ETV Bharat / entertainment

'15ನೇ ವಯಸ್ಸಿನಲ್ಲಿ ಅತ್ಯಾಚಾರಕ್ಕೊಳಗಾಗಿದ್ದೆ..': ಬಾಲ್ಯದ ಕಹಿ ಘಟನೆ ವಿವರಿಸಿದ ಪ್ಯಾರಿಸ್​ ಹಿಲ್ಟನ್ - etv bharat kannada

ರಿಯಾಲಿಟಿ ಶೋ ಸ್ಟಾರ್ ಪ್ಯಾರಿಸ್​ ಹಿಲ್ಟನ್ ಮನಬಿಚ್ಚಿ ಮಾತನಾಡಿದ್ದಾರೆ. ತಮ್ಮ ಬಾಲ್ಯದ ಕೆಲವೊಂದು ಕಹಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.

Paris Hilton
ಪ್ಯಾರಿಸ್​ ಹಿಲ್ಟನ್
author img

By

Published : Feb 26, 2023, 1:34 PM IST

ಅಮೆರಿಕನ್​ ನಟಿ ಪ್ಯಾರಿಸ್​ ಹಿಲ್ಟನ್​ ತಮ್ಮ ಬಾಲ್ಯದ ದಿನಗಳ ಆಘಾತಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. 42ನೇ ವಯಸ್ಸಿನ ರಿಯಾಲಿಟಿ ಶೋ ಸ್ಟಾರ್​ ಹಾಗೂ ಡಿಜೆ ಪ್ಲೇಯರ್​ ತಾವು 15 ನೇ ವಯಸ್ಸಿನಲ್ಲಿ ಮಾದಕವಸ್ತು ಸೇವನೆ ಮತ್ತು ಅತ್ಯಾಚಾರಕ್ಕೊಳಗಾಗಿರುವುದಾಗಿ ಹೇಳಿಕೊಂಡಿದ್ದಾರೆ. ತಮ್ಮ ಸ್ನೇಹಿತೆಯರೊಂದಿಗೆ ಕ್ಯಾಲಿಫೋರ್ನಿಯಾದ ಲಾಸ್​ ಏಂಜಲೀಸ್​ನ ಸೆಂಚುರಿ ಸಿಟಿ ಮಾಲ್​ನಲ್ಲಿ ಹುಡುಗರನ್ನು ಭೇಟಿಯಾಗಿರುವಾಗ ಈ ಘಟನೆ ಸಂಭವಿಸಿತ್ತು ಎಂದು ವಿವರಿಸಿದ್ದಾರೆ.

"ನಾವು ಪ್ರತಿ ವಾರಾಂತ್ಯದಲ್ಲಿ ಸೆಂಚುರಿ ಸಿಟಿ ಮಾಲ್​ಗೆ ತೆರಳುತ್ತಿದ್ದೆವು. ಅದು ನಮ್ಮ ನೆಚ್ಚಿನ ಕೆಲಸ ಕೂಡ ಆಗಿತ್ತು. ಅಲ್ಲಿ ಕೆಲವು ವ್ಯಕ್ತಿಗಳು (ಹುಡುಗರು) ಯಾವಾಗಲೂ ಅಂಗಡಿಗಳ ಸುತ್ತ ಓಡಾಡುತ್ತಿದ್ದರು. ಅವರೊಂದಿಗೆ ನಾವು ಮಾತನಾಡುತ್ತಿದ್ದೆವು. ಜೊತೆಗೆ ಅವರಿಗೆ ನಮ್ಮ ಬೀಪರ್​ ನಂಬರ್​ಗಳನ್ನು ನೀಡಿದ್ದೆವು. ಒಂದು ದಿನ ಅವರು ನನ್ನನ್ನು ಮತ್ತು ಸ್ನೇಹಿತೆಯರನ್ನು ತಮ್ಮ ಮನೆಗೆ ಆಹ್ವಾನಿಸಿದರು. ಅಲ್ಲಿ ನಮಗೆ ಕುಡಿಯಲು 'ಬೆರ್ರಿ ವೈನ್'​ ನೀಡಿದ್ದರು. ನಾನು ಒಂದು ಅಥವಾ ಎರಡು ಸಿಪ್​ ಸೇವಿಸಿದ ತಕ್ಷಣವೇ ನನಗೆ ತಲೆತಿರುಗಲು ಶುರುವಾಯಿತು. ಅದರಲ್ಲಿ ಏನು ಮಿಕ್ಸ್​ ಮಾಡಿದ್ದಾರೆ ಎಂಬುದು ನನಗೆ ಆಗ ತಿಳಿಯಲಿಲ್ಲ" ಎಂದು ಹೇಳಿದರು.

ಮುಂದುವರೆದು, "ಕೆಲ ಗಂಟೆಗಳ ನಂತರ ನನಗೆ ಎಚ್ಚರವಾಯಿತು. ಆ ತಕ್ಷಣಕ್ಕೆ ನನಗೆ ಅಲ್ಲಿ ಏನಾಗುತ್ತಿದೆ ಎಂಬುದೇ ತಿಳಿಯಲಿಲ್ಲ. ನನ್ನ ಮೇಲೆ ಆತ ದೃಷ್ಟಿಯಿಟ್ಟಿದ್ದ, ನನ್ನ ಬಾಯಿಯನ್ನು ಮುಚ್ಚಿದ್ದ. "ನೀವು ಕನಸು ಕಾಣುತ್ತಿದ್ದೀರಿ, ನೀವು ಕನಸು ಕಾಣುತ್ತಿದ್ದೀರಿ ಎಂಬುದಾಗಿ ನನ್ನ ಕಿವಿಯಲ್ಲಿ ಪಿಸುಗುಟ್ಟುತ್ತಿದ್ದ" ಎಂದು ವಿವರಿಸಿದರು. ಬಳಿಕ, "ಈ ವಿಷಯವನ್ನು ನಾನು ಮನಸ್ಸಲ್ಲೇ ಇಟ್ಟುಕೊಂಡಿದ್ದೆ. ಯಾರಲ್ಲಿಯೂ ಹೇಳಿಕೊಂಡಿರಲಿಲ್ಲ. ಆದರೆ ಕೆಲವರು ಇಂತಹ ವಿಷಯಗಳನ್ನು ಹಿಮ್ಮೆಟ್ಟಿ ನಿಂತಿದ್ದಾರೆ. ಅವರ ವಿಷಯಗಳನ್ನು ಕೇಳಿದ ಮೇಲೆ ನಾನು ಫ್ಲ್ಯಾಶ್​ಬ್ಯಾಕ್​ ತೆರೆದಿಟ್ಟೆ" ಎಂದು ಎಲ್ಲವನ್ನೂ ಮನಸುಬಿಚ್ಚಿ ಹೇಳಿಕೊಂಡರು.

ಇದನ್ನೂ ಓದಿ: 'ಗಂಗೂಬಾಯಿ ಕಥಿಯಾವಾಡಿ'ಗೆ ಒಂದು ವರ್ಷ: ಬನ್ಸಾಲಿಯೊಂದಿಗಿನ ಫೋಟೋ ಹಂಚಿಕೊಂಡ ಆಲಿಯಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.