ಯುವ ನಿರ್ಮಾಪಕ ಭರತ್ ವಿಷ್ಣುಕಾಂತ್ ಅವರು ಭರತ್ ಫಿಲಂ ಬ್ಯಾನರ್ ಅಡಿ ಮೂರು ಹೊಸ ಸಿನಿಮಾಗಳನ್ನ ಅನೌನ್ಸ್ ಮಾಡುವ ಮೂಲಕ ಸ್ಯಾಂಡಲ್ವುಡ್ನಲ್ಲಿ ಹೊಸ ಮುನ್ನುಡಿ ಬರೆದಿದ್ದಾರೆ. ಪಾರ್ವತಮ್ಮ ರಾರ್ಕುಮಾರ್ ಸಹೋದರನ ಪುತ್ರ ಧ್ರುವನ್ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ 'ಭಗವಾನ್ ಶ್ರೀ ಕೃಷ್ಣ ಪರಮಾತ್ಮ' ಅವರೇ ಬಂಡವಾಳ ಹೂಡುತ್ತಿದ್ದು, ಇದರ ಜೊತೆಗೆ ಒಟ್ಟೊಟ್ಟಿಗೆ ಮೂರು ಸಿನಿಮಾಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಹಾಗಾಗಿ ಯುವ ಪ್ರತಿಭೆಯಾಗಿ ಭರತ್ ವಿಷ್ಣುಕಾಂತ್ ಸದ್ಯ ಚಂದನವನದ ಕ್ರೇಜಿ ನಿರ್ಮಾಪಕರ ಸಾಲಿಗೆ ಕಾಣಿಸಿಕೊಳ್ಳುತ್ತಿದ್ದಾರೆ.
'ಭಗವಾನ್ ಶ್ರೀ ಕೃಷ್ಣ ಪರಮಾತ್ಮ' ಪೋಸ್ಟರ್ ಹಾಗೂ ಹಾಡಿನ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಚಿತ್ರವಾಗಿದ್ದು, ಈ ಸಿನಿಮಾದ ಬಿಡುಗಡೆಗೂ ಮುನ್ನವೇ ಭರತ್ ತಮ್ಮದೇ ಭರತ್ ಫಿಲಂ ಪ್ರೊಡಕ್ಷನ್ ಲೋಗೋ ಲಾಂಚ್ ಮಾಡಿ ಮೂರು ಹೊಸ ಸಿನಿಮಾಗಳನ್ನು ಅನೌನ್ಸ್ ಮಾಡಿದ್ದಾರೆ. ಇತ್ತೀಚೆಗೆ ಖಾಸಗಿ ಹೋಟೆಲ್ವೊಂದರಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಅವರು ಭರತ್ ಫಿಲಂ ಪ್ರೊಡಕ್ಷನ್ ಲೋಗೋ ಲಾಂಚ್ ಮಾಡಿ ಭರತ್ ಆ್ಯಂಡ್ ಟೀಂಗೆ ಶುಭಹಾರೈಸಿದರು.
![Producer Umapathy Srinivas advised the young talent](https://etvbharatimages.akamaized.net/etvbharat/prod-images/kn-bng-02-vyakti-pooje-madabedai-yuvaproducerge-umapathisrinivas-keviemathu-7204735_20072022160055_2007f_1658313055_792.jpg)
ಬಳಿಕ ಮಾತನಾಡಿದ ನಿರ್ಮಾಪಕ ಉಮಾಪತಿಗೌಡ, ಒಬ್ಬ ನಿರ್ಮಾಪಕ ಯಾವಾಗಲೂ ಮುಂದೆ ಇರಬೇಕು. ಸಿನಿಮಾ ಶುರುವಾಗುವುದಕ್ಕೂ ಮುನ್ನ ನಿರ್ದೇಶಕರು ಕಥೆ ಮಾಡಿಕೊಳ್ಳುತ್ತಾರೆ. ಆ ಬಳಿಕ ನಿರ್ಮಾಪಕ ಬಳಿ ಹೋಗುತ್ತಾರೆ. ಪ್ರೊಡ್ಯೂಸರ್ ಇಡೀ ಟೀಂ ಸಾಕ್ತಾರೆ. ಆ ಬಳಿಕ ಏಕಾಂಗಿಯಾಗುವುದು ಪ್ರೊಡ್ಯೂಸರ್. ಥಿಯೇಟರ್ ಹತ್ತಿರ ದುಡ್ಡು ಕಲೆಕ್ಟ್ ಮಾಡಿ. ಕೊಡುವವರಿಗೆ ದೊಡ್ಡ ಕೊಡಬೇಕು.
ಸಿನಿಮಾ ಅಂತಾ ಬಂದಾಗ ಚಿಕ್ಕದು ದೊಡ್ಡದು ಲೆಕ್ಕಕ್ಕೆ ಬರುವುದಿಲ್ಲ. ಆ ಸಿನಿಮಾ ಹೊರೆ ಹೊತ್ತವರಿಗೆ ಅದರ ಕಷ್ಟ ಗೊತ್ತಾಗುತ್ತದೆ. ಸಿನಿಮಾಗೆ ನಿರ್ಮಾಪಕನೇ ಮೊದಲ ಹೀರೋ. ಸಿನಿಮಾ ಎನ್ನುವುದು ಆಲದ ಮರ ಇದ್ದ ಹಾಗೆ. ಅದರ ನೆರಳಿನಲ್ಲಿ ನಾವು ಸಿನಿಮಾ ಮಾಡಬೇಕು ಹೊರತು, ಒಬ್ಬ ವ್ಯಕ್ತಿ ಪೂಜೆ ಮಾಡಬಾರದು. ಏಕೆಂದರೆ ಸ್ಟಾರ್ ಇರೋವರೆಗೆ ಮಾತ್ರ ಆ ವ್ಯಕ್ತಿ ಹೀರೋ. ಅದಕ್ಕೆ ಯಾರೇ ನಿರ್ಮಾಪಕರಾಗಲಿ, ವ್ಯಕ್ತಿಯನ್ನ ಮೆರೆಸುವ ಕೆಲಸ ಮಾಡಬಾರದು ಅಂತಾ ಯುವ ಮತ್ತು ಹೊಸ ನಿರ್ಮಾಪಕರಿಗೆ ಕಿವಿ ಮಾತು ಹೇಳಿದರು.
ನಂತರ ಯುವ ನಿರ್ಮಾಪಕ ಭರತ್ ವಿಷ್ಣುಕಾಂತ್ ಮಾತನಾಡಿ, ಸಿನಿಮಾ ಮಾಡುವುದು ದೊಡ್ಡದಲ್ಲ, ಅದನ್ನು ಕಂಪ್ಲೀಟ್ ಮಾಡಬೇಕು ಅಂತಾ ಉಮಾಪತಿ ಸರ್ ಹೇಳಿದ್ದಾರೆ. ಜೊತೆಗೆ ನನಗೆ ಅವರು ಪ್ರೋತ್ಸಾಹ ಕೊಡುತ್ತಿದ್ದಾರೆ. ಈಗ ಜಾಸ್ತಿ ಮಾತನಾಡುವುದಿಲ್ಲ. ಸಿನಿಮಾ ಮಾಡಿ ಮುಗಿಸಿ ತೋರಿಸುತ್ತೇನೆ. ಯಾವತ್ತು ನಾವು ಮಾತನಾಡಬಾರದು. ನಮ್ಮ ಕೆಲಸ ಮಾತನಾಡಬೇಕು ಎಂದರು.