ETV Bharat / entertainment

ಸೋಷಿಯಲ್​ ಮೀಡಿಯಾದಲ್ಲಿ ಪ್ರೇಮಪಕ್ಷಿಗಳ ಸದ್ದು: ಗಮನ ಸೆಳೆದ ಪರಿಣಿತಿ ರಾಘವ್​ ಜೋಡಿ - parineeti Raghav latest news

parineeti chopra Raghav Chadha: ಶೀಘ್ರದಲ್ಲೇ ಹಸೆಮಣೆ ಏರಲಿರುವ ಪರಿಣಿತಿ ರಾಘವ್​ ಜೋಡಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.

parineeti chopra Raghav Chadha
ಪರಿಣಿತಿ ರಾಘವ್​ ಜೋಡಿ
author img

By

Published : Aug 11, 2023, 1:46 PM IST

ಬಾಲಿವುಡ್​ ನಟಿ ಪರಿಣಿತಿ ಚೋಪ್ರಾ ಶೀಘ್ರದಲ್ಲೇ ಹಸೆಮಣೆ ಏರಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಮೇ. 13 ರಂದು ದೆಹಲಿಯಲ್ಲಿ ಆಮ್​ ಆದ್ಮಿ ಪಕ್ಷದ ನಾಯಕ, ರಾಜ್ಯಸಭಾ ಸದಸ್ಯ ರಾಘವ್​ ಚಡ್ಡಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ.

ಮೇ. 13 ರಂದು ನಿಶ್ಚಿತಾರ್ಥ: ಮಾರ್ಚ್​ ತಿಂಗಳಿನಿಂದ ಸುದ್ದಿಯಲ್ಲಿರುವ ಈ ಜೋಡಿ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಂಡು ಸುದ್ದಿಯಾಗುತ್ತಾರೆ. ನಿಶ್ಚಿತಾರ್ಥದವರೆಗೂ ತಮ್ಮ ಪ್ರೀತಿಯನ್ನು ಗುಟ್ಟಾಗೆ ಇಟ್ಟಿದ್ದ ಈ ಲವ್​ ಬರ್ಡ್ಸ್, ಎಂಗೇಜ್​ಮೆಂಟ್​ ಫೋಟೋಗಳನ್ನು ಹಂಚಿಕೊಂಡು ತಮ್ಮ ಸಂಬಂಧಕ್ಕೆ ಅಧಿಕೃತ ಮುದ್ರೆ ಒತ್ತಿದರು. ನಿಶ್ಚಿತಾರ್ಥದ ಬಳಿಕ ಕೈ ಕೈ ಹಿಡಿದು, ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರೂ ವಿಭಿನ್ನ ಕ್ಷೇತ್ರದ ಗಣ್ಯರು. ಬ್ಯುಸಿ ಶೆಡ್ಯೂಲ್​ ಹೊರತಾಗಿಯೂ, ಆಗಾಗ್ಗೆ ಪರಸ್ಪರ ಸಮಯ ಮೀಸಲಿಡುತ್ತಾರೆ. ಆಗಾಗ್ಗೆ ಭೇಟಿಯಾಗುವ ಮೂಲಕ ಸೋಷಿಯಲ್​ ಮೀಡಿಯಾಗಳಲ್ಲಿ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಾರೆ.

ಮುಂಬೈ ಏರ್​ಪೋರ್ಟ್​​ನಲ್ಲಿ ಕಾಣಿಸಿಕೊಂಡ ಕ್ಯೂಟ್ ಕಪಲ್: ಇದೀಗ ಮತ್ತೊಮ್ಮೆ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಹೌದು ಮುಂಬೈ ವಿಮಾನ ನಿಲ್ದಾಣದಲ್ಲಿ ಬಾಲಿವುಡ್​ ನಟಿ ಪರಿಣಿತಿ ಚೋಪ್ರಾ ಮತ್ತು ಸಂಸದ ರಾಘವ್​ ಚಡ್ಡಾ ಕಾಣಿಸಿಕೊಂಡಿದ್ದು, ಪಾಪರಾಜಿಗಳು ವಿಡಿಯೋ ಶೇರ್ ಮಾಡಿದ್ದಾರೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಬಿದ್ದ ಇಶಕ್​ಜಾದೆ ನಟಿ ನೀಲಿ - ಬಿಳಿ ಬಣ್ಣದ ಸ್ಟೈಲಿಶ್​​ ಡ್ರೆಸ್​ ಧರಿಸಿ, ಕಣ್ಣಿಗೆ ಸನ್​ ಗ್ಲಾಸ್​ ಹಾಕಿಕೊಂಡು ಕಾಣಿಸಿಕೊಂಡರು. ವೈಟ್​ ಹೀಲ್ಸ್ ಧರಿಸುವ ಮೂಲಕ ತಮ್ಮ ಏರ್​ಪೋರ್ಟ್ ಲುಕ್​ ಅನ್ನು ಪೂರ್ಣಗೊಳಿಸಿಕೊಂಡರು. ಮತ್ತೊಂದೆಡೆ ಪರಿಣಿತಿ ಚೋಪ್ರಾ ಅವರ ಭಾವಿ ಪತಿ ರಾಘವ್​ ಚಡ್ಡಾ ನೀಲಿ ಶರ್ಟ್, ಬ್ಲ್ಯಾಕ್​ ಪ್ಯಾಂಟ್​ ಧರಿಸಿದ್ದರು. ಇಬ್ಬರೂ ಸಿಂಪಲ್​ ಅಂಡ್​​​ ಅಟ್ರ್ಯಾಕ್ಟಿವ್​ ಲುಕ್​ನಲ್ಲಿ ಕಂಗೊಳಿಸಿದರು.

ಇದನ್ನೂ ಓದಿ: ಅಕ್ಷಯ್​ ಕುಮಾರ್​ ಅಭಿನಯದ ಓಎಂಜಿ 2 ಬಿಡುಗಡೆ: ಗದರ್​ 2 ಜೊತೆ ಪೈಪೋಟಿ

2023 ಅಂತ್ಯದೊಳಗೆ ವಿವಾಹ: ಮುಂಬೈ ಏರ್​ಪೋರ್ಟ್​​ನಲ್ಲಿದ್ದ ಪಾಪರಾಜಿಗಳು ಪರಿಣಿತಿ ರಾಘವ್​ ಜೋಡಿಯ ವಿಡಿಯೋವನ್ನು ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋಗಳು ವೈರಲ್​ ಆಗಿ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸುತ್ತಿದೆ. ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ. ಕೆಲವರು ಟ್ರೋಲ್​​ ಮಾಡುತ್ತಿದ್ದರೆ, ಹಲವರು ಮದುವೆ ದಿನಾಂಕವನ್ನು ತಿಳಿಸುವಂತೆ ಕೇಳುತ್ತಿದ್ದಾರೆ. ವಿಡಿಯೋಗೆ ಪ್ರತಿಕ್ರಿಯಿಸಿದ ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು, ನಟಿ ರಾಜಕಾರಣಿಯನ್ನು ಮದುವೆ ಆಗುತ್ತಾರೆಂದು ನಾನೆಂದೂ ಯೋಚಿಸಿರಲಿಲ್ಲ ಎಂದು ತಿಳಿಸಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ ನಿಮ್ಮ ಮದುವೆ ದಿನಾಂಕವನ್ನು ಬಹಿರಂಗಪಡಿಸಿ ಎಂದು ಕೇಳಿದ್ದಾರೆ. ಈ ವರ್ಷದ ಅಂತ್ಯದೊಳಗೆ ಮದುವೆಯಾಗುತ್ತಾರೆಂಬ ಮಾಹಿತಿ ಇದೆ. ರಾಜಸ್ಥಾನದಲ್ಲಿ ವಿವಾಹ ಸಮಾರಂಭ ನಡೆಯಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಬಹುನಿರೀಕ್ಷೆಯಿಂದ ತೆರೆ ಕಂಡ 'ಗದರ್ 2': ಸಿನಿ ಪ್ರೇಮಿಗಳಿಂದ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದ ಬ್ಲಾಕ್​ಬಸ್ಟರ್​ ಸೀಕ್ವೆಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.