ETV Bharat / entertainment

ಪಠಾಣ್​ ವಿವಾದ ಬೆನ್ನಲ್ಲೇ, ಅನಗತ್ಯ ಟೀಕೆ ಬೇಡ ಕಾರ್ಯಕರ್ತರಿಗೆ ಪ್ರಧಾನಿ ಕಿವಿಮಾತು - ಪ್ರಧಾನಿಗೆ ಮನವಿ ಸಲ್ಲಿಸಿದ್ದ ಬಾಲಿವುಡ್​ ಮಂದಿ

ಪಠಾಣ್​ ಸಿನಿಮಾದ ಕುರಿತು ಟೀಕಿಸಿದ್ದ ಬಿಜೆಪಿ ನಾಯಕರು - ಬಾಯ್ಕಾಟ್ ಬಾಲಿವುಡ್​​ ಟ್ರೆಂಡ್​ ವಿರುದ್ಧ ಸಿಎಂ ಯೋಗಿಗೆ ಸುನೀಲ್​ ಶೆಟ್ಟಿ ಮನವಿ - ಅನಗತ್ಯ ಕಮೆಂಟ್​ ಬೇಡ ಎಂದ ಪ್ರಧಾನಿ

ಪಠಾಣ್​ ವಿವಾದ ಬೆನ್ನಲ್ಲೇ, ಅನಗತ್ಯ ಟೀಕೆ ಬೇಡ ಕಾರ್ಯಕರ್ತರಿಗೆ ಪ್ರಧಾನಿ ಕಿವಿಮಾತು
pm-modi-says-to-bjp-activist-on-unnecessary-remarks
author img

By

Published : Jan 18, 2023, 4:46 PM IST

ನವದೆಹಲಿ: ಶಾರುಖ್​ ಅಭಿನಯದ 'ಪಠಾಣ್​' ಸಿನಿಮಾ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದು, ಸಾಕಷ್ಟು ವಿವಾದ ಮತ್ತು ಚರ್ಚೆ ಮೂಡಿಸಿತು. ಈ ಎಲ್ಲವನ್ನೂ ಗಮನಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅನಗತ್ಯ ಕಮೆಂಟ್​ಗಳಿಂದ ದೂರವಿರುವಂತೆ ಪಕ್ಷದ ಕಾರ್ಯಕರ್ತರು ಮತ್ತು ನಾಯಕರಿಗೆ ಕಿವಿ ಹಿಂಡಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ನಡೆದ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಕೊನೆಯ ದಿನದಲ್ಲಿ ಈ ಕುರಿತು ತಿಳಿಸಿದ್ದಾರೆ.

'ಪಠಾಣ್'​ ಚಿತ್ರದ ಬೇಶಾರಂ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ತೊಟ್ಟಿದ್ದ ಕೇಸರಿ ಬಣ್ಣದ ಬಟ್ಟೆ ವಿರುದ್ಧ ಬಿಜೆಪಿ ನಾಯಕರಾದ ರಾಮ್​ ಕದಮ್​ ಮತ್ತು ನರೋತ್ತಮ್​ ಮಿಶ್ರಾ ಸೇರಿದಂತೆ ಹಲವು ನಾಯಕರು ಟೀಕಿಸಿದ್ದಾರೆ. ಇದು ಹಿಂದು ಭಾವನೆಗಳಿಗೆ ಧಕ್ಕೆ ತರುತ್ತಿದ್ದು, ಇದರಲ್ಲಿ ನಟಿ ದೀಪಿಕಾ ಮಾದಕತೆ ಹೆಚ್ಚಿದೆ ಎಂಬ ಟೀಕೆಗಳು ಕೇಳಿ ಬಂದಿದ್ದವು. ಅಲ್ಲದೇ, ಈ ಚಿತ್ರವನ್ನು ಬಾಯ್ಕಾಟ್​ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಕೂಡ ಆರಂಭವಾಗಿತ್ತು.

ಯೋಗಿಗೆ ಸುನೀಲ್​ ಶೆಟ್ಟಿ ಮನವಿ:ಬಾಲಿವುಡ್​ನಲ್ಲಿ ಈ ರೀತಿಯ ಬಾಯ್ಕಾಟ್​ ಟ್ರೆಂಡ್​ಗಳು ಹೆಚ್ಚುತ್ತಿರುವ ಹಿನ್ನಲೆ ಈ ಸಂಬಂಧ ನಟ ಸುನೀಲ್​ ಶೆಟ್ಟಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರಿಗೆ ಉದ್ಯಮದಲ್ಲಿ ನಡೆಯುತ್ತಿರುವ ಗಲಾಟೆಗಳ ಕುರಿತು ಸಹಾಯ ಕೇಳಿದ್ದರು. ಈ ಬೆನ್ನಲ್ಲೇ ಪ್ರಧಾನೀ ಮೋದಿ ಅವರು ಕೂಡ ಪಕ್ಷದ ಕಾರ್ಯಕರ್ತರಿಗೆ ಈ ಸಂಬಂಧಿಸಿದಂತೆ ಸೂಚನೆಯನ್ನು ನೀಡಿದ್ದಾರೆ. ಈ ತಿಂಗಳ ಆರಂಭದಲ್ಲಿ ಮುಂಬೈನಲ್ಲಿ ಯೋಗಿ ಆದಿತ್ಯನಾಥ್​ ಅವರನ್ನು ಸುನೀಲ್​ ಶೆಟ್ಟಿ ಭೇಟಿಯಾಗಿದ್ದರು.

ಪ್ರಧಾನಿಗೆ ಮನವಿ ಸಲ್ಲಿಸಿದ್ದ ಬಾಲಿವುಡ್​ ಮಂದಿ: ಬಾಲಿವುಡ್​ ಚಿತ್ರಗಳ ವಿರುದ್ಧ ವ್ಯಕ್ತವಾಗುತ್ತಿರುವ ಪಕ್ಷದ ನಾಯಕರ ಆಕ್ರೋಶ ಹಾಗೂ ಬಾಯ್ಕಾಟ್​ ಬಾಲಿವುಡ್​ ನಂತಹ ಘಟನೆಗಳನ್ನು ನಿಲ್ಲಿಸುವ ಸಂಬಂಧ ಪ್ರಧಾನಿ ಅವರ ಸಹಾಯ ಪಡೆಯಲು ಯೋಗಿ ಆದಿತ್ಯನಾಥ್​ ಅವರಿಗೆ ಮನವಿಯನ್ನು ಸಲ್ಲಿಸಿದ್ದರು ನಟ ಸುನೀಲ್​ ಶೆಟ್ಟಿ. ನಾವು ಉತ್ತಮ ಕೆಲಸಗಳನ್ನು ಮಾಡಿದ್ದೇವೆ ಎಂಬುದನ್ನು ತಿಳಿಸುವುದು ಮುಖ್ಯ. ಒಂದು ಕೊಳೆತ ಹಣ್ಣಿನಿಂದ ಎಲ್ಲವನ್ನೂ ಸರಿಯಲ್ಲ ಎಂದು ನಿರ್ಧರಿಸುವುದು ಉತ್ತಮವಲ್ಲ. ಇಂತಹ ಗ್ರಹಿಕೆಯನ್ನು ಬದಲಾಯಿಸಬೇಕಿದೆ. ನಿಮ್ಮ ನೇತೃತ್ವದಲ್ಲಿ ಈ ಕೆಲಸ ನಡೆಯಲಿ ಈ ಸಂಬಂಧ ಪ್ರಧಾನಿ ಜೊತೆಗೂ ಮಾತನಾಡಿ. ಆಗ ಅದು ದೊಡ್ಡ ವ್ಯತ್ಯಾಸಕ್ಕೆ ಕಾರಣವಾಗುತ್ತದೆ ಎಂದಿದ್ದರು ಬಾಲಿವುಡ್​ ನಟ.

ರಜಪೂತ್​ ಸಾವಿನ ಬಳಿಕ ಬಾಯ್ಕಾಟ್​ ಟ್ರೆಂಡ್​: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಬಳಿಕ ಬಾಯ್ಕಾಟ್​ ಬಾಲಿವುಡ್​ ಹ್ಯಾಷ್​ಟ್ಯಾಗ್​ ಟ್ರೆಂಡ್​ ಆಯ್ತು. 2022ರಲ್ಲಿ ಲಾಲ್​ ಸಿಂಗ್​ ಚಡ್ಡಾ, ಲೈಗರ್​​, ಬ್ರಹ್ಮಾಸ್ತ್ರ ಮತ್ತು ರಕ್ಷಾ ಬಂಧನ್​ ಚಿತ್ರಗಳಲ್ಲೂ ಈ ಟ್ರೆಂಡ್​ ಕಾಣಬಹುದಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಟ್ರೆಂಡ್​ ಸೃಷ್ಟಿಯಾಗುವುದರಿಂದ ಅದು ಸಿನಿಮಾಗಳ ಬಾಕ್ಸ್​ ಆಫೀಸ್​ ಬ್ಯುಸಿನೆಸ್​ ಮೇಲೆ ಪರಿಣಾಮ ಬೀರಲಿದೆ.

ಪಠಾಣ್​ ವಿವಾದ: ಇದೆ ಜನವರಿ 25ರಂದು ಬಿಡುಗಡೆಗೆ ಸಿದ್ದವಾಗಿರುವ ಪಠಾಣ್​ ಸಿನಿಮಾ ವಿರುದ್ಧ ಈಗಾಗಲೇ ಹಲವು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಇದು ಹಿಂದು ಭಾವನೆ ಧಕ್ಕೆ ತರುತ್ತಿದ್ದು, ಈ ಸಿನಿಮಾವನ್ನು ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ನಾಯಕರು ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಬಾಲಿವುಡ್​ಗೆ ಕಾಲಿಟ್ಟ 'ಕಾಂತಾರ' ನಟಿ: ದಿ ವ್ಯಾಕ್ಸಿನ್​ ವಾರ್​ ಚಿತ್ರದಲ್ಲಿ ಸಪ್ತಮಿ ಗೌಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.