ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರ ಜಗತ್ತಿನಾದ್ಯಂತ ಕಮಾಲ್ ಮಾಡುತ್ತಿದೆ. 8,000 ಪರದೆಗಳಲ್ಲಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರ ದಾಖಲೆ ಮೇಲೆ ದಾಖಲೆ ಬರೆಯುತ್ತಲೇ ಇದೆ. ಕಲೆಕ್ಷನ್ ವಿಚಾರದಲ್ಲಿ ಅಬ್ಬರ ಕಡಿಮೆ ಆಗಿಲ್ಲ. ಚಿತ್ರ ತೆರೆ ಕಂಡ ಎರಡು ವಾರಗಳ ನಂತರವೂ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮುಂದುವರಿದಿದೆ. ಸಿದ್ಧಾರ್ಥ್ ಆನಂದ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರ 16 ದಿನಗಳಲ್ಲಿ ವಿಶ್ವಾದ್ಯಂತ 888 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಅಭೂತಪೂರ್ವ ಯಶಸ್ಸು ಕಂಡಿದೆ.
- " class="align-text-top noRightClick twitterSection" data="
">
ಭಾರತದಲ್ಲಿ 551 ಕೊಟಿ, ವಿದೇಶಗಳಲ್ಲಿ 337 ಕೋಟಿ ರೂಪಾಯಿ ಸೇರಿ ಒಟ್ಟು 16 ದಿನಗಳಲ್ಲಿ 888 ಕೋಟಿ ರೂಪಾಯಿ ಗಳಿಸಿದೆ ಎಂದು ಚಿತ್ರದ ನಿರ್ಮಾಣ ಸಂಸ್ಥೆ ಆದ ಯಶ್ ರಾಜ್ ಫಿಲ್ಮ್ಸ್ (YRF) ಮಾಹಿತಿ ಹಂಚಿಕೊಂಡಿದೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಪಠಾಣ್ ಯಶಸ್ಸಿನ ಸಮಾರಂಭದಲ್ಲಿ ಶಾರುಖ್ ಖಾನ್ ಮತ್ತು ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರು ಪಠಾಣ್ 2 ಬಗ್ಗೆ ಸುಳಿವು ನೀಡಿದ್ದಾರೆ. ಸದ್ಯ ಪಠಾಣ್ ಯಶಸ್ಸಿನಲ್ಲಿರುವ ಶಾರುಖ್ ಖಾನ್ ಜವಾನ್ ಮತ್ತು ಡಂಕಿ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ನಿರ್ದೇಶಕ ಅಟ್ಲೀ ಕುಮಾರ್ ಅವರ ಜವಾನ್ ಮತ್ತು ರಾಜ್‌ಕುಮಾರ್ ಹಿರಾನಿ ಅವರ ಡಂಕಿ ಚಿತ್ರದ ಶೂಟಿಂಗ್ ಕೂಡ ನಡೆಯುತ್ತಿದೆ. ನಟಿ ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಷನ್ ಅವರನ್ನೊಳಗೊಂಡ ಫೈಟರ್ ಚಿತ್ರವನ್ನೂ ಕೂಡ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರೇ ನಿರ್ದೇಶಿಸಲಿದ್ದಾರೆ.
-
#Pathaan packs a SOLID PUNCH in Week 2… Absence of major films this week should prove advantageous, especially on [third] Sat and Sun… [Week 2] Fri 13.50 cr, Sat 22.50 cr, Sun 27.50 cr, Mon 8.25 cr, Tue 7.50 cr, Wed 6.50 cr, Thu 5.75 cr. Total: ₹ 442.50 cr. #Hindi. #India biz. pic.twitter.com/M4H8gErguv
— taran adarsh (@taran_adarsh) February 10, 2023 " class="align-text-top noRightClick twitterSection" data="
">#Pathaan packs a SOLID PUNCH in Week 2… Absence of major films this week should prove advantageous, especially on [third] Sat and Sun… [Week 2] Fri 13.50 cr, Sat 22.50 cr, Sun 27.50 cr, Mon 8.25 cr, Tue 7.50 cr, Wed 6.50 cr, Thu 5.75 cr. Total: ₹ 442.50 cr. #Hindi. #India biz. pic.twitter.com/M4H8gErguv
— taran adarsh (@taran_adarsh) February 10, 2023#Pathaan packs a SOLID PUNCH in Week 2… Absence of major films this week should prove advantageous, especially on [third] Sat and Sun… [Week 2] Fri 13.50 cr, Sat 22.50 cr, Sun 27.50 cr, Mon 8.25 cr, Tue 7.50 cr, Wed 6.50 cr, Thu 5.75 cr. Total: ₹ 442.50 cr. #Hindi. #India biz. pic.twitter.com/M4H8gErguv
— taran adarsh (@taran_adarsh) February 10, 2023
ಇದನ್ನೂ ಓದಿ: ಶಾರುಖ್ ಅಭಿಮಾನಿಗಳಿಗೆ ಪ್ರೇಮಿಗಳ ದಿನಕ್ಕೆ ಭರ್ಜರಿ ಗಿಫ್ಟ್; ಮರು ಬಿಡುಗಡೆಗೆ ಸಜ್ಜಾಗಿದೆ ಡಿಡಿಎಲ್ಜೆ
ಪಠಾಣ್ ಸಿನಿಮಾ ಬೇಶರಂ ರಂಗ್ ಹಾಡು ಕಳೆದ ಡಿಸೆಂಬರ್ ಎರಡನೇ ವಾರದಲ್ಲಿ ಬಿಡುಗಡೆ ಆಯಿತು. ಈ ಹಾಡು ಬಿಡುಗಡೆ ಆದಾಗಿನಿಂದಲೂ ಚಿತ್ರತಂಡ ಸಾಕಷ್ಟು ಟೀಕೆಗೆ ಒಳಪಡಬೇಕಾಯಿತು. ನಟಿಯ ವಸ್ತ್ರದ ವಿಚಾರವಾಗಿ ಹಲವರು ಅವರನ್ನು ಟ್ರೋಲ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ವಿವಾದಗಳ ನಡುವೆಯೇ ಚಿತ್ರ ಜನವರಿ 25ರಂದು ಭಾರತ ಸೇರಿದಂತೆ 100 ದೇಶಗಳಲ್ಲಿ ಬಿಡುಗಡೆ ಆಯಿತು. ಚಿತ್ರ ತೆರೆಕಂಡ ಮೊದಲೆರಡು ದಿನ ಕೂಡ ಹಲವೆಡೆ ಪ್ರತಿಭಟನೆಗಳು ಕೂಡ ನಡೆದವು. ಆದ್ರೆ ಚಿತ್ರದ ಕಲೆಕ್ಷನ್ ಮಾತ್ರ ಎಲ್ಲರ ಹುಬ್ಬೇರುವಂತೆ ಮಾಡಿದೆ. ಈಗಾಗಲೇ 888 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಪಠಾಣ್ 1,000 ಕೋಟಿಯತ್ತ ಚಿತ್ತ ಹರಿಸಿದೆ.
-
Celebrations continue as #Pathaan rules over theatres and hearts ❤️💥 Book your tickets now! https://t.co/SD17p6x9HI | https://t.co/VkhFng6vBj
— Yash Raj Films (@yrf) February 10, 2023 " class="align-text-top noRightClick twitterSection" data="
Celebrate #Pathaan with #YRF50 only at a big screen near you, in Hindi, Tamil and Telugu. pic.twitter.com/v2jFski2Nf
">Celebrations continue as #Pathaan rules over theatres and hearts ❤️💥 Book your tickets now! https://t.co/SD17p6x9HI | https://t.co/VkhFng6vBj
— Yash Raj Films (@yrf) February 10, 2023
Celebrate #Pathaan with #YRF50 only at a big screen near you, in Hindi, Tamil and Telugu. pic.twitter.com/v2jFski2NfCelebrations continue as #Pathaan rules over theatres and hearts ❤️💥 Book your tickets now! https://t.co/SD17p6x9HI | https://t.co/VkhFng6vBj
— Yash Raj Films (@yrf) February 10, 2023
Celebrate #Pathaan with #YRF50 only at a big screen near you, in Hindi, Tamil and Telugu. pic.twitter.com/v2jFski2Nf
ವೃತ್ತಿ ಜೀವನದ ಮೂರು ದಶಕಗಳಲ್ಲಿ ರೊಮ್ಯಾಂಟಿಕ್ ಹೀರೋ ಎಂದೇ ಖ್ಯಾತಿ ಗಳಿಸಿದ್ದ ಶಾರುಖ್ ಖಾನ್ ಪಠಾಣ್‌ನಲ್ಲಿ ಸಂಪೂರ್ಣ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಲುಕ್ ಅನ್ನು ಪ್ರೇಕ್ಷಕರು ಸಹ ಮೆಚ್ಚಿಕೊಂಡಿದ್ದಾರೆ. ಶಾರುಖ್ ಖಾನ್ ಹಾಗೂ ಜಾನ್ ಅಬ್ರಹಾಂ ನಡುವೆ ನಡೆಯುವ ಸಾಹಸಮಯ ದೃಶ್ಯಗಳು ಮೈನವಿರೇಳಿಸುವಂತಿದೆ.
ಇದನ್ನೂ ಓದಿ: 'ಪಠಾಣ್' ಆ್ಯಕ್ಷನ್ ಸೀಕ್ವೆನ್ಸ್ ಶೂಟಿಂಗ್ ಹೇಗಿತ್ತು?: ಶಾರುಖ್ ಖಾನ್, ನಿರ್ದೇಶಕರ ಅನುಭವ ಕೇಳಿ..