ETV Bharat / entertainment

'Love Again​'.. ಪತಿ ಎದುರೇ ಸ್ಯಾಮ್​ ಹ್ಯೂಘನ್​ಗೆ ಕಿಸ್​ ಕೊಟ್ಟ ಪ್ರಿಯಾಂಕಾ ಚೋಪ್ರಾ

author img

By

Published : May 4, 2023, 5:52 PM IST

ಗ್ಲೋಬಲ್​ ಐಕಾನ್​ ಪ್ರಿಯಾಂಕಾ ಚೋಪ್ರಾ ಅವರ 'ಲವ್​ ಅಗೇನ್​' ಹಾಲಿವುಡ್​ ಸಿನಿಮಾ ನಾಳೆ ಬಿಡುಗಡೆಯಾಗಲಿದೆ.

Priyanka Chopra
'ಲವ್​ ಅಗೇನ್​'

ಬ್ಯೂಟಿಫುಲ್​ ತಾರೆ ಪ್ರಿಯಾಂಕಾ ಚೋಪ್ರಾ ಸಾಲು ಸಾಲು ಹಾಲಿವುಡ್​ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಿಂದಿ ಚಿತ್ರರಂಗದಿಂದ ದೂರವೇ ಉಳಿದಿರುವ ನಟಿ ಸದ್ಯ ಹಾಲಿವುಡ್​​ ಸಿನಿಮಾಗಳನ್ನೇ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಪ್ರಿಯಾಂಕಾ ನಟನೆಯ ಸಿಟಾಡೆಲ್​ ವೆಬ್​ಸೀರಿಸ್​ ಅಮೆಜಾನ್​ನಲ್ಲಿ ಬಿಡುಗಡೆಯಾಗಿದೆ. ಈ ಸರಣಿಯು ಉತ್ತಮ ಪ್ರತಿಕ್ರಿಯೆಯನ್ನು ಗಳಿಸಿದೆ. ಇದೀಗ ನಟಿ ಜೇಮ್ಸ್ ಸಿ ಸ್ಟ್ರೌಸ್ ಅವರ ರೊಮ್ಯಾಂಟಿಕ್​ ಸಿನಿಮಾ 'ಲವ್​ ಅಗೇನ್​' ವಿಚಾರವಾಗಿ ಬ್ಯುಸಿಯಾಗಿದ್ದಾರೆ. ಸಿನಿಮಾ ಪ್ರಚಾರ ಕಾರ್ಯವನ್ನು ಜೋರಾಗಿಯೇ ಮಾಡುತ್ತಿದ್ದಾರೆ.

ಈ ಚಿತ್ರದ ಪ್ರೀಮಿಯರ್​ ಶೋ ಬುಧವಾರ ನಡೆಯಿತು. ನ್ಯೂಯಾರ್ಕ್​​ನಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಾಸ್​ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದರು. ಈವೆಂಟ್​ಗೆ ದೇಸಿ ಗರ್ಲ್​ ತಮ್ಮ ಪತಿಯ ಕೈ ಹಿಡಿದುಕೊಂಡು ಆಗಮಿಸಿದ್ದರು. ಈ ವಿಶೇಷ ದಿನಕ್ಕಾಗಿ ಪ್ರಿಯಾಂಕಾ ಬ್ಲಶ್​ ನೀಲಿ ಬಣ್ಣದ ಗೌನ್​ ಆರಿಸಿಕೊಂಡಿದ್ದರು. ನಿಕ್​ ಬೂದು ಬಣ್ಣದ ಸೂಟ್​ ಧರಿಸಿದ್ದರು. ನಟ ಸ್ಯಾಮ್​ ಹ್ಯೂಘನ್​ ಅವರು ಕಪ್ಪು ಬಣ್ಣದ ಸೂಟ್​ನಲ್ಲಿ ಸುಂದರವಾಗಿ ಕಾಣುತ್ತಿದ್ದರು.

ಇದನ್ನೂ ಓದಿ: ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣ: ವಿದೇಶಕ್ಕೆ ತೆರಳಲು ಶೀಜಾನ್ ಖಾನ್​ಗೆ ಕೋರ್ಟ್ ಅನುಮತಿ

ಕಾರ್ಯಕ್ರಮದ ವೇಳೆ ಸ್ಯಾಮ್​ ಮತ್ತು ಪ್ರಿಯಾಂಕಾ ಕಿಸ್​ ಮಾಡುತ್ತಿರುವ ವಿಡಿಯೋ ಮತ್ತು ಫೋಟೋಗಳು ಸಖತ್​ ವೈರಲ್​ ಆಗಿದೆ. ಪತಿ ನಿಕ್​ ಎದುರೇ ಸಹನಟನಿಗೆ ಮುತ್ತು ಕೊಟ್ಟಿರುವುದು ಸದ್ಯ ಸುದ್ದಿಯಾಗಿದೆ. ಇನ್ನು ಲವ್​ ಎಗೇನ್​ ಸಿನಿಮಾ ವಿಚಾರವಾಗಿ ಹೇಳುವುದಾದರೆ, ತನ್ನ ಸಂಗಾತಿಯನ್ನು ಕಳೆದುಕೊಂಡ ನಂತರ ಪ್ರೀತಿಗೆ ಮತ್ತೊಂದು ಅವಕಾಶ ನೀಡುವ ಕುರಿತ ಚಿತ್ರ ಇದಾಗಿದೆ. ಪ್ರಿಯಾಂಕಾ ಅವರ ಪತಿ, ಅಮೆರಿಕನ್​ ಗಾಯಕ ನಿಕ್​ ಜೋನಾಸ್​ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಿಯಾಂಕಾ ಜೊತೆ ನಾಯಕನಾಗಿ ಸ್ಯಾಮ್​ ಹ್ಯೂಘನ್ ಅಭಿನಯಿಸುತ್ತಿದ್ದಾರೆ. ಇದೇ ಮೇ 5 (ಶುಕ್ರವಾರ) ಬಿಡುಗಡೆಯಾಗಲಿದೆ.

ಸದ್ಯ ಎಜಿಬಿಒ ಸ್ಪೈ ಸೀರಿಸ್ 'ಸಿಟಾಡೆಲ್‌' ವಿಚಾರವಾಗಿ ನಟಿ ಪ್ರಿಯಾಂಕಾ ಚೋಪ್ರಾ ಸುದ್ದಿಯಲ್ಲಿದ್ದಾರೆ. ಹಾಲಿವುಡ್​ನಲ್ಲಿ ಬ್ಯುಸಿಯಾಗಿರುವ ಚೋಪ್ರಾ ಶೀಘ್ರದಲ್ಲೇ ಫರ್ಹಾನ್ ಅಖ್ತರ್ ನಿರ್ದೇಶನದ 'ಜೀ ಲೆ ಝರಾ'ದಲ್ಲಿ ಕೆಲಸ ಮಾಡಲಿದ್ದಾರೆ. ಈ ಚಿತ್ರದಲ್ಲಿ ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ಕೂಡ ಪ್ರಮುಖ ಪಾತ್ರ ವಹಿಸಲಿದ್ದಾರೆ. ಚೊಚ್ಚಲ ವೆಬ್​ ಸೀರಿಸ್​ ಪ್ರಚಾರಕ್ಕೂ ಮುನ್ನ ಪ್ರಿಯಾಂಕಾ ಅವರು ಮತ್ತೊಂದು ಹಾಲಿವುಡ್ ಪ್ರಾಜೆಕ್ಟ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಜಾನ್ ಸೆನಾ ಮತ್ತು ಇದ್ರಿಸ್ ಎಲ್ಬಾ ಅವರೊಂದಿಗೆ 'ಹೆಡ್ಸ್ ಆಫ್ ಸ್ಟೇಟ್‌'ನಲ್ಲಿ ಸ್ಕ್ರೀನ್​ ಶೇರ್ ಮಾಡಲಿದ್ದಾರೆ.

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಾಸ್​ 2018ರ ಡಿಸೆಂಬರ್​ 1 ಮತ್ತು 2 ರಂದು ಜೋಧ್​ಪುರದ ಉಮೈದ್​ ಭವನ್​ ಅರಮನೆಯಲ್ಲಿ ಕ್ರಿಶ್ಚಿಯನ್​ ಮತ್ತು ಹಿಂದೂ ಸಂಪ್ರದಾಯದಂತೆ ವಿವಾಹವಾದರು. 2022 ರ ಜನವರಿ ತಿಂಗಳಲ್ಲಿ ಈ ಜೋಡಿ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗು ಮಾಲ್ತಿ ಮೇರಿ ಜೋನಾಸ್​ಳನ್ನು ಸ್ವಾಗತಿಸಿದರು.

ಇದನ್ನೂ ಓದಿ: ಅನುಪಮ್​ ಖೇರ್​ 537ನೇ ಚಿತ್ರಕ್ಕೆ ಟೈಟಲ್​ ಫಿಕ್ಸ್​; ಕಾರ್ಟೂನ್​​ ಪೋಸ್ಟರ್ ಔಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.