ಕನ್ನಡ ಚಿತ್ರರಂಗದ ಚಿತ್ರ ಬ್ರಹ್ಮ ಅಂತಾನೇ ಕರೆಯಿಸಿಕೊಂಡಿರುವ ಪುಟ್ಟಣ್ಣ ಕಣಗಾಲ್ ಅಣ್ಣನ ಮಗ, ಚಿತ್ರ ಸಾಹಿತಿ ಪುರುಷೋತ್ತಮ ಕಣಗಾಲ್, ಇಂದು ಅಮೆರಿಕಾದ ತಮ್ಮ ಮಗಳ ನಿವಾಸದಲ್ಲಿ ನಿಧನರಾಗಿದ್ದಾರೆ. ಪುರುಷೋತ್ತಮ ಕಣಗಾಲ್ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.
![Puttanna Kanagal brother son Purushotham Kanagal passes away, Purushotham Kanagal no more, Purushotham Kanagal dies in America, ಪುಟ್ಟಣ್ಣ ಕಣಗಾಲ್ ಸಹೋದರ ಪುತ್ರ ಪುರುಷೋತ್ತಮ ಕಣಗಾಲ್ ನಿಧನ, ಪುರುಷೋತ್ತಮ ಕಣಗಾಲ್ ಇನ್ನಿಲ್ಲ, ಅಮೆರಿಕದಲ್ಲಿ ಪುರುಷೋತ್ತಮ ಕಣಗಾಲ್ ನಿಧನ,](https://etvbharatimages.akamaized.net/etvbharat/prod-images/kn-bng-01-puttanna-kanagal-brotherson-purushothamakanagal-nomore-7204735_09062022124304_0906f_1654758784_429.jpg)
ಪುರುಷೋತ್ತಮ ಕಣಗಾಲ್ ಅವರಿಗೆ 69 ವಯಸ್ಸಾಗಿತ್ತು. ಪುರುಷೋತ್ತಮ ಕಣಗಾಲ್, ಹೆಸರಾಂತ ಸಾಹಿತಿಯಾಗಿರುವ ಪುರುಷೋತ್ತಮ ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರ ಪುತ್ರ. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಅಣ್ಣನ ಮಗ ಪುರುಷೋತ್ತಮ ಕಣಗಾಲ್ ಅವರು ಕನ್ನಡದ ಸಾಕಷ್ಟು ಚಿತ್ರಗಳಿಗೆ ಗೀತ ರಚನೆ ಮಾಡಿದ್ದಾರೆ.
![Puttanna Kanagal brother son Purushotham Kanagal passes away, Purushotham Kanagal no more, Purushotham Kanagal dies in America, ಪುಟ್ಟಣ್ಣ ಕಣಗಾಲ್ ಸಹೋದರ ಪುತ್ರ ಪುರುಷೋತ್ತಮ ಕಣಗಾಲ್ ನಿಧನ, ಪುರುಷೋತ್ತಮ ಕಣಗಾಲ್ ಇನ್ನಿಲ್ಲ, ಅಮೆರಿಕದಲ್ಲಿ ಪುರುಷೋತ್ತಮ ಕಣಗಾಲ್ ನಿಧನ,](https://etvbharatimages.akamaized.net/etvbharat/prod-images/kn-bng-01-puttanna-kanagal-brotherson-purushothamakanagal-nomore-7204735_09062022124304_0906f_1654758784_635.jpg)
ಓದಿ: ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಮಗ ಕೋವಿಡ್‌ಗೆ ಬಲಿ
ಕಣಗಾಲ್ ನೃತ್ಯಾಲಯ ಹಾಗೂ ಪುಟ್ಟಣ್ಣ ಕಣಗಾಲ್ ಟ್ರಸ್ಟ್ನ ಮುಖ್ಯಸ್ಥರಾಗಿ ಪುರುಷೋತ್ತಮ ಕಣಗಾಲ್ ಕಾರ್ಯ ನಿರ್ವಹಿಸಿದ್ದರು. ಮಗ ಹಾಗೂ ಮಗಳನ್ನು ಬಿಟ್ಟು ಪುರುಷೋತ್ತಮ ಕಣಗಾಲ್ ಅಗಲಿದ್ದಾರೆ. ಸದ್ಯ ಮಗಳ ಜೊತೆ ನೆಲೆಸಿರುವ ಪುರುಷೋತ್ತಮ ಕಣಗಾಲ್ ಅಂತ್ಯ ಸಂಸ್ಕಾರ ಅಮೆರಿಕದಲ್ಲಿಯೇ ಮಾಡಲು ಕುಟುಂಬ ವರ್ಗ ನಿರ್ಧರಿಸಿದೆ.