ETV Bharat / entertainment

'ಪೊನ್ನಿಯಿನ್‌ ಸೆಲ್ವನ್‌' ಮಣಿರತ್ನಂ ಅವರ ಕನಸಿನ ಸಿನಿಮಾ: ನಟ ವಿಕ್ರಮ್

ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದಲ್ಲಿ ಮೂಡಿ ಬಂದಿರುವ ಬಹುನಿರೀಕ್ಷಿತ ʼಪೊನ್ನಿಯಿನ್‌ ಸೆಲ್ವನ್‌ʼ ಸಿನಿಮಾ ಸೆ.30ಕ್ಕೆ ತೆರೆ ಮೇಲೆ ಅಪ್ಪಳಿಸಲು ಸಜ್ಜಾಗಿದೆ. ಸದ್ಯ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವ ಚಿತ್ರತಂಡ ಗುರುವಾರ ಬೆಂಗಳೂರಿಗೆ ಆಗಮಿಸಿದ್ದು, ಸುದ್ದಿಗೋಷ್ಟಿ ನಡೆಸಿತು.

Ponniyin selvan movie team
'ಪೊನ್ನಿಯಿನ್‌ ಸೆಲ್ವನ್‌' ಪ್ರಚಾರಕ್ಕೆ ಬೆಂಗಳೂರಿಗೆ ಬಂದ ಚಿತ್ರತಂಡ
author img

By

Published : Sep 23, 2022, 8:19 AM IST

ಭಾರತೀಯ ಚಿತ್ರರಂಗದಲ್ಲಿ ಬಹುನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಪ್ಯಾನ್‌ ಇಂಡಿಯಾ ಚಿತ್ರ ತಮಿಳಿನ 'ಪೊನ್ನಿಯಿನ್‌ ಸೆಲ್ವನ್‌'. ಮಣಿರತ್ನಂ ನಿರ್ದೇಶನ ಮಾಡಿರುವ ಈ ಚಿತ್ರ ಈಗಾಗಲೇ ಟೀಸರ್‌ ಮತ್ತು ಟ್ರೈಲರ್‌ಗಳ ಮೂಲಕವೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಕನ್ನಡ, ತಮಿಳು, ‌ತೆಲುಗು, ಹಿಂದಿ, ಮಲಯಾಳಂ ಭಾಷೆಯಲ್ಲಿ ಈ‌ ಸಿನಿಮಾ ಇದೇ ತಿಂಗಳು 30ಕ್ಕೆ ವಿಶ್ವಾದ್ಯಂತ ತೆರೆ ಕಾಣಲಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಪ್ರಚಾರಕ್ಕಾಗಿ ನಟ ವಿಕ್ರಮ್, ಕಾರ್ತೀ ,‌ ಜಯಂ ರವಿ, ತ್ರಿಶಾ, ಐಶ್ವರ್ಯ ಲಕ್ಷ್ಮೀ ಸೇರಿದಂತೆ ಚಿತ್ರತಂಡ ಬೆಂಗಳೂರಿಗೆ ಬಂದು ಈ ಸಿನಿಮಾದ ವಿಶೇಷತೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡರು.

'ಪೊನ್ನಿಯಿನ್‌ ಸೆಲ್ವನ್‌' ಪ್ರಚಾರಕ್ಕೆ ಬೆಂಗಳೂರಿಗೆ ಬಂದ ಚಿತ್ರತಂಡ

ಇದನ್ನೂ ಓದಿ: ಪೊನ್ನಿಯಿನ್ ಸೆಲ್ವನ್-1.. ಐಶ್ವರ್ಯಾ ರೈ ಬಚ್ಚನ್​, ತ್ರಿಶಾ ಫಸ್ಟ್ ಲುಕ್ ರಿವೀಲ್

ನಟ ವಿಕ್ರಮ್ ಕನ್ನಡದಲ್ಲಿ ಮಾತನಾಡುವ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರ ಗಮನ‌ ಸೆಳೆದರು. ಇದು ಮಣಿರತ್ನಂ ಅವರ 'ಕನಸಿನ ಸಿನಿಮಾ'. ಈ ಸಿನಿಮಾ ಕೇವಲ ತಮಿಳು ಭಾಷೆಗೆ ಸೀಮಿತ ಅಲ್ಲ. ಕಾದಂಬರಿ ಆಧಾರಿತ ಇತಿಹಾಸದ ಜೊತೆಗೆ ಫ್ಯಾಂಟಸಿ ಕಥೆ. 1955ರಲ್ಲಿ ಚೋಳರ ಆಳ್ವಿಕೆಯ ಸುತ್ತ ಹಾಗೂ ತಮಿಳುನಾಡಿನ ಸಂಸ್ಕೃತಿ ಮತ್ತು ಪರಂಪರೆಗೆ ಸಂಬಂಧಿಸಿದ ಸಿನಿಮಾ. 500 ವರ್ಷಗಳ ಹಿಂದೆ ನಿಮ್ಮನ್ನೆಲ್ಲ ಕರೆದುಕೊಂಡು ಹೋಗಲಿದೆ. ಈ ಚಿತ್ರದಲ್ಲಿ ಹೆಣ್ಣು ಮಕ್ಕಳಿಗೆ ಸಮಾನವಾದ ಹಕ್ಕು ಇದೆ. ನಾನು ಚಿಕ್ಕವನಿದ್ದಾಗ ಓದಿದ ಕಥೆಗೆ ಇದೀಗ ಹೀರೋ ಆಗಿ ಅಭಿನಯಿಸುತ್ತಿದ್ದೇನೆ ಎಂದರು.

ನಟ ಜಯಂ ರವಿ ಮಾತನಾಡಿ, ಬೆಂಗಳೂರಿಗೂ ನನಗೆ ತುಂಬಾ ಹತ್ತಿರದ ನಂಟು. ಯಾಕೆಂದರೆ ನನ್ನ ಸ್ನೇಹಿತರು ಬೆಂಗಳೂರಿನಲ್ಲಿ ತುಂಬಾ ಜನ‌ ಇದ್ದಾರೆ‌. ನಮ್ಮ ಸಿನಿಮಾ ಪ್ರಮೋಷನ್​​ಗಾಗಿ ಬೆಂಗಳೂರಿಗೆ ಬಂದಿರುವುದು ಖುಷಿ ತಂದಿದೆ ಎಂದರು. ನಟ ಕಾರ್ತೀ ಮಾತನಾಡಿ, ಈಗಾಗಲೇ ಬಾಹುಬಲಿ, ಕೆಜಿಎಫ್ ಅಂತಹ ಪ್ಯಾನ್ ಇಂಡಿಯಾ ಸಿನಿಮಾಗಳು ಬಂದಿದೆ.‌ ಆ ರೀತಿಯ ಒಂದು ಕಥೆ ಪೊನ್ನಿಯಿನ್‌ ಸೆಲ್ವನ್‌ ಸಿನಿಮಾ. ಇದು ಮಣಿರತ್ನಂ ಅವರ 40 ವರ್ಷಗಳ ಕನಸು. ಇಂತಹ ಸಿನಿಮಾದಲ್ಲಿ ನಾನು ಒಂದು ಭಾಗ ಆಗಿರುವುದು ಹೆಮ್ಮೆ ಇದೆ ಎಂದರು.

ಈ ಚಿತ್ರದಲ್ಲಿ ಹೆಣ್ಣು ಮಕ್ಕಳಿಗೆ ಸಮಾನವಾದ ಪಾತ್ರಗಳು ಇವೆ. ಈ ಚಿತ್ರದಲ್ಲಿ ನಾನು ಕೂಡ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆಂದು ನಟಿ ತ್ರಿಶಾ ಹರ್ಷ ವ್ಯಕ್ತಪಡಿಸಿದರು‌.

ಇದನ್ನೂ ಓದಿ: ವಿಕ್ರಮ್​ ನಟನೆಯ 'ಪೊನ್ನಿಯಿನ್​ ಸೆಲ್ವನ್​​' ಚಿತ್ರದ ಟೀಸರ್​ ರಿಲೀಸ್ ಮಾಡಿದ ರಕ್ಷಿತ್ ಶೆಟ್ಟಿ

ಈಗಾಗಲೇ ಆರ್​ಆರ್​​ಆರ್​​, ಪುಷ್ಪ ಸಿನಿಮಾಗಳಿಗೆ ಕನ್ನಡದಲ್ಲಿ ಡಬ್ಬಿಂಗ್ ಮಾಡಿ ಗಮನ‌ ಸೆಳೆದಿರುವ ವರದರಾಜ್ ಚಿಕ್ಕಬಳ್ಳಾಪುರ ಈ ಪೊನ್ನಿಯಿನ್‌ ಸೆಲ್ವನ್‌ ಚಿತ್ರಕ್ಕೆ ಕನ್ನಡದ ಡಬ್ಬಿಂಗ್ ಮಾಡುವ ಹೊಣೆ ಹೊತ್ತಿದ್ದಾರೆ. ಆದರೆ, ಕನ್ನಡದಲ್ಲಿ ವಿಕ್ರಮ್ ಕಾರ್ತೀ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿಲ್ಲ. ಮುಂದಿನ ಸಿನಿಮಾಗೆ ಕನ್ನಡ ಕಲಿತು ನನ್ನ ಪಾತ್ರಕ್ಕೆ ಡಬ್ಬಿಂಗ್ ಮಾಡುತ್ತೇನೆಂದು ವಿಕ್ರಮ್ ಹಾಗೂ ಕಾರ್ತೀ ಭರವಸೆ ನೀಡಿದರು.

ಚಿತ್ರದಲ್ಲಿ ವಿಕ್ರಮ್, ಕಾರ್ತೀ‌,‌ಜಯಂ ರವಿ, ತ್ರಿಶಾ, ಐಶ್ವರ್ಯ ಲಕ್ಷ್ಮೀ , ಅಲ್ಲದೇ ಬಾಲಿವುಡ್ ನಟಿ ಐಶ್ವರ್ಯ ರೈ, ಪ್ರಕಾಶ್ ರೈ, ಶರತ್ ಕುಮಾರ್, ಕನ್ನಡದ ‌ನಟ‌ ಕಿಶೋರ್, ಜಯರಾಮ್, ವಿಕ್ರಮ್ ಪ್ರಭು ಹೀಗೆ ದೊಡ್ಡ ತಾರಬಳಗವಿದೆ.

ಇದನ್ನೂ ಓದಿ: 2022ರಲ್ಲಿ ತೆರೆಗೆ ಬರಲಿದೆ ಮಣಿರತ್ನಂ ಅವರ 'ಪೊನ್ನಿಯಿನ್ ಸೆಲ್ವನ್' ಭಾಗ-1

ETV Bharat Logo

Copyright © 2024 Ushodaya Enterprises Pvt. Ltd., All Rights Reserved.