ಹೈದರಾಬಾದ್: ಈ ವರ್ಷದ ಜನವರಿಯಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಬಾಡಿಗೆ ತಾಯ್ತನದ ಮೂಲಕ ಮಗಳನ್ನು ಪಡೆದುಕೊಂಡಿದ್ದು, ಸದ್ಯ ತಾಯಿಯಾದ ಖುಷಿಯಲ್ಲಿ ತೇಲಾಡುತ್ತಿದ್ದಾರೆ.
ಆಗಾಗ ಪುತ್ರಿ ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಜೊತೆಗಿನ ಫೋಟೋಗಳನ್ನು ಶೇರ್ ಮಾಡುವ ಈ ತಾರೆ, ಇದೀಗ ಹೊಸ ಫೋಟೋವನ್ನು ಜಾಲತಾಣದಲ್ಲಿ ಹಾಕುವ ಮೂಲಕ ಖುಷಿ ಹಂಚಿಕೊಂಡಿದ್ದಾರೆ. ಮಗಳು ಬಂದ ಆರಂಭದ ದಿನಗಳಿಂದ ಹಿಡಿದು ಇಲ್ಲಿಯವರೆಗೆ ನಟಿಯು ಹತ್ತು ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಈವರೆಗೂ ನಟಿ ಪ್ರಿಯಾಂಕಾ ತನ್ನ ಮಗಳು ಮಾಲ್ತಿ ಮೇರಿಯ ಮುಖವನ್ನು ಸಂಪೂರ್ಣವಾಗಿ ತೋರಿಸಿಲ್ಲ. ಭಾನುವಾರ ಸಹ ಹೊಸ ಫೋಟೋವನ್ನು ಹಂಚಿಕೊಂಡಿದ್ದು ಈ ಚಿತ್ರದಲ್ಲೂ ಪುತ್ರಿಯ ಮುಖವನ್ನು ತೋರಿಸಿಲ್ಲ.
ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ಅಂದದ ಫೋಟೋವನ್ನು ಹಂಚಿಕೊಂಡಿದ್ದು, ಅದಕ್ಕೆ ಅವರು ಚೆಂದದ ಶೀರ್ಷಿಕೆ ಸಹ ನೀಡಿದ್ದಾರೆ. 'ನನ್ನ ಇಡೀ ಪ್ರಪಂಚ' ಎಂದು ಪುಟ್ಟದಾದ ಸಾಲು ಬರೆದುಕೊಂಡಿದ್ದು, ಇದು ನೆಟಿಜನ್ಗಳ ಮನ ಗೆದ್ದಿದೆ. ಈ ಹಿಂದೆಯೂ ಪ್ರಿಯಾಂಕಾ ಪುತ್ರಿಯ ಫೋಟೋವನ್ನು ಹಂಚಿಕೊಂಡಿದ್ದರು. ಇತ್ತೀಚೆಗೆ ಪುತ್ರಿಯ ಅಂಗಾಲಿಗೆ ಮುತ್ತು ಕೊಡುವ ಫೋಟೋವನ್ನು ಅವರು ಹರಿಯಬಿಟ್ಟಿದ್ದರು. ಮಾಲ್ತಿಯ ಮುದ್ದಾದ ಪಾದಗಳು ಫೋಟೋದಲ್ಲಿ ಸುಂದರವಾಗಿ ಕಾಣುತ್ತಿದ್ದವು. ಹಳೆ ಫೋಟೋಗೆ ಕಾಮೆಂಟ್ ಮಾಡಿದಂತೆ ಇದೀಗ ಈ ಫೋಟೋಗೂ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಸೆಲೆಬ್ರಿಟಿಗಳಾದ ನಟಿ ದಿಯಾ ಮಿರ್ಜಾ, ಪ್ರೀತಿ ಜಿಂಟಾ, ಸಹೋದರಿ ಪರಿಣಿತಿ ಚೋಪ್ರಾ, ಅನುಷ್ಕಾ ಶರ್ಮಾ, ಕರೀನಾ ಕಪೂರ್ ಖಾನ್ ಸೇರಿದಂತೆ ಹಲವರು ಹೃದಯದ ಎಮೋಜಿಗಳೊಂದಿಗೆ ಕಾಮೆಂಟ್ ಮಾಡಿದ್ದನ್ನು ನಾವು ಕಾಣಬಹುದು. ಇನ್ನು ಅಭಿಮಾನಿಗಳು ಸಹ ತರಹೇವಾರು ಕಾಮೆಂಟ್ ಮಾಡಿ ಪುಟಾಣಿಗೆ ಹರಿಸಿರುವುದನ್ನು ಗಮನಿಸಬಹುದು.
2018 ರಲ್ಲಿ ಪಾಕ್ ಗಾಯಕ ನಿಕ್ ಜೋನಾಸ್ ಅವರೊಂದಿಗೆ ವಿವಾಹವಾಗಿರುವ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಅಮೆರಿಕದಲ್ಲೇ ಇದ್ದಾರೆ. ತಾರಾ ಜೋಡಿಯ ಮದುವೆಗೆ ಮುಖೇಶ್ ಅಂಬಾನಿ ಅವರ ಕುಟುಂಬ ಸೇರಿದಂತೆ ದೇಶ-ವಿದೇಶದ ಗಣ್ಯಾತೀಗಣ್ಯರು ಸಾಕ್ಷಿಯಾಗಿದ್ದರು. ಮದುವೆಯಾದ 4 ವರ್ಷಗಳ ನಂತರ ಪ್ರಿಯಾಂಕಾ ಚೋಪ್ರಾ ಬಾಡಿಗೆ ತಾಯ್ತನದ ಮೂಲಕ ಮಗಳು ಮಾಲ್ತಿಗೆ ಜನ್ಮ ನೀಡಿದರು.
ಸದ್ಯ ಪ್ರಿಯಾಂಕಾ ಚೋಪ್ರಾ ಹಲವು ಹಾಲಿವುಡ್ ಪ್ರಾಸಕ್ಟ್ಗಳಿಗೆ ಸಹಿ ಮಾಡಿದ್ದು ಚಿತ್ರದ ಚಿತ್ರೀಕರಣದಲ್ಲಿ ತಮ್ಮನ್ನು ತೊಡಿಗಿಸಿಕೊಂಡಿದ್ದಾರೆ.
ಇದನ್ನೂ ಓದಿ: ಹೃತಿಕ್ ರೋಷನ್ ಮತ್ತು ವಿಕ್ಕಿ ಕೌಶಲ್ಗೆ ಬೌನ್ಸರ್ ಆಗಲು ಇಷ್ಟಪಡುವೆ: ತಮನ್ನಾ ಭಾಟಿಯಾ ಮನದ ಮಾತು