ETV Bharat / entertainment

'ಕೆಲಸ ಮಾಡದಿದ್ದರೂ ನಟರಿಗೆ ಹೆಚ್ಚಿನ ಕ್ರೆಡಿಟ್ ಕೊಡಲಾಗುತ್ತದೆ': ​​ಪ್ರಿಯಾಂಕಾ ಚೋಪ್ರಾ - ನಟರಿಗೆ ಹೆಚ್ಚಿನ ಕ್ರೆಡಿಟ್

ನಟರು ಸಿನಿಮಾದಲ್ಲಿ ಏನನ್ನೂ ಮಾಡುವುದಿಲ್ಲ, ಆದರೂ ಅವರಿಗೆ ಎಲ್ಲ ಕ್ರೆಡಿಟ್ ಸಿಗುತ್ತದೆ ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.

Priyanka Chopra
ಪ್ರಿಯಾಂಕಾ ಚೋಪ್ರಾ
author img

By

Published : Nov 18, 2022, 6:40 PM IST

ಗ್ಲೋಬಲ್ ಐಕಾನ್​​ ಪ್ರಿಯಾಂಕಾ ಚೋಪ್ರಾ ಮೂರು ವರ್ಷಗಳ ನಂತರ ಇತ್ತೀಚೆಗೆ ಭಾರತಕ್ಕೆ ಬಂದಿದ್ದರು. ಈ ಸಮಯದಲ್ಲಿ ನಟಿ ಅನೇಕ ಸಂದರ್ಶನಗಳನ್ನು ನೀಡಿ ಮಹತ್ವದ ವಿಚಾರಗಳ ಬಗ್ಗೆ ಮಾತನಾಡಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ ಪ್ರಿಯಾಂಕಾ ಚೋಪ್ರಾ ಅವರನ್ನು ಭಾರತ ಮತ್ತು ವಿದೇಶದ ಖ್ಯಾತ ನಿರ್ದೇಶಕರೊಂದಿಗೆ ಕೆಲಸ ಮಾಡಿದ ನಂತರ ನಿಮಗೆ ಏನನಿಸಿತು? ಎಂಬ ಪ್ರಶ್ನೆ ಕೇಳಲಾಗಿತ್ತು. ಈ ಸಂದರ್ಶನದಲ್ಲಿ ಪ್ರಿಯಾಂಕಾ ಚೋಪ್ರಾ ಚಿತ್ರ ನಟರ ಕೆಲಸದ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ನಟರು ಸಿನಿಮಾದಲ್ಲಿ ಏನನ್ನೂ ಮಾಡುವುದಿಲ್ಲ, ಆದರೂ ಅವರಿಗೆ ಎಲ್ಲ ಕ್ರೆಡಿಟ್ ಸಿಗುತ್ತದೆ ಎಂದು ಪ್ರಿಯಾಂಕಾ ಚೋಪ್ರಾ ಯಾವುದೇ ಹಿಂಜರಿಕೆಯಿಲ್ಲದೇ, ಸ್ಪಷ್ಟವಾಗಿ ಹೇಳಿದ್ದಾರೆ. ಇದರೊಂದಿಗೆ ತಾನು ಕೂಡ ಉತ್ತಮ ನಟಿ ಎನಿಸಿಕೊಂಡಿದ್ದು ಸಿನಿಮಾ ನಿರ್ಮಾಪಕರಿಂದಲೇ ಎಂದು ಹೇಳಿದ್ದಾರೆ.

ಚಿತ್ರರಂಗದಲ್ಲಿ ನಟರಿಗೆ ಹೆಚ್ಚಿನ ಕ್ರೆಡಿಟ್ ಕೊಡಲಾಗುತ್ತದೆ. ನಟರು ಏನೂ ಮಾಡುವುದಿಲ್ಲ. ನಟರು ಬೇರೆಯವರು ಬರೆದ ಕಥೆಗೆ ಅಭಿನಯಿಸುತ್ತಾರೆ. ಹಾಗೆಯೇ ಬೇರೆಯವರ ನೃತ್ಯ ಸಂಯೋಜನೆಗೆ ತಕ್ಕಂತೆ ನೃತ್ಯ ಮಾಡುತ್ತಾರೆ. ಹೇರ್​​ ಸೆಟಪ್, ಮೇಕಪ್ ಕೂಡ ಯಾರೋ ಮಾಡುತ್ತಾರೆ. ಹಾಗಾದ್ರೆ ನಾವು ಏನು ಮಾಡುತ್ತಿದ್ದೇವೆ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಅಟಲ್ ಬಿಹಾರಿ ವಾಜಪೇಯಿ ಪಾತ್ರಕ್ಕೆ ಜೀವ ತುಂಬಲಿದ್ದಾರೆ ಪಂಕಜ್ ತ್ರಿಪಾಠಿ

ನಾನು ಅನೇಕ ದೊಡ್ಡ ಚಲನಚಿತ್ರ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದೇನೆ. ಬಾಲಿವುಡ್‌ನಲ್ಲಿಯೂ ದೊಡ್ಡ ಜನರೊಂದಿಗೆ ಕೆಲಸ ಮಾಡಿದ್ದೇನೆ. ಎಲ್ಲರೂ ನನ್ನನ್ನು ಅತ್ಯುತ್ತಮ ನಟಿ ಎಂದು ಹೇಳಿದರು. ನಾವು ಕೂಡ ಎಲ್ಲಾ ಕ್ರೆಡಿಟ್ ಅನ್ನು ನಟರಿಗೆ ನೀಡುತ್ತೇವೆ. ಆದರೆ ಅದು ಸರಿಯಲ್ಲ. ನಟರು ಏನನ್ನೂ ಮಾಡುವುದಿಲ್ಲ ನಾನು ಯಾವಾಗಲೂ ಹೇಳುತ್ತೇನೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.