ETV Bharat / entertainment

ಸಿಟಾಡೆಲ್‌ ಏಷ್ಯಾ ಪೆಸಿಫಿಕ್ ಪ್ರೀಮಿಯರ್‌ನಲ್ಲಿ ಮಿಂಚಿದ ಪ್ರಿಯಾಂಕಾ ಚೋಪ್ರಾ - ರಿಚರ್ಡ್ ಚಾರ್ಕೋಲ್

ಮುಂಬೈನಲ್ಲಿ ಸಿಟಾಡೆಲ್‌ ಏಷ್ಯಾ ಪೆಸಿಫಿಕ್ ಪ್ರೀಮಿಯರ್ ಸ್ಟಾರ್ ಕಾರ್ಯಕ್ರಮ ನಡೆಯಿತು. ಇದರಲ್ಲಿ ಬಾಲಿವುಡ್ ಸ್ಟಾರ್ಸ್​ಗಳು ಭಾಗವಹಿಸಿದ್ದರು. ಪ್ರಿಯಾಂಕಾ ನೀಲಿ ಬಣ್ಣದ ಗೌನ್‌ನಲ್ಲಿ ಸುಂದರವಾಗಿ ಕಾಣಿಸಿಕೊಂಡರೆ, ಜಿಮ್ ಸರ್ಭ್ ತನ್ನ ವಿಶಿಷ್ಟವಾದ ಫ್ಯಾಶನ್ ಸೆನ್ಸ್‌ನಿಂದ ಶೋದಲ್ಲಿ ಮಿಂಚಿದರು.

priyanka-chopra-jim-sarbh-slay-at-asia-pacific-premier-
ಸಿಟಾಡೆಲ್‌ನ ಏಷ್ಯಾ ಪೆಸಿಫಿಕ್ ಪ್ರೀಮಿಯರ್‌ನಲ್ಲಿ ಮಿಂಚಿದ ಪ್ರಿಯಾಂಕಾ ಚೋಪ್ರಾ
author img

By

Published : Apr 5, 2023, 10:19 AM IST

Updated : Apr 5, 2023, 10:29 AM IST

ಮುಂಬೈ: ರೆಡ್ ಕಾರ್ಪೆಟ್ ವಿಚಾರಕ್ಕೆ ಬಂದರೆ ಜಾಗತಿಕ ಐಕಾನ್ ಪ್ರಿಯಾಂಕಾ ಚೋಪ್ರಾ ಆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಮುಂಬೈನಲ್ಲಿ ನಡೆದ ಅವರ ಅಂತಾರಾಷ್ಟ್ರೀಯ ವೆಬ್ ಸರಣಿ 'ಸಿಟಾಡೆಲ್' ನ ಏಷ್ಯಾ ಪೆಸಿಫಿಕ್ ಪ್ರೀಮಿಯರ್‌ನಲ್ಲಿ ಪ್ರಿಯಾಂಕಾ ವೈಡೂರ್ಯದ ನೀಲಿ ಬಣ್ಣದ ಹೈ-ಸ್ಲಿಟ್ ಗೌನ್‌ನಲ್ಲಿ ಮಿರ ಮಿರ ಮಿಂಚಿದರು. ಈ ಮೂಲಕ ತಮ್ಮ ಅಭಿಮಾನಿಗಳ ದಿಲ್​ಬಡಿತ ಹೆಚ್ಚಾಗುವಂತೆ ಮಾಡಿದರು.

ನಟ ಜಿಮ್ ಸರ್ಭ್ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಮನ ಸೆಳೆದರು. ಇತ್ತೀಚೆಗೆ ಸ್ಟ್ರೀಮಿಂಗ್ ಶೋ 'ರಾಕೆಟ್ ಬಾಯ್ಸ್'ನ ಎರಡನೇ ಸೀಸನ್‌ನಲ್ಲಿ ಜಿಮ್​ ಕಾಣಿಸಿಕೊಂಡಿದ್ದರು. ಕಡಿಮೆ ಮೇಕಪ್​ ಮೂಲಕ ಪ್ರಿಯಾಂಕಾ ತಮ್ಮ ಅಂದವನ್ನು ಮತ್ತಷ್ಟು ಹೆಚ್ಚಿಸಿಕೊಂಡರು. ಅವರ ಕಣ್ಣುಗಳು ಕಾರ್ಯಕ್ರಮದ ಆಕರ್ಷಣೆ ಆಗಿದ್ದವು. ಪ್ರಿಯಾಂಕಾ 'ಸಿಟಾಡೆಲ್' ನ ಸಹನಟ ರಿಚರ್ಡ್ ಮ್ಯಾಡೆನ್ ಅವರೊಂದಿಗೆ ಪ್ರೀಮಿಯರ್ ನೈಟ್‌ನಲ್ಲಿ ಸ್ಟೈಲಿಶ್ ಆಗಿ ಎಂಟ್ರಿ ಕೊಟ್ಟು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು.

ಇದನ್ನು ಓದಿ:'ರೈನ್​ಬೋ' ಸಮಂತಾ ಸ್ಥಾನಕ್ಕೆ ರಶ್ಮಿಕಾ ಮಂದಣ್ಣ.. ಶಾಕುಂತಲಂ ತಾರೆಯ ಅಭಿಮಾನಿಗಳ ಅಸಮಾಧಾನ

ರಿಚರ್ಡ್ ಚಾರ್ಕೋಲ್ ಗ್ರೇ ಸೂಟ್‌ನಲ್ಲಿ ಸಖತ್​​ ಆಗೇ ಕಂಡು ಬಂದರು. ಮತ್ತೊಂದೆಡೆ ಈ ಸಂದರ್ಭಕ್ಕಾಗಿ ಜಿಮ್‌ನ ಸಾರ್ಟೋರಿಯಲ್ ಆಯ್ಕೆಯು ಎಲ್ಲರ ಗಮನ ಸೆಳೆಯಿತು. ಸಮುದ್ರ ಹಸಿರು ಮತ್ತು ಕಡುಗೆಂಪು ಬಣ್ಣದೊಂದಿಗೆ ಅವರು ಆಕರ್ಷಕವಾಗಿ ಕಂಡು ಬಂದರು. ಕಪ್ಪು ಪ್ಯಾಂಟ್‌ನೊಂದಿಗೆ ಜೋಡಿಸಲಾದ ಕಪ್ಪು ಬಣ್ಣದ ಟೀ-ಶರ್ಟ್ ಧರಿಸಿ ಗಮನ ಸೆಳೆದರು. ಫ್ಲೋರಲ್-ಸ್ಕಲ್ ಪ್ರಿಂಟ್ ಬ್ಲೇಜರ್‌ನೊಂದಿಗೆ ಮಿಂಚಿದರು.

ಪ್ರಿಯಾಂಕಾ ತಾಯಿ ಮಧು ಚೋಪ್ರಾ ಕೂಡ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ತಮ್ಮ ಮಗಳೊಂದಿಗೆ ನೀಲಿ ಬಣ್ಣದಲ್ಲಿ ಕಂಗೊಳಿಸಿದರು. ಎವರ್ ಗ್ರೀನ್ ನಟಿ ರೇಖಾ ಕೂಡ 'ಸಿಟಾಡೆಲ್' ವಿಶೇಷ ಪ್ರದರ್ಶನದಲ್ಲಿ ತಮ್ಮ ಉಪಸ್ಥಿತರಿದ್ದರು.

ಇದನ್ನು ಓದಿ: ಮೇಕಪ್ ಇಲ್ಲದೇ ನಟಿಸುವುದರಿಂದ ಪ್ರೇಕ್ಷಕರು ನನ್ನನ್ನು ಇಷ್ಟಪಡುತ್ತಾರೆ : ಸಾಯಿ ಪಲ್ಲವಿ

ಪ್ರಿಯಾಂಕಾ ಅವರ 'ಸಿಟಾಡೆಲ್' ನ ಭಾರತೀಯ ಆವೃತ್ತಿಯ ಮುಖ್ಯಸ್ಥರಾಗಿರುವ ವರುಣ್ ಧವನ್, ರಾಜ್ ಮತ್ತು ಡಿಕೆ ಅವರೊಂದಿಗೆ ಪ್ರದರ್ಶನದಲ್ಲಿ ಪಾಲ್ಗೊಂಡರು. ರಾಜ್ ಮತ್ತು ಡಿಕೆ ಸಿಟಾಡೆಲ್‌ನ ಹಿಂದಿ ಆವೃತ್ತಿಯನ್ನು ನಿರ್ದೇಶಿಸುತ್ತಿದ್ದಾರೆ. ಇದನ್ನು ಮೂಲತಃ ದಿ ರುಸ್ಸೋ ಬ್ರದರ್ಸ್ ಅವರ ನೇತೃತ್ವದಲ್ಲಿ ಮೂಡಿ ಬಂದ ಆವೃತ್ತಿಯಾಗಿದೆ. ಸೆಲೆಬ್ರಿಟಿಗಳಾದ ಅಲಿ ಫಜಲ್, ಶ್ವೇತಾ ತ್ರಿಪಾಠಿ, ಕಬೀರ್ ಖಾನ್ ಮತ್ತು ಮಿನಿ ಮಾಥುರ್ ಕೂಡ ರೆಡ್ ಕಾರ್ಪೆಟ್ ಮೇಲೆ ಪೋಸ್ ನೀಡಿ ಗಮನ ಸೆಳೆದರು.

ಪ್ರಿಯಾಂಕಾ ಮತ್ತು ರಿಚರ್ಡ್ ಅಭಿನಯದ 'ಸಿಟಾಡೆಲ್' ಶುಕ್ರವಾರ, ಏಪ್ರಿಲ್ 28 ರಂದು ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. ಅದರ ನಂತರ ಪ್ರತಿ ಶುಕ್ರವಾರದಿಂದ ಮೇ 26 ರವರೆಗೆ ವಾರಕ್ಕೊಮ್ಮೆ ಹೊಸ ಸಂಚಿಕೆ ಪ್ರಸಾರವಾಗಲಿದೆ.

ಇದನ್ನು ಓದಿ: ಸಾಗರದಾಚೆ ದಾಖಲೆ ಬರೆದ RRR.. ಜಪಾನಿಗರಿಗೆ ಧನ್ಯವಾದ ಅರ್ಪಿಸಿದ ರಾಜಮೌಳಿ

Last Updated : Apr 5, 2023, 10:29 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.