ETV Bharat / entertainment

ತಾಯ್ನಾಡಿಗೆ ಮರಳುವ ಖುಷಿಯಲ್ಲಿರುವ ನಟಿ ಪ್ರಿಯಾಂಕಾ ಚೋಪ್ರಾ - actress Priyanka Chopra

ಅಮೆರಿಕದಲ್ಲಿ ನೆಲೆಸಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರು 3 ವರ್ಷಗಳ ಬಳಿಕ ಮತ್ತೆ ಭಾರತಕ್ಕೆ ವಾಪಸ್​ ಆಗಲಿದ್ದಾರೆ.

priyanka-chopra
ನಟಿ ಪ್ರಿಯಾಂಕಾ ಚೋಪ್ರಾ
author img

By

Published : Oct 31, 2022, 2:00 PM IST

ಮುಂಬೈ (ಮಹಾರಾಷ್ಟ್ರ): ಒಂದು ಕಾಲದ ಬಾಲಿವುಡ್​ನ ಬೇಡಿಕೆಯ ನಟಿಯಾಗಿದ್ದ ಪ್ರಿಯಾಂಕಾ ಚೋಪ್ರಾ ಅಮೆರಿಕದಲ್ಲಿ ನೆಲೆಸಿದ್ದು, 3 ವರ್ಷಗಳ ಬಳಿಕ ಮತ್ತೆ ತಾಯ್ನಾಡಿಗೆ ಮರಳುತ್ತಿದ್ದಾರೆ. ಈ ಬಗ್ಗೆ ಇನ್​ಸ್ಟಾಗ್ರಾಮ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ, ತಾಯ್ನಾಡಿಗೆ ಬರಲು ಖುಷಿಯಾಗುತ್ತಿದೆ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಯುಎಸ್‌ಎ ಟು ಮುಂಬೈಗೆ ವಿಮಾನದ ಬೋರ್ಡಿಂಗ್ ಪಾಸ್‌ನ ಚಿತ್ರವನ್ನು ಹಂಚಿಕೊಂಡಿರುವ ನಟಿ, "ಅಂತಿಮವಾಗಿ 3 ವರ್ಷಗಳ ನಂತರ ತಾಯ್ನಾಡಿಗೆ ಹೋಗುತ್ತಿದ್ದೇನೆ. ಮರಳಿ ವಾಪಸ್​​ ಬರುತ್ತಿರುವುದಕ್ಕಿಂತ ಹೆಚ್ಚು ಖುಷಿ ಇನ್ನೊಂದು ಕೊಡಲಾರದು" ಎಂದು ಹೇಳಿಕೊಂಡಿದ್ದಾರೆ.

ಅಮೆರಿಕ ಟು ಮುಂಬೈ ವಿಮಾನದ ಬೋರ್ಡಿಂಗ್​ ಪಾಸ್​
ಅಮೆರಿಕ ಟು ಮುಂಬೈ ವಿಮಾನದ ಬೋರ್ಡಿಂಗ್​ ಪಾಸ್​

ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡಿರುವ ಪ್ರಿಯಾಂಕಾ ಚೋಪ್ರಾ ಅವರು ಬಳಿಕ ಬಾಲಿವುಡ್​ಗೆ ಪದಾರ್ಪಣೆ ಮಾಡಿ ಖ್ಯಾತಿ ಪಡೆದಿದ್ದರು. ಬಳಿಕ ಕ್ವಾಂಟಿಕೋ ಚಿತ್ರದ ಮೂಲಕ ಹಾಲಿವುಡ್ ಪ್ರವೇಶಿಸಿದ್ದರು. ಇಷ್ಟಲ್ಲದೇ ಹಾಲಿವುಡ್​ ಜನಪ್ರಿಯ ಗಾಯಕ ನಿಕ್​ ಜೋನಸ್ ಅವ​ರನ್ನು ವಿವಾಹವಾಗುವ ಮೂಲಕ ಅಮೆರಿಕಕ್ಕೆ ಹಾರಿದ್ದರು. ವರ್ಷದ ಆರಂಭದಲ್ಲಿ ನಟಿ ಬಾಡಿಗೆ ತಾಯ್ತನದಿಂದ ಪುತ್ರಿಯನ್ನು ಪಡೆದುಕೊಂಡಿದ್ದಾರೆ.

ಫರ್ಹಾನ್ ಅಖ್ತರ್ ನಿರ್ದೇಶನದ 'ಜೀ ಲೇ ಜರಾ' ಸಿನಿಮಾದಲ್ಲಿ ಪ್ರಿಯಾಂಕಾ ನಟಿಸಲಿದ್ದಾರೆ ಎಂದು ಹೇಳಲಾಗಿದೆ. ಇದರಲ್ಲಿ ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ಕೂಡ ಇರಲಿದ್ದಾರೆ. ಶೀಘ್ರದಲ್ಲೇ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ಎಂಬ ಗುಮಾನಿ ಇದೆ.

ಓದಿ: ನೇರಳೆ ಬಣ್ಣದ ಸೀರೆಯಲ್ಲಿ ತೇಜಸ್ವಿ ಪ್ರಕಾಶ್​ ಮಿಂಚಿಂಗ್​.. ಕಣ್ಣು ಕುಕ್ಕುವ ಸೌಂದರ್ಯ ಫೋಟೋಗಳಲ್ಲಿ ಅನಾವರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.