ETV Bharat / entertainment

ಚುನಾವಣಾ ಸಮರಕ್ಕೆ 'ವಾರಾಹಿ' ಸಿದ್ಧ.. ಪ್ರಚಾರದ ರಥವೇರಿದ ಪವನ್​ ಕಲ್ಯಾಣ್ - Pawan Kalyan varahi

ಚಿತ್ರನಟ, ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಅವರು ತಮ್ಮ ಚುನಾವಣಾ ಪ್ರಚಾರ ರಥವನ್ನು ಪರಿಚಯಿಸಿದ್ದಾರೆ.

Pawan Kalyan launched Election campaign vehicle varahi
ಚುನಾವಣಾ ಸಮರಕ್ಕೆ 'ವರಾಹಿ' ಸಿದ್ಧ
author img

By

Published : Dec 8, 2022, 10:45 AM IST

ಟಾಲಿವುಡ್​ ಚಿತ್ರರಂಗದ ಸೂಪರ್​ಸ್ಟಾರ್​ ಹಾಗೂ ಜನಸೇನಾ ಪಕ್ಷದ ಅಧ್ಯಕ್ಷ ಪವನ್​ ಕಲ್ಯಾಣ್ ಅವರು ತಮ್ಮ ಚುನಾವಣಾ ಪ್ರಚಾರ ರಥವನ್ನು ಪರಿಚಯಿಸಿದ್ದಾರೆ. ಈ ವಾಹನದ ಫೋಟೋಗಳು ಮತ್ತು ವಿಡಿಯೋಗಳನ್ನು ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚುನಾವಣಾ ಪ್ರಚಾರಕ್ಕೆ 'ವಾರಾಹಿ' ಸಜ್ಜಾಗಿದೆ ಎಂದು ಬರೆದುಕೊಂಡಿದ್ದಾರೆ.

ಮುಂಬರುವ ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಗೆ ಪವನ್ ಕಲ್ಯಾಣ್ ತಯಾರಿ ನಡೆಸಿದ್ದಾರೆ. ತಮ್ಮ ಚಿತ್ರಗಳನ್ನು ಮುಗಿಸಿ ಚುನಾವಣಾ ಪ್ರಚಾರಕ್ಕೆ ಶೀಘ್ರದಲ್ಲೇ ಇಳಿಯುವ ನಿರೀಕ್ಷೆಯಿದೆ. ಚುನಾವಣೆಯಲ್ಲಿ ಶಕ್ತಿ ಪ್ರದರ್ಶಿಸಲು, ಪ್ರಚಾರಕ್ಕೆ ಅವರ ವಾಹನವೂ ಸಿದ್ಧಗೊಂಡಿದೆ. ಇದಕ್ಕೆ ವಾರಾಹಿ ಎಂದು ಹೆಸರಿಟ್ಟಿದ್ದಾರೆ.

ಚುನಾವಣೆಗೆ ಕೆಲವು ತಿಂಗಳಿರುವಾಗ ರಾಜ್ಯಾದ್ಯಂತ ಯಾತ್ರೆ ಕೈಗೊಳ್ಳಲು ಮುಂದಾಗಿದ್ದಾರೆ. ಈ ಉದ್ದೇಶಕ್ಕಾಗಿಯೇ ಹೊಸ ವಾಹನ ಸಿದ್ಧಪಡಿಸಿದ್ದಾರೆ. ವಿಶೇಷವಾಗಿ ನಿರ್ಮಿಸಲಾಗಿರುವ ಈ ವಾಹನದಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಮತ್ತು ಪವನ್​ ಕಲ್ಯಾಣ ಭೇಟಿ.. ಆಂಧ್ರಪ್ರದೇಶ ರಾಜಕೀಯದಲ್ಲಿ ಕುತೂಹಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.