ETV Bharat / entertainment

ಪ್ರಿಯಾಂಕಾ ಗಾಂಧಿ ಪಿಎಯಿಂದ ನಟಿ ಅರ್ಚನಾ ಗೌತಮ್​ಗೆ ಕೊಲೆ ಬೆದರಿಕೆ ಆರೋಪ.. ದೂರು ದಾಖಲು - ಪ್ರಿಯಾಂಕಾ ಗಾಂಧಿ

ನಟಿ ಅರ್ಚನಾ ಗೌತಮ್​​ ತಂದೆ ಗೌತಮ್ ಬುದ್ಧ ಅವರು ಪ್ರಿಯಾಂಕಾ ಗಾಂಧಿ ಪಿಎ ಸಂದೀಪ್ ಸಿಂಗ್ ವಿರುದ್ಧ ಪರ್ತಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Archana Gautam gets death threat
ನಟಿ ಅರ್ಚನಾ ಗೌತಮ್​ಗೆ ಕೊಲೆ ಬೆದರಿಕೆ
author img

By

Published : Mar 8, 2023, 1:03 PM IST

ಮೀರತ್ (ಉತ್ತರ ಪ್ರದೇಶ): ಸೂಪರ್​ ಸ್ಟಾರ್​ ಸಲ್ಮಾನ್​ ಖಾನ್​ ನಿರೂಪಣೆಯ ಜನಪ್ರಿಯ ಹಿಂದಿ ರಿಯಾಲಿಟಿ ಶೋ ಬಿಗ್ ಬಾಸ್ 16ರ ಮೂಲಕ ನಟಿ ಅರ್ಚನಾ ಗೌತಮ್ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ನಟನೆ, ಬಿಗ್​ಬಾಸ್​​ ಮೂಲಕ ರಾಷ್ಟ್ರವ್ಯಾಪಿ ಖ್ಯಾತಿ ಗಳಿಸಿರುವ ನಟಿ ಅರ್ಚನಾ ಗೌತಮ್ ಅವರಿಗೆ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪಿಎ ಸಂದೀಪ್ ಸಿಂಗ್ ಅವರು ಕೊಲೆ ಬೆದರಿಕೆ ಹಾಕಿದ್ದಾರೆನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ನಟಿ ಅರ್ಚನಾ ಗೌತಮ್​​ ಅವರ ತಂದೆ ಗೌತಮ್ ಬುದ್ಧ ಅವರು ಪ್ರಿಯಾಂಕಾ ಗಾಂಧಿ ಅವರ ಪಿಎ ಸಂದೀಪ್ ಸಿಂಗ್ ವಿರುದ್ಧ ಪರ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದೇ ಫೆಬ್ರವರಿ 26ರಂದು ಛತ್ತೀಸ್‌ಗಢದ ರಾಯ್‌ಪುರಕ್ಕೆ ಪ್ರಿಯಾಂಕಾ ಗಾಂಧಿ ಅವರು ಆಹ್ವಾನಿಸಿದ್ದ ಹಿನ್ನೆಲೆ, ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ್ದ ಮಗಳೊಂದಿಗೆ ಸಂದೀಪ್ ಸಿಂಗ್​​ ಅವರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಅರ್ಚನಾರ ತಂದೆ ಗೌತಮ್ ಬುದ್ಧ ಆರೋಪಿಸಿದ್ದಾರೆ. ಅವರ ಪ್ರಕಾರ, ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾಗಲು ಪಿಎ ಸಂದೀಪ್ ಸಿಂಗ್ ಅವರಿಂದ ಸಮಯ ಕೇಳಿದಾಗ ಅವರು ನಿರಾಕರಿಸಿದರು, ಕೆಲ ಅವಾಚ್ಯ ಪದಗಳನ್ನು ಅಂದು ಬಳಸಿದ್ದಾರೆಂದು ಆರೋಪಿಸಿದ್ದಾರೆ.

"ಸಂದೀಪ್ ಸಿಂಗ್ ಅವರು ತನ್ನ ಮಗಳನ್ನು ಪ್ರಿಯಾಂಕಾ ಗಾಂಧಿಯವರಿಗೆ ಪರಿಚಯಿಸಲು ನಿರಾಕರಿಸಿದರು. ಅರ್ಚನಾ ಜೊತೆ ಅಸಭ್ಯವಾಗಿ ಮಾತನಾಡಿದ್ದಾರೆ. ಅಷ್ಟೇ ಅಲ್ಲದೇ ಅವರು ಮಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು'' ಎಂದು ಗೌತಮ್ ಆರೋಪಿಸಿದ್ದಾರೆ. ವರದಿಗಳ ಪ್ರಕಾರ, ಸ್ವತಃ ಅರ್ಚನಾ ಗೌತಮ್ ಸಹ ಫೇಸ್‌ಬುಕ್ ಲೈವ್‌ನಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.

ನಟಿ ಅರ್ಚನಾ ಗೌತಮ್ ಅವರ ತಂದೆಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮೀರತ್ ಸಿಟಿಯ ಎಸ್ಪಿ ಪಿಯೂಷ್ ಸಿಂಗ್ ತಿಳಿಸಿದ್ದಾರೆ. "ಬಿಗ್ ಬಾಸ್ ಮಾಜಿ ಸ್ಪರ್ಧಿ ಮತ್ತು ಕಾಂಗ್ರೆಸ್ ನಾಯಕಿ ಅರ್ಚನಾ ಗೌತಮ್ ಅವರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪಿಎ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ", ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಪಿಯೂಷ್ ಸಿಂಗ್ ತಿಳಿಸಿದರು. ಸಂದೀಪ್ ಸಿಂಗ್ ವಿರುದ್ಧ ಪರ್ತಾಪುರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 504, 506 ಮತ್ತು ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಬಯಸಿದ್ರೆ ಚುನಾವಣೆಗೆ ಸ್ಪರ್ಧೆ: ನಟಿ ಅರ್ಚನಾ ಗೌತಮ್

ನಾಯಕಿ ಪ್ರಿಯಾಂಕಾ ಗಾಂಧಿ ಅವರು ಬಯಸಿದ್ರೆ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವುದು ಖಚಿತ. ಅದಕ್ಕೂ ಮೊದಲು ಚಿತ್ರರಂಗದಲ್ಲಿ ಗಟ್ಟಿಯಾಗಿ ಗುರುತಿಸಿಕೊಳ್ಳಲು ಬಯಸುತ್ತೇನೆ ಎಂದು ಈ ಹಿಂದಿನ ಸಂದರ್ಶನದಲ್ಲಿ ನಟಿ ಅರ್ಚನಾ ಗೌತಮ್ ತಿಳಿಸಿದ್ದರು.

ಇದನ್ನೂ ಓದಿ: ಸ್ಯಾಂಡಲ್​ವುಡ್​​ನಲ್ಲಿ ಛಾಪು ಮೂಡಿಸಿರುವ ನಟಿಯರಿಗೆ ಮಹಿಳಾ ದಿನಾಚರಣೆಯ ಶುಭಾಶಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.