಳಕ್ಕೆ ಬಂದು ಭೇಟಿ ಮಾಡಿದ್ದಕ್ಕೆ ಬಿಎಂಟಿಸಿ ಸಿಬ್ಬಂದಿಗೆ ಅಚ್ಚರಿ ಜೊತೆಗೆ ಪರಮಾನಂದವಾಯಿತು. ರಜನಿಕಾಂತ್ ಮೂಲ ಹೆಸರು ಶಿವಾಜಿ ರಾವ್ ಗಾಯಕ್ವಾಡ್. ಬೆಂಗಳೂರಿನ ಮರಾಠಿ ಕುಟುಂಬದಲ್ಲಿ ಜನಿಸಿದ್ದ ರಜನಿಕಾಂತ್ ಜೀವನಕ್ಕಾಗಿ ಕೂಲಿ, ಕಾರ್ಪೆಂಟರ್ ವೃತ್ತಿ ಮಾಡಿದ್ದರು. ನಂತರ ಬೆಂಗಳೂರು ಸಾರಿಗೆ ಸೇವೆ ಬಸ್‌ನಲ್ಲಿ ಕಂಡಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದರು. ಕಂಡಕ್ಟರ್ ವೃತ್ತಿ ಜೊತೆ ಜೊತೆಗೆ ನಾಟಕಗಳಲ್ಲಿಯೂ ನಟಿಸಿದ್ದರು. ಬಳಿಕ ಕಂಡಕ್ಟರ್ ವೃತ್ತಿಗೆ ಗುಡ್ ಬೈ ಹೇಳಿ ಸಿನಿ ರಂಗವನ್ನು ಸೇರಿಕೊಂಡರು. ಸದ್ಯ ಭಾರತ ಮಾತ್ರವಲ್ಲದೇ ವಿಶ್ವಾದ್ಯಂತ ದೊಡ್ಡ ಮಟ್ಟದ ಹೆಸರು ಸಂಪಾದಿಸಿದ್ದಾರೆ.

ಇದನ್ನೂ ಓದಿ: RCB ಜೆರ್ಸಿ ಸೀನ್​ ಕಟ್​ ಮಾಡಿ: ಜೈಲರ್​ ನಿರ್ಮಾಪಕರಿಗೆ ದೆಹಲಿ ಹೈಕೋರ್ಟ್​​ ಆದೇಶ!

ರಜನಿಕಾಂತ್ ಅವರು ಬಣ್ಣ ಹಚ್ಚುವುದಕ್ಕೂ ಮುನ್ನ ಬಿಎಂಟಿಸಿ ಬಸ್ ಕಂಡಕ್ಟರ್ ಆಗಿ ಕೆಲ ಕಾಲ ದುಡಿಮೆ ಮಾಡಿದ್ದಾರೆ. ಬೆಂಗಳೂರಿನ ಶಾಂತಿನಗರದ ಬಿಎಂಟಿಸಿ ಡಿಪೋದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ನಟನ ಜೈಲರ್ ಸಿನಿಮಾ ಸೂಪರ್​ ಹಿಟ್ ಆಗಿದ್ದು, ತಾವು ಕೆಲಸ ಮಾಡುತ್ತಿದ್ದ ಜಯನಗರದ ಬಿಎಂಟಿಸಿ ಡಿಪೋಗೆ ಸರಿ ಸುಮಾರು 11.30ಕ್ಕೆ ಭೇಟಿ ನೀಡಿದರು. 11.45 ರವರೆಗೂ ಡಿಪೋದಲ್ಲೇ ರಜನಿಕಾಂತ್ ಉಪಸ್ಥಿತರಿದ್ದರು.

Rajanikant in raghavendraswamy math
ರಾಯರ ಮಠಕ್ಕೆ ರಜನಿಕಾಂತ್ ಭೇಟಿ

ಅಷ್ಟೇ ಅಲ್ಲ ಅಲ್ಲಿದ್ದ ಸಿಬ್ಬಂದಿ ಜೊತೆ ಮಾತನಾಡಿ ಡಿಪೋ ಒಳಗೆ ಸುತ್ತಾಡಿದರು.‌ ರಜನಿಕಾಂತ್ ‌ಅವರನ್ನು ಕಣ್ತುಂಬಿಕೊಂಡ ಸಿಬ್ಬಂದಿ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು. ಆದರೆ ರಜನಿಕಾಂತ್ ಜಯನಗರ ಬಿಎಂಟಿಸಿ ಡಿಪೋಗೆ ಏಕೆ ಬಂದಿದ್ದರು, ಅಷ್ಟಕ್ಕೂ ಈ ಧಿಡೀರ್ ಭೇಟಿ ಯಾವ ಕಾರಣಕ್ಕೆ ಅನ್ನೋದರ ಬಗ್ಗೆ ನಿಖರ ಮಾಹಿತಿ ಇಲ್ಲ. ಸಿನಿಮಾ ಬಿಡುಗಡೆಗೂ ಮುನ್ನ ನಟ ಪ್ರಯಾಣ ಆರಂಭಿಸಿದ್ದಾರೆ. ಆಧ್ಯಾತ್ಮಿಕ ಪ್ರವಾಸ, ಗಣ್ಯರ ಭೇಟಿ ಮೂಲಕ ಗಮನ ಸೆಳೆದಿದ್ದ ನಟ ಇಂದು ವೃತ್ತಿ ಆರಂಭಿಸಿದ ಸ್ಥಳಕ್ಕೆ ಭೇಟಿ ಕೊಟ್ಟು ಸದ್ದು ಮಾಡಿದ್ದಾರೆ. ರಜನಿಕಾಂತ್ ತಾವು ಚಿಕ್ಕಂದಿನಲ್ಲಿ ಆಟ ಆಡಿ ಬೆಳೆದ ಪರಿಸರದಲ್ಲಿರುವ ಸೀತಾಪತಿ ಅಗ್ರಹಾರದ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ, ರಾಯರ ದರ್ಶನ ಪಡೆದರು.

  • #WATCH | Superstar Rajinikanth paid a surprise visit to depot number 4 of BMTC (Bengaluru Metropolitan Transport Corporation) in Bengaluru, Karnataka today.

    (Video Source: BMTC) pic.twitter.com/luzdpkdnNh

    — ANI (@ANI) August 29, 2023 " class="align-text-top noRightClick twitterSection" data=" ">

ಇದನ್ನೂ ಓದಿ: Jawan: ಎಸ್​ಆರ್​ಕೆ ಸಿನಿಮಾ ಸದ್ದು - ಖ್ಯಾತ ಥಿಯೇಟರ್​ನಲ್ಲಿ ಮುಂಜಾನೆ 6 ಗಂಟೆಗೆ ಜವಾನ್​ ಪ್ರದರ್ಶನ!

Last Updated : Aug 29, 2023, 7:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.