ಬಾಲಿವುಡ್ನ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಈ ವರ್ಷದ ಜನವರಿಯಲ್ಲಿ ಬಾಡಿಗೆ ತಾಯ್ತನದ ಮೂಲಕ ಮೊದಲ ಹೆಣ್ಣು ಮಗುವಿನ ತಾಯಿಯಾದರು. ಪ್ರಿಯಾಂಕಾ ತಮ್ಮ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಸ್ ಚಿತ್ರಗಳನ್ನು ಹಲವು ಬಾರಿ ಹಂಚಿಕೊಂಡಿದ್ದಾರೆ. ಇದೀಗ ಮತ್ತೆರಡು ಸುಂದರವಾದ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಮೊದಲ ಚಿತ್ರದಲ್ಲಿ, ಪ್ರಿಯಾಂಕಾ ಸೆಲ್ಫಿ ತೆಗೆದುಕೊಂಡಿದ್ದಾರ. ಅದರಲ್ಲಿ ಮಗಳು ಮಾಲ್ತಿ ಪ್ರಿಯಾಂಕಾ ಅವರ ತೊಡೆಯ ಮೇಲೆ ಕುಳಿತು ಮ್ಯಾಗಜಿನ್ ಅನ್ನು ನೋಡುತ್ತಿದ್ದಾಳೆ. ಈ ಫೋಟೋಗೆ 'ಓ ಬಾಯ್ ನಿಕ್ ಜೋನಾಸ್' ಎಂದು ಬರೆದುಕೊಂಡಿದ್ದಾರೆ.
ಇನ್ನೂ ಎರಡನೇ ಚಿತ್ರದಲ್ಲಿ, ಪ್ರಿಯಾಂಕಾ ರೆಸ್ಟೋರೆಂಟ್‌ನ ಹೊರಗೆ ಮಗಳು ಮಾಲ್ತಿಯನ್ನು ಹಿಡಿದು ನಿಂತಿದ್ದಾರೆ. ಶೀರ್ಷಿಕೆಯಲ್ಲಿ 'ಊಟಕ್ಕೆ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಕ್ರಿಸ್‌ಮಸ್ ಸಿದ್ಧತೆ: ಮಗಳು ಮಾಲ್ತಿಯೊಂದಿಗಿನ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ
ಈವರೆಗೆ ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಹಲವು ಬಾರಿ ಮಗಳೊಂದಿಗೆ ಸಮಯ ಕಳೆದ ಫೋಟೋ ಹಂಚಿಕೊಂಡಿದ್ದಾರೆ. ಆದರೆ ಮಗಳ ಸಂಪೂರ್ಣ ಮುಖವನ್ನು ಈವರೆಗೂ ತೋರಿಸಿಲ್ಲ. ಹಾಗಾಗಿ ಮಾಲ್ತಿಯ ಸಂಪೂರ್ಣ ಫೋಟೋವನ್ನು ತೋರಿಸಬೇಕೆಂಬುದು ಅಭಿಮಾನಿಗಳ ಬೇಡಿಕೆ.