ETV Bharat / entertainment

'ರೋಮ್​'ನ ಬೀದಿಯಲ್ಲಿ ಪ್ರಿಯಾಂಕಾ-ನಿಕ್​ ರೊಮ್ಯಾನ್ಸ್​: ವಿಡಿಯೋ ವೈರಲ್​ - ಈಟಿವಿ ಭಾರತ​ ಕನ್ನಡ

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಾಸ್​ ದಂಪತಿ ಪ್ರೀತಿಯ ಕ್ಷಣಗಳನ್ನು ಹಂಚಿಕೊಳ್ಳುವ ವಿಡಿಯೋ ವೈರಲ್​ ಆಗಿದೆ.

Priyanka Chopra, Nick Jonas
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಾಸ್​
author img

By

Published : Apr 21, 2023, 11:23 AM IST

ಗ್ಲೋಬಲ್​ ಐಕಾನ್​ ಪ್ರಿಯಾಂಕಾ ಚೋಪ್ರಾ ಮತ್ತು ಅಮೆರಿಕನ್​ ಗಾಯಕ ನಿಕ್​ ಜೋನಾಸ್ ಸೆಲೆಬ್ರಿಟಿ ಜೋಡಿ ಆಗಾಗ ಸುದ್ದಿಯಲ್ಲಿರುತ್ತದೆ. ದಂಪತಿ ತಮ್ಮ ಪ್ರೀತಿಯ ಕ್ಷಣಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುವುದರಿಂದ ಎಂದಿಗೂ ಹಿಂದೆ ಸರಿಯುವುದಿಲ್ಲ. ಅದಕ್ಕೆ ಇಂದಿನ ಅವರ ಪೋಸ್ಟ್​ ಒಂದು ನಿದರ್ಶನ. ನಿಕ್​ ಜೋನಾಸ್​ ಅವರು ಶುಕ್ರವಾರ ಬೆಳಗ್ಗೆ ಹೊಸ ವಿಡಿಯೋವೊಂದನ್ನು ತಮ್ಮ ಇನ್​ಸ್ಟಾ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ಅದಕ್ಕೆ 'ರೋಮ್​' ಎಂದು ಶೀರ್ಷಿಕೆ ನೀಡಿದ್ದಾರೆ.

ವಿಡಿಯೋದಲ್ಲಿ ದಂಪತಿಯು ಇಟಲಿಯ ರೋಮ್​ನ ಬೀದಿಗಳಲ್ಲಿ ನಡೆದುಕೊಂಡು ಹೋಗುವುದು, ಒಬ್ಬರನ್ನೊಬ್ಬರು ಚುಂಬಿಸುವುದು ಮತ್ತು ಜೊತೆಯಾಗಿ ಐಸ್​ಕ್ರೀಮ್​ ಸೇವಿಸುವುದನ್ನು ಕಾಣಬಹುದು. ನಿಕ್​ ಗುಲಾಬಿ ಬಣ್ಣದ ಶರ್ಟ್​ ಧರಿಸಿದ್ದರೆ, ಪ್ರಿಯಾಂಕಾ ಚೋಪ್ರಾ ಹಸಿರು ಬಣ್ಣದ ಉಡುಪಿನ ಮೇಲೆ ಕಪ್ಪು ಜಾಕೆಟ್​ ಧರಿಸಿದ್ದರು. ನಿಕ್​ ಜೋನಾಸ್​ ವಿಡಿಯೋವನ್ನು ಕೈಬಿಟ್ಟ ಕೂಡಲೇ ಅಭಿಮಾನಿಗಳು ಕಮೆಂಟ್​ ವಿಭಾಗವನ್ನು ರೆಡ್​ ಹಾರ್ಟ್​ ಮತ್ತು ಫೈರ್​ ಎಮೋಜಿನೊಂದಿಗೆ ತುಂಬಿದರು.

ಅಭಿಮಾನಿಯೊಬ್ಬರು, 'ಆದರ್ಶ ದಂಪತಿ, ಸೋ ಸ್ವೀಟ್​' ಎಂದು ಬರೆದಿದ್ದಾರೆ. 'ನನ್ನ ನೆಚ್ಚಿನ ಜೋಡಿ' ಎಂದು ಮತ್ತೊಬ್ಬ ಫ್ಯಾನ್​ ಕಮೆಂಟ್​ ಮಾಡಿದ್ದಾರೆ. 'ಬ್ಯೂಟಿಫುಲ್​ ಕಪಲ್' ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಹೀಗೆ ಅಭಿಮಾನಿಗಳು ಬಗೆ ಬಗೆಯ ಬರಹಗಳಿಂದ ಅವರಿಬ್ಬರ ವಿಡಿಯೋಗೆ ಪ್ರೀತಿಯ ಹೊಳೆಯನ್ನೇ ಹರಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಾಸ್​ 2018 ರ ಡಿಸೆಂಬರ್​ 1 ಮತ್ತು 2 ರಂದು ಜೋಧ್​ಪುರದ ಉಮೈದ್​ ಭವನ್​ ಅರಮನೆಯಲ್ಲಿ ಕ್ರಿಶ್ಚಿಯನ್​ ಮತ್ತು ಹಿಂದೂ ಸಂಪ್ರದಾಯದಂತೆ ವಿವಾಹವಾದರು.

ಇದನ್ನೂ ಓದಿ: 'ನನಗೆ ಅಷ್ಟೂ ಬರಲ್ಲ ಅಂದ್ಕೋಬೇಡಿ..': ಶೆಹನಾಜ್ ಗಿಲ್ ಹೀಗೆ ಹೇಳಿದ್ಯಾಕೆ?

ನಂತರ ದಂಪತಿ ದೆಹಲಿ ಮತ್ತು ಮುಂಬೈನಲ್ಲಿ ಎರಡು ಬಾರಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕುಟುಂಬಸ್ಥರ ಜೊತೆಗೆ ಸಿನಿಮಾ ತಾರೆಯರು ಸಮಾರಂಭದಲ್ಲಿ ಭಾಗಿಯಾಗಿದ್ದರು. 2022 ರ ಜನವರಿ ತಿಂಗಳಲ್ಲಿ ಈ ಜೋಡಿ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗು ಮಾಲ್ತಿ ಮೇರಿ ಜೋನಾಸ್​ಳನ್ನು ಸ್ವಾಗತಿಸಿದರು. ಈ ದಂಪತಿ ಮೊದಲ ಬಾರಿಗೆ ಮಗಳ ಜೊತೆಗೆ ಮಾರ್ಚ್​ 31 ರಂದು ಭಾರತಕ್ಕೆ ಆಗಮಿಸಿದ್ದರು. ಅನೇಕ ಈವೆಂಟ್​ನಲ್ಲಿ ಪಾಲ್ಗೊಂಡಿದ್ದರು.

ಪ್ರಿಯಾಂಕಾ ಚೋಪ್ರಾ ಅವರ ಮುಂದಿನ ಸಿನಿಮಾ ಗಮನಿಸುವುದಾದರೆ, ಸಿಟಾಡೆಲ್ ಸೀರಿಸ್​ ಮೂಲಕ ಸದ್ದು ಮಾಡುತ್ತಿದ್ದಾರೆ. ಆ್ಯಕ್ಷನ್​ ಸೀರಿಸ್​ನ ಮೊದಲ ಎಪಿಸೋಡ್​​ ಪ್ರೈಮ್ ವಿಡಿಯೋದಲ್ಲಿ ಏಪ್ರಿಲ್ 28 ರಂದು ಪ್ರಸಾರ ಆಗಲಿದೆ. ಮೇ 26 ರವರೆಗೆ ಪ್ರತೀ ಶುಕ್ರವಾರ ಹೊಸ ಸಂಚಿಕೆಯನ್ನು ರಿಲೀಸ್​ ಮಾಡಲಾಗುವುದು.

​​ರುಸ್ಸೋ ಬ್ರದರ್ಸ್‌ನ ಎಜಿಬಿಒ ಬ್ಯಾನರ್‌ನಿಂದ ರೆಡಿ ಆಗಿದ್ದು, ಕಥೆಯು ಪ್ರಪಂಚದಾದ್ಯಂತದ ರಹಸ್ಯ ಸಂಸ್ಥೆ ಸಿಟಾಡೆಲ್‌ನ ಇಬ್ಬರು ಗಣ್ಯ ಏಜೆಂಟ್‌ಗಳಾದ ಮೇಸನ್ ಕೇನ್ (ರಿಚರ್ಡ್ ಮ್ಯಾಡೆನ್) ಮತ್ತು ನಾಡಿಯಾ ಸಿನ್ಹ್ (ಪ್ರಿಯಾಂಕಾ) ಸುತ್ತ ಕೇಂದ್ರೀಕೃತವಾಗಿದೆ. ಫಸ್ಟ್ ಲುಕ್​, ಪೋಸ್ಟರ್​ಗಳು ಮತ್ತು ಟ್ರೇಲರ್​ನಿಂದಲೇ ಈಗಾಗಲೇ ಸಖತ್ ಸದ್ದು ಮಾಡಿರುವ ಈ ಸೀರಿಸ್​ ವೀಕ್ಷಣೆಗೆ ಅಭಿಮಾನಿಗಳು ಕಾತರರಾಗಿದ್ದಾರೆ. ಸಿಟಾಡೆಲ್ ಅಲ್ಲದೇ ಫರ್ಹಾನ್​ ಅಖ್ತರ್ ಅವರ ಜೀ ಲೇ ಜರಾ ಚಿತ್ರದಲ್ಲಿ ಆಲಿಯಾ ಭಟ್​ ಮತ್ತು ಕತ್ರಿನ್​ ಕೈಫ್​ ಜೊತೆಗೆ ಪ್ರಿಯಾಂಕಾ ತೆರೆ ಹಂಚಿಕೊಳ್ಳಲಿದ್ದಾರೆ.

ಇದನ್ನೂ ಓದಿ: 100 ದೇಶಗಳಲ್ಲಿ ಸಲ್ಮಾನ್​ ಸಿನಿಮಾ ರಿಲೀಸ್: 5,700ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಪ್ರದರ್ಶನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.