ETV Bharat / entertainment

Jailer: ನಾಳೆ ಜೈಲರ್ ಬಿಡುಗಡೆ - ಇಂದು ಹಿಮಾಲಯ ಪ್ರವಾಸ ಕೈಗೊಂಡ ತಲೈವಾ ರಜನಿಕಾಂತ್​​ - Jailer

Rajinikanth to Himalayas: ಸೂಪರ್​ ಸ್ಟಾರ್​ ರಜನಿಕಾಂತ್​ ಹಿಮಾಲಯ ಪ್ರವಾಸ ಕೈಗೊಂಡಿದ್ದು, ಇಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.

Rajinikanth heads to the Himalayas
ಹಿಮಾಲಯ ಪ್ರವಾಸ ಕೈಗೊಂಡ ರಜನಿಕಾಂತ್​​
author img

By

Published : Aug 9, 2023, 1:08 PM IST

Updated : Aug 9, 2023, 1:17 PM IST

ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ರಜನಿಕಾಂತ್​​

ದೇಶ ಮಾತ್ರವಲ್ಲದೇ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಜನಪ್ರಿಯ ನಟ ರಜನಿಕಾಂತ್​. ವಿಶಿಷ್ಟ ಮ್ಯಾನರಿಸಂ, ಅಮೋಘ ಅಭಿನಯ, ಉತ್ತಮ ನಡೆ ನುಡಿಯಿಂದ ದೊಡ್ಡ ಅಭಿಮಾನಿ ಬಳಗ ಕಟ್ಟಿಕೊಂಡಿರುವ ನಟನ ಮುಂದಿನ ಬಹುನಿರೀಕ್ಷಿತ ಸಿನಿಮಾ ಜೈಲರ್​.

ಆಧ್ಯಾತ್ಮಿಕ ಪ್ರವಾಸ ಕೈಗೊಂಡ ರಜನಿಕಾಂತ್​: ನಾಳೆ ವಿಶ್ವದಾದ್ಯಂತ ಅದ್ಧೂರಿಯಾಗಿ ಈ ಸಿನಿಮಾ ತೆರೆಕಾಣಲಿದ್ದು, ಅಭಿಮಾನಿಗಳು ಕಾತರರಾಗಿದ್ದಾರೆ. ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ತಲೈವಾ ರಜನಿಕಾಂತ್​​ ಇಂದು ಆಧ್ಯಾತ್ಮಿಕ ಪ್ರವಾಸ ಕೈಗೊಂಡಿದ್ದಾರೆ. ಹೌದು, ಸೂಪರ್​ ಸ್ಟಾರ್​ ಹಿಮಾಲಯಕ್ಕೆ ತೆರಳಿದ್ದಾರೆ.

ಜೈಲರ್​ ಚಿತ್ರತಂಡ ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್​, ಮಲಯಾಳಂ ಸೆನ್ಸೇಶನಲ್​ ಸ್ಟಾರ್​ ಮೋಹನ್​ ಲಾಲ್​​, ಬಾಲಿವುಡ್​ ದಿಗ್ಗಜ ಜಾಕಿ ಶ್ರಾಫ್​​, ಪ್ರತಿಭಾವಂತ ಬಹುಬೇಡಿಕೆ ನಟಿಯರಾದ ತಮನ್ನಾ ಭಾಟಿಯಾ ಮತ್ತು ರಮ್ಯಾ ಕೃಷ್ಣನ್, ಅಲ್ಲದೇ ಯೋಗಿ ಬಾಬು ನಟಿಸಿರುವ ಬಿಗ್​ ಬಜೆಟ್​ ಸಿನಿಮಾ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಸೃಷ್ಟಿಸಿದೆ. ಬಿಗ್​ ಸ್ಟಾರ್​ ಕಾಸ್ಟ್ ಹಿನ್ನೆಲೆ ಮತ್ತು ಎರಡು ವರ್ಷಗಳ ಬ್ರೇಕ್​ ಬಳಿಕ ಬರುತ್ತಿರುವ ರಜನಿಕಾಂತ್​ ಸಿನಿಮಾ ಇದಾಗಿದ್ದು, ಅಭಿಮಾನಿಗಳು ಚಿತ್ರ ವೀಕ್ಷಿಸಲು ಉತ್ಸುಕರಾಗಿದ್ದಾರೆ. ​​

ತಮಿಳುನಾಡಿನಲ್ಲಿ 800ಕ್ಕೂ ಹೆಚ್ಚು ಥಿಯೇಟರ್​ನಲ್ಲಿ ಸಿನಿಮಾ ರಿಲೀಸ್​: ತಮಿಳುನಾಡಿನಾದ್ಯಂತ 800ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಜೈಲರ್​ ಪ್ರದರ್ಶನಕ್ಕೆ ತಯಾರಿ ನಡೆದಿದೆ. ಇದು ಸಿನಿಮಾದ ಸುತ್ತ ಇರುವ ಉತ್ಸುಕತೆಯನ್ನು ಹೆಚ್ಚಿಸಿದೆ. ಅಭಿಮಾನಿಗಳು ರಜನಿಕಾಂತ್​ ಅವರನ್ನು ನೋಡಲು ಬಂದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಹೃದಯಸ್ಪರ್ಶಿಯಾಗಿದೆ.

ನಾಲ್ಕು ವರ್ಷಗಳ ಬಳಿಕ ಪರ್ವತ ಪ್ರದೇಶಕ್ಕೆ ಭೇಟಿ: ನಟನಾ ಪರಾಕ್ರಮ ಮಾತ್ರವಲ್ಲದೇ ಆಧ್ಯಾತ್ಮಿಕ ವಿಚಾರವಾಗಿಯೂ ನಟ ರಜನಿಕಾಂತ್​ ಹೆಸರುವಾಸಿಯಾಗಿದ್ದಾರೆ. ಹಿಮಾಲಯ ಪ್ರವಾಸ ಹೊಸತೇನಲ್ಲ. ಆಗಾಗ್ಗೆ ಅಲ್ಲಿಗೆ ಭೇಟಿ ಕೊಡುವ ಮೂಲಕ ಸದ್ದು ಮಾಡುತ್ತಾರೆ. ಕೋವಿಡ್​ ಹಿನ್ನೆಲೆ ಕಳೆದ ನಾಲ್ಕು ವರ್ಷಗಳಿಂದ ಪರ್ವತ ಪ್ರದೇಶಕ್ಕೆ ಭೇಟಿ ಕೊಟ್ಟಿರಲಿಲ್ಲ. ಇದಿಗ ಜೈಲರ್​ ಬಿಡುಗಡೆ ಹೊಸ್ತಿಲಲ್ಲಿದ್ದು, ನಾಯಕ ನಟ ಚೆನ್ನೈನಿಂದ ಹಿಮಾಲಯಕ್ಕೆ ಹೊರಟಿದ್ದಾರೆ.

ಇದನ್ನೂ ಓದಿ: Jailer: ರಜನಿಕಾಂತ್​ ಜೈಲರ್‌ ಸಿನಿಮಾ ನೋಡಲು ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ರಜೆ!

ಚೆನ್ನೈ ಏರ್​ಪೋರ್ಟ್​​ನಲ್ಲಿ ಕಾಣಿಸಿಕೊಂಡ ನಟ: ಚೆನ್ನೈ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸೂಪರ್​ ಸ್ಟಾರ್​, ಜೈಲರ್​ ನಾಳೆ ಬಿಡುಗಡೆ ಆಗುತ್ತದೆ. ನಿಮ್ಮ, ಜನರ ಪ್ರತಿಕ್ರಿಯೆಗಾಗಿ ನಾನು ಕಾಯುತ್ತಿದ್ದೇನೆ ಎಂದು ತಿಳಿಸಿದರು. ದೇಶಾದ್ಯಂತ ಅಭಿಮಾನಿಗಳು ಈ ಸಿನಿಮಾಗಾಗಿ ಕಾಯುತ್ತಿರುವ ಈ ಹೊತ್ತಿನಲ್ಲಿ ರಜನಿ ಮಾತುಗಳು ಅಭಿಮಾನಿಗಳ ಉತ್ಸಾಹ ಹೆಚ್ಚಿಸಿವೆ. ನೆಲ್ಸನ್​ ದಿಲೀಪ್​ ಕುಮಾರ್​ ನಿರ್ದೇಶನದ ಈ ಸಿನಿಮಾ ಎಷ್ಟರ ಮಟ್ಟಿಗೆ ಜನಮನ ತಲುಪಲಿದೆ ಅನ್ನೋದು ಕೆಲ ಗಂಟೆಗಳ ಬಳಿಕ ಗೊತ್ತಾಗಲಿದೆ.

ಇದನ್ನೂ ಓದಿ: HBD Mahesh Babu: ಜನ್ಮದಿನ ಸಂಭ್ರಮದಲ್ಲಿರುವ ಮಹೇಶ್​ ಬಾಬುಗೆ ಪತ್ನಿಯಿಂದ ಪ್ರೀತಿಯ ಸುರಿಮಳೆ

Last Updated : Aug 9, 2023, 1:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.