ETV Bharat / entertainment

ನಟಿ ಪರ್ವೀನ್​ ಬಾಬಿ ಪುಣ್ಯಸ್ಮರಣೆ: ದೇಶವನ್ನೇ ಬೆಚ್ಚಿ ಬೀಳಿಸಿತ್ತು ನಿಗೂಢ ಸಾವು! - ಪರ್ವೀನ್​ ಬಾಬಿ ಕೊಲೆ

ಹಲವು ಸೂಪರ್​ ಹಿಟ್ ಸಿನಿಮಾಗಳನ್ನು ಹಿಂದಿ ಚಿತ್ರರಂಗಕ್ಕೆ ನೀಡಿ 2005ರಲ್ಲಿ ಇಹಲೋಕ ತ್ಯಜಿಸಿದ್ದ ನಟಿ ಪರ್ವೀನ್​ ಬಾಬಿ ಅವರನ್ನು ಇಂದು ಸ್ಮರಿಸಲಾಗುತ್ತಿದೆ.

Parveen Babi
ನಟಿ ಪರ್ವೀನ್​ ಬಾಬಿ ಪು
author img

By

Published : Jan 20, 2023, 1:30 PM IST

ಪರ್ವೀನ್​ ಬಾಬಿ ಬಾಲಿವುಡ್​ ಚಿತ್ರರಂಗದ ಬೋಲ್ಡ್​ ಮತ್ತು ಬ್ಯೂಟಿಫುಲ್​ ನಟಿಯರಲ್ಲಿ ಒಬ್ಬರಾಗಿದ್ದರು. ಇವರು ಇಹಲೋಕ ತ್ಯಜಿಸಿ 18 ವರ್ಷಗಳಾಗಿದ್ದರೂ ಅವರ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಈಗಲೂ ಅವರ ಸಿನಿಮಾಗಳನ್ನು ಪ್ರೇಕ್ಷಕರು ಇಷ್ಟಪಟ್ಟು ವೀಕ್ಷಿಸುವುದುಂಟು. ಮನಮೋಹಕ ಶೈಲಿಗೆ ಹೆಸರುವಾಸಿಯಾಗಿದ್ದ ಪರ್ವೀನ್​ ಬಾಬಿ ಹಲವು ಸೂಪರ್​ ಹಿಟ್​ ಸಿನಿಮಾಗಳನ್ನು ಹಿಂದಿ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿ ಹೋಗಿದ್ದಾರೆ.

ಸೂಪರ್​ ಹಿಟ್ ಚಿತ್ರಗಳ ನಾಯಕಿ: ತಮ್ಮ ನಟನೆ ಮತ್ತು ಸೌಂದರ್ಯದಿಂದ ಖ್ಯಾತಿ ಗಳಿಸಿದ್ದ ಪರ್ವೀನ್​ ಬಾಬಿ ಅಮರ್​ ಅಕ್ಬರ್ ಆಂಥೋನಿ, ದೀವಾರ್​​, ನಮಕ್​​, ಹಲಾಲ್, ಶಾನ್​​ ಸೇರಿ ಹಲವು ಸೂಪರ್​​ ಹಿಟ್​ ಚಿತ್ರಗಳಲ್ಲಿ ನಾಯಕಿಯಾಗಿ ಮಿಂಚಿದ್ದರು. ಹಿರಿಯ ನಟ ಅಮಿತಾಭ್​ ಬಚ್ಚನ್​ ಮತ್ತು ​​ಪರ್ವೀನ್​ ಬಾಬಿ ಜೋಡಿ ಸಿನಿಪ್ರಿಯರನ್ನು ಮೋಡಿ ಮಾಡಿತ್ತು.

2005ರಲ್ಲಿ ಇಹಲೋಕ ತ್ಯಜಿಸಿದ್ದ ನಟಿ ಪರ್ವೀನ್​ ಬಾಬಿ: ನಟಿ ಪರ್ವೀನ್​ ಬಾಬಿ ಅವರ ವೃತ್ತಿಜೀವನ ಉತ್ತುಂಗದಲ್ಲಿದ್ದ 1983ರ ಸಂದರ್ಭದಲ್ಲಿ ಅವರು ಚಿತ್ರರಂಗವನ್ನು ತೊರೆಯಲು ನಿರ್ಧರಿಸಿದರು. ಬಳಿಕ ವಿಶ್ವಪ್ರವಾಸಕ್ಕೆ ಹೊರಟರು. ಆ ಸಂದರ್ಭ ಅವರ ಮಾನಸಿಕ ಸ್ಥಿತಿಗತಿ ಸ್ವಲ್ಪ ಹದಗೆಟ್ಟಿದೆ ಎಂಬ ಚರ್ಚೆಗಳು ಕೂಡ ನಡೆದಿದ್ದವು. 1990ರ ವೇಳೆ ಏಕಾಂಗಿಯಾಗಿದ್ದರು ಮತ್ತು 2005ರಲ್ಲಿ ಇಹಲೋಕ ತ್ಯಜಿಸಿದರು.

ಅನುಮಾನಾಸ್ಪದ ಸಾವು: 2005ರ ಜನವರಿ 20ರಂದು ಪರ್ವೀನ್​ ಬಾಬಿ ನಿಧನದ ಸುದ್ದಿ ಬೆಳಕಿಗೆ ಬಂತು. ಅವರು ಮೃತಪಟ್ಟು ಮೂರು ದಿನಗಳಾದ ಬಳಿಕ ಸುದ್ದಿ ತಿಳಿಯಿತು ಎನ್ನಲಾಗಿದೆ. ಮೂರು ದಿನಗಳಿಂದ ಅವರ ಮನೆಯಿಂದ ಯಾರೂ ಹೊರಗೆ ಬಂದಿರಲಿಲ್ಲ. ಬಾಗಿಲಿನ ಹೊರಗೆ ದಿನ ಪತ್ರಿಕೆ ಮತ್ತು ಹಾಲಿನ ಪೊಟ್ಟಣಗಳು ರಾಶಿ ಬಿದ್ದಿದ್ದವು. ಬಾಗಿಲಿಗೆ ಕೀ ಕೂಡ ಹಾಕಿರಲಿಲ್ಲ. ನೆರೆಹೊರೆಯವರು ಇದನ್ನು ಗಮನಿಸಿದ್ದಾರೆ. ಅವರ ಅಪಾರ್ಟ್​​ಮೆಂಟ್​ನ ಕದ ತೆರೆಯಲು ಹೋದಾಗ ವಾಸನೆ ಬಂದಿದ್ದು, ಅನುಮಾನಗೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಪರ್ವೀನ್​ ಬಾಬಿ: ಪೊಲೀಸರು ಮನೆಯೊಳಗೆ ಪ್ರವೇಶಿಸಿದಾಗ ಅತ್ಯಂತ ಭೀಕರ ಪರಿಸ್ಥಿತಿ ಕಂಡರು. ಆ ಕಾಲದ ಅತ್ಯಂತ ಸುಂದರ ನಟಿ ಹಾಸಿಗೆಯ ಮೇಲೆ ಸತ್ತು ಕೊಳೆತ ಸ್ಥಿತಿಯಲ್ಲಿದದ್ದರು.! ಅವರ ಕೊಠಡಿ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಹಾಸಿಗೆ ಬಳಿ ಗಾಲಿಕುರ್ಚಿ ಬಿದ್ದಿತ್ತು. ಶವ ಪತ್ತೆಯಾಗುವ 72 ಗಂಟೆಗಳ ಮೊದಲು ನಟಿ ಸಾವನ್ನಪ್ಪಿದ್ದರು. ಅವರನ್ನು ಯಾರೂ ಕೂಡ ಗಮನಿಸಿರಲಿಲ್ಲ. ಸುದ್ದಿ ಹೊರಬೀಳುತ್ತಿದ್ದಂತೆ ಮಾಧ್ಯಮದವರು ಮನೆ ಬಳಿ ಜಮಾಯಿಸಿದರು. ಆದ್ರೆ ಅವರ ಸಂಬಂಧಿಕರಾರೂ ಇರಲಿಲ್ಲ. ಅವರ ಅಂತ್ಯಕ್ರಿಯೆ ನಡೆಸಲು ಯಾರೂ ಬಾರದ ಹಿನ್ನೆಲೆಯಲ್ಲಿ ಅಂತಿಮವಾಗಿ ನಿರ್ಮಾಪಕ ಮಹೇಶ್​ ಭಟ್ ಅವರೇ​ ಪರ್ವೀನ್​ ಬಾಬಿ ಅಂತ್ಯಕ್ರಿಯೆ ನಡೆಸಿಕೊಟ್ಟರು.

ಇದನ್ನೂ ಓದಿ: ಈ ವಾರ ರಿಲೀಸ್​ ಆಗುವ ಕನ್ನಡ ಸಿನಿಮಾಗಳು ಯಾವುವು?

ಮರಣೋತ್ತರ ಪರೀಕ್ಷೆ ವರದಿ ಏನಿತ್ತು?: 50ರ ಹರೆಯದ ನಟಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಮಾತ್ರ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಸಾವಿಗೂ ಮೊದಲು ಮೂರ್ನಾಲ್ಕು ದಿನಗಳ ಕಾಲ ಅವರು ಆಹಾರ ಸೇವಿಸಿರಲಿಲ್ಲ. ಆದರೆ ಅವರ ದೇಹದಲ್ಲಿ ಮದ್ಯದ ಅಂಶ ಪತ್ತೆಯಾಗಿದೆ ಎಂದು ಮರಣೋತ್ತರ ಪರೀಕ್ಷೆ ಬಹಿರಂಗಪಡಿಸಿತ್ತು.

ಇದನ್ನೂ ಓದಿ: ಅಶ್ವಿನಿ ಪುನೀತ್ ರಾಜ್‍ಕುಮಾರ್, ವಿಜಯ್ ಕಿರಗಂದೂರು, ತಾರಾಗೆ 'ರಾಘವೇಂದ್ರ ಚಿತ್ರವಾಣಿ' ಪ್ರಶಸ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.