ಜಗತ್ತಿನಾದ್ಯಂತ ವಿವಿಧ ಕ್ಷೇತ್ರಗಳಿಗೆ ಮಹಿಳೆಯರ ಕೊಡುಗೆಯನ್ನು ಗುರುತಿಸಲು ಮತ್ತು ಗೌರವಿಸಲು ಪ್ರತೀ ಮಾರ್ಚ್ 8ನ್ನು ಅಂತಾರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತದೆ. ಮಹಿಳೆಯರ ಸಾಧನೆಗಳನ್ನು ಎತ್ತಿ ತೋರಿಸಲು ಮತ್ತು ಮಹಿಳಾ ಸಮಾನತೆಯ ಬಗ್ಗೆ ಜಾಗೃತಿ ಮೂಡಿಸುವ ದಿನವಾಗಿದೆ. ಅದೇ ರೀತಿ ಸಿನಿಮಾ ಕ್ಷೇತ್ರದಲ್ಲಿ ನಾಯಕಿಯರ ಪಾತ್ರ ಕೂಡ ಮಹತ್ವದ್ದು. ನಾಯಕರ ನಡುವೆ ತಮ್ಮ ಅಮೋಘ ಅಭಿನಯದ ಮೂಲಕ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಹೀರೋಗಳ ಮಧ್ಯೆ ಕೆಲ ನಟಿಮಣಿಯರು ಬಹುಬೇಡಿಕೆ ಬೇಡಿಕೆ ಹೊಂದಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳ ಆಗಮನವಾಗುತ್ತಿದೆ. ಆದರೆ ಸ್ಟಾರ್ ಪಟ್ಟ ಉಳಿಸಿಕೊಂಡಿರುವ ಕೆಲವೇ ಕೆಲವು ನಟಿಯರಿದ್ದಾರೆ.
ಪ್ರಿಯಾಂಕ ಉಪೇಂದ್ರ: ಈ ಸಾಲಿನಲ್ಲಿ ಬೆಂಗಾಳಿ ನಟಿ ಪ್ರಿಯಾಂಕ ಉಪೇಂದ್ರ ಕೂಡ ಒಬ್ಬರು. ಹೌದು, ಮದುವೆ ಆಗಿ ಎರಡು ಮಕ್ಕಳ ತಾಯಿಯಾಗಿರುವ ಪ್ರಿಯಾಂಕ ಉಪೇಂದ್ರ ಅವರು ದಿ. ಡಾ. ವಿಷ್ಣುವರ್ಧನ್, ರವಿಚಂದ್ರನ್, ಉಪೇಂದ್ರ, ಶಿವ ರಾಜ್ಕುಮಾರ್ ಅವರಂತಹ ಸ್ಟಾರ್ ನಟರೊಂದಿಗೆ ಸ್ಕ್ರೀನ್ ಹಂಚಿಕೊಂಡು, ಇಂದಿಗೂ ಬೇಡಿಕೆ ಹೊಂದಿದ್ದಾರೆ. ನಾಯಕಿ ಪ್ರಧಾನ ಸಿನಿಮಾಗಳನ್ನು ಮಾಡುತ್ತಿರುವ ಪ್ರಿಯಾಂಕ ಉಪೇಂದ್ರ ಇಂದಿಗೂ ಹೀರೋಗಳ ಹಂಗಿಲ್ಲದೇ ಏಕಾಂಗಿಯಾಗಿ ಸಿನಿಮಾ ಗೆಲ್ಲಿಸುವ ಸಾಮರ್ಥ್ಯವನ್ನು ಹೊಂದಿರುವುದು ವಿಶೇಷ.
ರಶ್ಮಿಕಾ ಮಂದಣ್ಣ: ಕನ್ನಡ ಚಿತ್ರರಂಗ ಅಲ್ಲದೇ ಪರಭಾಷೆಯ ಚಿತ್ರಗಳಲ್ಲಿ ಸ್ಟಾರ್ ಆಗಿ ಮಿಂಚುತ್ತಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿ ಜರ್ನಿ ಶುರು ಮಾಡಿದ ರಶ್ಮಿಕಾ ಮಂದಣ್ಣ ಕಡಿಮೆ ಸಮಯಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿಯ ಸಿನಿಮಾಗಳಲ್ಲಿ ಮಿಂಚುತ್ತಿರುವ ಲಕ್ಕಿ ಹೀರೋಯಿನ್.
ರಚಿತಾ ರಾಮ್: ಇನ್ನು, ಕಿರುತೆರೆಯಿಂದ ಬಂದು ಕನ್ನಡ ಚಿತ್ರರಂಗದಲ್ಲಿ ಡಿಂಪಲ್ ಕ್ವೀನ್ ಆಗಿ ಮಿಂಚಿದ ನಟಿ ರಚಿತಾ ರಾಮ್. ಕನ್ನಡದ ಬಹುತೇಕ ಸೂಪರ್ ಸ್ಟಾರ್ಗಳ ಜೊತೆ ಸ್ಕ್ರೀನ್ ಹಂಚಿಕೊಂಡು ಸ್ಟಾರ್ ಪಟ್ಟವನ್ನು ಅಲಂಕರಿಸಿದ್ದಾರೆ. ಅತೀ ಕಡಿಮೆ ಸಮಯದಲ್ಲಿ ಸ್ಟಾರ್ ನಟರ ಚಿತ್ರಗಳಿಗೆ ನಾಯಕಿ ಆಗುವ ಮೂಲಕ ಕನ್ನಡಿಗರ ಮನಸ್ಸು ಕದ್ದ ಚೆಲುವೆ. ಇಂದಿಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಚಿತ್ರರಂಗದಲ್ಲಿ ಬೇಡಿಕೆಯ ನಟಿ ಆಗಿ ಚಿತ್ರರಂಗದಲ್ಲಿ ಯಶಸ್ಸು ಗಳಿಸಿದ್ದಾರೆ.
ರಾಗಿಣಿ ದ್ವಿವೇದಿ: ಸ್ಯಾಂಡಲ್ವುಡ್ನಲ್ಲಿ ತುಪ್ಪದ ಬೆಡಗಿ ಅಂತಾನೇ ಫೇಮಸ್ ಆಗಿರುವ ನಟಿ ರಾಗಿಣಿ ದ್ವಿವೇದಿ. ಮೂಲತಃ ಪಂಜಾಬಿ ಹುಡುಗಿಯಾಗಿರೋ ರಾಗಿಣಿ ದ್ವಿವೇದಿ, ಕನ್ನಡದ ಬಹುತೇಕ ಸ್ಟಾರ್ ನಟರ ಜೊತೆ ಸ್ಕ್ರೀನ್ ಹಂಚಿಕೊಂಡಿದ್ದಾರೆ. ಕನ್ನಡಿಗರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಹರಿಪ್ರಿಯಾ: ಉಗ್ರಂ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿರುವ ಅಪ್ಪಟ ಕನ್ನಡದ ಹುಡುಗಿ ಹರಿಪ್ರಿಯಾ. ಬೋಲ್ಡ್ ಪಾತ್ರಗಳಿಂದ ಹಿಡಿದು ಮಹಿಳಾ ಪ್ರಧಾನ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿರುವ ಹರಿಪ್ರಿಯಾ ಕೂಡ ಚಿತ್ರರಂಗದಲ್ಲಿ ತಮ್ಮದೇ ಡಿಮ್ಯಾಂಡ್ ಹೊಂದಿದ್ದಾರೆ.
ಅದಿತಿ ಪ್ರಭುದೇವ: ಕಿರುತೆರೆಯಲ್ಲಿ ನಿರೂಪಣೆ ಮಾಡುತ್ತ, ಬಳಿಕ ತಮ್ಮ ನಟನಾ ಕೌಶಲ್ಯದಿಂದ ಹೀರೋಯಿನ್ ಆದ ಬೆಣ್ಣೆನಗರಿಯ ಬೆಡಗಿ ಅದಿತಿ ಪ್ರಭುದೇವ. ಇಂದಿನ ಸ್ಯಾಂಡಲ್ವುಡ್ನ ಬಹುತೇಕ ಸಿನಿಮಾಗಳಿಗೆ ಇವರೇ ನಾಯಕಿ. ಸ್ಟಾರ್ ನಟರಿಂದ ಹಿಡಿದು ಹೊಸಬರ ಸಿನಿಮಾಗಳಿಗೂ ನಾಯಕಿಯಾಗಿ ತಮ್ಮದೇ ಛಾಪು ಮೂಡಿಸಿದ್ದಾರೆ.
ಇದನ್ನೂ ಓದಿ: ಇಂದೋರ್ ಮನೆಗೆ ವಿರಾಟ್ ಪತ್ನಿ ಭೇಟಿ: ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ಅನುಷ್ಕಾ ಶರ್ಮಾ
ಈ ನಾಯಕಿಯರ ಮಧ್ಯೆ ಆಶಿಕಾ ರಂಗನಾಥ್, ನಿಶ್ವಿಕಾ ನಾಯ್ಡು, ರೀಷ್ಮಾ ನಾಣಯ್ಯ, ಸಪ್ತಮಿ ಗೌಡ, ಯುವ ನಟಿಯರಾದ ಮಾಲಾಶ್ರೀ ಮಗಳು ರಾಧನ್ ರಾಮ್, ಪ್ರೇಮ್ ಮಗಳು ಅಮೃತಾ ಪ್ರೇಮ್ ಸದ್ಯ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆಯುವ ಮೂಲಕ ಭವಿಷ್ಯದ ಸ್ಟಾರ್ಗಳಾಗುವ ಸೂಚನೆ ನೀಡುತ್ತಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ನಾಯಕಿಯರು ಕೂಡ ನಾಯಕರ ಸರಿ ಸಮಾನವಾಗಿ ಬೆಳೆಯುತ್ತಿರೋದು ಹೆಮ್ಮೆಯ ವಿಷಯ. ಅವರಿಗೆಲ್ಲಾ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯ..
ಇದನ್ನೂ ಓದಿ: ಮರಳಿನಲ್ಲಿ ಅರಳಿದ ಮಹಿಳಾ ಪ್ರಪಂಚ