ETV Bharat / entertainment

'ಗುಂಟೂರ್ ಕಾರಂ'ನಿಂದ ಹೊರಬಂದ ಪೂಜಾ ಹೆಗ್ಡೆ​​: ಮಹೇಶ್ ಬಾಬು ಜೊತೆ ಸ್ಕ್ರೀನ್​ ಶೇರ್ ಮಾಡಿಲಿರುವ ನಟಿ ಯಾರು? - ಮಹೇಶ್ ಬಾಬು

ಸಿನಿಮಾ ಡೇಟ್ಸ್ ಕೊರತೆ ಹಿನ್ನೆಲೆ 'ಗುಂಟೂರ್ ಕಾರಂ' ನಿಂದ ನಟಿ ಪೂಜಾ ಹೆಡ್ಗೆ ಹೊರ ಬಂದಿದ್ದಾರೆ ಎಂಬ ಮಾಹಿತಿ ಇದೆ.

Pooja Hegde leaves from Guntur Kaaram movie
'ಗುಂಟೂರ್ ಕಾರಂ'ನಿಂದ ಹೊರಬಂದ ಪೂಜಾ ಹೆಗ್ಡೆ​​
author img

By

Published : Jun 20, 2023, 5:32 PM IST

ಟಾಲಿವುಡ್​​ ಸೂಪರ್​ ಸ್ಟಾರ್​ ಮಹೇಶ್ ಬಾಬು ಅಭಿನಯದ, ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಮುಂಬರುವ ಚಿತ್ರ 'ಗುಂಟೂರ್ ಕಾರಂ' ವಿವಿಧ ಕಾರಣಗಳಿಂದಾಗಿ ಸದ್ದು ಮಾಡುತ್ತಿದೆ. ಚಲನಚಿತ್ರದ ಬಿಡುಗಡೆಯ ದಿನಾಂಕ, ಕಥಾಹಂದರ ಮತ್ತು ಸಂಗೀತ ನಿರ್ದೇಶಕರಲ್ಲೂ ಬದಲಾವಣೆಗಳನ್ನು ಮಾಡಲಾಗಿದೆ. ಇದೀಗ ನಾಯಕಿ ಪೂಜಾ ಹೆಗ್ಡೆ ಕೂಡ ಚಿತ್ರದಿಂದ ಹೊರಗುಳಿಯುವ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ವರದಿಗಳು ಮುನ್ನೆಲೆಗೆ ಬಂದಿವೆ.

'ಗುಂಟೂರ್ ಕಾರಂ' ಚಿತ್ರತಂಡಕ್ಕೆ ಹತ್ತಿರವಿರುವ ಮೂಲಗಳ ಪ್ರಕಾರ, ಗುಂಟೂರು ಕಾರಂನ ಶೂಟಿಂಗ್ ವೇಳಾಪಟ್ಟಿ ನಿರಂತರವಾಗಿ ಬದಲಾಗುತ್ತಿದೆ. ತಂಡವು ಕೆಲವು ಸೀಕ್ವೆನ್ಸ್​ಗಳ ಚಿತ್ರೀಕರಣ ಮಾಡುತ್ತಿದೆ. ಮುಂದಿನ ವೇಳಾಪಟ್ಟಿಗಾಗಿ ನಟರ ಸಮಯ ನೋಡುತ್ತಿದೆ. ಆದರೆ ವಿವಿಧ ಕಾರಣಗಳಿಂದ ಚಿತ್ರೀಕರಣ ವಿಳಂಬವಾಗುತ್ತಿದೆ. ಈಗಾಗಲೇ ಚಿತ್ರೀಕರಣಗೊಂಡ ಕೆಲವು ಭಾಗಗಳು ರೀಶೂಟ್ ಮೋಡ್‌ಗೆ ಮರಳುತ್ತಿವೆ ಎಂದು ಬಹಿರಂಗಪಡಿಸಿದೆ.

ಆಗಾಗ್ಗೆ ಸಂಭವಿಸಿದ ಸ್ಕ್ರಿಪ್ಟ್ ಮಾರ್ಪಾಡುಗಳ ಪರಿಣಾಮವಾಗಿ ಅನೇಕ ಜನರು ಚಲನಚಿತ್ರದಿಂದ ಹಿಂದೆ ಸರಿದರು. ಹಲವಾರು ತೊಡಕುಗಳ ನಂತರ, ಪೂಜಾ ಹೆಗ್ಡೆ ಅಂತಿಮವಾಗಿ ದಿನಾಂಕದ ಸಮಸ್ಯೆಗಳನ್ನು ಉಲ್ಲೇಖಿಸಿ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಜೂನ್ ಮತ್ತು ಡಿಸೆಂಬರ್ ನಡುವೆ ಹಲವಾರು ಇತರೆ ಚಿತ್ರಗಳಲ್ಲಿ ಕೆಲಸ ಮಾಡಲು ಪೂಜಾ ಯೋಜಿಸಿದ್ದಾರೆ. ಹಾಗಾಗಿ ಗುಂಟೂರು ಕಾರಂ ಸಿನಿಮಾದಲ್ಲಿ ಮುಂದುವರಿಯುವ ಅವರ ನಿರ್ಧಾರವು ಆ ಯೋಜನೆಗಳಿಗೆ ಅಡ್ಡಿಯಾಗುತ್ತದೆ ಎಂದು ಮೂಲವು ತಿಳಿಸಿದೆ. ಇನ್ನು ನಟಿ ಪೂಜಾ ಹೆಗ್ಡೆ ಜಾಗದಲ್ಲಿ ಯಾರು ನಟಿಸಲಿದ್ದಾರೆ ಎಂಬ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ.

ಇದನ್ನೂ ಓದಿ: Adipurush: 'ಆದಿಪುರುಷ್​​' ಸಿನಿಮಾ ಬ್ಯಾನ್​ ಮಾಡುವಂತೆ ಪ್ರಧಾನಿ ಮೋದಿಗೆ ಪತ್ರ: ನೇಪಾಳದ ಕ್ಷಮೆಯಾಚಿಸಿದ ಚಿತ್ರತಂಡ

ನಿರ್ಗಮಿಸುವ ಮೊದಲು ನಿರ್ಮಾಪಕರು ಮತ್ತು ನಿರ್ದೇಶಕರೊಂದಿಗೆ ಈ ವಿಷಯಗಳ ಬಗ್ಗೆ ಪೂಜಾ ಹೆಗ್ಡೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪೂಜಾ ಮುಂದೆ ತೆಲುಗು ಮತ್ತು ಹಿಂದಿ ಭಾಷೆಯ ಇತರೆ ಚಿತ್ರಗಳಲ್ಲಿ ನಟಿಸುವತ್ತ ತಮ್ಮ ಗಮನವನ್ನು ಹರಿಸಲಿದ್ದಾರೆ. ಪೂಜಾ ಜೊತೆಗೆ, ಸಂಗೀತ ನಿರ್ದೇಶಕ ಥಮನ್ ಸಹ ಸಿನಿಮಾದಲ್ಲಿ ತೊಡಗಿಸಿಕೊಂಡಿಲ್ಲ. ಅನಿರುದ್ಧ್ ರವಿಚಂದರ್ ಅವರನ್ನು ತಂಡಕ್ಕೆ ಕರೆತರಲು ತಯಾರಿ ನಡೆಯುತ್ತಿದೆ ಎಂಬ ವದಂತಿಗಳಿವೆ.

ಇದನ್ನೂ ಓದಿ: Mega Princess: ತಂದೆಯಾದ ರಾಮ್​ ಚರಣ್​: ಮಗು ನೋಡಲು ಆಸ್ಪತ್ರೆಗೆ ಬಂದ ಅಲ್ಲು ಅರ್ಜುನ್

ಮಹೇಶ್ ಬಾಬು ನಟನೆಯ ಮುಂಬರುವ ಈ ಬಹುನಿರೀಕ್ಷಿತ ಸಿನಿಮಾವಾಗಿ ತಾತ್ಕಾಲಿಕವಾಗಿ SSMB28 ಎಂದು ಹೆಸರಿಡಲಾಗಿತ್ತು. ಇತ್ತೀಚೆಗಷ್ಟೇ ಚಿತ್ರದ ಫೈನಲ್​​ ಟೈಟಲ್​​ ಅನಾವರಣಗೊಂಡಿದೆ. 'ಗುಂಟೂರು ಕಾರಂ'​​ ಮಹೇಶ್ ಬಾಬು ಸಿನಿಮಾದ ಅಂತಿಮ ಶೀರ್ಷಿಕೆ. ಈ ಮಾಸ್​​ ಸಿನಿಮಾ ಮುಂದಿನ ವರ್ಷ ಜನವರಿ 13 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಶೀರ್ಷಿಕೆಯೇ ಹೇಳುವಂತೆ ಚಿತ್ರದಲ್ಲಿ ಸ್ಟೈಲಿಶ್​ ಸ್ಟಾರ್ ಸಖತ್ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇತ್ತೀಚೆಗಷ್ಟೇ ಮಹೇಶ್​ ಬಾಬು ಅವರ ತಂದೆ, ದಿ. ನಟ ಕೃಷ್ಣ ಅವರ ಜನ್ಮದಿನೋತ್ಸವ ಸಂದರ್ಭ ತಮ್ಮ ಚಿತ್ರದ ಶೀರ್ಷಿಕೆ ಮತ್ತು ಟೀಸರ್ ಹಂಚಿಕೊಳ್ಳುವ ಮೂಲಕ ಮಹೇಶ್​ ಬಾಬು ತಂದೆಗೆ ವಿಶೇಷ ಗೌರವ ಸಲ್ಲಿಸಿದ್ದರು. ಟೀಸರ್ ಕೂಡ ಸಖತ್​ ಮಾಸ್​ ಆಗಿ ಮೂಡಿ ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.