ETV Bharat / entertainment

'ವೂಲ್ಫ್'​​​ ಆಗಿ ಬರಲಿದ್ದಾರೆ ಪ್ರಭುದೇವ; ಡ್ಯಾನ್ಸ್​ಕಿಂಗ್​ ಚಿತ್ರದ ಶೂಟಿಂಗ್​ ಮುಕ್ತಾಯ - ಈಟಿವಿ ಭಾರತ್​ ಕನ್ನಡ

- ಮತ್ತೊಂದು ಕನ್ನಡ ಸಿನಿಮಾದಲ್ಲಿ ಪ್ರಭುದೇವ ಅಭಿನಯ - ಈ ಬಾರಿ ತೋಳವಾಗಿ ಬರಲಿದ್ದಾರೆ ಡ್ಯಾನ್ಸ್​ಕಿಂಗ್ ​- ಶೂಟಿಂಗ್​ ಮುಗಿಸಿದ ವೂಲ್ಫ್​​ ಚಿತ್ರತಂಡ

'ವೂಲ್ಫ್'​​​ ಆಗಿ ಬರಲಿದ್ದಾರೆ ಪ್ರಭುದೇವ; ಡ್ಯಾನ್ಸ್​ಕಿಂಗ್​ ಚಿತ್ರದ ಶೂಟಿಂಗ್​ ಮುಕ್ತಾಯ
prabhudeva-upcoming-movie-wolf-film-shooting-is-over
author img

By

Published : Dec 26, 2022, 12:29 PM IST

Updated : Dec 26, 2022, 12:45 PM IST

ಬೆಂಗಳೂರು: 'H20' ಹಾಗೂ '123' ಆದ್ಮಲೇ ಹಲವು ವರ್ಷಗಳ ಬಳಿಕ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ, ಲಕ್ಕಿಮ್ಯಾನ್ ಚಿತ್ರದಿಂದ ಕನ್ನಡ ಚಿತ್ರರಂಗದ ಕಡೆ ಮುಖ ಮಾಡಿದ್ದಾರೆ. ಸದ್ಯ ಕನ್ನಡದಲ್ಲಿ ಮೂರು‌ ಚಿತ್ರಗಳಲ್ಲಿ ಅಭಿನಯ ಮಾಡುತ್ತಿರುವ ಪ್ರಭುದೇವ, ಶಿವರಾಜ್ ಕುಮಾರ್ ಜೊತೆ ಒಂದು ಸಿನಿಮಾ‌ ಮಾಡುತ್ತಿದ್ದಾರೆ. ಇದರ ಜೊತೆಗೆ ಹಂಚಿಕೊಂಡಿರುವ ಪ್ರಭುದೇವ ವೂಲ್ಫ್​​ (Wolf) ಎಂಬ ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ‌.

ಶೂಟಿಂಗ್​ ಮುಗಿಸಿದ ವೂಲ್ಫ್​​ ಚಿತ್ರತಂಡ
ಶೂಟಿಂಗ್​ ಮುಗಿಸಿದ ವೂಲ್ಫ್​​ ಚಿತ್ರತಂಡ

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ವಿನು ವೆಂಕಟೇಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಪ್ರಭುದೇವ ಮುಖ್ಯಭೂಮಿಕೆಯಲ್ಲಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಪಾಂಡಿಚೇರಿ, ಚೆನೈ, ಬೆಂಗಳೂರು, ಅಂಡಮಾನ್, ನಿಕೋಬಾರ್ ಮುಂತಾದ ಕಡೆ 65 ದಿನಗಳ ಚಿತ್ರೀಕರಣ ಮಾಡಲಾಗಿದೆ.

ಪ್ರಭುದೇವ ಜೊತೆ ಅಂಜು ಕುರಿಯನ್, ಲಕ್ಷ್ಮೀ ರೈ, 'ಪುಷ್ಪ' ಖ್ಯಾತಿರ ಅನಸೂಯ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅಂಬರೀಶ್ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಅರುಳ್ ವಿನ್ಸೆಂಟ್ ಅವರ ಛಾಯಾಗ್ರಹಣವಿದೆ. ಲಾರೆನ್ಸ್ ಕಿಶೋರ್ ಸಂಕಲನ, ಪ್ರದೀಪ್ ದಿನೇಶ್ ಸಾಹಸ ನಿರ್ದೇಶನ, ಮಣಿ ಮೌಳಿ ಕಲಾ ನಿರ್ದೇಶನ ಹಾಗೂ ಗಣೇಶ್, ಶ್ರೀಧರ್, ಭೂಪತಿ ರಾಜ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಪ್ರಸಾದ್​​ ನಿರ್ಮಾಣ ಮೇಲ್ವಿಚಾರಣೆ ಹಾಗೂ ಶಂಕರ್ ಲಿಂಗಂ, ಮೈಸೂರು ಸುರೇಶ್ ನಿರ್ಮಾಣ ನಿರ್ವಾಹಕರಾಗಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಸದಾಭಿರುಚಿ ಚಿತ್ರಗಳನ್ನು ನೀಡಿರುವ ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ಲಾಂಛನದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಿರ್ಮಾಪಕ ಸಂದೇಶ್ ನಾಗರಾಜ್ ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣ‌ ಮಾಡಿದ್ದಾರೆ.

ಇದನ್ನೂ ಓದಿ: ಮತ್ತೆ ನೆರವಿಗೆ ಬಂದ ಸೋನು ಸೂದ್​.. ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ಸಹಾಯ ಹಸ್ತ

Last Updated : Dec 26, 2022, 12:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.