ETV Bharat / entertainment

ಶಾರುಖ್​ ಖಾನ್​ 'ಡಂಕಿ'- ಪ್ರಭಾಸ್​ 'ಸಲಾರ್​' ಥಿಯೇಟರ್​ನಲ್ಲಿ ಮುಖಾಮುಖಿಯಾಗೋದು ಡೌಟ್​! - ಸಲಾರ್​ ಮತ್ತು ಡಂಕಿ ಸಿನಿಮಾಗಳು

ಶಾರುಖ್​ ಖಾನ್​ ನಟನೆಯ 'ಡಂಕಿ' ಮತ್ತು ಪ್ರಭಾಸ್​ ಅಭಿನಯದ 'ಸಲಾರ್'​ ಸಿನಿಮಾಗಳು ಥಿಯೇಟರ್​ನಲ್ಲಿ ಒಮ್ಮೆಲೇ ಮುಖಾಮುಖಿಯಾಗೋದು ಡೌಟ್​ ಎನ್ನಲಾಗಿದೆ.

Prabhas' Salaar may not clash with Shah Rukh Khan starrer Dunki, here's what we know
ಶಾರುಖ್​ ಖಾನ್​ 'ಡಂಕಿ'- ಪ್ರಭಾಸ್​ 'ಸಲಾರ್​' ಥಿಯೇಟರ್​ನಲ್ಲಿ ಮುಖಾಮುಖಿಯಾಗೋದು ಡೌಟ್​!
author img

By ETV Bharat Karnataka Team

Published : Sep 26, 2023, 8:05 PM IST

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳು 'ಸಲಾರ್​' ಮತ್ತು 'ಡಂಕಿ'. ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ 'ಸಲಾರ್' ಮತ್ತು ಬಾಲಿವುಡ್​ ಸೂಪರ್​ಸ್ಟಾರ್​ ಶಾರುಖ್​ ಖಾನ್​ ಹಾಗೂ ನಿರ್ದೇಶಕ ರಾಜ್​ಕುಮಾರ್​ ಹಿರಾನಿ ಕಾಂಬೋದಲ್ಲಿ ಮೂಡಿಬರುತ್ತಿರುವ 'ಡಂಕಿ' ಸಿನಿಮಾಗಳು ಈ ವರ್ಷವೇ ತೆರೆ ಕಾಣಲಿವೆ ಎನ್ನಲಾಗಿತ್ತು. ಒಂದೇ ಬಾರಿಗೆ ಎರಡು ಚಿತ್ರಗಳು ಬಿಡುಗಡೆಯಾಗಿ ಥಿಯೇಟರ್​ನಲ್ಲಿ ಘರ್ಷಿಸಲಿವೆ ಎಂಬ ಮಾತುಗಳು ಕೇಳಿ ಬಂದಿದ್ದವು.

  • " class="align-text-top noRightClick twitterSection" data="">

ಆದರೆ ಇದೀಗ 'ಸಲಾರ್'​ ಬಿಡುಗಡೆಯ ದಿನಾಂಕ ಮುಂದೂಲ್ಪಟ್ಟಿದೆ. ಈ ಹಿಂದೆ ಸಲಾರ್​ ಪಾರ್ಟ್​-1 ಸೆಪ್ಟೆಂಬರ್ 28ರಂದು ರಿಲೀಸ್ ಆಗುತ್ತೆ ಎಂದು ಹೇಳಲಾಗಿತ್ತು. ಆ ಬಳಿಕ ಕಾರಣಾಂತರಗಳಿಂದ ಬಿಡುಗಡೆ ಮುಂದೂಡಲಾಗಿದೆ ಎಂದು ನಿರ್ಮಾಪಕ ಸಂಸ್ಥೆ ಹೊಂಬಾಳೆ ಫಿಲಂಸ್‌ ಸ್ಪಷ್ಟನೆ ನೀಡಿತ್ತು. ಹೀಗಾಗಿ ಸಲಾರ್​ ಸಿನಿಮಾ ಡಿಸೆಂಬರ್​ 22ರಂದು ಬಿಡುಗಡೆಯಾಗಲಿದೆ ಎಂದು ಚಲನಚಿತ್ರ ವಿಶ್ಲೇಷಕರು ಅಂದಾಜಿಸಿದ್ದರು. ಆದರೆ ಇದೀಗ ಮತ್ತೆ ಪ್ರಭಾಸ್​ ಸಿನಿಮಾ ಈ ವರ್ಷ ಬಿಡುಗಡೆಯಾಗುತ್ತಿಲ್ಲ ಎನ್ನಲಾಗಿದೆ.

ಮಾಹಿತಿಯ ಪ್ರಕಾರ, ಸಲಾರ್​ ಮತ್ತು ಡಂಕಿ ಸಿನಿಮಾಗಳು ಥಿಯೇಟರ್​ನಲ್ಲಿ ಘರ್ಷಿಸುವ ಸಾಧ್ಯತೆ ಕಡಿಮೆಯಿದೆ. ಏಕೆಂದರೆ, ಕೆಲವು ಕಾರಣಗಳಿಂದ ಸಲಾರ್ ಫಸ್ಟ್​ ಪಾರ್ಟ್​ ಅನ್ನು ಸಮಯಕ್ಕೆ ಸರಿಯಾಗಿ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೇ, ಎರಡನೆಯದಾಗಿ ಶಾರುಖ್​ ಖಾನ್​ ಅವರ ಡಂಕಿ ಬಿಡುಗಡೆ ಸಮಯದಲ್ಲೇ ಸಲಾರ್​ ರಿಲೀಸ್​ ಮಾಡೋದು ಡೌಟ್​. ಏಕೆಂದರೆ ಇತ್ತೀಚೆಗೆ ಕಿಂಗ್​ ಖಾನ್​ ಅವರ ಜವಾನ್​ ತೆಲುಗಿನಲ್ಲೂ ಬ್ಲಾಕ್​ಬಸ್ಟರ್​ ಆಗಿತ್ತು. ಅಲ್ಲದೇ 2024ರ ಪ್ರಾರಂಭದಲ್ಲೂ ಸಲಾರ್​ ಥಿಯೇಟರ್​ಗೆ ಬರುವುದಿಲ್ಲ ಎನ್ನಲಾಗಿದೆ. ಹೀಗಿರುವಾಗ ಈ ಎರಡು ಸಿನಿಮಾಗಳು ಒಮ್ಮೆಲೇ ತೆರೆ ಕಾಣುವ ಸಂಭವನೀಯತೆ ಕಡಿಮೆ.

ಇದನ್ನೂ ಓದಿ: ಹೊಂಬಾಳೆ ಫಿಲ್ಮ್ಸ್​ ನಿರ್ಮಾಣದ 'ಸಲಾರ್'​ ರಿಲೀಸ್​ ಮುಂದೂಡಿಕೆ...ತರಣ್​ ಆದರ್ಶ್​ ಟ್ವೀಟ್​ನಲ್ಲೇನಿದೆ?

'ಸಲಾರ್'​ ಸಿನಿಮಾ ಬಿಗ್​ ಬಜೆಟ್​ ಮತ್ತು ಬಿಗ್​ ಸ್ಟಾರ್​ ಕಾಸ್ಟ್ ಮೂಲಕ ಗಮನ ಸೆಳೆಯುತ್ತಿದೆ. ಬಹುಭಾಷೆಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್​ನ ವಿಜಯ್​ ಕಿರಗಂದೂರ್​ ನಿರ್ಮಿಸಿದ್ದಾರೆ. ಕೆಜಿಎಫ್​ ನಿರ್ದೇಶಿಸಿದ್ದ ಪ್ರಶಾಂತ್​ ನೀಲ್ ಅವರೇ ಪ್ರಭಾಸ್​ ಸಿನಿಮಾಗೆ ಆ್ಯಕ್ಷನ್ ಕಟ್​ ಹೇಳುತ್ತಿರುವುದರಿಂದ ನಿರೀಕ್ಷೆ ಕೊಂಚ ಹೆಚ್ಚೇ ಇದೆ. ಒಟ್ಟಾರೆ ಸಿನಿಮಾ ಬಿಡುಗಡೆ ದಿನಾಂಕದ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಕೊಡಬೇಕಿದೆ.

ದೊಡ್ಡ ತಾರಾಗಣವಿರುವ ಚಿತ್ರದಲ್ಲಿ ಪ್ರಭಾಸ್​ಗೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದ್ದು, ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಕೆಜಿಎಫ್ ಚಿತ್ರಗಳಿಗೆ ಕೆಲಸ ಮಾಡಿದ ತಾಂತ್ರಿಕ ತಂಡವೇ ಈ ಚಿತ್ರಕ್ಕೂ ಕೆಲಸ ಮಾಡಿದ್ದು, ರವಿ ಬಸ್ರೂರು ಅವರ ಸಂಗೀತ, ಭುವನ್ ಗೌಡ ಛಾಯಾಗ್ರಹಣ, ಶಿವಕುಮಾರ್ ಅವರ ಕಲಾ ನಿರ್ದೇಶನ ಚಿತ್ರಕ್ಕಿದೆ.

ಬಾಲಿವುಡ್​ ಸೂಪರ್​ಸ್ಟಾರ್​ ಶಾರುಖ್​ ಖಾನ್ ಅವರ ಡಂಕಿ ಚಿತ್ರವನ್ನು ರಾಜ್​ಕುಮಾರ್​ ಹಿರಾನಿ ನಿರ್ದೇಶಿಸಿದ್ದಾರೆ. ಸಿನಿಮಾ ಈ ವರ್ಷ ಕ್ರಿಸ್​ಮಸ್​ನಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: Salaar: 400 ಕೋಟಿ ರೂಪಾಯಿ ವೆಚ್ಚ, 14 ಅದ್ಭುತ ಸೆಟ್‌ಗಳಲ್ಲಿ ಶೂಟಿಂಗ್​! ಸಲಾರ್‌ ಸಿನಿಮಾ ನಿರ್ಮಾಣದ ರೋಚಕ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.