ETV Bharat / entertainment

ನಾಳೆ ಪ್ರಭಾಸ್​ ಜನ್ಮದಿನ: ಹೈದರಾಬಾದ್‌ನಲ್ಲಿ ಅತಿ ದೊಡ್ಡ ಕಟೌಟ್‌ಗೆ ಸಿದ್ಧತೆ, 'ಸಲಾರ್' ಟ್ರೇಲರ್ ರಿಲೀಸ್ ನಿರೀಕ್ಷೆ - Preparation for Prabhas Birthday

ನಟ ಪ್ರಭಾಸ್​ ಅವರ ಬರ್ತ್‌ಡೇಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ.

Prabhas Birthday
ಪ್ರಭಾಸ್​ ಬರ್ತ್ ಡೇ
author img

By ETV Bharat Karnataka Team

Published : Oct 22, 2023, 5:56 PM IST

ಭಾರತೀಯ ಚಿತ್ರರಂಗದ ಜನಪ್ರಿಯ ನಟ ಪ್ರಭಾಸ್​​ ನಾಳೆ 44ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. 'ಸಲಾರ್'​ ಹಾಗೂ 'ಕಲ್ಕಿ 2898 ಎಡಿ' ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿರುವ 'ಬಾಹುಬಲಿ' ನಟನ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲು ಅಭಿಮಾನಿಗಳು ಸಿದ್ಧತೆಯಲ್ಲಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿವೆ.

ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಪ್ರಭಾಸ್​​ 'ಬಾಹುಬಲಿ' ಸಿನಿಮಾ ಮೂಲಕ ಭಾರತದಾದ್ಯಂತ ಜನಪ್ರಿಯತೆ ಹೆಚ್ಚಿಸಿಕೊಂಡರು. ಈ ಚಿತ್ರ ಅಂತರರಾಷ್ಟ್ರೀಯ ಮಟ್ಟದಲ್ಲೂ ಭಾರಿ​ ಕ್ರೇಜ್ ಸೃಷ್ಟಿಸಿತ್ತು. ಈ ಮೂಲಕ ಪ್ರಭಾಸ್ ಫ್ಯಾನ್ ಫಾಲೋಯಿಂಗ್ ಕೂಡ ಹೆಚ್ಚಾಯಿತು.

ಹೈದರಾಬಾದ್‌ನಲ್ಲಿ ಅತಿ ದೊಡ್ಡ ಕಟೌಟ್‌: ಪ್ರಭಾಸ್ ಹುಟ್ಟುಹಬ್ಬ ತೆಲುಗು ರಾಜ್ಯಗಳಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಹೈದರಾಬಾದ್‌ನಲ್ಲಿರುವ ಪ್ರಭಾಸ್ ಅಭಿಮಾನಿಗಳು ಬರ್ತ್‌ಡೇಯನ್ನು ವಿಶೇಷವಾಗಿಸಲಿದ್ದಾರೆ. ಕೂಕಟ್‌ಪಲ್ಲಿ ಪ್ರದೇಶದಲ್ಲಿ ಪ್ರಭಾಸ್‌ ಅವರ ಬೃಹತ್‌ ಕಟೌಟ್‌ ನಿಲ್ಲಿಸಲಿದ್ದಾರೆ. ಇದು ದೇಶದಲ್ಲೇ ಅತಿ ದೊಡ್ಡ ಕಟೌಟ್ ಆಗಲಿದೆ ಎಂದು ಕೂಡ ಹೇಳಲಾಗಿದೆ. ಕಟೌಟ್​ ನಿರ್ಮಾಣದ ಕೆಲಸಗಳು ಸುಗಮವಾಗಿ ನಡೆಯುತ್ತಿವೆ.

ಇದನ್ನೂ ಓದಿ: ಮಹಿಳಾ ಪ್ರಧಾನ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ: 'ದಿ ಗರ್ಲ್​​ಫ್ರೆಂಡ್' ಫಸ್ಟ್ ಲುಕ್​ ರಿಲೀಸ್

ಅಕ್ಟೋಬರ್ 23ರ ಬೆಳಿಗ್ಗೆ ಕಟೌಟ್ ಕಾಮಗಾರಿ ಪೂರ್ಣಗೊಳ್ಳಲಿದೆ. ಸುಮಾರು 11 ಗಂಟೆಯ ಹೊತ್ತಿಗೆ ಕಟೌಟ್ ಅನಾವರಣಗೊಳ್ಳಲಿದೆ. ಕಾರ್ಯಕ್ರಮಕ್ಕೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ ಎಂಬ ನಿರೀಕ್ಷೆ ಇದೆ.

ಇದನ್ನೂ ಓದಿ: ವಿಜಯ್ ಅಭಿನಯದ 'ಲಿಯೋ'ಗೆ ಮಿಶ್ರ ಪ್ರತಿಕ್ರಿಯೆ; ಕಲೆಕ್ಷನ್​ ಡೀಟೆಲ್ಸ್​ ಇಲ್ಲಿದೆ!

ಸಲಾರ್ ಟ್ರೇಲರ್ ರಿಲೀಸ್​ ಸಾಧ್ಯತೆ: ಬಾಹುಬಲಿ ಸಿನಿಮಾಗಳ ನಂತರ 'ಸಾಹೋ', 'ರಾಧೆಶ್ಯಾಮ್', 'ಆದಿಪುರುಷ' ಚಿತ್ರಗಳು ಭಾರಿ ನಿರೀಕ್ಷೆಯೊಂದಿಗೆ ತೆರೆಕಂಡವು. ಆದ್ರೆ ಯಾವ ಸಿನಿಮಾ ಕೂಡ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ಹಾಗಾಗಿ ಮುಂದಿನ ಸಿನಿಮಾ 'ಸಲಾರ್' ಮೇಲೆ ಭಾರಿ ನಿರೀಕ್ಷೆಗಳಿವೆ. ನಾಳೆ 'ಸಲಾರ್' ಟ್ರೇಲರ್ ಬಿಡುಗಡೆ ಆಗಬಹುದೆಂದು ಹೆಚ್ಚಿನವರು ನಿರೀಕ್ಷಿಸಿದ್ದಾರೆ. ಆದ್ರೆ ಚಿತ್ರತಂಡ ಯಾವುದೇ ಅಪ್ಡೇಟ್ ನೀಡಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.