ETV Bharat / entertainment

ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರಾ ನಟಿ ಪರಿಣಿತಿ ಚೋಪ್ರಾ - ಸಂಸದ ರಾಘವ್ ಚಡ್ಡಾ? - Parineeti Raghav photos

ನಟಿ ಪರಿಣಿತಿ ಚೋಪ್ರಾ ಮತ್ತು ಸಂಸದ ರಾಘವ್ ಚಡ್ಡಾ ಮದುವೆಗೆ ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

Parineeti Chopra Raghav Chadha marriage
ಪರಿಣಿತಿ ಚೋಪ್ರಾ ರಾಘವ್ ಚಡ್ಡಾ ಮದುವೆ
author img

By

Published : Mar 26, 2023, 6:21 PM IST

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಆಮ್ ಆದ್ಮಿ ಪಕ್ಷದ ನಾಯಕ, ಸಂಸದ ರಾಘವ್ ಚಡ್ಡಾ ಡೇಟಿಂಗ್​​ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೋಟೆಲ್​ ಎದುರು ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡ ನಂತರ ಇವರ ಡೇಟಿಂಗ್ ವದಂತಿ ಜೋರಾಗಿಯೇ ಹರಡಲು ಪ್ರಾರಂಭಿಸಿದೆ. ಕಳೆದ ಕೆಲ ದಿನಗಳಲ್ಲಿ, ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಈ ವದಂತಿಯ ಲವ್​ ಬರ್ಡ್ಸ್ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋ, ವಿಡಿಯೋಗಳು ಸದ್ದು ಮಾಡ್ತಿವೆ.

ಅವರಿಬ್ಬರೂ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ಗೆ ಭೇಟಿ ಕೊಟ್ಟಿದ್ದರು. ಬಳಿಕ ಸ್ನೇಹಿತರಾದರು. ಇಬ್ಬರೂ ಸಾಮಾನ್ಯ ಆಸಕ್ತಿಗಳನ್ನು ಹೊಂದಿದ್ದಾರೆ. ಸದ್ಯ ಡೇಟಿಂಗ್​​ ರೂಮರ್ಸ್​ ಜೋರಾಗಿಯೇ ಹರಡುತ್ತಿದ್ದು, ರಾಘವ್ ಮತ್ತು ಪರಿಣಿತಿ ಈ ಬಗ್ಗೆ ಮೌನ ವಹಿಸಿದ್ದಾರೆ. ವರದಿಗಳ ಪ್ರಕಾರ, ಈ ಜೋಡಿಯ ಕುಟುಂಬಸ್ಥರು ಸಂಪರ್ಕದಲ್ಲಿದ್ದಾರೆ. ಮದುವೆಯ ಚರ್ಚೆಗಳು ನಡೆಯುತ್ತಿವೆ.

ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಒಬ್ಬರನ್ನೊಬ್ಬರು ಇಷ್ಟಪಡುತ್ತಾರೆ. ಕೆಲ ಸಮಯದಿಂದ ಸ್ನೇಹಿತರಾಗಿ ಗುರುತಿಸಿಕೊಂಡಿದ್ದಾರೆ. ಆಸಕ್ತಿಗಳು ಹೊಂದಾಣಿಕೆ ಆಗುತ್ತವೆ. ಎರಡೂ ಕುಟುಂಬಗಳ ಆಪ್ತ ಮೂಲಗಳ ಪ್ರಕಾರ, ಶೀಘ್ರದಲ್ಲೇ ಅವರ ಮದುವೆಯ ವಿಷಯ ಹೊರಬೀಳಲಿದೆ. ಇಬ್ಬರೂ ತಮ್ಮ ಕೆಲಸದಲ್ಲಿ ನಿರತರಾಗಿರುವ ಕಾರಣ ಯಾವುದೇ ಸಮಾರಂಭಕ್ಕೆ ದಿನಾಂಕವನ್ನು ಆಯ್ಕೆ ಮಾಡುವುದು ಸವಾಲಿನ ಸಂಗತಿಯಾಗಿದೆಯಂತೆ.

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರೊಂದಿಗೆ ಎರಡು ಬಾರಿ ಕಾಣಿಸಿಕೊಂಡ ನಂತರ ಯುವ ರಾಜಕಾರಣಿಯ ಮದುವೆ ಬಗ್ಗೆ ಆಸಕ್ತಿ ಹುಟ್ಟಿಕೊಂಡಿದೆ. ಇತ್ತೀಚೆಗಷ್ಟೇ ಸಂಸದ ರಾಘವ್ ಚಡ್ಡಾ ಅವರನ್ನು ಈ ಬಗ್ಗೆ ಪ್ರಶ್ನಿಸಲಾಗಿತ್ತು. ಅದಕ್ಕೆ ಸಂಕೋಚದಿಂದಲೇ ಪ್ರತಿಕ್ರಿಯಿಸಿದ್ದ ಅವರು, 'ರಾಜನೀತಿ ಬಗ್ಗೆ ಕೇಳಿ, ಪರಿಣಿತಿ ಬಗ್ಗೆ ಅಲ್ಲ' ಎಂದು ಹೇಳಿದ್ದರು. ಮದುವೆ ಬಗ್ಗೆ ಏನಾದರು ನಿರ್ಧಾರವಾದರೆ ಖಂಡಿತವಾಗಿಯೂ ನಿಮಗೆ ಮಾಹಿತಿ ಕೊಡುತ್ತೇನೆ ಎಂದು ಕೂಡ ತಿಳಿಸಿದ್ದರು.

ಇದನ್ನೂ ಓದಿ: 'RC15' ಸೆಟ್​ನಲ್ಲಿ RRR ಸ್ಟಾರ್ ಪ್ರೀ ಬರ್ತ್‌ಡೇ ಸೆಲೆಬ್ರೇಶನ್: ಆಸ್ಕರ್‌ ತಾರೆಗೆ ಹೂಮಳೆ

ಕೆಲಸದ ವಿಚಾರ ಗಮನಿಸುವುದಾದರೆ, ಪರಿಣಿತಿ ಚೋಪ್ರಾ ಇಮ್ತಿಯಾಜ್ ಅಲಿ ಅವರ ಚಮ್ಕಿಲಾದಲ್ಲಿ ದಿಲ್ಜಿತ್ ದೋಸಾಂಜ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ನಟಿ ಇತ್ತೀಚೆಗೆ ತಮ್ಮ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ ಮತ್ತು ಸೆಟ್‌ಗಳಿಂದ ಫೋಟೋಗಳನ್ನು ಸಹ ಅಪ್‌ಲೋಡ್ ಮಾಡಿದ್ದಾರೆ. ಇಮ್ತಿಯಾಜ್ ಅಲಿ ಜೊತೆ ಪರಿಣಿತಿ ಕೆಲಸ ಮಾಡುತ್ತಿರುವುದು ಇದೇ ಮೊದಲು.

ಇದನ್ನೂ ಓದಿ: ರಾಜನೀತಿ ಬಗ್ಗೆ ಕೇಳಿ, ಪರಿಣಿತಿ ಬಗ್ಗೆ ಅಲ್ಲ: ಡೇಟಿಂಗ್ ವದಂತಿ ಬಗ್ಗೆ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಪ್ರತಿಕ್ರಿಯೆ

ಇನ್ನೂ ಹಿಂದಿ​ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಪರಿಣಿತಿ ಚೋಪ್ರಾ ಒಂದು ಸಮಯದಲ್ಲಿ ಬಹುಬೇಡಿಕೆ ನಟಿಯಾಗಿ ಮಿಂಚಿದ್ದರು. ಆದ್ರೆ ಇತ್ತೀಚೆಗೆ ಅವರ ಸಿನಿಮಾಗಳು ಹಿಟ್ ಆಗಿಲ್ಲ. ಲೇಡೀಸ್ ವರ್ಸಸ್ ರಿಕಿ ಬಹ್ಲ್, ಹಸೀ ತೋ ಫಸೀ, ಇಶ್ಕ್​​​ಜಾದೆ, ಶುದ್ಧ್ ದೇಸಿ ರೊಮ್ಯಾನ್ಸ್ ಇವರ ಮಹಿಳಾ ಪ್ರಧಾನ ಸಿನಿಮಾಗಳು. ದಿ ಗರ್ಲ್ ಆನ್ ದಿ ಟ್ರೈನ್, ಸಂದೀಪ್ ಔರ್ ಪಿಂಕಿ ಫರಾರ್ ಮತ್ತು ಸೈನಾ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಮುಂಬರುವ ಸಿನಿಮಾಗಳಲ್ಲಿ ನಾನು ಮಹಿಳಾ ಪ್ರಧಾನ ಪಾತ್ರಗಳನ್ನೇ ಮಾಡುವುದಾಗಿ ಈ ಹಿಂದೆ ಹೇಳಿಕೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.