ETV Bharat / entertainment

Prajwal Devaraj: ನಟ ಪ್ರಜ್ವಲ್ ದೇವರಾಜ್ 'ಗಣ' ಸಿನಿಮಾಗೆ ತಾಯಿ ಚಂದ್ರಲೇಖಾ ಸಾಥ್​

ಪ್ರಜ್ವಲ್ ದೇವರಾಜ್ ನಟನೆಯ 'ಗಣ' ಸಿನಿಮಾ ಟೀಸರ್​ ಬಿಡುಗಡೆಗೊಳಿಸಿ ತಾಯಿ ಚಂದ್ರಲೇಖಾ ಸಾಥ್​ ನೀಡಿದ್ದಾರೆ.

Gana
'ಗಣ' ಚಿತ್ರತಂಡ
author img

By

Published : Jul 4, 2023, 7:53 PM IST

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಟ ಪ್ರಜ್ವಲ್ ದೇವರಾಜ್. ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡ್ತಾ ಬ್ಯುಸಿಯಾಗಿದ್ದಾರೆ. ಅದರಲ್ಲಿ ಬಹುನಿರೀಕ್ಷಿತ 'ಗಣ' ಸಿನಿಮಾಗೆ ತಾಯಿ ಚಂದ್ರಲೇಖಾ ಸಾಥ್​ ನೀಡಿದ್ದಾರೆ. ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಪ್ರಜ್ವಲ್​ಗೆ ಅವರದ್ದೇ 'ಗಣ' ಸಿನಿಮಾದ ಟೀಸರ್​ ಅನ್ನು ಬಿಡುಗಡೆಗೊಳಿಸುವ ಮೂಲಕ ಚಂದ್ರಲೇಖಾ ಶುಭಕೋರಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ನಟ ದೇವರಾಜ್, ರಾಗಿಣಿ ಪ್ರಜ್ವಲ್, ಪ್ರಣಾಮ್ ದೇವರಾಜ್ ಹಾಗೂ ಗಣ ಚಿತ್ರತಂಡದವರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ನಿರ್ಮಾಪಕ ಪಾರ್ಥು, "ನಾನು ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ. ನನಗೆ ಕನ್ನಡ ಚಿತ್ರ ನಿರ್ಮಾಣ ಮಾಡಬೇಕೆಂಬ ಆಸೆಯಾಯಿತು. ಹಾಗಾಗಿ ಗಣ ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ. ಸೋಷಿಯಲ್​ ಮೀಡಿಯಾದಲ್ಲಿ ನಾನು ಪ್ರಜ್ವಲ್​ ಅವರನ್ನು ಫಾಲೋ ಮಾಡುತ್ತಿದ್ದೆ. ಅದರಲ್ಲಿ ಪ್ರಜ್ವಲ್​ ಅಭಿಮಾನಿಗಳು ಯಾವ ರೀತಿಯ ಚಿತ್ರ ನಿರೀಕ್ಷಿಸುತ್ತಿದ್ದರೋ, ಅಂತಹದ್ದೇ ಚಿತ್ರ ಮಾಡಿದ್ದೇನೆ. ಪ್ರಜ್ವಲ್​ ದೇವರಾಜ್​ ಈವರೆಗೆ ಮಾಡಿರದ ಪಾತ್ರ ಎನ್ನಬಹುದು. ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿದೆ. ಹರಿಪ್ರಾಸಾದ್ ಜಕ್ಕ ನಿರ್ದೇಶನ ಮಾಡಿದ್ದಾರೆ. ಹಾಗೇ ನಾನು ಈ ಚಿತ್ರದಲ್ಲಿ ನಟನೆ ಕೂಡ ಮಾಡಿದ್ದೇನೆ" ಎಂದು ತಿಳಿಸಿದರು.

Gana
ಪ್ರಜ್ವಲ್ ದೇವರಾಜ್ ಜೊತೆ ಚಿತ್ರದ ನಾಯಕಿಯರು

ನಂತರ ಪ್ರಜ್ವಲ್ ದೇವರಾಜ್ ಮಾತನಾಡಿ, "ಕನ್ನಡದ ಕಲಾವಿದರು ಹಾಗೂ ತಂತ್ರಜ್ಞರ ಜೊತೆ ಸಿನಿಮಾ ಮಾಡಬೇಕೆಂದು ಬಂದ ಪಾರ್ಥು ಅವರಿಗೆ ಅಭಿನಂದನೆಗಳು. 'ಗಣ' ನಾನು ಈವರೆಗೂ ಮಾಡಿರುವ ಚಿತ್ರಗಳಲ್ಲೇ ಬೇಗ ಶೂಟಿಂಗ್​ ಮುಗಿಸಿರುವ ಚಿತ್ರ. ಜೊತೆಗೆ ಡಿಫರೆಂಟ್ ಜಾನರ್​ನ ಚಿತ್ರ ಕೂಡ ಹೌದು. 1993 ಹಾಗೂ 2023 ಎರಡು ಕಾಲಘಟ್ಟದಲ್ಲಿ ಈ ಕಥೆ ನಡೆಯುತ್ತದೆ‌. ಸಮಯದ ಜೊತೆ ಹೋರಾಡುವ ಚಿತ್ರ ಎನ್ನಬಹುದು. ಲವ್, ಆಕ್ಷನ್ ಹಾಗು ಫ್ಯಾಮಿಲಿ ಸೆಂಟಿಮೆಂಟ್ ಚಿತ್ರದಲ್ಲಿದೆ. ನನ್ನ ಜೊತೆ ಅಭಿನಯಿಸಿರುವ ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಅದ್ಭುತವಾಗಿದೆ" ಎಂದರು.

ಚಿತ್ರತಂಡ ಹೀಗಿದೆ.. ಇನ್ನೂ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್​ಗೆ ಜೋಡಿಯಾಗಿ ವೇದಿಕಾ, ಕೃಷಿ ತಾಪಂಡ ತೆರೆ ಹಂಚಿಕೊಂಡಿದ್ದಾರೆ. ಇವರ ಜೊತೆ ಶಿವರಾಜ್ ಕೆ.ಆರ್ ಪೇಟೆ, ಮಾಸ್ಟರ್ ರಘುನಂದನ್ ಸೇರಿದಂತೆ ಸಾಕಷ್ಟು ಕಲಾವಿದರು ಇದ್ದಾರೆ. ಹರಿಪ್ರಸಾದ್ ಜಕ್ಕ ಆ್ಯಕ್ಷನ್​ ಕಟ್​​ ಹೇಳಿರುವ ಸಿನಿಮಾವನ್ನು ಚೆರಿ ಕ್ರಿಯೇಷನ್ಸ್ ಲಾಂಛನದಲ್ಲಿ ಪಾರ್ಥು ನಿರ್ಮಾಣ ಮಾಡಿದ್ದಾರೆ.

Gana
'ಗಣ' ಚಿತ್ರತಂಡ

ಜೈ ಆನಂದ್ ಕ್ಯಾಮರಾ ವರ್ಕ್, ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಹರೀಶ್ ಕೊಮ್ಮೆ ಹಾಗೂ ಗೋಪಿ ಸಂಕಲನ​, ಸತೀಶ್ ಎ. ಕಲಾ ನಿರ್ದೇಶನ ಸಿನಿಮಾಗಿದ್ದು ಡಿ.ಜೆ ಕ್ರಿಯೇಟಿವ್ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬೆಂಗಳೂರು, ಮೈಸೂರಿನಲ್ಲಿ 80 ದಿನಗಳ ಕಾಲ ಶೂಟಿಂಗ್​​ ನಡೆದಿದಿದೆ. ಜೂನ್​ ಹೊತ್ತಿಗೆ ಚಿತ್ರೀಕರಣ ಪೂರ್ಣಗೊಂಡಿತ್ತು. ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್​​ ಕೆಲಸದಲ್ಲಿ ಬ್ಯುಸಿಯಾಗಿದ್ದು ಸಿನಿಮಾ ಆದಷ್ಟು ಬೇಗನೆ ತೆರೆ ಕಾಣಲಿದೆ.

ಇದನ್ನೂ ಓದಿ: ಅಭಿಮಾನಿಗಳ ಜೊತೆ ಪ್ರಜ್ವಲ್​ ದೇವರಾಜ್​ ಬರ್ತ್ ಡೇ ಸೆಲೆಬ್ರೇಶನ್ - ರಕ್ತದಾನ, ಅನ್ನದಾನ ಆಯೋಜಿಸಿದ ಫ್ಯಾನ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.