ಇಟಲಿಯ ವೆನಿಸ್‌ನಲ್ಲಿ ನಡೆದ ಬಲ್ಗೇರಿಯ ಈವೆಂಟ್‌ಗೆ ಮಿಡ್ರಿಫ್-ಬೇರಿಂಗ್, ಆಫ್-ಶೋಲ್ಡರ್ ಗೌನ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಮನಮೋಹಕವಾಗಿ ಕಾಣಿಸಿಕೊಂಡಿದ್ದಾರೆ. ಕೆ-ಪಾಪ್ ಬ್ಯಾಂಡ್ ಬ್ಲ್ಯಾಕ್‌ಪಿಂಕ್‌ನ ಇತರ ಅಂತಾರಾಷ್ಟ್ರೀಯ ಸೂಪರ್‌ಸ್ಟಾರ್‌ಗಳು ಮತ್ತು ಬಲ್ಗೇರಿಯ ರಾಯಭಾರಿಗಳಾದ ಜೆಂಡಯಾ, ಅನ್ನಿ ಹ್ಯಾಥ್‌ವೇ ಮತ್ತು ಲಿಸಾ ಅವರೊಂದಿಗೆ ಜ್ಯುವೆಲ್ಲರಿ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ಹಾಜರಿದ್ದರು. ಈ ವೇಳೆ ಅಭಿಮಾನಿಗಳ ಕಣ್ಣುಗಳು ಅವರತ್ತ ನೆಟ್ಟಿದ್ದವು.
ಬಲ್ಗರಿಯದ ವೆನಿಸ್ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ, ಅನ್ನಿ ಹ್ಯಾಥ್‌ವೇ ಮತ್ತು ಝೆಂಡಯಾ ಪೋಸ್ ನೀಡಿದರು ಮತ್ತು ಮೂವರು ಒಟ್ಟಿಗೆ ಕಾಣಿಸಿಕೊಂಡಿರುವ ಬಗ್ಗೆ ಅಭಿಮಾನಿಗಳು ಭಾವಪರವಶರಾಗಿದ್ದರು.
ನಾಲ್ವರು ಒಟ್ಟಿಗೆ ನಿಂತು ಪೋಸ್ : ಮೇ 16 ರಂದು ಇಟಲಿಯ ವೆನಿಸ್‌ನಲ್ಲಿ ನಡೆದ ಬಲ್ಗೇರಿಯ ಬಲ್ಗರಿ ಮೆಡಿಟರೇನಿಯಾ ಹೈ ಜ್ಯುವೆಲ್ಲರಿ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ, ಅನ್ನಿ ಹ್ಯಾಥ್‌ವೇ ಮತ್ತು ಝೆಂಡಯಾ ಕಂಪನಿಯ ಬ್ರಾಂಡ್ ಅಂಬಾಸಿಡರ್‌ಗಳಾಗಿ ಭಾಗವಹಿಸಿದ್ದರು. ಆಭರಣ ಬ್ರಾಂಡ್‌ನ ನಾಲ್ಕನೇ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಬ್ಲ್ಯಾಕ್‌ಪಿಂಕ್‌ನ ಕೆ-ಪಾಪ್ ಗಾಯಕಿ ಲಿಸಾ ಅವರೊಂದಿಗೆ ಸೇರಿಕೊಂಡರು. ಈ ವೇಳೆ ನಾಲ್ವರು ಒಟ್ಟಿಗೆ ನಿಂತು ಪೋಸ್ ನೀಡಿದ್ದಾರೆ ಮತ್ತು ನಾಲ್ವರು ಜಾಗತಿಕ ಸೆಲೆಬ್ರಿಟಿಗಳು ಒಟ್ಟಿಗೆ ಕಾಣಿಸಿಕೊಂಡಿರುವ ಬಗ್ಗೆ ಅಭಿಮಾನಿಗಳು ಸಂತಸಗೊಂಡು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ.
- " class="align-text-top noRightClick twitterSection" data="
">
ಗುಲಾಬಿ ಬಣ್ಣದ ಬಟ್ಟೆ ಧರಿಸಿದ್ದ ನಟಿ: ಚೋಪ್ರಾ ಮಿಸ್ ಸೋಹೀ SS23 ಕೌಚರ್ ಕಲೆಕ್ಷನ್‌ನ ಗುಲಾಬಿ ಬಣ್ಣದ ಉಡುಪನ್ನು ಧರಿಸಿದ್ದರೆ, ಹ್ಯಾಥ್‌ವೇ ಒಂದು ಹುಡ್‌ನೊಂದಿಗೆ ಚಿನ್ನ ಮತ್ತು ಬೆಳ್ಳಿಯ ಗೌನ್ ಅನ್ನು ಧರಿಸಿದ್ದರು. ಝೆಂಡಾಯಾ ಆಫ್-ಶೋಲ್ಡರ್ ಕಪ್ಪು ಸ್ಯಾಟಿನ್ ಗೌನ್ ಅನ್ನು ಧರಿಸಿದ್ದರು ಮತ್ತು ಲಿಸಾ ಅದೇ ರೀತಿಯ ಆಫ್-ಶೋಲ್ಡರ್ ಕಪ್ಪು ಗೌನ್ ಧರಿಸಿದ್ದರು. ಎಲ್ಲಾ ನಾಲ್ವರು ನಟಿಯರು ಬಲ್ಗೇರಿಯ ಸಂಗ್ರಹದ ನೆಕ್ಲೇಸ್ಗಳನ್ನು ಧರಿಸಿದ್ದರು.
ಈ ಬಾರಿ ನಾಲ್ವರೂ ರೆಡ್ ಕಾರ್ಪೆಟ್ ಮೇಲೆ ಹಾಗೂ ಪಲಾಝೊ ಡ್ಯುಕೇಲ್‌ನ ಸ್ಥಳದೊಳಗೆ ಕಾಣಿಸಿಕೊಂಡು ಒಟ್ಟಿಗೆ ಪೋಸ್ ನೀಡಿದ್ದರಿಂದ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಈವೆಂಟ್‌ನ ಪ್ರಥಮ ಪ್ರದರ್ಶನದ ಕ್ಷಣದಲ್ಲಿ ಟ್ವೀಟ್‌ಗಳು, ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದವು.
ಅಭಿಮಾನಿಗಳಿಂದ ತಮಾಷೆಯ ಕಾಮೆಂಟ್: ಬ್ಲ್ಯಾಕ್‌ಪಿಂಕ್ ಖ್ಯಾತಿಯ ಕೆ-ಪಾಪ್ ತಾರೆ ಲೀಸಾ ಅವರೊಂದಿಗೆ ಅವರು ಟೇಬಲ್ ಹಂಚಿಕೊಳ್ಳುವುದನ್ನು ಮತ್ತು ಸಣ್ಣ ಮಾತುಕತೆ ನಡೆಸುವುದನ್ನು ಸಹ ಚಿತ್ರದಲ್ಲಿ ಕಾಣಬಹುದು. ಈವೆಂಟ್‌ನಲ್ಲಿ ಪ್ರಿಯಾಂಕಾ ಅವರ ಅದ್ಭುತ ನೋಟವು ಮಂಗಳವಾರ ರಾತ್ರಿ ಪ್ರಾರಂಭವಾದ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿದ್ದ ಭಾರತೀಯ ಬಾಲಿವುಡ್ ದಿವಾಸ್‌ಗಳ ಗಮನವನ್ನು ಕದ್ದಿದೆ ಎಂದು ಅನೇಕ ಅಭಿಮಾನಿಗಳು ತಮಾಷೆ ಮಾಡಿದ್ದಾರೆ.
ಈವೆಂಟ್‌ನಲ್ಲಿ ಚಲನಚಿತ್ರ ಮತ್ತು ಫ್ಯಾಷನ್ ಉದ್ಯಮಗಳ ಎ-ಲಿಸ್ಟ್ ಸದಸ್ಯರು ಸೇರಿದಂತೆ ಸ್ಟಾರ್-ಸ್ಟಡ್ಡ್ ಪ್ರೇಕ್ಷಕರು ಭಾಗವಹಿಸಿದ್ದರು. ಈವೆಂಟ್‌ನಲ್ಲಿ ತೆಗೆದ ವೀಡಿಯೊಗಳಲ್ಲಿ ಝೆಂಡಯಾ ಮತ್ತು ಪ್ರಿಯಾಂಕಾ ಪರಸ್ಪರ ಮಾತನಾಡುವುದನ್ನು ಮತ್ತು ತಮಾಷೆ ಮಾಡುವುದನ್ನು ಕಾಣಬಹುದು. ಗಾಲಾ ಸಮಾರಂಭದಲ್ಲಿ ಅವರು ಒಬ್ಬರ ಪಕ್ಕದಲ್ಲಿ ಕುಳಿತಿರುವುದನ್ನು ಕಾಣಬಹುದು.
ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಮುಗಿಬಿದ್ದ ಜನರಿಂದ ಮಗಳ ರಕ್ಷಿಸಿದ ಐಶ್ವರ್ಯಾ; ವಿಡಿಯೋ