ETV Bharat / entertainment

SSMB29: ಎಸ್​ಎಸ್​ಎಂಬಿ 29ಗೆ ಜೊತೆಯಾದ ರಾಜಮೌಳಿ, ಮಹೇಶ್​ ಬಾಬು.. ಆರ್​ಆರ್​ಆರ್​ ಮೀರಿಸಲಿದೆ ಈ ಚಿತ್ರ!!! - ಮುಂದಿನ ಸಿನಿಮಾವನ್ನು ಮಹೇಶ್​ ಬಾಬು

'ಆರ್​ಆರ್​ಆರ್'​ ಬಳಿಕ ರಾಜಮೌಳಿ ಅವರ ಮುಂದಿನ ಯೋಜನೆ ಎಸ್​ಎಸ್​ಎಂಬಿ29 ಆಗಿದೆ. ಈ ಚಿತ್ರಕ್ಕಾಗಿ ಜಗತ್ತಿನಾದ್ಯಂತ ಅಭಿಮಾನಿಗಳು ಕಾತರರಾಗಿದ್ದಾರೆ.

Rajamouli, Mahesh Babu joined SSMB 29; This film is going to surpass RRR

author img

By

Published : Jul 10, 2023, 4:21 PM IST

Updated : Jul 10, 2023, 7:18 PM IST

ಬೆಂಗಳೂರು: ​ಖ್ಯಾತ ನಿರ್ದೇಶಕ ರಾಜಮೌಳಿ ತಮ್ಮ ಮುಂದಿನ ಸಿನಿಮಾವನ್ನು ಮಹೇಶ್​ ಬಾಬು ಜೊತೆ ಮಾಡುತ್ತಿದ್ದಾರೆ ಎಂಬ ಸುದ್ದಿ ಇದೀಗ ಅಧಿಕೃತವಾಗಿದೆ. ಮಹೇಶ್​ ಬಾಬು ಅವರ 'ಎಸ್​ಎಸ್​ಎಂಬಿ29' ಪ್ಯಾನ್​ ವರ್ಲ್ಡ್​​ ಪ್ರಾಜೆಕ್ಟ್​​ ಆಗಿದ್ದು, ಇದಕ್ಕಾಗಿ ಅವರು ರಾಜಮೌಳಿ ತಂಡವನ್ನು ಸೇರಿದದ್ದಾರೆ. ಈ ಕುರಿತು ಇತ್ತೀಚೆಗೆ ಖ್ಯಾತ ಬರಹಕಾರ ಕೆವಿ ವಿಜಯೇಂದ್ರ ಪ್ರಸಾದ್​ ಕೂಡ ಚಿತ್ರದ ಮಾಹಿತಿ ಹಂಚಿಕೊಂಡಿದ್ದರು. ಸುದ್ದಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಕೆವಿ ವಿಜಯೇಂದ್ರ ಪ್ರಸಾದ್​​, 'ಎಸ್​ಎಸ್​ಎಂಬಿ29' ಚಿತ್ರಕ್ಕೆ ಮಹೇಶ್​ ಬಾಬು, ರಾಜಮೌಳಿ ಒಂದಾಗಿದ್ದಾರೆ. ಈ ಚಿತ್ರ 'ಆರ್​ಆರ್​ಆರ್'​ ಸಿನಿಮಾವನ್ನು ಮೀರಿಸಲಿದ್ದು, ಸಿಕ್ಕಾಪಟ್ಟೆ ಆ್ಯಕ್ಷನ್​ ಸಿನಿಮಾವಾಗಿರಲಿದೆ ಎಂದಿದ್ದಾರೆ.

'ಆರ್​ಆರ್​ಆರ್'​ ಬಳಿಕ ರಾಜಮೌಳಿ ಅವರ ಮುಂದಿನ ಯೋಜನೆ 'ಎಸ್​ಎಸ್​ಎಂಬಿ29' ಆಗಿದೆ. ಈ ಚಿತ್ರಕ್ಕಾಗಿ ಜಗತ್ತಿನಾದ್ಯಂತ ಅಭಿಮಾನಿಗಳು ಕಾತುರರಾಗಿದ್ದಾರೆ. ಈ ಹಿಂದೆ ಕೂಡ ರಾಜಮೌಳಿ ತಮ್ಮ ಮುಂದಿನ ಚಿತ್ರವನ್ನು ನಟ ಮಹೇಶ್​ ಬಾಬುಗೆ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಹೆಚ್ಚು ಕೇಳಿ ಬಂದಿತು. ಈ ಕುರಿತು ಮಾತನಾಡಿರುವ ವಿಜಯೇಂದ್ರ ಪ್ರಸಾದ್​, ಇದೊಂದು ದೊಡ್ಡ ಮಟ್ಟದ ಸಿನಿಮಾ ಆಗಿರಲಿದ್ದು, ಆರ್​ಆರ್​ಆರ್​ಗಿಂತ ದೊಡ್ಡ ಮಟ್ಟದಲ್ಲಿರಲಿದೆ ಎಂದಿದ್ದಾರೆ

ವರ್ಕ್​ಶಾಪ್​ನಲ್ಲಿ ಪರಕಾಯ ಪ್ರವೇಶಕ್ಕೆ ಮಹೇಶ್​ ಬಾಬು ಸಜ್ಜು: ಈ ಚಿತ್ರದ ಪಾತ್ರಕ್ಕಾಗಿ ನಟ ಮಹೇಶ್​ ಬಾಬು ಮೂರು ತಿಂಗಳ ವರ್ಕ್​ಶಾಪ್​ಗೆ ತೆರಳಲಿದ್ದಾರೆ. ರಾಜಮೌಳಿ ತಮ್ಮ ಪ್ರತಿ ಸಿನಿಮಾದಲ್ಲೂ ನಟರು ತಮ್ಮ ಪಾತ್ರದ ಆಳ ಹೊಕ್ಕುವ ಉದ್ದೇಶದಿಂದ ಈ ರೀತಿಯ ಕಠಿಣ ವರ್ಕ್​ ಶಾಪ್​ ನಡೆಸುವುದು ಸಾಮಾನ್ಯ. ಇದು ಸಿನಿ ಉದ್ಯಮದ ಎಲ್ಲರಿಗೂ ತಿಳಿದ ವಿಚಾರವಾಗಿದೆ. ಇದೀಗ ಎಸ್​ಎಸ್​ಎಂಬಿ29 ಚಿತ್ರದ ಪಾತ್ರಧಾರಿಗಳು ಈ ರೀತಿಯ ವರ್ಕ್​ಶಾಪ್​ ಪಡೆಯಲಿದ್ದಾರೆ.

ತಮ್ಮ ಚಿತ್ರದಲ್ಲಿ ರಾಮಯಾಣ ಮತ್ತು ಮಹಾಭಾರತದಂತಹ ಅಂಶಗಳನ್ನು ಸೇರಿಸುವಲ್ಲಿ ಖ್ಯಾತಿ ಪಡೆದಿರುವ ರಾಜಮೌಳಿ ಅವರು, ಈ ಚಿತ್ರದಲ್ಲಿ ಮಹೇಶ್ ಬಾಬು ಅವರ ಪಾತ್ರವು ಹನುಮಂತನ ಪ್ರೇರಣೆಯಿಂದ ರೂಪಿಸಿದ್ದಾರೆ ಎನ್ನಲಾಗಿದೆ. ಈ ಚಿತ್ರದ ಸೆಟ್​ ಅನ್ನು ಆಫ್ರಿಕನ್​ ಅರಣ್ಯದಲ್ಲಿ ಹಾಕುವ ಸಾಧ್ಯತೆ ಇದ್ದು, ಮಹೇಶ್​ ಬಾಬು ಅವರ ಪಾತ್ರವನ್ನು ರಾಮಾಯಣದ ಪ್ರಮುಖಾಂಶಗಳಿಂದ ಕೂಡಿದ್ದು, ಅದಕ್ಕೆ ವಿಶೇಷ ಟ್ವಿಸ್ಟ್​ ನೀಡಲಾಗಿದೆ. ಅರಣ್ಯದಲ್ಲಿ ಹೋರಾಡಿ ಗೆಲ್ಲುವ ಕಥಾನಕವನ್ನು ಇದು ಹೊಂದಿರಲಿದ್ದು, ರಾಮಾಯಣದ ಪ್ರಭಾವವನ್ನು ಹೊಂದಿರಲಿದೆ ಎನ್ನಲಾಗಿದೆ.

ಈ ಚಿತ್ರದ ಕುರಿತು ಈ ಮೊದಲು 'ಎಸ್​ಎಸ್​ಎಂಬಿ 29' ಕುರಿತು ಮಾತನಾಡಿರುವ ನಿರ್ದೇಶಕರು, ಇದೊಂದು ಜಾಗತಿಕ ಸಾಹಸಿ ಚಿತ್ರವಾಗಿದ್ದು, ರಾಜಮೌಳಿ ತಂದೆ ವಿಜಯೇಂದ್ರ ಈ ಚಿತ್ರಕ್ಕೆ ಚಿತ್ರಕಥೆ ಬರೆಯಲಿದ್ದಾರೆ. ಇದೊಂದು ಆ್ಯಕ್ಷನ್​​, ಥ್ರಿಲ್ಲರ್​ ಮತ್ತು ಡ್ರಾಮಾ ಆಗಿರಲಿದೆ. 'ಆರ್​ಆರ್​ಆರ್'​ ಆಸ್ಕರ್​ ಅಂಗಳದಲ್ಲಿ ಮಿಂಚಿರುವ ಹಿನ್ನಲೆ 'ಎಸ್​ಎಸ್​ಎಂಬಿ 29'ಗೆ ಜಾಗತಿಕ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಕುತೂಹಲ ಹುಟ್ಟು ಹಾಕಿದೆ. ಈ ಚಿತ್ರವು ಬೇರೆ ಚಿತ್ರಗಳಿಗಿಂದ ವಿಭಿನ್ನವಾಗಿ ಸಿನಿಮೀಯ ಅನುಭವದ ಮೂಲಕ ಸೆರೆಹಿಡಿಯುವ ಭರವಸೆ ವ್ಯಕ್ತವಾಗಿದೆ.

ಇದನ್ನೂ ಓದಿ: ರವಿತೇಜ- ಗೋಪಿಚಂದ್ ಕಾಂಬಿನೇಷನ್​ನಲ್ಲಿ 4ನೇ ಸಿನಿಮಾ ಫಿಕ್ಸ್​; ಮೋಷನ್​ ಪೋಸ್ಟರ್​ ಔಟ್​

Last Updated : Jul 10, 2023, 7:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.