ETV Bharat / entertainment

ಪತಿ ನಿಕ್​ ಹುರಿದುಂಬಿಸಲು ಜೋನಾಸ್ ಬ್ರದರ್ಸ್ ಕನ್ಸರ್ಟ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಭಾಗಿ - ಈಟಿವಿ ಭಾರತ ಕನ್ನಡ

Priyanka Chopra yet again turns cheerleader for Nick Jonas: ಇತ್ತೀಚೆಗೆ ಟೆಕ್ಸಾಸ್​ನಲ್ಲಿ ನಡೆದ ಜೋನಾಸ್​ ಬ್ರದರ್ಸ್​ ಸಂಗೀತ ಕಚೇರಿಯಲ್ಲಿ ಪ್ರಿಯಾಂಕಾ ಚೋಪ್ರಾ ತಮ್ಮ ಪತಿ ನಿಕ್​ ಜೋನಾಸ್​ ಅವರನ್ನು ಹುರಿದುಂಬಿಸಲು ಆಗಮಿಸಿದ್ದರು.

Priyanka Chopra Nick Jonas
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಾಸ್​
author img

By ETV Bharat Karnataka Team

Published : Sep 1, 2023, 1:35 PM IST

ಬಾಲಿವುಡ್​ನಲ್ಲಿ ವೃತ್ತಿಜೀವನ ಆರಂಭಿಸಿದ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಗ್ಲೋಬಲ್​ ಐಕಾನ್​. ಹಾಲಿವುಡ್​ನಲ್ಲಿ ಮಿಂಚು ಹರಿಸುವ ಮೂಲಕ ಭಾರತೀಯ ಚಿತ್ರರಂಗದ ಗೌರವ ಹೆಚ್ಚಿಸಿದ್ದಾರೆ. ನಿಕ್​ ಜೋನಾಸ್​ ಜೊತೆ ಸುಂದರ ದಾಂಪತ್ಯ ಜೀವನ ನಡೆಸುತ್ತಿದ್ದು, ಮಾದರಿ ದಂಪತಿಯಾಗಿ ಗುರುತಿಸಿಕೊಂಡಿದ್ದಾರೆ. ಪತಿಗೆ ಎಲ್ಲಾ ವಿಚಾರದಲ್ಲೂ ಸಂಪೂರ್ಣ ಬೆಂಬಲ ನೀಡುವ ಮೂಲಕ ಪ್ರಿಯಾಂಕಾ ಚೋಪ್ರಾ ಆದರ್ಶ ಪತ್ನಿಯಾಗಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಅದಕ್ಕೊಂದು ಉದಾಹರಣೆ ಎಂಬಂತೆ, ಇತ್ತೀಚೆಗೆ ಟೆಕ್ಸಾಸ್​ನಲ್ಲಿ ನಡೆದ ಜೋನಾಸ್​ ಬ್ರದರ್ಸ್​ ಸಂಗೀತ ಕಚೇರಿಯಲ್ಲಿ ಪ್ರಿಯಾಂಕಾ ಚೋಪ್ರಾ ತಮ್ಮ ಪತಿ ನಿಕ್​ ಜೋನಾಸ್​ ಅವರನ್ನು ಹುರಿದುಂಬಿಸಲು ಆಗಮಿಸಿದ್ದರು. ಈ ವೇಳೆ, ಅವರು ಮತ್ತೊಮ್ಮೆ ಅಭಿಮಾನಿಗಳನ್ನು ಸೆಳೆದದ್ದು ತಮ್ಮ ಅಮೋಘ ಫ್ಯಾಷನ್​ನಿಂದ. ಅದ್ಭುತವಾದ ಗ್ರೀನ್​ ಕಟ್​ ಔಟ್​ ಡ್ರೆಸ್​ನಲ್ಲಿ ನೋಡುಗರನ್ನು ವಿಶೇಷವಾಗಿ ಆಕರ್ಷಿಸಿದರು. ಕೂದಲನ್ನು ಸಂಪೂರ್ಣವಾಗಿ ಬಿಟ್ಟು ದೇವಲೋಕದಿಂದ ಇಳಿದು ಬಂದ ಅಪ್ಸರೆಯಂತೆ ಕಾಣುತ್ತಿದ್ದರು.

ಪ್ರಿಯಾಂಕಾ ಚೋಪ್ರಾ ಮತ್ತು ಅಮೆರಿಕನ್​ ಗಾಯಕ ನಿಕ್​ ಜೋನಾಸ್​ ದಂಪತಿ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ಈ ದಂಪತಿಯ ವಯಸ್ಸಿನ ವ್ಯತ್ಯಾಸ ಹಲವರ ಟೀಕೆಗೆ ಗುರಿಯಾದರೆ, ಹಲವರು ಸ್ಟಾರ್ ಕಪಲ್​ ಅನ್ನು ಮಾದರಿಯಾಗಿ ತೆಗೆದುಕೊಂಡಿದ್ದಾರೆ. ಈ ಜೋಡಿ ಬಗ್ಗೆ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಅಪಾರ ಸಂಖ್ಯೆಯ ಅಭಿಮಾನಿಗಳು ಕಾತರರಾಗಿದ್ದಾರೆ. ಸೆಲೆಬ್ರಿಟಿ ಕಪಲ್​ ಶೇರ್​ ಮಾಡುವ ಪ್ರತಿ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಳ್ಳುತ್ತವೆ.​

ಇದನ್ನೂ ಓದಿ: 'August magic': ಪತಿ ಮತ್ತು ಮಗಳ ಜೊತೆ ಸುಂದರ ಕ್ಷಣಗಳನ್ನು ಆನಂದಿಸುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ

ಇತ್ತೀಚೆಗೆ ನಿಕ್​ ಜೋನಾಸ್​ ಮತ್ತು ಪ್ರಿಯಾಂಕಾ ಚೋಪ್ರಾ ತಮ್ಮ ಮಗಳು ಮಾಲ್ತಿ ಮೇರಿ ಜೊತೆ ನ್ಯೂಯಾರ್ಕ್​ಗೆ ತೆರಳಿದ್ದರು. ನಗರದ ಬೀದಿಗಳಲ್ಲಿ ತಿರುಗುತ್ತಾ ಎಂಜಾಯ್​ ಮಾಡಿದ್ದರು. ರಜಾ ದಿನದ ಸುಂದರ ಫೋಟೋಗಳನ್ನು ಪ್ರಿಯಾಂಕಾ ಚೋಪ್ರಾ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದರು. ಚಿತ್ರಗಳನ್ನು 'ಆಗಸ್ಟ್​ ಮ್ಯಾಜಿಕ್​' ಎಂಬ ಶೀರ್ಷಿಕೆಯೊಂದಿಗೆ ಹರಿಬಿಟ್ಟಿದ್ದರು. ಈ ಫೋಟೋಗಳು ವಿಶೇಷವಾಗಿ ಸೋಷಿಯಲ್​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದ್ದವು. ಮಾಲ್ತಿ ಮೇರಿ ಜೊತೆಗಿನ ದಂಪತಿಯ ಫ್ಯಾಮಿಲಿ ಡೇಟ್​ ಅಭಿಮಾನಿಗಳನ್ನು ಆಕರ್ಷಿಸಿತ್ತು.

ಇನ್ನೂ ಪ್ರಿಯಾಂಕಾ ಚೋಪ್ರಾ ಅವರ ಕೆಲಸದ ವಿಚಾರವಾಗಿ ನೋಡುವುದಾದರೆ, ಅವರ ಮುಂಬರುವ ಚಿತ್ರ ಹೆಡ್ಸ್ ಆಫ್ ಸ್ಟೇಟ್. ಜಾನ್ ಸೆನಾ ಮತ್ತು ಇಡ್ರಿಸ್ ಎಲ್ಬಾ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಆ್ಯಕ್ಷನ್​ ಥ್ರಿಲ್ಲರ್​ ಚಿತ್ರವಾಗಿದೆ. ಹಾಲಿವುಡ್​ನಲ್ಲಿ ಮಿಂಚುತ್ತಿರುವ ಇವರು ಬಾಲಿವುಡ್​ನಲ್ಲಿ ಫರ್ಹಾನ್​ ಅಖ್ತರ್​ ಅವರ ಜೀ ಲೀ ಜರಾದಲ್ಲಿ ಆಲಿಯಾ ಭಟ್​ ಮತ್ತು ಕತ್ರಿನಾ ಕೈಪ್​ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಇವರು ಮತ್ತೊಮ್ಮೆ ಭಾರತೀಯ ಚಿತ್ರರಂಗಕ್ಕೆ ಮರಳುತ್ತಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

ಇದನ್ನೂ ಓದಿ: 'ಗ್ಲೋಬಲ್​ ಸ್ಟಾರ್ ಆದ್ರೂ ಕಿಂಚಿತ್ತೂ ಅಹಂ ಇಲ್ಲ': ಪ್ರಿಯಾಂಕಾ ಚೋಪ್ರಾ ಬಗ್ಗೆ ಅಭಿಮಾನಿಗಳ ಗುಣಗಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.