2017ರಲ್ಲಿ ಸಾಮಾಜಿಕ ಸಂದೇಶ ನೀಡುವ ಕಥೆಯೊಂದು ಬೆಳ್ಳಿ ತೆರೆಯಲ್ಲಿ ಮೂಡಿ ಬಂತು. ಪೋಷಕರನ್ನು ವೃದ್ಧಾಶ್ರಮಕ್ಕೆ ನೂಕುವ ಅದೆಷ್ಟೋ ವಿದ್ಯಾವಂತ ಮಕ್ಕಳಿಗೆ ಈ ಸಿನಿಮಾ ಪಾಠ ಹೇಳಿತು. ಮೊದಲಾರ್ಧದ ಫೈಟ್, ಹಾಡುಗಳು, ಅದೇ ಗ್ಯಾಪ್ನಲ್ಲಿ ಸ್ವಲ್ಪ ಕಾಮಿಡಿಯಿಂದ ಟೈಮ್ ಪಾಸ್ ಆದ್ರೆ, ಇಂಟರ್ವಲ್ನಲ್ಲಿ ಸಿಗುವ ಟ್ವಿಸ್ಟ್ ಹಾಗೂ ತದನಂತರದ ಕಥೆ ಪ್ರೇಕ್ಷಕರ ಕಣ್ಣಾಲಿಗಳನ್ನು ತೇವಗೊಳಿಸಿತು.
ಹೌದು. ಸ್ಯಾಂಡಲ್ವುಡ್ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುವುದರ ಜೊತೆಗೆ ಕನ್ನಡಿಗರ ಮನಸ್ಸಿಗೆ ಹತ್ತಿರವಾಗಿದೆ. ಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ ಆರು ವರ್ಷಗಳನ್ನು ಪೂರೈಸಿದೆ. ಚಿತ್ರ ಕಥೆ ಎಷ್ಟು ಫೇಮಸ್ ಆಗಿದೆಯೋ, ಅದಕ್ಕಿಂತ ಹೆಚ್ಚಾಗಿ ಹಾಡುಗಳು ಸೂಪರ್ ಹಿಟ್ ಆಗಿವೆ. 'ಬೊಂಬೆ ಹೇಳುತೈತೆ..ಮತ್ತೆ ಹೇಳುತೈತೆ' ಹಾಡನ್ನು ಜನರು ಇಂದಿಗೂ ಗುನುಗುತ್ತಿರುತ್ತಾರೆ.
-
Celebrating 6 years of #Raajakumara today and forever!💕#6yearsForIndustryHitRaajakumara #AppuSirLivesOn @PuneethRajkumar @SanthoshAnand15 #VijayKiragandur @hombalefilms @harimonium@PriyaAnand pic.twitter.com/ld0WNdmPLR
— Hombale Films (@hombalefilms) March 24, 2023 " class="align-text-top noRightClick twitterSection" data="
">Celebrating 6 years of #Raajakumara today and forever!💕#6yearsForIndustryHitRaajakumara #AppuSirLivesOn @PuneethRajkumar @SanthoshAnand15 #VijayKiragandur @hombalefilms @harimonium@PriyaAnand pic.twitter.com/ld0WNdmPLR
— Hombale Films (@hombalefilms) March 24, 2023Celebrating 6 years of #Raajakumara today and forever!💕#6yearsForIndustryHitRaajakumara #AppuSirLivesOn @PuneethRajkumar @SanthoshAnand15 #VijayKiragandur @hombalefilms @harimonium@PriyaAnand pic.twitter.com/ld0WNdmPLR
— Hombale Films (@hombalefilms) March 24, 2023
ರಾಜಕುಮಾರ ಕಥೆ ತುಂಬಾ ಸಿಂಪಲ್, ಆದರೆ ಅದನ್ನು ಹೇಳುವ ರೀತಿ ಎಲ್ಲರ ಮನಮುಟ್ಟಿದೆ. ಸಂಭಾಷಣೆ ವಾಸ್ತವಕ್ಕೆ ತೀರಾ ಹತ್ತಿರವಾಗಿದ್ದರೂ, ಒಂದೊಂದು ವಾಕ್ಯವು ಅಷ್ಟು ಅರ್ಥವನ್ನು ಕೊಡುತ್ತದೆ. ಇಡೀ ಸಿನಿಮಾದಲ್ಲಿ ಅಪ್ಪು ತಮ್ಮ ಪಾತ್ರವನ್ನು ನಿರ್ವಹಿಸಿದ ರೀತಿ ನಿಜಕ್ಕೂ ಅದ್ಭುತ. ಸೆಂಟಿಮೆಟ್ ದೃಶ್ಯ, ಡೈಲಾಗ್ಸ್, ಡ್ಯಾನ್ಸ್ ಎಲ್ಲದರಲ್ಲೂ ಅವರ ಅಭಿನಯ ಲೀಲಾಜಾಲವಾಗಿದೆ. ಇನ್ನು ರಾಜಕುಮಾರನ ನಾಯಕಿಯಾಗಿ ಅಭಿನಯಿಸಿದ ಬಹುಭಾಷಾ ನಟಿ ಪ್ರಿಯಾ ಆನಂದ್ ಅವರಿಗಿದು ಮೊದಲ ಕನ್ನಡ ಸಿನಿಮಾ.
ಅಪ್ಪು ಅಪ್ಪನ ಪಾತ್ರದಲ್ಲಿ ಕಾಣಿಸಿಕೊಂಡ ಶರತ್ ಕುಮಾರ್ ನಟನೆ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಸಣ್ಣ ಪಾತ್ರದಲ್ಲಿ ಅನಂತ್ ನಾಗ್ ಕಾಣಿಸಿಕೊಂಡರೂ ಅವರ ಮುಖ ಹಾಗೆಯೇ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಕೊಟ್ಟ ಪಾತ್ರಗಳನ್ನು ಅಚ್ಯುತ್ ಕುಮಾರ್, ದತ್ತಣ್ಣ, ಅವಿನಾಶ್, ಪ್ರಕಾಶ್ ರೈ, ವಿಜಯಲಕ್ಷ್ಮಿ ಸಿಂಗ್, ಭಾರ್ಗವಿ ನಾರಾಯಣ್ ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಮೊದಲಾರ್ಧ ಭಾಗದಲ್ಲಿ ರಂಗಾಯಣ ರಘು ಅವರ ಕಾಮಿಡಿ ಕಿಕ್ ಕೊಟ್ಟರೆ, ಸೆಕೆಂಡ್ ಹಾಫ್ನಲ್ಲಿ ಚಿಕ್ಕಣ್ಣ, ಸಾಧುಕೋಕಿಲ ಕಾಮಿಡಿ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿತ್ತು.
-
ನನಗೆ ,ಹೊಂಬಾಳೆ ಫಿಲಂಸ್ ಗೆ ಹಾಗೂ ಚಿತ್ರ ತಂಡಕ್ಕೆ ದೊಡ್ಡ ತಿರುವನ್ನು ಕೊಟ್ಟ ಈ ಚಿತ್ರಕ್ಕೆ ,ಕನ್ನಡ ಜನತೆಗೆ ,ಅಭಿಮಾನಿ ದೇವರುಗಳಿಗೆ ,
— Santhosh Ananddram (@SanthoshAnand15) March 24, 2023 " class="align-text-top noRightClick twitterSection" data="
ನನ್ನ” ಅಪ್ಪು ಅಣ್ಣನಿಗೆ” ನನ್ನ ಕೋಟಿ ಪ್ರಣಾಮಗಳು🙏🙏🙏#6yearsForIndustryHitRaajakumara #AppuSirLivesOn @PuneethRajkumar @hombalefilms @Karthik1423 @harimonium @PriyaAnand pic.twitter.com/5bYDIrDqSb
">ನನಗೆ ,ಹೊಂಬಾಳೆ ಫಿಲಂಸ್ ಗೆ ಹಾಗೂ ಚಿತ್ರ ತಂಡಕ್ಕೆ ದೊಡ್ಡ ತಿರುವನ್ನು ಕೊಟ್ಟ ಈ ಚಿತ್ರಕ್ಕೆ ,ಕನ್ನಡ ಜನತೆಗೆ ,ಅಭಿಮಾನಿ ದೇವರುಗಳಿಗೆ ,
— Santhosh Ananddram (@SanthoshAnand15) March 24, 2023
ನನ್ನ” ಅಪ್ಪು ಅಣ್ಣನಿಗೆ” ನನ್ನ ಕೋಟಿ ಪ್ರಣಾಮಗಳು🙏🙏🙏#6yearsForIndustryHitRaajakumara #AppuSirLivesOn @PuneethRajkumar @hombalefilms @Karthik1423 @harimonium @PriyaAnand pic.twitter.com/5bYDIrDqSbನನಗೆ ,ಹೊಂಬಾಳೆ ಫಿಲಂಸ್ ಗೆ ಹಾಗೂ ಚಿತ್ರ ತಂಡಕ್ಕೆ ದೊಡ್ಡ ತಿರುವನ್ನು ಕೊಟ್ಟ ಈ ಚಿತ್ರಕ್ಕೆ ,ಕನ್ನಡ ಜನತೆಗೆ ,ಅಭಿಮಾನಿ ದೇವರುಗಳಿಗೆ ,
— Santhosh Ananddram (@SanthoshAnand15) March 24, 2023
ನನ್ನ” ಅಪ್ಪು ಅಣ್ಣನಿಗೆ” ನನ್ನ ಕೋಟಿ ಪ್ರಣಾಮಗಳು🙏🙏🙏#6yearsForIndustryHitRaajakumara #AppuSirLivesOn @PuneethRajkumar @hombalefilms @Karthik1423 @harimonium @PriyaAnand pic.twitter.com/5bYDIrDqSb
ಇದನ್ನೂ ಓದಿ: ನರೇಶ್, ಪವಿತ್ರ ಅಭಿನಯದ 'ಮತ್ತೆ ಮದುವೆ' ಚಿತ್ರದ ಫಸ್ಟ್ಲುಕ್ ರಿಲೀಸ್
ಈ ಚಿತ್ರ ರಿಲೀಸ್ ಆದಾಗ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಕಮಾಲು ಮಾಡಿತ್ತು. ಪಕ್ಕಾ ಫ್ಯಾಮಿಲಿ ಎಂಟರ್ಟೇನರ್ ಆಗಿದ್ದ ಈ ಸಿನಿಮಾ 6 ವಾರಗಳಲ್ಲಿ ಮಲ್ಟಿಫ್ಲೆಕ್ಸ್ನಲ್ಲಿ 6000 ಶೋ ಕಂಡಿತ್ತು. ಇದೀಗ ರಾಜಕುಮಾರ ಸಿನಿಮಾಗೆ ಆರು ವರ್ಷ ತುಂಬಿದ್ದು, ಈ ಕುರಿತು ನಿರ್ದೇಶಕ ಸಂತೋಷ್ ಆನಂದ್ ರಾಮ್, ನಿರ್ಮಾಪಕ ವಿಜಯ್ ಕಿರಗಂದೂರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
"ಆರು ವರ್ಷದ ಸಂಭ್ರಮ. ರಾಜಕುಮಾರ ಇಂದು, ಎಂದೆಂದೂ" ಎಂದು ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿದೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ "ನನಗೆ, ಹೊಂಬಾಳೆ ಫಿಲಂಸ್ಗೆ ಹಾಗೂ ಚಿತ್ರ ತಂಡಕ್ಕೆ ದೊಡ್ಡ ತಿರುವನ್ನು ಕೊಟ್ಟ ಈ ಚಿತ್ರಕ್ಕೆ, ಕನ್ನಡ ಜನತೆಗೆ, ಅಭಿಮಾನಿ ದೇವರುಗಳಿಗೆ, ನನ್ನ 'ಅಪ್ಪು ಅಣ್ಣನಿಗೆ' ನನ್ನ ಕೋಟಿ ಪ್ರಣಾಮಗಳು.." ಎಂದು ಟ್ವೀಟ್ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: 'ಎಲ್ಲಾ ಗೇಲಿಗೂ ಹೊಡಿ ಗೋಲಿ, ನೀನು ನೀನಾಗಿರು': ಪೆಪ್ಸಿ ಜಾಹೀರಾತಿನಲ್ಲಿ ರಾಕಿಂಗ್ ಸ್ಟಾರ್ ಯಶ್