ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅಭಿನಯದ 'ಪಠಾಣ್' ಚಿತ್ರ ಥಿಯೇಟರ್ಗಳಲ್ಲಿ ಭಾರೀ ಸದ್ದು ಮಾಡುತ್ತಲೇ ಇದೆ. ಕಿಂಗ್ ಖಾನ್ ಅವರ ಆ್ಯಕ್ಷನ್ ಸಿನಿಮಾಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಚಿತ್ರದಿಂದಾಗಿ ಹಿಂದಿ ಸಿನಿಮಾಗಳು ಮತ್ತು ಬಾಲಿವುಡ್ ನಿರ್ಮಾಪಕರ ಮೇಲೆ ಪ್ರೇಕ್ಷಕರಿಗೆ ನಂಬಿಕೆ ಹೆಚ್ಚಿದೆ. ಗಲ್ಲಪೆಟ್ಟಿಗೆಯಲ್ಲಿ ನಾಲ್ಕನೇ ವಾರವೂ ಅದೇ ಜೋಶ್ನಲ್ಲಿ ಓಡುತ್ತಿರುವ ಚಿತ್ರವು ನಿಧಾನವಾಗುವ ಲಕ್ಷಣಗಳು ಕಾಣುತ್ತಿಲ್ಲ.
-
Witness the rollercoaster ride of action and entertainment as it roars across theatres! #Pathaan Book your tickets - https://t.co/SD17p6x9HI | https://t.co/VkhFng6vBj
— Yash Raj Films (@yrf) February 13, 2023 " class="align-text-top noRightClick twitterSection" data="
Celebrate #Pathaan with #YRF50 only at a big screen near you, in Hindi, Tamil and Telugu. pic.twitter.com/hEE7YJzhKx
">Witness the rollercoaster ride of action and entertainment as it roars across theatres! #Pathaan Book your tickets - https://t.co/SD17p6x9HI | https://t.co/VkhFng6vBj
— Yash Raj Films (@yrf) February 13, 2023
Celebrate #Pathaan with #YRF50 only at a big screen near you, in Hindi, Tamil and Telugu. pic.twitter.com/hEE7YJzhKxWitness the rollercoaster ride of action and entertainment as it roars across theatres! #Pathaan Book your tickets - https://t.co/SD17p6x9HI | https://t.co/VkhFng6vBj
— Yash Raj Films (@yrf) February 13, 2023
Celebrate #Pathaan with #YRF50 only at a big screen near you, in Hindi, Tamil and Telugu. pic.twitter.com/hEE7YJzhKx
ದಾಖಲೆಯ ಮೇಲೆ ದಾಖಲೆ ಬರೆಯುತ್ತಿರುವ ಈ ಸಿನಿಮಾವು ಕೇವಲ 19 ದಿನಗಳಲ್ಲಿ 946 ಕೋಟಿ ರೂಪಾಯಿಯನ್ನು ಸಂಗ್ರಹಿಸಿದೆ. 1,000 ಕೋಟಿ ರೂಪಾಯಿ ದಾಟಿದ್ದಲ್ಲಿ ಪಠಾಣ್ ಸಿನಿಮಾವು ಎಸ್ಎಸ್ ರಾಜಮೌಳಿ ಅವರ ಬಾಹುಬಲಿ 2, ಆರ್ಆರ್ಆರ್ ಮತ್ತು ಯಶ್ ಅವರ ಕೆಜಿಎಫ್ 2 ಬಾಕ್ಸ್ ಆಫೀಸ್ಗೆ ಸೇರಲಿದೆ. ಯಶ್ ರಾಜ್ ಫಿಲ್ಮ್ಸ್ ಪ್ರಕಾರ, ಸಿದ್ದಾರ್ಥ್ ಆನಂದ್ ನಿರ್ದೇಶನದ ಈ ಸಿನಿಮಾವು 19 ದಿನದಲ್ಲಿ ವಿದೇಶಿ ಮಾರುಕಟ್ಟೆಯಲ್ಲಿ 358 ಕೋಟಿ ರೂಪಾಯಿ ಮತ್ತು ಭಾರತದಲ್ಲಿ ಒಟ್ಟು 489.05 ಕೋಟಿ ರೂ ಕಲೆಕ್ಷನ್ ಮಾಡಿದೆ.
ಇದನ್ನೂ ಓದಿ: ನಯನತಾರಾ ಮನೆಗೆ ಶಾರುಖ್ ಖಾನ್ ಭೇಟಿ: 'ಜವಾನ್' ನಟನನ್ನು ಕಂಡು ಅಭಿಮಾನಿಗಳು ಖುಷ್
ಕಾರ್ತಿಕ್ ಆರ್ಯನ್ ಮತ್ತು ಕೃತಿ ಸನೋನ್ ಅವರ ಶೆಹಜಾದಾ ಸಿನಿಮಾವು ಫೆಬ್ರವರಿ 17ರಂದು ಥಿಯೇಟರ್ಗಳಲ್ಲಿ ಬರಲಿದ್ದು, ಅಲ್ಲಿಯವರೆಗೆ ಪಠಾಣ್ ಏಕವ್ಯಕ್ತಿ ಬಿಡುಗಡೆಯ ಲಾಭವನ್ನು ಪಡೆಯಲಿದೆ. ಹೀಗಾಗಿ 1,000 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ನಿರೀಕ್ಷೆ ಸಿನಿಮಾಗೆ ಇದೆ. ಅತಿ ಹೆಚ್ಚು ಪ್ರಚಾರವಿಲ್ಲದೇ ಕೇವಲ ವಿವಾದದಿಂದಲೇ ಬಿಡುಗಡೆಯಾದ ಸಿನಿಮಾ ಈ ಮಟ್ಟಿಗೆ ಯಶಸ್ವಿಯಾಗಿದ್ದು ನಿಜಕ್ಕೂ ಅಮೋಘ. ಜೊತೆಗೆ 4 ವರ್ಷಗಳ ನಂತರ ಮತ್ತೆ ಸಿನಿಮಾರಂಗದಲ್ಲಿ ಕಾಣಿಸಿಕೊಂಡ ಶಾರುಖ್ ಖಾನ್ ಅವರ ಅತ್ಯಂತ ಹಿಟ್ ಸಿನಿಮಾ ಕೂಡ ಪಠಾಣ್ ಆಗಿದೆ. ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ 'ಪಠಾಣ್ ಪಾರ್ಟ್ 2' ಬರುವ ಸಾಧ್ಯತೆಯಿದೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ.
ಚಿತ್ರಕ್ಕೆ ಅಭಿಮಾನಿಗಳ ಫುಲ್ ಮಾರ್ಕ್ಸ್: ಸಾಹಸಮಯ ದೃಶ್ಯಗಳನ್ನು ಅದ್ಭುತವಾಗಿ ಸೆರೆಹಿಡಿದಿರುವುದು ಚಿತ್ರಕ್ಕೆ ಫ್ಲಸ್ ಪಾಯಿಂಟ್ ಆಗಿದೆ. ಶಾರುಖ್ ಖಾನ್ ಮತ್ತು ಜಾನ್ ಅಬ್ರಹಾಂ ನಡುವಿನ ಆ್ಯಕ್ಷನ್ ದೃಶ್ಯಗಳಿಗೆ ಚಿತ್ರಪ್ರೇಮಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ. ಜೊತೆಗೆ ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ ನಟನೆ ಮೆಚ್ಚುವಂತಿದೆ. ಹಾಲಿವುಡ್ ಸಿನಿಮಾದಲ್ಲಿ ತೋರಿಸುವಂತೆ ಈ ಚಿತ್ರದಲ್ಲಿಯೂ ಆ್ಯಕ್ಷನ್ ಸೀಕ್ವೆನ್ಸ್ಗಳನ್ನು ಸಖತ್ ಆಗಿಯೇ ಹೆಣೆದಿದ್ದಾರೆ. ಸಿನಿಮಾದಲ್ಲಿ ತೋರಿಸಲಾದ ಚಲಿಸುವ ರೈಲಿನ ಮೇಲೆ ನಡೆಯುವ ದೃಶ್ಯ, ವಿಮಾನ ಮತ್ತು ಗಾಳಿಯ ನಡುವಿನ ದೃಶ್ಯ ಸೇರಿದಂತೆ ಹಲವು ಸಾಹಸಮಯ ಸೀನ್ಗಳನ್ನು ಬುರ್ಜ್ ಖಲೀಫಾದ ಸುತ್ತಲೂ ಚಿತ್ರೀಕರಿಸಲಾಗಿದೆ.
ಇದನ್ನೂ ಓದಿ: ಆ್ಯಕ್ಷನ್ ಸ್ಟಾರ್ ಆಗಿ ಒಂದು ಯುಗವನ್ನೇ ಸೃಷ್ಟಿಸಲಿದ್ದಾರೆ: ಎಸ್ಆರ್ಕೆ ಬಗ್ಗೆ ಸಿದ್ಧಾರ್ಥ್ ಆನಂದ್ ಗುಣಗಾನ