ETV Bharat / entertainment

'ಪ್ಲೇ ಡೇಟ್​ ವಿತ್​ ಫ್ರೆಂಡ್ಸ್'.. ಆಟ ಆಡೋದರಲ್ಲಿ ಮಾಲ್ತಿ ಬ್ಯುಸಿ: ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ - etv bharat kannada

Priyanka Chopra drops adorable pictures of Malti Marie: ನಟಿ ಪ್ರಿಯಾಂಕಾ ಚೋಪ್ರಾ, ಮಗಳು ಮಾಲ್ತಿ ಮೇರಿ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿರುವ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

Priyanka Chopra drops adorable pictures as daughter Malti Marie enjoys 'play date with friends'
'ಪ್ಲೇ ಡೇಟ್​ ವಿತ್​ ಫ್ರೆಂಡ್ಸ್'.. ಆಟ ಆಡೋದ್ರಲ್ಲಿ ಮಾಲ್ತಿ ಬ್ಯುಸಿ; ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ
author img

By ETV Bharat Karnataka Team

Published : Sep 14, 2023, 5:54 PM IST

ಗ್ಲೋಬಲ್​ ಐಕಾನ್​ ಪ್ರಿಯಾಂಕಾ ಚೋಪ್ರಾ ಮತ್ತು ಅಮೆರಿಕನ್​ ಗಾಯಕ ನಿಕ್​ ಜೋನಾಸ್​ ದಂಪತಿ ತಮ್ಮ ಮುದ್ದು ಮಗಳು ಮಾಲ್ತಿ ಮೇರಿಯ ವಿಡಿಯೋ ಮತ್ತು ಫೋಟೋಗಳನ್ನು ಆಗಾಗ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇತ್ತೀಚೆಗೆ ಒಂದು ವರ್ಷದ ಪುಟಾಣಿ ಕಂದಮ್ಮನ ಮುದ್ದಾದ ದೃಶ್ಯಗಳನ್ನು ಹಂಚಿಕೊಳ್ಳಲು ನಟಿ ಇನ್​ಸ್ಟಾಗ್ರಾಮ್​ ವೇದಿಕೆ ಬಳಸಿಕೊಂಡರು. ಮಗಳನ್ನು ತೋಳಲ್ಲಿ ಹಿಡಿದುಕೊಂಡು ಪ್ರಿಯಾಂಕಾ ಮಿಲಿಯನ್​ ಡಾಲರ್​ ಸ್ಮೈಲ್​ನಲ್ಲಿ ಹೊಳೆಯುತ್ತಿರುವುದನ್ನು ಕಾಣಬಹುದು.

ಪ್ರಿಯಾಂಕಾ ಚೋಪ್ರಾ ಪೋಸ್ಟ್​: "ಪ್ಲೇ ಡೇಟ್​ ವಿತ್​ ಫ್ರೆಂಡ್ಸ್​" ಎಂಬ ಕ್ಯಾಪ್ಶನ್​ನೊಂದಿಗೆ ನಟಿ ಪ್ರಿಯಾಂಕಾ ಚೋಪ್ರಾ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮಾಲ್ತಿ ಮೇರಿ ತನ್ನ ಸ್ನೇಹಿತರೊಂದಿಗೆ ಆಟ ಆಡುತ್ತಿರುವ ಮುದ್ದಾದ ದೃಶ್ಯಗಳು ಇದಾಗಿದೆ. ಚಿತ್ರದಲ್ಲಿ ಪ್ರಿಯಾಂಕಾ ಬ್ಲ್ಯಾಕ್​ ಪೂರ್ಣ ತೋಳಿನ ರೌಂಡ್​ ನೆಕ್​ ಟಾಪ್​ನಲ್ಲಿ ಕಾಣಬಹುದು. ಮತ್ತೊಂದೆಡೆ ಮಾಲ್ತಿ ಮೇರಿ ಬಿಳಿ ಬಣ್ಣದ ಹೂವಿನ ಚಿತ್ತಾರ ಇರುವ ಮಿನಿ ಫ್ರಾಕ್ ಧರಿಸಿದ್ದಾಳೆ. ​

Priyanka Chopra drops adorable pictures as daughter Malti Marie enjoys 'play date with friends'
'ಪ್ಲೇ ಡೇಟ್​ ವಿತ್​ ಫ್ರೆಂಡ್ಸ್'.. ಆಟ ಆಡೋದ್ರಲ್ಲಿ ಮಾಲ್ತಿ ಬ್ಯುಸಿ; ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಾಸ್​ 2018ರ ಡಿಸೆಂಬರ್​ 1 ಮತ್ತು 2 ರಂದು ಜೋಧ್​ಪುರದ ಉಮೈದ್​ ಭವನ್​ ಅರಮನೆಯಲ್ಲಿ ಕ್ರಿಶ್ಚಿಯನ್​ ಮತ್ತು ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದರು. 2022 ರ ಜನವರಿ ತಿಂಗಳಲ್ಲಿ ಈ ಜೋಡಿ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗು ಮಾಲ್ತಿ ಮೇರಿ ಜೋನಾಸ್​ಳನ್ನು ಸ್ವಾಗತಿಸಿದ್ದರು.

ಇದನ್ನೂ ಓದಿ: 'ಮಾಲ್ತಿ ಮೇರಿ ಮೊದಲ ಈಸ್ಟರ್​': ಮಗಳ ಜೊತೆಗಿನ ಫೋಟೋ ಹಂಚಿಕೊಂಡ ಪ್ರಿಯಾಂಕಾ

ಪ್ರಿಯಾಂಕಾ ಚೋಪ್ರಾ ಮತ್ತು ಅಮೆರಿಕನ್​ ಗಾಯಕ ನಿಕ್​ ಜೋನಾಸ್​ ದಂಪತಿ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ಈ ದಂಪತಿಯ ವಯಸ್ಸಿನ ವ್ಯತ್ಯಾಸ ಹಲವರ ಟೀಕೆಗೆ ಗುರಿಯಾದರೆ, ಹಲವರು ಸ್ಟಾರ್ ಕಪಲ್​ ಅನ್ನು ಮಾದರಿಯಾಗಿ ತೆಗೆದುಕೊಂಡಿದ್ದಾರೆ. ಈ ಜೋಡಿ ಬಗ್ಗೆ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಅಪಾರ ಸಂಖ್ಯೆಯ ಅಭಿಮಾನಿಗಳು ಕಾತರರಾಗಿದ್ದಾರೆ. ಸೆಲೆಬ್ರಿಟಿ ಕಪಲ್​ ಶೇರ್​ ಮಾಡುವ ಪ್ರತಿ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಳ್ಳುತ್ತವೆ.​

ಇನ್ನು ಪ್ರಿಯಾಂಕಾ ಚೋಪ್ರಾ ಅವರ ಕೆಲಸದ ವಿಚಾರವಾಗಿ ನೋಡುವುದಾದರೆ, ಅವರ ಮುಂಬರುವ ಚಿತ್ರ ಹೆಡ್ಸ್ ಆಫ್ ಸ್ಟೇಟ್. ಜಾನ್ ಸೆನಾ ಮತ್ತು ಇಡ್ರಿಸ್ ಎಲ್ಬಾ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಆ್ಯಕ್ಷನ್​ ಥ್ರಿಲ್ಲರ್​ ಚಿತ್ರವಾಗಿದೆ. ಹಾಲಿವುಡ್​ನಲ್ಲಿ ಮಿಂಚುತ್ತಿರುವ ಇವರು ಬಾಲಿವುಡ್​ನಲ್ಲಿ ಫರ್ಹಾನ್​ ಅಖ್ತರ್​ ಅವರ ಜೀ ಲೀ ಜರಾದಲ್ಲಿ ಆಲಿಯಾ ಭಟ್​ ಮತ್ತು ಕತ್ರಿನಾ ಕೈಪ್​ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಇವರು ಮತ್ತೊಮ್ಮೆ ಭಾರತೀಯ ಚಿತ್ರರಂಗಕ್ಕೆ ಮರಳುತ್ತಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಮೇಕಪ್ ಬ್ರಷ್‌ ಹಿಡಿದು ಮಗಳೊಂದಿಗೆ ಆಟವಾಡಿದ ಗ್ಲೋಬಲ್ ಐಕಾನ್​ ಪ್ರಿಯಾಂಕಾ ಚೋಪ್ರಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.