ETV Bharat / entertainment

ಇನ್​ಸ್ಟಾಗ್ರಾಮ್​ ಇತಿಹಾಸದಲ್ಲಿ ಇದೇ ಮೊದಲು: ಬಿಡುಗಡೆಗೂ ಮುನ್ನವೇ ದಾಖಲೆ ಬರೆದ 'ಪುಷ್ಪ 2'

author img

By

Published : Aug 13, 2023, 2:18 PM IST

Pushpa 2: 'ಪುಷ್ಪ 2​' ಫಸ್ಟ್​ ಲುಕ್​ ಪೋಸ್ಟರ್ ಇನ್​ಸ್ಟಾಗ್ರಾಮ್​ನಲ್ಲಿ 7 ಮಿಲಿಯನ್​ ಲೈಕ್ಸ್​ಗಳನ್ನು ಪಡೆಯುವ ಮೂಲಕ ದಾಖಲೆ ಸೃಷ್ಟಿಸಿದೆ.

Pushpa 2
ಪುಷ್ಪ 2

ಭಾರತೀಯ ಚಿತ್ರರಂಗದ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಚಿತ್ರ 'ಪುಷ್ಪ 2: ದಿ ರೂಲ್​'. 2021ರಲ್ಲಿ ತೆರೆ ಕಂಡು ವಿಶ್ವದಾದ್ಯಂತ ಧೂಳೆಬ್ಬಿಸಿದ್ದ 'ಪುಷ್ಪ: ದಿ ರೈಸ್'​ನ ಮುಂದುವರೆದ ಭಾಗ ಇದಾಗಿದೆ. ನಟ ಅಲ್ಲು ಅರ್ಜುನ್​ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದ ಮೇಲೆ ಮುಗಿಲೆತ್ತರದ ನಿರೀಕ್ಷೆಯಿದೆ. ಈಗಾಗಲೇ ಚಿತ್ರದ ಫಸ್ಟ್​ ಲುಕ್​ ಪೋಸ್ಟರ್ ಬಿಡುಗಡೆಯಾಗಿದ್ದು, ದಾಖಲೆಯನ್ನು ಸೃಷ್ಟಿಸಿದೆ.

ಇತಿಹಾಸದಲ್ಲಿ ಇದೇ ಮೊದಲು.. ಏಪ್ರಿಲ್​ 8 ರಂದು ಪುಷ್ಪ 2 ಚಿತ್ರದ ಫಸ್ಟ್​ ಲುಕ್​ ಪೋಸ್ಟರ್​ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿತ್ತು. ಈ ಪೋಸ್ಟರ್​ 4 ತಿಂಗಳಲ್ಲಿ ಸಾಮಾಜಿಕ ಜಾಲತಾಣವಾದ ಇನ್​ಸ್ಟಾಗ್ರಾಮ್​ನಲ್ಲಿ 7 ಮಿಲಿಯನ್​ ಲೈಕ್ಸ್​ಗಳನ್ನು ಪಡೆಯುವ ಮೂಲಕ ದಾಖಲೆಯನ್ನು ಬರೆದಿದೆ. ಈ ವಿಚಾರವನ್ನು ಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್​ ಟ್ವೀಟರ್​ನಲ್ಲಿ ಹಂಚಿಕೊಂಡಿದೆ. ಇನ್​ಸ್ಟಾಗ್ರಾಮ್​ನಲ್ಲಿ ಇಷ್ಟು ಮಿಲಿಯನ್​ ಲೈಕ್ಸ್​ಗಳನ್ನು ಪಡೆದ ಮೊದಲ ಭಾರತೀಯ ಸಿನಿಮಾ ಪೋಸ್ಟರ್​ ಇದಾಗಿದೆ. ಈ ಬಗ್ಗೆ ಅಲ್ಲು ಅಭಿಮಾನಿಗಳು ಖುಷಿಯಾಗಿದ್ದಾರೆ.

ಫಹಾದ್​ ಫಾಸಿಲ್​ ಲುಕ್​ ಔಟ್​: ಕೆಲವು ದಿನಗಳ ಹಿಂದೆ ಪುಷ್ಪ 2 ಚಿತ್ರದಲ್ಲಿ ಖಳನಾಯಕನ ಪಾತ್ರ ಮಾಡುತ್ತಿರುವ ಫಹಾದ್​ ಫಾಸಿಲ್​ ಅವರ ಫಸ್ಟ್​ ಲುಕ್​ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿತ್ತು. ಖಾಕಿ ಜಾಕೆಟ್​ ಮತ್ತು ಕೂಲಿಂಗ್​ ಗ್ಲಾಸ್​ ಧರಿಸಿ ಸಿಗರೇಟ್​ ಸೇದುತ್ತಿರುವ ನೋಟದಲ್ಲಿ ಫಹಾದ್​ ಫಾಸಿಲ್​ ಕಾಣಿಸಿಕೊಂಡಿದ್ದಾರೆ. ತಲೆಯಲ್ಲಿ ಕೂದಲಿಲ್ಲದೇ ವಿಲನ್​ ಪಾತ್ರಕ್ಕೆ ಬೇಕಾದಂತೆ ಅವರನ್ನು ತೋರಿಸಲಾಗಿದೆ. ಫಹಾದ್​ ಫಾಸಿಲ್​ ವಿಲನ್​ ಲುಕ್​ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಪುಷ್ಪ 2: ದಿ ರೂಲ್​ ಸಿನಿಮಾವನ್ನು ಸುಕುಮಾರನ್ ಬರೆದು​ ನಿರ್ದೇಶಿಸಿದ್ದಾರೆ. ಮೈತ್ರಿ ಮೂವೀ ಮೇಕರ್ಸ್​ ನಿರ್ಮಿಸಿದೆ. 2023ರ ಡಿಸೆಂಬರ್ ಕೊನೆಯಲ್ಲಿ ಸಿನಿಮಾ ತೆರೆಗೆ ಬರಲಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್​, ರಶ್ಮಿಕಾ ಮಂದಣ್ಣ, ಫಹಾದ್​ ಫಾಸಿಲ್​, ಸುನೀಲ್​, ಅಜಯ್​, ರಾವ್​ ರಮೇಶ್​, ಅನುಸೂಯಾ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್​ ಸಂಗೀತ ನಿರ್ದೇಶನ, ಮಿರೋಸ್ಪಾ ಕುಬಾ ಛಾಯಾಗ್ರಹಣ, ಕಾರ್ತಿಕಾ ಶ್ರೀನಿವಾಸ್​ ಮತ್ತು ರೂಬೆನ್​ ಸಂಕಲನವಿದೆ.

ಪುಷ್ಪ: ದಿ ರೈಸ್​ ಹಿಟ್​: 2021ರ ಡಿಸೆಂಬರ್​ 17 ರಂದು ಪುಷ್ಪ: ದಿ ರೈಸ್​ ತೆರೆಗೆ ಬಂದಿತ್ತು. ಚಿತ್ರವು ಜಗತ್ತಿನಾದ್ಯಂತ ಸಿನಿ ರಸಿಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಸುಕುಮಾರ್​ ನಿರ್ದೇಶನದ ಮೂಡಿಬಂದ ಈ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಎಲ್ಲರನ್ನು ಸೆಳೆದಿತ್ತು. ​ಕೆಂಪು ಚಂದನ ಮರದ ಕಳ್ಳಸಾಗಣೆ ಕುರಿತ ಕಥಾವಸ್ತುವನ್ನು ಸಿನಿಮಾ ಹೊಂದಿತ್ತು.

ಪುಪ್ಪ: ದಿ ರೈಸ್​ ಚಿತ್ರವು ವಿಶ್ವದಾದ್ಯಂತ ಸುಮಾರು 400 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿತ್ತು. ಈ ಮೂಲಕ 2021ರಲ್ಲಿ ಅತಿ ಹೆಚ್ಚು ಕಲೆಕ್ಷನ್​ ಮಾಡಿರುವ ಸಿನಿಮಾಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿತ್ತು. ಮೈತ್ರಿ ಮೂವೀ ಮೇಕರ್ಸ್, ಮುತ್ತಂ ಶೆಟ್ಟಿ ಮೀಡಿಯಾ ಜಂಟಿಯಾಗಿ ನಿರ್ಮಿಸಿದ್ದ ಚಿತ್ರದಲ್ಲಿ ಸುನೀಲ್, ಫಹಾದ್ ಫಾಜಿಲ್, ಅನಸೂಯ ಮುಂತಾದವರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದರು.

ಇದನ್ನೂ ಓದಿ: 'ಪುಷ್ಪ 2' ಚಿತ್ರದ ಡೈಲಾಗ್​ ಹೇಳಿದ ಅಲ್ಲು ಅರ್ಜುನ್​: 'ಬನ್ನಿ' ಸ್ವೀಟ್​ ಸರ್ಪ್ರೈಸ್​ಗೆ ಫ್ಯಾನ್ಸ್​ ಫುಲ್​ ಖುಷ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.