ETV Bharat / entertainment

ಚಿತ್ರಮಂದಿರಗಳಲ್ಲಿ 'ಸಲಾರ್​​' ಅಬ್ಬರ: ಸಿನಿಪ್ರಿಯರಿಂದ ಭಾರಿ ಮೆಚ್ಚುಗೆ - ಪ್ರಭಾಸ್​​

ಬಹುನಿರೀಕ್ಷಿತ 'ಸಲಾರ್​​' ಸಿನಿಮಾ​ ವೀಕ್ಷಿಸಿದ ಪ್ರೇಕ್ಷಕರು ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Salaar X reactions
ಸಲಾರ್ ಎಕ್ಸ್ ರಿಯಾಕ್ಷನ್ಸ್​​
author img

By ETV Bharat Karnataka Team

Published : Dec 22, 2023, 10:02 AM IST

ಪ್ರಭಾಸ್ ಮತ್ತು ಪ್ರಶಾಂತ್​ ನೀಲ್​ ಕಾಂಬೋದ ಬಹುನಿರೀಕ್ಷಿತ ಸಿನಿಮಾ 'ಸಲಾರ್' ಇಂದು ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು ಈ ಬಿಗ್​​ ಪ್ರಾಜೆಕ್ಸ್​ ಅನ್ನು ಥಿಯೇಟರ್​ಗಳಲ್ಲಿ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಸದ್ಯ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ಸಲಾರ್​ ಬಿಡುಗಡೆ ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳ ಭಾರಿ ಉತ್ಸಾಹದ ನಡುವೆ ಕೆಜಿಎಫ್​ ಖ್ಯಾತಿಯ ಪ್ರಶಾಂತ್ ನೀಲ್ ಅವರ ಆ್ಯಕ್ಷನ್ ಡ್ರಾಮಾ ರಿಲೀಸ್ ಆಗುತ್ತಿದ್ದಂತೆ ಹಬ್ಬದ ಆಚರಣೆಯನ್ನೇ ಮಾಡಿದ್ದಾರೆ. ಅಭಿಮಾನಿಗಳ ಸೆಲೆಬ್ರೇಶನ್​ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ.

ನೆಟ್ಟಿಗರು ಸೋಷಿಯಲ್​ ಮೀಡಿಯಾದಲ್ಲಿ ಪ್ರತಿಕ್ರಿಯೆ ಕೊಡಲಾರಂಭಿಸಿದ್ದಾರೆ. ಬ್ಲಾಕ್​ಬಸ್ಟರ್, ಸೂಪರ್​ ಹಿಟ್, ಮಾಸ್ಟರ್​​ ಪೀಸ್​ ಎಂಬ ಕಾಮೆಂಟ್​ಗಳು ಹರಿದುಬರುತ್ತಿದೆ. ಉಳಿದಂತೆ ಹಾರ್ಟ್, ಫೈಯರ್​ ಎಮೋಜಿಗಳು ಸಹಜವಾಗಿವೆ. ಕೆಲವರು ಸಿನಿಮಾ ಕಥೆ ಮತ್ತು ಮೇಕಿಂಗ್​ ಶೈಲಿ ನಿರಾಶೆ ಮೂಡಿಸಿದೆ ಎಂಬರ್ಥದಲ್ಲಿ ಕಾಮೆಂಟ್​​ ಮಾಡುತ್ತಿದ್ದಾರೆ. ಒಟ್ಟಾರೆ ಸಿನಿಮಾ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದ್ದು, ಹೆಚ್ಚಿನವರು ಪಾಸಿಟಿವ್​ ರಿಯಾಕ್ಷನ್​ ಕೊಟ್ಟಿದ್ದಾರೆ.

ಭರ್ಜರಿ ಪ್ರಚಾರ ನಡೆಸಿರುವ ಸಲಾರ್​ ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿಗಟ್ಟುವ ನಿರೀಕ್ಷೆಯಿದೆ. ಹೈದರಾಬಾದ್‌ನ ಥಿಯೇಟರ್‌ಗಳಲ್ಲಿ ಸಲಾರ್ ಬಿಡುಗಡೆ ಆಗೋ ಮುನ್ನ ಅಭಿಮಾನಿಯೋರ್ವರು ಪ್ರೇಕ್ಷಕರ ಸೆಲೆಬ್ರೇಶನ್​ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಪ್ರಭಾಸ್ ಅವರ ಸಲಾರ್ ಕಟೌಟ್‌, ಪಟಾಕಿ ಸಿಡಿಸುವಿಕೆ, ಥಿಯೇಟರ್​ ಮತ್ತು ಕಟೌಟ್​ ಎದುರು ಫೋಟೋಗಳಿಗೆ ಪೋಸ್ ನೀಡುವುದು ಸೇರಿದಂತೆ ಸಲಾರ್​ ಸಲೆಬ್ರೇಶನ್​ ಕ್ಷಣಗಳನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.

ಸಲಾರ್ ಸಿನಿಮಾವನ್ನು ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ, ಕೆಜಿಎಫ್​ ಖ್ಯಾತಿಯ ಹೊಂಬಾಳೆ ಫಿಲ್ಮ್ಸ್​ ನಿರ್ಮಾಣ ಮಾಡಿದೆ. ಭಾರತದಲ್ಲಿ ಪಂಚಭಾಷೆಗಳಲ್ಲಿ (ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ) ಬಿಡುಗಡೆಯಾಗಿದ್ದು, ಪ್ಯಾನ್ ಇಂಡಿಯಾ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್​ ಸಿಗುತ್ತಿದೆ. ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದ್ದಾರೆ. ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಚಿತ್ರ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ದೇವ ಮತ್ತು ವರದರ ಕಥೆಯನ್ನು ಈ ಚಿತ್ರ ಹೇಳುತ್ತದೆ. ಖಾನ್ಸಾರ್ ನಗರದಲ್ಲಿ ಕಥೆ ನಡೆಯುತ್ತದೆ.

ಇದನ್ನೂ ಓದಿ: ಸಲಾರ್ ಬಿಡುಗಡೆ: ದೊಡ್ಡ ಕಟೌಟ್, ಡಿಜೆ ಶೋ ಮೂಲಕ ಪ್ರಭಾಸ್ ಅಭಿಮಾನಿಗಳಿಂದ ಚಿತ್ರಕ್ಕೆ ಅದ್ಧೂರಿ ಸ್ವಾಗತ

  • #BlockbusterSALAAR

    4 Full bottles Tagina Rani High #Salaar chuste vostadi

    This is not just any movie, it’s an emotion
    The elevations ,#Prabhas mass Screen presence , the fights & sentiment put u on a high

    Movie gives a high that 4 Full liquo bottles can’t

    This scene 🔥 pic.twitter.com/e3VJ5ziadO

    — Ravi @🔥🔥Prabhas Army 🔥🔥🦕 (@RaviPrabhas333) December 22, 2023 " class="align-text-top noRightClick twitterSection" data=" ">

ಎರಡು ಗಂಟೆ ಐವತ್ತೈದು ನಿಮಿಷಗಳ ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದ "ಎ" ಸರ್ಟಿಫಿಕೇಟ್​​ ಸಿಕ್ಕಿದೆ. ಚಿತ್ರದುದ್ದಕ್ಕೂ ಹಿಂಸಾತ್ಮಕ, ಕ್ರೂರ ಯುದ್ಧದ ದೃಶ್ಯಗಳಿವೆ. ಸಿನಿಮಾ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಸಾಮಾಜಿಕ ಜಾಲತಾಣ ಬಳಕೆದಾರರು 'ಸಲಾರ್' ಬಾಹುಬಲಿ ನಂತರ ಪ್ರಭಾಸ್ ಅವರ ಅತ್ಯುತ್ತಮ ಚಿತ್ರ ಎಂದು ಉಲ್ಲೇಖಿಸಿದ್ದಾರೆ. ಮತ್ತೊಬ್ಬರು 'ಸಲಾರ್​' ಗೂಸ್‌ಬಂಪ್ ಕ್ಷಣಗಳನ್ನು ಹೊಂದಿದೆ ಎಂದು ಹೇಳಿದ್ದಾರೆ. ಸಿನಿಮಾ ಬಿಡುಗಡೆ ಆಗುತ್ತಿದ್ದಂತೆ, ನಿರ್ದೇಶಕ ಪ್ರಶಾಂತ್ ನೀಲ್ ಎಕ್ಸ್‌ ಪ್ಲಾಟ್​ಫಾರ್ಮ್​​ನಲ್ಲಿ ಜನಪ್ರಿಯರಾಗಿದ್ದಾರೆ. ನಿರ್ದೇಶನ ಶೈಲಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಭಾಸ್ ಅಭಿನಯವನ್ನು ಹೊಗಳಿದ ಫ್ಯಾನ್ಸ್ "ದೃಶ್ಯ ಚಮತ್ಕಾರ" ಎಂದು ವರ್ಣಿಸಿದ್ದಾರೆ.

ಇದನ್ನೂ ಓದಿ: 15 ವರ್ಷಗಳ ಹಿಂದೆಯೇ ಆರಂಭಗೊಂಡಿತ್ತು 'ಸಲಾರ್' ಪಯಣ: ಇಂಟ್ರೆಸ್ಟಿಂಗ್​ ವಿಚಾರಗಳು

ಪ್ರಭಾಸ್ ಅವರ ಕೊನೆಯ ಎರಡು ಚಿತ್ರಗಳಾದ ಆದಿಪುರುಷ ಮತ್ತು ರಾಧೆ ಶ್ಯಾಮ್ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡಲಿಲ್ಲ. ಸದ್ಯ ಸಲಾರ್ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸ್ವಿಕರಿಸುತ್ತಿದೆ. ಪ್ಯಾನ್​ ಇಂಡಿಯಾ ಸ್ಟಾರ್​ನ ನಟನಾ ಸಾಮರ್ಥ್ಯದಿಂದ ಪ್ರಭಾಸ್ ಅವರ ಸುವರ್ಣ ಯುಗ ಮರಳಿದೆ ಎಂದು ಅಭಿಮಾನಿಗಳು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.