ETV Bharat / entertainment

ತಮ್ಮ ಟ್ಯಾಟೂ ಬಗ್ಗೆ ಮಾತನಾಡಿದ ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ - ಪ್ರಿಯಾಂಕಾ ಚೋಪ್ರಾ ಸಿನಿಮಾ

ನಟಿ ಪ್ರಿಯಾಂಕಾ ಚೋಪ್ರಾ ಸಂದರ್ಶನವೊಂದರಲ್ಲಿ ತಮ್ಮ ಟ್ಯಾಟೂ ಬಗ್ಗೆ ಮಾತನಾಡಿದ್ದಾರೆ.

Priyanka Chopra couple
ಪ್ರಿಯಾಂಕಾ ಚೋಪ್ರಾ ದಂಪತಿ
author img

By

Published : Jan 28, 2023, 5:48 PM IST

ಲಾಸ್ ಏಂಜಲೀಸ್: ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​​ ಜೋನಾಸ್ ದಂಪತಿ ಸದಾ ಒಂದಿಲ್ಲೊಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಪ್ರಪಂಚದ ಐಕಾನಿಕ್​ ಜೋಡಿಗಳ ಪೈಕಿ ಪ್ರಮುಖರಾದ ಇವರ ಪ್ರತೀ ವಿಷಯವೂ ಕ್ಷಣಮಾತ್ರದಲ್ಲಿ ವೈರಲ್​ ಆಗಿ ದೊಡ್ಡ ಸುದ್ದಿಯಾಗುತ್ತದೆ. ಈ ದಂಪತಿ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಸಹ ಸಾಕಷ್ಟು ಕುತೂಹಲದಲ್ಲಿರುತ್ತಾರೆ. ನಿಕ್ ಅವರ ಹೊಂದಾಣಿಕೆಯ ಟ್ಯಾಟೂ ಬಗ್ಗೆ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.

ಪ್ರಿಯಾಂಕಾ ಚೋಪ್ರಾ ಟ್ಯಾಟೂ: ಇತ್ತೀಚಿನ ಸಂದರ್ಶನವೊಂದರಲ್ಲಿ ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ತಮ್ಮ ಹಚ್ಚೆಗಳ (tattoos) ಬಗ್ಗೆ ಮಾತನಾಡಿದ್ದಾರೆ. ತಾನು ಮತ್ತು ಪತಿ ನಿಕ್ ಹೊಂದಾಣಿಕೆಯ ಟ್ಯಾಟೂಗಳನ್ನು ಹಾಕಿಸಿಕೊಂಡಿರುವುದಾಗಿ ನಟಿ ಬಹಿರಂಗಪಡಿಸಿದ್ದಾರೆ. ದಿವಂಗತ ತಂದೆಯ ಕೈಬರಹ, ಪ್ರಪಂಚದ ನಕ್ಷೆ ಮತ್ತು ಮೂರು ಹೆಜ್ಜೆಗಳ ಟ್ಯಾಟೂಗಳನ್ನು ಹಾಕಿಸಿಕೊಂಡಿದ್ದಾರೆ.

ಪತಿಯ ಟ್ಯಾಟೂಗೆ ಹೊಂದಿಕೆಯಾಗುವ ಹಚ್ಚೆ: ಪ್ರಿಯಾಂಕಾ ಚೋಪ್ರಾ ತಮ್ಮ ಕಿವಿಯ ಹಿಂದಿನ ಟ್ಯಾಟೂ ಬಗೆಗಿನ ವಿಶೇಷ ಅರ್ಥವನ್ನು ವಿವರಿಸಿದರು. ಈ ಟ್ಯಾಟೂ ತನ್ನ ಪತಿ ನಿಕ್​​ ಅವರ ದೇಹದ ಮೇಲೂ ಇದೆ ಎಂದು ತಿಳಿಸಿದ ನಟಿ, ನನ್ನ ಕಿವಿಯ ಹಿಂದೆ ಒಂದು ಚೆಕ್ ಮತ್ತು ಬಾಕ್ಸ್ ಇದೆ. ನನ್ನ ಪತಿ ಅವರ ತೋಳುಗಳಲ್ಲಿ ಅದೇ ರೀತಿಯ ಹಚ್ಚೆಗಳನ್ನು ಹೊಂದಿದ್ದಾರೆಂದು ತಿಳಿಸಿದರು. ನನಗೆ ಪ್ರಪೋಸ್ ಮಾಡಿದ್ದ ವೇಳೆ, ನಾನು ಅವರ ಎಲ್ಲಾ ಬಾಕ್ಸ್​ಗಳನ್ನು ಚೆಕ್​ ಮಾಡಿದ್ದರ ಬಗ್ಗೆ ನನ್ನಲ್ಲಿ ಕೇಳಿದ್ದರು, ಮತ್ತೊಂದು ಬಾಕ್ಸ್ ಚೆಕ್​ ಮಾಡಲೇ ಎಂಂದು ಕೇಳಿದ್ದೆ. ಆ ನೆನಪಿನ ಸಲುವಾಗಿ ಈ ಟ್ಯಾಟೂ ಹಾಕಿಸಿಕೊಂಡಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ: 'ಇನ್ಮುಂದೆ ನಾವು ಮಿಸ್ಟರ್ & ಮಿಸೆಸ್ ಸಿಂಹ' ಎಂದ ನಟಿ ಹರಿಪ್ರಿಯಾ

ಪತಿ ಬಗ್ಗೆ ಪ್ರಿಯಾಂಕಾ ಗುಣಗಾನ: ಇನ್ನೂ ಪತಿ ನಿಕ್​​ ಜೋನಾಸ್ ಗುಣಗಳ ಬಗ್ಗೆ ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಹಾಡಿ ಹೊಗಳಿದ್ದಾರೆ. ''ನನ್ನ ಪತಿ ಬಹಳ ಚಿಂತನಾಶೀಲ ವ್ಯಕ್ತಿ. ಅವರು ಇರುವಾಗ ಎಲ್ಲವೂ ಸರಿಯಾಗುತ್ತದೆ ಎಂದು ನನಗೆ ಭಾಸವಾಗುತ್ತದೆ. ಹೆಚ್ಚು ಶಾಂತವಾದ ಸ್ಥಳದಿಂದ ವಿಷಯಗಳನ್ನು ಆರಿಸಲು ಅಥವಾ ಅವನ್ನು ಸಮೀಪಿಸಲು ನನಗೆ ಕಲಿಸಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಬಿಗ್​ಬಾಸ್​16: ರೋಮ್ಯಾಂಟಿಕ್​ ಸೀನ್​ ವೇಳೆ ಕಾರ್ತಿಕ್​ನನ್ನು ಅಣ್ಣಾ ಎಂದ ಅರ್ಚನಾ; ಗೊಳ್ಳೆಂದು ನಕ್ಕ ಮನೆ ಮಂದಿ

ಪ್ರಿಯಾಂಕಾ ಚೋಪ್ರಾ ಸಿನಿಮಾ: ಇನ್ನೂ ಕೆಲಸದ ವಿಚಾರದಲ್ಲಿ ನಟಿ ಪ್ರಿಯಾಂಕಾ ಚೊಪ್ರಾ, ಫೆಬ್ರವರಿ 10, 2023 ರಂದು ಯುಎಸ್​ ನಲ್ಲಿ ತೆರೆಕಾಣಲಿರುವ ಇಟ್ಸ್ ಆಲ್ ಕಮಿಂಗ್ ಬ್ಯಾಕ್ ಟು ಮಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರುಸ್ಸೋ ಸಹೋದರರ ವೈಜ್ಞಾನಿಕ ಕಾಲ್ಪನಿಕ ಸರಣಿ ಸಿಟಾಡೆಲ್ ಬಿಡುಗಡೆಗೂ ಪ್ರಿಯಾಂಕಾ ಸಿದ್ಧರಾಗಿದ್ದಾರೆ. ನಟ ಫರ್ಹಾನ್ ಅಖ್ತರ್ ಅವರ ನಿರ್ದೇಶನದ ಜೀ ಲೆ ಝರಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ರೋಡ್ ಟ್ರಿಪ್ ಡ್ರಾಮಾ ಎಂದು ಬಿಂಬಿಸಲಾದ ಈ ಚಿತ್ರದಲ್ಲಿ ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: "ನಿಲುಗಡೆಯಿಲ್ಲದ" ಮೆರವಣಿಗೆ..ಅಂತಿಮ ಘಟದಲ್ಲಿ ಭಾರತ್ ಜೋಡೋ: ಇಲ್ಲಿದೆ ಫೋಟೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.