ಮುಂಬೈ: ಡಾರ್ಲಿಂಗ್ ಪ್ರಭಾಸ್, ಕೃತಿ ಸನೋನ್ ಮತ್ತು ಸೈಫ್ ಅಲಿ ಖಾನ್ ಅಭಿನಯದ ಬಹುನಿರೀಕ್ಷಿತ ಆದಿಪುರುಷ್ ಚಿತ್ರದ ಬಿಡುಗಡೆ ದಿನಾಂಕವನ್ನು ಮತ್ತೆ ಮುಂದೂಡಲಾಗಿದೆ. ಚಿತ್ರದ ನಿರ್ಮಾಪಕ ಓಂ ರಾವುತ್ ಅವರು ಇಂದು ತಮ್ಮ ಟ್ವಿಟರ್ ಖಾತೆಯಲ್ಲಿ ಹೊಸ ಬಿಡುಗಡೆ ದಿನಾಂಕ ಘೋಷಿಸಿದರು.
"ಜೈ ಶ್ರೀ ರಾಮ್..#ಆದಿಪುರುಷ್ ಜೂನ್ 16, 2023 ರಂದು ಥಿಯೇಟರ್ಗಳಲ್ಲಿ ಬಿಡುಗಡೆಯಾಗುತ್ತದೆ ಎಂದು ಬರೆದಿದ್ದಾರೆ. ಆದಿಪುರುಷ್ ಒಂದು ಸಿನಿಮಾ ಅಲ್ಲ. ರಾಮನ ಬಗ್ಗೆ ನಮಗೆ ಇರುವ ಭಕ್ತಿ ಮತ್ತು ಸಂಸ್ಕೃತಿ - ಇತಿಹಾಸದ ಬಗ್ಗೆ ನಮಗೆ ಇರುವ ಬದ್ಧತೆಯನ್ನು ಈ ಚಿತ್ರ ಪ್ರತಿನಿಧಿಸುತ್ತದೆ.
ಪ್ರೇಕ್ಷಕರಿಗೆ ಸಂಪೂರ್ಣ ದೃಶ್ಯ ವೈಭವವನ್ನು ನೀಡಲು ಚಿತ್ರತಂಡಕ್ಕೆ ಇನ್ನಷ್ಟು ಸಮಯಬೇಕಾಗಿದೆ. ಹಾಗಾಗಿ ಚಿತ್ರ ಜೂನ್ 16ರಂದು ಬಿಡುಗಡೆ ಆಗಲಿದೆ. ಭಾರತವು ಹೆಮ್ಮೆ ಪಡುವಂತಹ ಸಿನಿಮಾ ಮಾಡಲು ನಾವು ಪಣತೊಟ್ಟಿದ್ದೇವೆ. ನಾವು ಮುಂದುವರಿಯಲು ನಿಮ್ಮ ಪ್ರೀತಿ, ಬೆಂಬಲ ಇರಲಿ ಎಂದು ಓಂ ರಾವತ್ ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ಟಿ ಸೀರೀಸ್ ಮತ್ತು ರೆಟ್ರೋಫೈಲ್ಸ್ ನಿರ್ಮಿಸಿದ ಚಿತ್ರ ಇದಾಗಿದ್ದು, ಓಂ ರಾವುತ್ ನಿರ್ದೇಶನ ಹೇಳಿದ್ದಾರೆ. ಅದ್ಧೂರಿ ಗ್ರಾಫಿಕ್ಸ್ ಮತ್ತು ಉತ್ತಮ ಗುಣಮಟ್ಟದ ದೃಶ್ಯಗಳನ್ನು ಹೊಂದಿರುವ 'ಆದಿಪುರುಷ್' ಬರುವ ಜನವರಿ 12, 2023 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರ ಈ ಹಿಂದೆ ಹೇಳಿಕೊಂಡಿತ್ತು.
ಬಹಳ ದಿನಗಳಿಂದ ಕಾತುರತೆಯಿಂದ ಕಾಯುತ್ತಿರದ್ದ ಪ್ರಭಾಸ್ ಅಭಿಮಾನಿಗಳಿಗೆ ಖುಷಿ ನೀಡಿತ್ತು. ಆದರೆ, ಸದ್ಯ ಚಿತ್ರದ ಬಿಡುಗಡೆ ದಿನಾಂಕ ಮತ್ತೆ ಮುಂದೆ ಹೋಗಿದ್ದರಿಂದ ಅವರು ನಿರಾಸೆ ಹೊರ ಹಾಕುತ್ತಿದ್ದಾರೆ.
ವಿವಾದದ ಸುಳಿಯಲ್ಲಿ 'ಆದಿಪುರುಷ್': ಚಿತ್ರದ ಟೀಸರ್ ಬಿಡುಗಡೆಯಾದಾಗಿನಿಂದಲೂ ವಿವಾದದ ಸುಳಿಯಲ್ಲಿ ಸಿಲುಕಿರುವ 'ಆದಿಪುರುಷ್' ಇದೀಗ ಮತ್ತೆ ಮುಂದೆ ಹೋಗಿರುವುದಕ್ಕೆ ಮಗದೊಂದು ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ರಾವಣನ (ಸೈಫ್) ಪಾತ್ರವನ್ನು ಕಿಲ್ಜಿ ದೊರೆಯ ಹಾಗೆ ತೋರಿಸಲಾಗಿದೆ.
ಅಲ್ಲದೇ ಗಡ್ಡ, ಉಗ್ರ ಕಣ್ಣುಗಳು ಮತ್ತು ವಿಶೇಷ ಕೇಶಾಲಂಕಾರದೊಂದಿಗೆ ಇಸ್ಲಾಮೀಕರಣಗೊಳಿಸಲಾಗಿದೆ. ಗಡ್ಡ, ಮೀಸೆ ಇಲ್ಲದ, ಚರ್ಮದ ಬಟ್ಟೆ ಧರಿಸಿರುವ ಹನುಮಂತನ ಚಿತ್ರಣ ಸೇರಿದಂತೆ 1.46 ನಿಮಿಷಗಳ ಟೀಸರ್ನಲ್ಲಿ ಹಲವು ಅಪಮಾನ ಮಾಡಲಾಗಿದೆ ಎಂಬ ಆರೋಪ ಮಾಡಲಾಗಿದೆ.
ಹಿಂದೂ ಸಮೂದಾಯ ತಮ್ಮ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಆರೋಪಿಸಿ ತಯಾರಕರ ವಿರುದ್ಧ ವಾಗ್ದಾಳಿ ಸಹ ನಡೆಸಿದ್ದರು. ಅಲ್ಲದೇ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ಕೋರಿ ದೆಹಲಿ ನ್ಯಾಯಾಲಯದಲ್ಲಿ ಅರ್ಜಿ ಸಹ ಸಲ್ಲಿಸಲಾಗಿತ್ತು. ಚಿತ್ರ ನಿರ್ಮಾಪಕರಾದ ಭೂಷಣ್ ಕುಮಾರ್ ಮತ್ತು ಓಂ ರಾವುತ್ ವಿರುದ್ಧ ವಕೀಲ ರಾಜ್ ಗೌರವ್ ಅವರು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದಾರೆ. ಇದರ ಹೊರತಾಗಿ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.
ಇದನ್ನೂ ಓದಿ: ಹಿಂದೂ ನಮ್ಮ ಶಬ್ದ ಅಲ್ಲವೇ ಅಲ್ಲ : ಸತೀಶ ಜಾರಕಿಹೊಳಿ