ETV Bharat / entertainment

"ಸೆಂಟ್ರಲ್​ ಪಾರ್ಕ್​ನಲ್ಲಿ ನಮ್ಮ ನಡಿಗೆಯನ್ನು ಪ್ರೀತಿಸಿ": ಮಗಳೊಂದಿಗಿನ ವಿಡಿಯೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ - ಈಟಿವಿ ಭಾರತ ಕನ್ನಡ

ಮಗಳು ಮಾಲ್ತಿ ಮೇರಿ ಜೊತೆಗಿನ ಮುದ್ದಾದ ವಿಡಿಯೋವನ್ನು ನಟಿ ಪ್ರಿಯಾಂಕಾ ಚೋಪ್ರಾ ಹಂಚಿಕೊಂಡಿದ್ದಾರೆ.

Priyanka Chopra
ಪ್ರಿಯಾಂಕಾ ಚೋಪ್ರಾ
author img

By

Published : May 8, 2023, 5:16 PM IST

ಗ್ಲೋಬಲ್​ ಐಕಾನ್​ ಪ್ರಿಯಾಂಕಾ ಚೋಪ್ರಾ ಮತ್ತು ಅಮೆರಿಕನ್​ ಗಾಯಕ ನಿಕ್​ ಜೋನಾಸ್​ ದಂಪತಿ ಮಗಳು ಮಾಲ್ತಿ ಮೇರಿಯ ಮುದ್ದಾದ ವಿಡಿಯೋ ಮತ್ತು ಫೋಟೋಗಳನ್ನು ಆಗಾಗ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದೇ ಮೊದಲ ಬಾರಿಗೆ ದೇಸಿ ಗರ್ಲ್ ತಮ್ಮ ಮಗಳನ್ನು ನ್ಯೂಯಾರ್ಕ್​ನ ಸೆಂಟ್ರಲ್​ ಪಾರ್ಕ್​ಗೆ ಕರೆದೊಯ್ಯುತ್ತಿದ್ದ ವೇಳೆ ತೆಗೆದ ಮುದ್ದಾದ ವಿಡಿಯೋವನ್ನು ಇನ್​ಸ್ಟಾದಲ್ಲಿ ಶೇರ್​ ಮಾಡಿದ್ದಾರೆ. "ಸೆಂಟ್ರಲ್​ ಪಾರ್ಕ್​ನಲ್ಲಿ ನಮ್ಮ ನಡಿಗೆಯನ್ನು ಪ್ರೀತಿಸಿ" ಎಂದು ವಿಡಿಯೋ ಕ್ಯಾಪ್ಶನ್​ ಬರೆದಿದ್ದಾರೆ.

ಪುಟಾಣಿಯ ನಗು ಲಕ್ಷಾಂತರ ಸೋಶಿಯಲ್​ ಮೀಡಿಯಾ ಬಳಕೆದಾರರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಅನೇಕ ನೆಟ್ಟಿಗರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದು, ಲೈಕ್ಸ್​ಗಳ ಸುರಿಮಳೆಯನ್ನೇ ಹರಿಸಿದ್ದಾರೆ. "ಉಫ್​ ಮೈ ಹಿಯರ್​" ಎಂದು ನಟಿ ಇಲಿಯಾನಾ ಡಿಕ್ರೂಜ್​ ಪ್ರತಿಕ್ರಿಯಿಸಿದ್ದಾರೆ. ನಟಿ ದಿಯಾ ಮಿರ್ಜಾ ಅವರು ಕೆಂಪು ಹೃದಯ ಎಮೋಜಿಗಳ ಸರಮಾಲೆಯನ್ನೇ ಕಳುಹಿಸಿದ್ದಾರೆ. 'ತುಂಬಾ ಮುದ್ದಾಗಿದೆ' ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಮತ್ತೊಬ್ಬರು, 'ಮಾಲ್ತಿ ಮೇರಿ ಸೋ ಕ್ಯೂಟ್​' ಎಂದಿದ್ದಾರೆ.

ಈ ವಿಡಿಯೋಗೂ ಮೊದಲು ಪ್ರಿಯಾಂಕಾ ತಮ್ಮ ಮಗಳೊಂದಿಗಿನ ಶಾಪಿಂಗ್​ ಫೋಟೋಗಳನ್ನು ಹಂಚಿಕೊಂಡಿದ್ದರು. ಒಂದು ಫೋಟೋದಲ್ಲಿ ಪ್ರಿಯಾಂಕಾ ಮಗಳಿಗಾಗಿ ಆಟಿಕೆಗಳನ್ನು ಖರೀದಿಸುತ್ತಿದ್ದಾರೆ. ಕೈಯಲ್ಲಿ ಆಟಿಕೆಯನ್ನು ಹಿಡಿದುಕೊಂಡು ಮಾಲ್ತಿಯನ್ನು ತೋಳಲ್ಲಿ ಹಿಡಿದುಕೊಂಡಿದ್ದಾರೆ. ಮತ್ತೊಂದು ಫೋಟೋದಲ್ಲಿ ಮಗು ನಿಲ್ಲಲು ಪ್ರಯತ್ನಿಸುತ್ತಿರುವುದು ಕಾಣಬಹುದು. ಇನ್ನೊಂದು ಚಿತ್ರದಲ್ಲಿ ಮಾಲ್ತಿ ಮೇರಿ ಇತರೆ ಮಕ್ಕಳೊಂದಿಗೆ ಆಟವಾಡುತ್ತಿದ್ದಾಳೆ.

ಪ್ರಿಯಾಂಕಾ ಅವರು ಕೆಲ ದಿನಗಳವರೆಗೆ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಫೋಟೋಗಳನ್ನು ಸಂಪೂರ್ಣವಾಗಿ ತೋರಿಸಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಕೆಲ ಫೋಟೋ ಹಂಚಿಕೊಂಡಿದ್ದರೂ ಸಹ ಮುಖವನ್ನು ಮರೆಮಾಚುತ್ತಿದ್ದರು. ಆದ್ರೆ ಜನವರಿ 30ರಂದು ಕ್ಯಾಲಿಫೋರ್ನಿಯಾದಲ್ಲಿ ನಡೆದ ದಿ ಜೋನಸ್ ಬ್ರದರ್ಸ್ ಅವರನ್ನು ಗೌರವಿಸುವ ಹಾಲಿವುಡ್ ವಾಕ್ ಆಫ್ ಫೇಮ್ ಸ್ಟಾರ್ ಸಮಾರಂಭದಲ್ಲಿ ಮಾಲ್ತಿ ಕಂಡುಬಂದಿದ್ದು, ಅಂದು ಫೋಟೋಗಳು ಸಿಕ್ಕಾಪಟ್ಟೆ ವೈರಲ್​ ಅದವು.

ಜೋನಾಸ್ ಸಹೋದರರು ಸಮಾರಂಭದ ಸ್ಟೇಜ್​ನಲ್ಲಿ ಇದ್ದ ವೇಳೆ ಪ್ರಿಯಾಂಕಾ ತಮ್ಮ ಮಗಳೊಂದಿಗೆ ಮೊದಲ ಸಾಲಿನಲ್ಲಿ ಕುಳಿತು ಅವರನ್ನು ಹುರಿದುಂಬಿಸಿದ್ದರು. ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಾಸ್​ 2018ರ ಡಿಸೆಂಬರ್​ 1 ಮತ್ತು 2 ರಂದು ಜೋಧ್​ಪುರದ ಉಮೈದ್​ ಭವನ್​ ಅರಮನೆಯಲ್ಲಿ ಕ್ರಿಶ್ಚಿಯನ್​ ಮತ್ತು ಹಿಂದೂ ಸಂಪ್ರದಾಯದಂತೆ ವಿವಾಹವಾದರು. 2022 ರ ಜನವರಿ ತಿಂಗಳಲ್ಲಿ ಈ ಜೋಡಿ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗು ಮಾಲ್ತಿ ಮೇರಿ ಜೋನಾಸ್​ಳನ್ನು ಸ್ವಾಗತಿಸಿದರು.

ಪ್ರಿಯಾಂಕಾ ಸಿನಿಮಾ ವಿಚಾರವಾಗಿ ನೋಡುವುದಾದರೆ, ಸದ್ಯ ಎಜಿಬಿಒ ಸ್ಪೈ ಸೀರಿಸ್ 'ಸಿಟಾಡೆಲ್‌' ಮತ್ತು ಜೇಮ್ಸ್ ಸಿ ಸ್ಟ್ರೌಸ್ ಅವರ ರೊಮ್ಯಾಂಟಿಕ್​ ಸಿನಿಮಾ 'ಲವ್​ ಅಗೇನ್​' ವಿಚಾರವಾಗಿ ನಟಿ ಸುದ್ದಿಯಲ್ಲಿದ್ದಾರೆ. ಹಾಲಿವುಡ್​ನಲ್ಲಿ ಬ್ಯುಸಿಯಾಗಿರುವ ಚೋಪ್ರಾ ಶೀಘ್ರದಲ್ಲೇ ಫರ್ಹಾನ್ ಅಖ್ತರ್ ನಿರ್ದೇಶನದ 'ಜೀ ಲೆ ಝರಾ'ದಲ್ಲಿ ಕೆಲಸ ಮಾಡಲಿದ್ದಾರೆ. ಈ ಚಿತ್ರದಲ್ಲಿ ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ಕೂಡ ಪ್ರಮುಖ ಪಾತ್ರ ವಹಿಸಲಿದ್ದಾರೆ. ಇದಲ್ಲದೇ ಮತ್ತೊಂದು ಹಾಲಿವುಡ್ ಪ್ರಾಜೆಕ್ಟ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಜಾನ್ ಸೆನಾ ಮತ್ತು ಇದ್ರಿಸ್ ಎಲ್ಬಾ ಅವರೊಂದಿಗೆ 'ಹೆಡ್ಸ್ ಆಫ್ ಸ್ಟೇಟ್‌'ನಲ್ಲಿ ಸ್ಕ್ರೀನ್​ ಶೇರ್ ಮಾಡಲಿದ್ದಾರೆ.

ಇದನ್ನೂ ಓದಿ: ಮಗಳ ಸಿನಿಮಾಗೆ ಮೊಯ್ದಿನ್​ ಭಾಯ್ ಆದ್ರು ರಜನಿ: 'ಲಾಲ್​ ಸಲಾಂ' ಫಸ್ಟ್​ ಲುಕ್​ ಔಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.