ETV Bharat / entertainment

Pushpa 2: ನಟ ಫಹಾದ್​ ಫಾಸಿಲ್​ ಜನ್ಮದಿನ.. 'ಪುಷ್ಪ 2' ಖಳನಾಯಕನ ಫಸ್ಟ್​ ಲುಕ್​ ಔಟ್​

author img

By

Published : Aug 8, 2023, 1:12 PM IST

Updated : Aug 8, 2023, 2:25 PM IST

ನಟ ಫಹಾದ್​ ಫಾಸಿಲ್ ಜನ್ಮದಿನದ ಹಿನ್ನೆಲೆ ಪುಷ್ಪ 2: ದಿ ರೂಲ್​ ಚಿತ್ರದ ಫಸ್ಟ್​ ಲುಕ್​ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ.

Fahadh Faasil
ಫಹಾದ್​ ಫಾಸಿಲ್​

'ಪುಷ್ಪ 2: ದಿ ರೂಲ್​' ಭಾರತೀಯ ಚಿತ್ರರಂಗದ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಚಿತ್ರ. 2021ರಲ್ಲಿ ತೆರೆ ಕಂಡು ವಿಶ್ವದಾದ್ಯಂತ ಧೂಳೆಬ್ಬಿಸಿದ್ದ ಪುಷ್ಪ: ದಿ ರೈಸ್​ನ ಮುಂದುವರೆದ ಭಾಗ ಇದಾಗಿದೆ. ಈ ಸಿನಿಮಾದಲ್ಲಿ ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ ಮತ್ತು ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿದ್ದಾರೆ. ಚಿತ್ರದಲ್ಲಿ ಖಳನಾಯಕನಾಗಿ ನಟಿಸಿರುವ ಮಾಲಿವುಡ್​ ನಟ ಫಹಾದ್​ ಫಾಸಿಲ್ ಅವರ ಫಸ್ಟ್​ ಲುಕ್​ ಇದೀಗ ಬಿಡುಗಡೆಯಾಗಿದೆ.

ಇಂದು ಫಹಾದ್​ ಫಾಸಿಲ್​ ಅವರ ಜನ್ಮದಿನ. ​ಆಗಸ್ಟ್​ 8 ರಂದು ನಟ 42ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ದಿನದಂದು ಪುಷ್ಪ 2: ದಿ ರೂಲ್​ ಚಿತ್ರದ ಖಳನಾಯಕನ ಫಸ್ಟ್​ ಲುಕ್​ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. ಖಾಕಿ ಜಾಕೆಟ್​ ಮತ್ತು ಕೂಲಿಂಗ್​ ಗ್ಲಾಸ್​ ಧರಿಸಿ ಸಿಗರೇಟ್​ ಸೇದುತ್ತಿರುವ ನೋಟದಲ್ಲಿ ಫಹಾದ್​ ಫಾಸಿಲ್​ ಕಾಣಿಸಿಕೊಂಡಿದ್ದಾರೆ. ತಲೆಯಲ್ಲಿ ಕೂದಲಿಲ್ಲದೇ ವಿಲನ್​ ಪಾತ್ರಕ್ಕೆ ಬೇಕಾದಂತೆ ಅವರನ್ನು ತೋರಿಸಲಾಗಿದೆ. ಫಹಾದ್​ ಫಾಸಿಲ್​ ವಿಲನ್​ ಲುಕ್​ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಪುಷ್ಪ 2: ದಿ ರೂಲ್​ ಸಿನಿಮಾವನ್ನು ಸುಕುಮಾರನ್ ಬರೆದು​ ನಿರ್ದೇಶಿಸಿದ್ದಾರೆ. ಮೈತ್ರಿ ಮೂವೀ ಮೇಕರ್ಸ್​ ನಿರ್ಮಿಸಿದೆ. 2023ರ ಡಿಸೆಂಬರ್ ಕೊನೆಯಲ್ಲಿ ಸಿನಿಮಾ ತೆರೆಗೆ ಬರಲಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್​, ರಶ್ಮಿಕಾ ಮಂದಣ್ಣ, ಫಹಾದ್​ ಫಾಸಿಲ್​, ಸುನೀಲ್​, ಅಜಯ್​, ರಾವ್​ ರಮೇಶ್​, ಅನುಸೂಯಾ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್​ ಸಂಗೀತ ನಿರ್ದೇಶನ, ಮಿರೋಸ್ಪಾ ಕುಬಾ ಛಾಯಾಗ್ರಹಣ, ಕಾರ್ತಿಕಾ ಶ್ರೀನಿವಾಸ್​ ಮತ್ತು ರೂಬೆನ್​ ಸಂಕಲನವಿದೆ.

ಅಲ್ಲು ಅರ್ಜುನ್ ಅವರು ಪುಷ್ಪ 2: ದಿ ರೂಲ್​ಗಾಗಿ ಮತ್ತೊಂದು ವೇಳಾಪಟ್ಟಿಯನ್ನು ಪ್ರಾರಂಭಿಸಿದ್ದಾರೆ. ಹೈದರಾಬಾದ್​ನಲ್ಲಿರುವ ರಾಮೋಜಿ ಫಿಲ್ಮ್​ ಸಿಟಿಯಲ್ಲಿ ಚಿತ್ರೀಕರಣ ನಡೆಯಲಿದೆ. ಮೂಲಗಳ ಪ್ರಕಾರ, ಪುಷ್ಪ 2ನ ಕೆಲವು ಪ್ರಮುಖ ದೃಶ್ಯಗಳನ್ನು ರಾಮೋಜಿ ಫಿಲ್ಮ್​ ಸಿಟಿಯಲ್ಲಿ ಚಿತ್ರೀಕರಿಸಲಾಗುತ್ತದೆ. ಅದಕ್ಕಾಗಿ ಬೃಹತ್​ ಸೆಟ್​ಗಳನ್ನು ಹಾಕಲಾಗಿದೆ. ಇದು ಮುಂದುವರೆದ ಭಾಗವಾಗಿರುವುದರಿಂದ, ಚಿತ್ರವನ್ನು ಪ್ರೇಕ್ಷಕರಿಗೆ ದೃಶ್ಯರೂಪವಾಗಿರಿಸಲು ನಿರ್ಮಾಪಕರು ಪ್ರಯತ್ನಿಸುತ್ತಿದ್ದಾರೆ.

ಪುಷ್ಪ: ದಿ ರೈಸ್​ ಸೂಪರ್​ ಹಿಟ್: 2021ರ ಡಿಸೆಂಬರ್​ 17 ರಂದು ಪುಷ್ಪ: ದಿ ರೈಸ್​ ತೆರೆಗೆ ಬಂದಿತ್ತು. ಚಿತ್ರವು ಜಗತ್ತಿನಾದ್ಯಂತ ಸಿನಿ ರಸಿಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಸುಕುಮಾರ್​ ನಿರ್ದೇಶನದ ಮೂಡಿಬಂದ ಈ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಎಲ್ಲರನ್ನು ಸೆಳೆದಿತ್ತು. ​ಕೆಂಪು ಚಂದನ ಮರದ ಕಳ್ಳಸಾಗಣೆ ಕುರಿತ ಕಥಾವಸ್ತುವನ್ನು ಸಿನಿಮಾ ಹೊಂದಿತ್ತು.

ಪುಪ್ಪ: ದಿ ರೈಸ್​ ಚಿತ್ರವು ವಿಶ್ವದಾದ್ಯಂತ ಸುಮಾರು 400 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿತ್ತು. ಈ ಮೂಲಕ 2021ರಲ್ಲಿ ಅತಿ ಹೆಚ್ಚು ಕಲೆಕ್ಷನ್​ ಮಾಡಿರುವ ಸಿನಿಮಾಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿತ್ತು. ಮೈತ್ರಿ ಮೂವೀ ಮೇಕರ್ಸ್, ಮುತ್ತಂ ಶೆಟ್ಟಿ ಮೀಡಿಯಾ ಜಂಟಿಯಾಗಿ ನಿರ್ಮಿಸಿದ್ದ ಚಿತ್ರದಲ್ಲಿ ಸುನೀಲ್, ಫಹಾದ್ ಫಾಜಿಲ್, ಅನಸೂಯ ಮುಂತಾದವರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದರು.

ಇದನ್ನೂ ಓದಿ: 'ಪುಷ್ಪ 2' ಚಿತ್ರದ ಡೈಲಾಗ್​ ಹೇಳಿದ ಅಲ್ಲು ಅರ್ಜುನ್​: 'ಬನ್ನಿ' ಸ್ವೀಟ್​ ಸರ್ಪ್ರೈಸ್​ಗೆ ಫ್ಯಾನ್ಸ್​ ಫುಲ್​ ಖುಷ್​

Last Updated : Aug 8, 2023, 2:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.