ETV Bharat / entertainment

ಧರ್ಮಣ್ಣನ 'ರಾಜಯೋಗ' ಆರಂಭ...ಮಹಿಳೆಯರಿಂದ ಟ್ರೇಲರ್​ ಅನಾವರಣ - Rajayoga kannada film

Rajayoga trailer release: ಹಾಸ್ಯನಟ ಧರ್ಮಣ್ಣ ಮುಖ್ಯಭೂಮಿಕೆಯ 'ರಾಜಯೋಗ' ಚಿತ್ರದ ಟ್ರೇಲರ್​ ಅನಾವರಣಗೊಂಡಿದೆ.

Rajayoga movie trailer
ರಾಜಯೋಗ ಟ್ರೇಲರ್​ ಅನಾವರಣ
author img

By ETV Bharat Karnataka Team

Published : Oct 4, 2023, 12:32 PM IST

ನಮ್ಮ ಜೀವನದಲ್ಲಿ 'ರಾಜಯೋಗ' ಎಂಬ ಪದಕ್ಕೆ ಬಹಳ ಮಹತ್ವವಿದೆ. ಯಾರಿಗೇ ಆದರೂ ರಾಜಯೋಗ ಬಂತು ಎಂದರೆ ಮುಂದೆ ಆತನಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಬಹುತೇಕರದ್ದು. ಇದೀಗ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಧರ್ಮಣ್ಣನ 'ರಾಜಯೋಗ' ಇದೀಗ ಆರಂಭವಾಗಿದೆ.

  • " class="align-text-top noRightClick twitterSection" data="">

ಹಾಸ್ಯ ನಟರು ನಾಯಕ ನಟರಾಗಿ ಪ್ರೇಕ್ಷಕರನ್ನು ರಂಜಿಸುವುದು ಹೊಸತೇನೆಲ್ಲ. ಇದೀಗ 'ರಾಮಾ ರಾಮಾ ರೇ' ಸಿನಿಮಾ ಖ್ಯಾತಿಯ ಹಾಸ್ಯನಟ ಧರ್ಮಣ್ಣ ಅವರು 'ರಾಜಯೋಗ' ಚಿತ್ರದ ಮೂಲಕ ನಾಯಕ ನಟನಾಗುತ್ತಿದ್ದಾರೆ. ಪೋಸ್ಟರ್​​ನಿಂದ ಈಗಾಗಲೇ ಸ್ಯಾಂಡಲ್​ವುಡ್​​ನಲ್ಲಿ ಗಮನ ಸೆಳೆದಿರೋ ರಾಜಯೋಗ ಸಿನಿಮಾ ಬಹುತೇಕ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ‌. ಈ ಹಿನ್ನೆಲೆಯಲ್ಲಿ ಚಿತ್ರತಂಡ ಟ್ರೇಲರ್​ ಅನಾವರಣಗೊಳಿಸಿದೆ. ರಾಜಯೋಗ ಟ್ರೇಲರ್​ ಅನ್ನು ಇಬ್ಬರು ಮಹಿಳೆಯರು (ಜನಸಾಮಾನ್ಯರು) ಬಿಡುಗಡೆಗೊಳಿದ್ದಾರೆ. ಲಿಂಗರಾಜು ಉಚ್ಚಂಗಿದುರ್ಗ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

Rajayoga movie team
ರಾಜಯೋಗ ಚಿತ್ರತಂಡ

ಚಿತ್ರದ ಬಗ್ಗೆ ಲಿಂಗರಾಜು ಉಚ್ಚಂಗಿದುರ್ಗ ಮಾತನಾಡಿ, ಇದು ನನ್ನ ನಿರ್ದೇಶನದ ಚೊಚ್ಚಲ ಚಿತ್ರ. ಗ್ರಾಮೀಣ ಭಾಗದಲ್ಲಿ ನಡೆಯುವ ಕಥೆ. ನಾನೂ ಸಹ ಹಳ್ಳಿಯಿಂದ ಬಂದವನು. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಒಂದಲ್ಲ ಒಂದು ದಿನ ರಾಜಯೋಗ ಬಂದೇ ಬರುತ್ತದೆ ಎನ್ನುವುದೇ ಈ ಚಿತ್ರದ ಕಾನ್ಸೆಪ್ಟ್. ರಾಮಾ ರಾಮಾ ರೇ ಚಿತ್ರದಲ್ಲಿ ಧರ್ಮಣ್ಣ ಅವರ ಅಭಿನಯ ನೋಡಿ, ಈ ಚಿತ್ರಕ್ಕೆ ಆಯ್ಕೆ ಮಾಡಿದ್ದೇನೆ. ತಂದೆ, ಪತ್ನಿ, ಚಿಕ್ಕಪ್ಪ ದೊಡ್ಡಪ್ಪ ಹೀಗೆ ಎಲ್ಲ ಪಾತ್ರಗಳು ಅವರ ಸುತ್ತ ಬರುತ್ತವೆ. ತಂದೆ ಮಗನ ನಡುವೆ ನಡೆಯುವ ಕಥೆ. ಜೋತಿಷ್ಯ ಸುಳ್ಳಲ್ಲ, ಆದರೆ, ಅದನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಚಿತ್ರದ ಕೊನೆಯಲ್ಲಿ ಮಗನ ಪಾತ್ರದ ಮೂಲಕ ತಂದೆಗೆ ಬುದ್ಧಿ ಕಲಿಸುವ ಕಥೆಯಿದೆ. ಗಂಭೀರ ವಿಷಯವನ್ನು ಹಾಸ್ಯದ ಮೂಲಕ ಹೇಳಲು ಪ್ರಯತ್ನಿಸಿದ್ದೇವೆ. ಪಾಸ್ಟ್, ಫ್ಯೂಚರ್ ಯೋಚಿಸದೇ, ಪ್ರೆಸೆಂಟ್ ಲೈಫ್ ಬಗ್ಗೆ ಗಮನ ಹರಿಸಿದರೆ ನಮ್ಮ ಜೀವನ ಚೆನ್ನಾಗಿರುತ್ತದೆ ಎಂಬ ಸಂದೇಶ ಹೊತ್ತಿದೆ ನಮ್ಮ ಸಿನಿಮಾ. ಮೂರು ಹಂತಗಳಲ್ಲಿ 45 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ. ಸದ್ಯ ಚಿತ್ರದ ಡಿಐ ನಡೆಯುತ್ತಿದೆ ಎಂದು ಮಾಹಿತಿ ಹಂಚಿಕೊಂಡರು.

ನಾಯಕನಟ ಧರ್ಮಣ್ಣ ಮಾತನಾಡಿ, ನಾನಿಲ್ಲಿ ಕೂರಲು ಕಾರಣ ರಾಮಾ ರಾಮಾ ರೇ ತಂಡ. ಈ ಚಿತ್ರದಲ್ಲಿ ಕಥೆ, ನಿರ್ದೇಶಕ‌ ಇಬ್ಬರೂ ನಾಯಕರು. ನಾನೊಂದು ಪಾತ್ರ ಮಾಡಿದ್ದೇನೆ ಅಷ್ಟೇ. ಈ ಪಾತ್ರದಲ್ಲಿ ಕಾಮಿಡಿ, ಎಮೋಷನ್ ಎಲ್ಲವೂ ಇದೆ. ಈ ರೀತಿಯ ಪಾತ್ರವನ್ನು ಹಿಂದೆಂದೂ ಮಾಡಿಲ್ಲ. ಗ್ರಾಮೀಣ ಭಾಗದಲ್ಲಿ ನಡೆಯೋ ಕಥೆಯಲ್ಲಿ ಸಂಬಂಧದ ಮೌಲ್ಯಗಳನ್ನು ಹಾಸ್ಯದ ಹಿನ್ನೆಲೆಯಲ್ಲಿ ಹೇಳಲು ಪ್ರಯತ್ನಿಸಿದ್ದೇವೆ. ಈ ಸಿನಿಮಾ ನೋಡುವಾಗ ಹಿರಿಯ ನಟರಾದ ಅನಂತ್​ ನಾಗ್, ಶಶಿಕುಮಾರ್ ಖಂಡಿತ ನೆನಪಾಗ್ತಾರೆ. ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿದ್ದೇವೆ, ನಿಮ್ಮ ಆರ್ಶೀವಾದ ಇರಲಿ ಎಂದು ಕೇಳಿಕೊಂಡರು.

ಇದನ್ನೂ ಓದಿ: 'ನನ್ನ‌ ಜೊತೆ ಅಣ್ಣನ 'ರಾಜಮಾರ್ತಾಂಡ' ಸಿನಿಮಾ ನೋಡ ಬನ್ನಿ.. ಇದೇ ನನ್ನ ಹುಟ್ಟುಹಬ್ಬಕ್ಕೆ ಉಡುಗೊರೆ'

ಧರ್ಮಣ್ಣ ಜೋಡಿಯಾಗಿ ನಿರೀಕ್ಷಾರಾವ್ ನಟಿಸಿದ್ದಾರೆ. ಜೊತೆಗೆ ನಾಗೇಂದ್ರ ಶಾ ಅವರು ನಾಯಕನ ತಂದೆ ಪಾತ್ರ ನಿರ್ವಹಿಸಿದ್ದು, ಕೃಷ್ಣ ಮೂರ್ತಿ ಕವುತಾರ್ ಓರ್ವ ಜೋತಿಷಿ ಪಾತ್ರ ಮಾಡಿದ್ದಾರೆ. ಶ್ರೀನಿವಾಸಗೌಡ್ರು, ಉಷಾ ರವಿಶಂಕರ್, ಮಹಾಂತೇಶ ಹಿರೇಮಠ್ ಉಳಿದ ಪಾತ್ರವರ್ಗದಲ್ಲಿದ್ದಾರೆ.

ಇದನ್ನೂ ಓದಿ: ಗನ್ಸ್ ಆ್ಯಂಡ್​​ ರೋಸಸ್ ಸಿನಿಮಾ ಸಾಂಗ್​​​ಗೆ ದನಿಯಾದ ಸ್ಟಾರ್ ಸಿಂಗರ್ ವಿಜಯ್​​ ಪ್ರಕಾಶ್

ಈ ಚಿತ್ರದಲ್ಲಿ 6 ಹಾಡುಗಳಿದ್ದು, ಅಕ್ಷಯ್ ರಿಶಭ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಷ್ಣುಪ್ರಸಾದ್ ಕ್ಯಾಮರಾವರ್ಕ್ ನಿಭಾಯಿಸಿದ್ದಾರೆ. ಬಿ.ಎಸ್ ಕೆಂಪರಾಜು ಅವರ ಸಂಕಲನ ಈ ಚಿತ್ರಕ್ಕಿದೆ. ಶ್ರೀರಾಮರತ್ನ ಪ್ರೊಡಕ್ಷನ್ಸ್ ಅಡಿ ಕುಮಾರ ಕಂಠೀರವ, ದೀಕ್ಷಿತ್ ಕೃಷ್ಣ, ಪ್ರಭು ಚಿಕ್ಕನಾಯ್ಕನಹಳ್ಳಿ, ಲಿಂಗರಾಜು ಕೆಎನ್, ಅರ್ಜುನ್ ಅಣತಿ ಅಲ್ಲದೇ ಧರ್ಮಣ್ಣ ಅವರ ಸಹೋದರ ಹೊನ್ನಪ್ಪ ಕಡೂರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯದಲ್ಲೇ ಧರ್ಮಣ್ಣ ರಾಜಯೋಗ ಸಿನಿಮಾ ತೆರೆಗೆ ಬರಲಿದ್ದು, ಸಿನಿಮಾ ಪ್ರೇಕ್ಷಕರು ಎಷ್ಟು‌ ಮಾರ್ಕ್ಸ್ ಕೊಡ್ತಾರೆ‌ ಅನ್ನೋದನ್ನು ಕಾದುನೋಡಬೇಕು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.