ಹೈದರಾಬಾದ್: ಅಪಾರ ಸಂಖ್ಯೆಯ ಪ್ರೇಕ್ಷಕರ ಕಾತರ ಕೊನೆಗೊಂಡಿದೆ. ಫೈನಲಿ ಬಹುನಿರೀಕ್ಷಿತ 'ಸಲಾರ್' ಸಿನಿಮಾ ತೆರೆಗಪ್ಪಳಿಸಿದೆ. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಹಾಗೂ ಪಾಪ್ಯುಲರ್ ಡೈರೆಕ್ಟರ್ ಪ್ರಶಾಂತ್ ನೀಲ್ ಕಾಂಬೋದ ಸಿನಿಮಾ ವೀಕ್ಷಿಸಲು ಚಿತ್ರಮಂದಿರಗಳತ್ತ ಸಿನಿಪ್ರಿಯರು ಮುಗಿಬಿದ್ದಿದ್ದಾರೆ. ಥಿಯೇಟರ್ಗಳೆದುರು ಪ್ರೇಕ್ಷಕರ ನಿಯಂತ್ರಣ ಕಾರ್ಯದಲ್ಲಿ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಹೈದರಾಬಾದ್‌ನ ಥಿಯೇಟರ್ ಒಂದರ ಬಳಿ ಪೊಲೀಸರು ಲಾಠಿ ಚಾರ್ಜ್ ಕೂಡ ನಡೆಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.
ದೇಶಾದ್ಯಂತ ''ಸಲಾರ್'' ಸಖತ್ ಸದ್ದು ಮಾಡುತ್ತಿದೆ. ಹೆಚ್ಚಿನ ಸಂಖ್ಯೆಯ ಸಿನಿಪ್ರಿಯರು, ಪ್ರಭಾಸ್ ಅಭಿಮಾನಿಗಳು ಚಿತ್ರಮಂದಿರಗಳತ್ತ ಜಮಾಯಿಸಿದ್ದಾರೆ. ಪ್ರಭಾಸ್ ಅವರ ಪ್ರದೇಶವಾದ ಹೈದರಾಬಾದ್ ಕೂಡ ಇದಕ್ಕೆ ಹೊರತಾಗಿಲ್ಲ. ನಿಜಾಮ್ ಪ್ರದೇಶದಲ್ಲಿ ಸಲಾರ್ ಕ್ರೇಜ್ ಕೊಂಚ ಜೋರು ಅಂತಲೇ ಹೇಳಬಹುದು. ಪ್ಯಾನ್ ಇಂಡಿಯಾ ಸಿನಿಮಾವನ್ನು ಪ್ರಭಾಸ್ ಅಭಿಮಾನಿಗಳು ಬಹಳ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಅದಾಗ್ಯೂ, ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳ ಸುತ್ತ ನಡೆದ ಸೆಲೆಬ್ರೇಶನ್ಗಳು ಅಧಿಕಾರಿಗಳಿಗೆ ದೊಡ್ಡ ಸಲಾವಾಗಿ ಮಾರ್ಪಟ್ಟಿತು. ಮಧ್ಯರಾತ್ರಿ 1:00ಕ್ಕೆ ಫ್ಯಾನ್ಸ್ ಶೋಗಳು ಪ್ರಾರಂಭವಾದವು. ಈ ಹಿನ್ನೆಲೆ, ಪ್ರೇಕ್ಷಕರ ನಿಯಂತ್ರಣದಲ್ಲಿ ತೊಂದರೆ ಎದುರಾಗಿತ್ತು.
ಸಲಾರ್ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದ್ದಂತೆ ಪ್ರಭಾಸ್ ಅಭಿಮಾನಿಗಳ ಉತ್ಸಾಹ ಮುಗಿಲು ಮುಟ್ಟಿತ್ತು. ದಕ್ಷಿಣ ಚಿತ್ರರಂಗದ ಬಹುಬೇಡಿಕೆ ನಟನ ಹಿಂದಿನ ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಾಣಲಿಲ್ಲ. ಈ ಹಿನ್ನೆಲೆ ಸಲಾರ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಸಿನಿಮಾವನ್ನು ಗೆಲ್ಲಿಸಲು ಹೊರಟಿರುವ ಅಭಿಮಾನಿಗಳು ಚಿತ್ರಮಂದಿರಗಳತ್ತ ದಾಂಗುಡಿ ಇಟ್ಟಿದ್ದು , ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋಗಳು ವೈರಲ್ ಆಗುತ್ತಿವೆ. ಹೈದರಾಬಾದ್‌ನ ಆರ್‌ಟಿಸಿ ಎಕ್ಸ್ ರೋಡ್‌ನಲ್ಲಿರುವ ಹೆಸರಾಂತ ಸಂಧ್ಯಾ ಥಿಯೇಟರ್‌ನಲ್ಲಿ ಪಬ್ಲಿಕ್ ಸೆಲೆಬ್ರೇಶನ್ ಅನ್ನು ಫ್ಯಾನ್ಸ್ ಆಯೋಜಿಸಿದ್ದರು. ದೊಡ್ಡ ಸಂಖ್ಯೆಯಲ್ಲಿ ಉಪಸ್ಥಿತರಿದ್ದ ಪ್ರೇಕ್ಷಕರನ್ನು ಚದುರಿಸಲು ಸ್ಥಳೀಯ ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು. 1:00AM ಬೆನಿಫಿಟ್ ಶೋಗಾಗಿ ಅಪಾರ ಪ್ರೇಕ್ಷಕರು ಜಮಾಯಿಸಿದ್ದರು. ಈ ಹಿನ್ನೆಲೆ ಥಿಯೇಟರ್ ಆವರಣದ ಹೊರಗೆ ಗೊಂದಲ ಉಂಟಾಗಿತ್ತು.
ಇದನ್ನೂ ಓದಿ: ಚಿತ್ರಮಂದಿರಗಳಲ್ಲಿ 'ಸಲಾರ್' ಅಬ್ಬರ: ಸಿನಿಪ್ರಿಯರಿಂದ ಭಾರಿ ಮೆಚ್ಚುಗೆ
ದಕ್ಷಿಣ ಚಿತ್ರರಂಗದ ಹೆಸರಾಂತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿರುವ ಸಲಾರ್ ಸಿನಿಮಾವನ್ನು ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ಕಾಲ್ಪನಿಕ ಹಿಂಸಾತ್ಮಕ ನಗರವಾದ ಖಾನ್ಸಾರ್‌ನಲ್ಲಿ ನಡೆಯೋ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಇಬ್ಬರು ಬಾಲ್ಯ ಸ್ನೇಹಿತರು ಪರಮಶತ್ರುಗಳಾಗೋ ಕಥೆಯೇ ಈ ಸಿನಿಮಾದ ಜೀವಾಳ.
ಇದನ್ನೂ ಓದಿ: 500 ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಶಾರುಖ್ ಖಾನ್ ಸೇರಿ ಹಲವು ಭಾರತೀಯರು!