ETV Bharat / entertainment

ಕೆಜಿಎಫ್​ ಸಿನಿಮಾಗೆ ಡಾ.ರಾಜ್​ ಕುಟುಂಬದಿಂದ ಆಲ್​ ದಿ ಬೆಸ್ಟ್: ವಿಶ್ವಾದ್ಯಂತ ಯಶಸ್ಸಿಗೆ ಹಾರೈಕೆ - ನಾಳೆ ಕೆಜಿಎಫ್​ ಸಿನಿಮಾ ರಿಲೀಸ್​

ನಾಳೆ ಕೆಜಿಎಫ್​ ಚಾಪ್ಟರ್​ 2 ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಹೀಗಾಗಿ ಡಾ.ರಾಜ್‌ಕುಮಾರ್​ ಫ್ಯಾಮಿಲಿ ಸಿನಿಮಾಗೆ ಶುಭ ಹಾರೈಸಿದ್ದಾರೆ.

kgf-cinema
ಕೆಜಿಎಫ್​ ಸಿನಿಮಾಗೆ ಡಾ ರಾಜ್​ ಕುಟುಂಬ ಆಲ್​ ದಿ ಬೆಸ್ಟ್​
author img

By

Published : Apr 13, 2022, 10:45 PM IST

ಕೆಜಿಎಫ್ ಚಾಪ್ಟರ್- 2 ಸಿನಿಮಾ ವಿಶ್ವಾದ್ಯಂತ ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿ ಇವೆ. ರಾಕಿಂಗ್ ಸ್ಟಾರ್ ಯಶ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾವನ್ನು ಸ್ಯಾಂಡಲ್​ವುಡ್ ಅಲ್ಲದೇ ವಿಶ್ವಾದ್ಯಂತ ಹಬ್ಬದ ರೀತಿಯಲ್ಲಿ ಸೆಲೆಬ್ರೇಟ್ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ನಟರು, ನಿರ್ದೇಶಕರು ಸೋಷಿಯಲ್ ಮೀಡಿಯಾದಲ್ಲಿ ಶುಭ ಹಾರೈಸುತ್ತಿದ್ದಾರೆ‌. ಇದೀಗ ಕೆಜಿಎಫ್ ಸಿನಿಮಾಗೆ ದೊಡ್ಮನೆಯಿಂದಲೂ ಸಾಥ್ ಸಿಕ್ಕಿದೆ.

ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಸಿಗಲಿ ಅಂತಾ ರಾಘವೇಂದ್ರ ರಾಜಕುಮಾರ್, ದಿವಂಗತ ಪುನೀತ್​ ರಾಜಕುಮಾರ್​ ಅವರ ಸಮಾಧಿಯಿಂದ ಹಾರೈಸಿದ್ದಾರೆ. ಕೆಜಿಎಫ್​ ಮೊದಲ ಚಾಪ್ಟರ್​ ವೇಳೆ ಪುನೀತ್ ರಾಜ್‍ಕುಮಾರ್ ವಿದೇಶದಲ್ಲಿ ಇದ್ದರು. ಆಗ ಅಪ್ಪು ವಿದೇಶದಿಂದಲೇ ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್, ಹಾಗು ಅಪ್ಪು ಅಚ್ಚುಮೆಚ್ಚಿನ ನಿರ್ಮಾಪಕ ವಿಜಯ್ ಕಿರಂಗದೂರ್​ಗೆ ಗುಡ್​ಲಕ್ ಹೇಳಿದ್ದರು.

ಕೆಜಿಎಫ್ ಚಾಪ್ಟರ್ 2 ಸಿನಿಮಾಗೆ ಈಗ ಅಪ್ಪು ಆಕಾಶದಿಂದಲೇ ಆಶೀರ್ವದಿಸಲಿದ್ದಾರೆ. ಪುನೀತ್​ ಅಣ್ಣನಾಗಿ ಅವನ ಪರವಾಗಿ ಕೆಜಿಎಫ್ ಚಾಪ್ಟರ್ 2 ಸಿನಿಮಾಗೆ ಆಲ್ ದಿ‌ ಬೆಸ್ಟ್ ಹೇಳುವುದರ ಜೊತೆಗೆ ವಿಶ್ವಾದ್ಯಂತ ದೊಡ್ಡ ಮಟ್ಟದಲ್ಲಿ ಸಕ್ಸಸ್ ಸಿಗಲಿ. ಇದು ನಮ್ಮ‌ ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ಪಡುವ ವಿಷ್ಯ ಅಂತಾ ರಾಘವೇಂದ್ರ ರಾಜ್ ಕುಮಾರ್ ಪವರ್​ಸ್ಟಾರ್ ಸಮಾಧಿಯಿಂದ ಗುಡ್ ಲಕ್ ಹೇಳಿದ್ದಾರೆ.

ಈ ಚಿತ್ರದಲ್ಲಿ ರಾಕಿಯಾಗಿ ಅಬ್ಬರಿಸಿರುವ ಯಶ್ ಜೊತೆಗೆ ಬಾಲಿವುಡ್​ ನಟ ಸಂಜಯ್ ದತ್​ ಅಧೀರನಾಗಿ ನಟಿಸಿದ್ದಾರೆ. ಪವರ್​ಫುಲ್ ಪಾತ್ರದಲ್ಲಿ ರವೀನಾ ಟಂಡನ್​ ನಟಿಸಿದ್ದಾರೆ. ಬಹುಭಾಷಾ ನಟ ಪ್ರಕಾಶ್​ರಾಜ್​ ಚಿತ್ರದಲ್ಲಿದ್ದಾರೆ.

ಇದನ್ನೂ ಓದಿ: ಕೆಜಿಎಫ್ ಚಾಪ್ಟರ್​-2​: ಯಶ್​, ಸಂಜಯ್​ ದತ್​​, ರವೀನಾ​, ಶ್ರೀನಿಧಿ ಪಡೆದ ಸಂಭಾವನೆ ವಿವರ ಹೀಗಿದೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.