ETV Bharat / entertainment

ಭರದಿಂದ ಸಾಗಿರುವ ಮಣಿರತ್ನಂ ನಿರ್ದೇಶನ ಪೊನ್ನಿಯಿನ್​ ಸೆಲ್ವನ್​ 2 ಚಿತ್ರದ ಚಿತ್ರೀಕರಣ: ನಟರಿಂದ ಬಿಸಿ-ಬಿಸಿ ಚರ್ಚೆ - ಪೊನ್ನಿಯಿನ್​ ಸೆಲ್ವನ್​ 2 ಚಿತ್ರದ ಚಿತ್ರೀಕರಣ

ಭರದಿಂದ ಸಾಗಿರುವ ಮಣಿರತ್ನಂ ನಿರ್ದೇಶನ ಪೊನ್ನಿಯಿನ್​ ಸೆಲ್ವನ್​ 2 ಚಿತ್ರದ ಚಿತ್ರೀಕರಣ - ಶೀಘ್ರದಲ್ಲೇ ತೆರೆಗೆ ಅಪ್ಪಳಿಸಲಿರುವ ಅದ್ಧೂರಿ ವೆಚ್ಚದ ಚಿತ್ರ - ಸಿನಿಮಾ ಬಗ್ಗೆ ಚಿತ್ರ ನಟರಿಂದ ಚರ್ಚೆ

Ponniyin Selvan
ಪೊನ್ನಿಯಿನ್​ ಸೆಲ್ವನ್​
author img

By

Published : Mar 1, 2023, 8:22 PM IST

ನಿರ್ದೇಶಕ ಮಣಿರತ್ನಂ ಆ್ಯಕ್ಷನ್​ ಕಟ್​ ಹೇಳಿರುವ ಪೊನ್ನಿಯಿನ್​ ಸೆಲ್ವನ್​ 1 ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿ ಅದ್ಭುತ ಯಶಸ್ಸು ಕಂಡಿತ್ತು. ಚಿತ್ರದ ಯಶಸ್ಸಿನ ಬೆನ್ನಲ್ಲೆ ಪೊನ್ನಿಯಿನ್​ ಸೆಲ್ವನ್ 2 ಚಿತ್ರ ನಿರ್ಮಾಣ ಮಾಡುವ ಬಗ್ಗೆಯೂ ಹೇಳಿಕೊಂಡಿತ್ತು. ಚಿತ್ರದ ಸೀಕ್ವೆಲ್​ ತಯಾರಾಗಿದ್ದು, ಸಿನಿಮಾ ಬಿಡುಗಡೆಯ ದಿನಾಂಕವೂ ಘೋಷಣೆಯಾಗಿದೆ. ಸಿನಿಮಾ ಏಪ್ರಿಲ್​ 28 ರಂದು ದೇಶಾದ್ಯಂತ ತೆರೆಗೆ ಬರಲಿದೆ. ಬಿಡುಗಡೆ ಹಂತಕ್ಕೆ ತಲುಪಿರುವ ಖುಷಿಯಲ್ಲಿ ಚಿತ್ರತಂಡ ಇದೀಗ ಪೊನ್ನಿಯಿನ್​ ಸೆಲ್ವನ್​ ಚಿತ್ರೀಕರಣದ ತೆರೆಮರೆಯ ದೃಶ್ಯಗಳು ಹಾಗೂ ಸಿನಿಮಾದ ಕಥಾವಸ್ತುವಿನ ಬಗ್ಗೆ ಚಿತ್ರದ ನಟರು ಚರ್ಚಿಸುತ್ತಿರುವ ವಿಡಿಯೋವೊಂದನ್ನು ಯೂಟ್ಯೂಬ್​ ಹಾಗೂ ಟ್ವಿಟರ್​ನಲ್ಲಿ ಹಂಚಿಕೊಂಡಿದೆ.

  • " class="align-text-top noRightClick twitterSection" data="">

ವಿಡಿಯೋದಲ್ಲಿ ಪೊನ್ನಿಯಿನ್​ ಸೆಲ್ವನ್​ 2ರ ದೃಶ್ಯಗಳ ಚಿತ್ರೀಕರಣ ಹಾಗೂ ಸಿನಿಮಾದ ಕಥಾವಸ್ತುವಿನ ಬಗ್ಗೆ ನಟರು ಚರ್ಚಿಸುತ್ತಿರುವುದನ್ನು ಕಾಣಬಹುದು. ಚಿತ್ರದ ಬಗ್ಗೆ ಮಾತನಾಡುತ್ತಿರುವ ನಟರು ಕೆಲವೊಂದು ಕುತೂಹಲ ಕೆಲರಳಿಸುವಂತಹ ವಿಷಯಗಳನ್ನು ಹೇಳಿ, ಸಿನಿಪ್ರೇಕ್ಷಕರಿಗೆ ಯೋಚನೆಗೆ ಹತ್ತಿಸಿದ್ದಾರೆ. ಮಣಿರತ್ನಂ ಅವರ ಬಹುನಿರೀಕ್ಷಿತ ಕ್ಲಾಸಿಕ್​ ಸಿನಿಮಾ 'ಪೊನ್ನಿಯಿನ್​ ಸೆಲ್ವನ್​' ನಲ್ಲಿ ವಂತಿಯ ದೇವನ್​ ಪಾತ್ರದಲ್ಲಿ ಅಭಿನಯಿಸುತ್ತಿರುವ ನಟ ಕಾರ್ತಿಕ್​, 'ನೀವು ಹಿಂದೆಂದೂ ನೋಡಿರದ ವಿಷಯಗಳಿಗೆ ನೀವು ಸಾಕ್ಷಿಯಾಗುತ್ತೀರಿ' ಎನ್ನುವ ಮೂಲಕ ಹೋಸತೇನೋ ಇದೆ ಎನ್ನುವ ಹಿಂಟ್​ ಕೊಟ್ಟಿದ್ದಾರೆ.

ಪೊನ್ನಿಯಿನ್​ ಸೆಲ್ವನ್​ 2 ರ ಕಥಾವಸ್ತುವಿನ ಬಗ್ಗೆ ಚರ್ಚಿಸುತ್ತಿರುವ ನಟ ಜಯಂ ರವಿ, 'ತಮ್ಮ ಪಾತ್ರ ಅಂದರೆ ಪೊನ್ನಿಯಿನ್​ ಸೆಲ್ವನ್​ ಸತ್ತಿರಬಹುದು' ಎಂದು ಹೇಳುವ ಮೂಲಕ ಪ್ರೇಕ್ಷಕರ ಕುತೂಹಲಕ್ಕೆ ಮತ್ತಷ್ಟು ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ. ಚಿತ್ರ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್​ ತನ್ನ ಅಧಿಕೃತ ಯೂಟ್ಯೂಬ್​ ಚಾನೆಲ್​ನಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ.

ಪೊನ್ನಿಯಿನ್​ ಸೆಲ್ವನ್​- 1ರ ಗ್ರ್ಯಾಂಡ್​ ಸಕ್ಸಸ್​ನ ನಂತರ ಚಿತ್ರತಂಡ ಸೀಕ್ವೆಲ್​ನೊಂದಿಗೆ ಚಿತ್ರಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ಸ್​ ತಮ್ಮ ಟ್ವಿಟರ್​ ಖಾತೆಯಲ್ಲಿ ಚಿತ್ರದ ಟ್ರೈಲರ್​ ಬಿಡುಗಡೆ ಮಾಡಿ, ಚಿತ್ರ ಬಿಡುಗಡೆಯ ದಿನಾಂಕವನ್ನೂ ಘೋಷಿಸಿತ್ತು. ಸಿನಿಮಾದಲ್ಲಿ ವಿಕ್ರಮ್, ತೃಷಾ ಅವರ ಜೊತೆಗೆ ಜಯಂ ರವಿ, ಐಶ್ವರ್ಯ ರೈ ಬಚ್ಚನ್​, ಕಾರ್ತಿಕ್​ ಶಿವಕುಮಾರ್​ ಮುಂತಾದವರು ಅಭಿನಯಿಸಿದ್ದಾರೆ. ಮಣಿರತ್ಮ ಅವರ ಸಾರಥ್ಯದಲ್ಲಿ ಮೂಡಿ ಬಂದಿರುವ ಈ ಸಿನಿಮಾಕ್ಕೆ ಸಂಗೀತ ಮಾಂತ್ರಿಕ ಎ ಆರ್​ ರೆಹಮಾನ್​ ಸಂಗೀತ ನಿರ್ದೇಶನ ಮಾಡಿದ್ದಾರೆ.

1950 ರ ದಶಕದಲ್ಲಿ ಸರಣಿಯಾಗಿ ಪ್ರಕಟವಾದ ಲೇಖಕ ಕಲ್ಕಿ ಕೃಷ್ಣಮೂರ್ತಿಯವರ ಅದೇ ಹೆಸರಿನ ತಮಿಳು ಕಾದಂಬರಿಯನ್ನು 'ಪೊನ್ನಿಯಿನ್ ಸೆಲ್ವನ್-ಭಾಗ 1' ರಲ್ಲಿ ಮಣಿರತ್ನಂ ಅವರು ದೊಡ್ಡ ಪರದೆಗೆ ತಂದಿದ್ದಾರೆ. ಮಣಿರತ್ಮಂ ಅವರದೇ ನಿರ್ದೇಶನದ 2010ರಲ್ಲಿ ಬಿಡುಗಡೆಯಾದ 'ರಾವಣ' ಸಿನಿಮಾದಲ್ಲಿ ವಿಕ್ರಮ್​ ಹಾಗೂ ಐಶ್ವರ್ಯಾ ರೈ ಬಚ್ಚನ್​ ಜೊತೆಯಾಗಿ ನಟಿಸಿದ್ದರು. ಅದಾದ ನಂತರ ಪೊನ್ನಿಯಿನ್​ ಸೆಲ್ವನ್​ ಸಿನಿಮಾದಲ್ಲಿ ಇಬ್ಬರೂ ಜೊತೆಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ನಿರ್ದೇಶಕ ಮಣಿರತ್ನಂ, ಎ ಸುಬಾಸ್ಕರನ್​ ಹಾಗೂ ಸುಹಾಸಿನಿ ಮಣಿರತ್ನಂ ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ: ಸಾಗರದಾಚೆ ಭಾರತೀಯ ಸಿನಿಮಾ​ ಸದ್ದು: ಅಮೆರಿಕದ ಥಿಯೇಟರ್​ನಲ್ಲಿಂದು ಆರ್​ಆರ್​ಆರ್​ ಶೋ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.