ETV Bharat / entertainment

ಪರಿಣಿತಿ ಬರ್ತ್​​ಡೇಗೆ ರಾಘವ್​ ಸ್ಪೆಷಲ್ ವಿಶ್: ಡೇಟಿಂಗ್​ ದಿನಗಳ ಫೋಟೋ ಶೇರ್ - Parineeti Raghav dating photos

Parineeti Chopra Raghav Chadha: ರಾಘ್​ನೀತಿ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ.

Parineeti Chopra Raghav Chadha
ಪರಿಣಿತಿ ರಾಘವ್
author img

By ETV Bharat Karnataka Team

Published : Oct 22, 2023, 8:10 PM IST

ಹಿಂದಿ ಚಿತ್ರರಂಗದ ಅಭಿನೇತ್ರಿ ಪರಿಣಿತಿ ಚೋಪ್ರಾ ಅವರಿಗಿಂದು 35ನೇ ಬರ್ತ್ ಡೇ ಖುಷಿ. ಜನ್ಮದಿನದ ಸಂಭ್ರಮದಲ್ಲಿರುವ ಬಾಲಿವುಡ್​ ನವವಧುವಿಗೆ ಕುಟುಂಬ ಸದಸ್ಯರು, ಆಪ್ತರು, ಸಿನಿಮಾ ಗಣ್ಯರೂ ಸೇರಿದಂತೆ ಅಭಿಮಾನಿಗಳು ಶುಭ ಕೋರಿದ್ದಾರೆ. ಇತ್ತ, ಪ್ರೀತಿಯ ಪತಿ ಕೂಡ ಮುದ್ದಿನ ಪತ್ನಿಗೆ ಸ್ಪೆಷಲ್ ವಿಶ್ ಮಾಡಿದ್ದಾರೆ.

ಇತ್ತೀಚೆಗಷ್ಟೇ ರಾಜಸ್ಥಾನದ ಉದಯಪುರದದಲ್ಲಿ ಪರಿಣಿತಿ ಚೋಪ್ರಾ ಹಾಗೂ ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ರಾಘವ್ ಚಡ್ಡಾ ಅದ್ಧೂರಿಯಾಗಿ ಹಸೆಮಣೆ ಏರಿದ್ದರು. ಪ್ರೀತಿಗೆ ಮದುವೆ ಎಂಬ ಅಧಿಕೃತ ಮುದ್ರೆ ಒತ್ತಿದರು. ಲಂಡನ್‌ ದಿನಗಳಿಂದಲೂ ನಟಿಗೆ ಪರಿಚಿತರಾಗಿರುವ ರಾಘವ್ ಚಡ್ಡಾ ಇಂದು ಡೇಟಿಂಗ್ ದಿನಗಳ ಫೋಟೋಗಳನ್ನು ಹಂಚಿಕೊಂಡು ವಿಶೇಷವಾಗಿ ಶುಭ ಕೋರಿದ್ದಾರೆ.

ರಾಘವ್​​ ಚಡ್ಡಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪರಿಣಿತಿ ಜತೆಗಿನ ಸರಣಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವು ಡೇಟಿಂಗ್ ಟೈಮ್​ನ ಲವೆಬಲ್​ ಫೋಟೋಗಳಾಗಿವೆ. ''ಪಾರು, ನನ್ನ ಬದುಕನ್ನು ಬೆಳಗಿಸಿದಿರಿ. ನಿಮ್ಮ ಆ ಒಂದು ಸ್ಮೈಲ್ ನನ್ನ ಸವಾಲಿನ ಬದುಕನ್ನು ಸಹನೀಯವಾಗಿಸುತ್ತದೆ. ನನ್ನ ಪ್ರಪಂಚಕ್ಕೆ ಸಾಕಷ್ಟು ಖುಷಿ ತಂದಿದ್ದೀರಿ. ಈ ವಿಶೇಷ ದಿನ, ನಾನು ನಿಮ್ಮನ್ನೇ ಸೆಲೆಬ್ರೇಟ್ ಮಾಡಲು ಇಚ್ಛಿಸುತ್ತೇನೆ. ಮತ್ತಷ್ಟು ಪ್ರೀತಿ, ಖುಷಿ, ನೆನಪುಗಳನ್ನು ಜತೆಯಾಗಿ ಸೃಷ್ಟಿಸೋಣ. ಹ್ಯಾಪಿ ಬರ್ತ್ ಡೇ ವೈಫಿ'' ಎಂದು ಬರೆದುಕೊಂಡಿದ್ದಾರೆ. ರಾಘವ್​​ ಚಡ್ಡಾ ಅವರ ಹೃದಯಸ್ಪರ್ಶಿ ಬರಹಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಆಕರ್ಷಣೀಯ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಪರಿಣಿತಿ ಚೋಪ್ರಾ ಕೊನೆಯದಾಗಿ ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್​ ಜತೆ ಮಿಷನ್​ ರಾಣಿಗಂಜ್​ ಚಿತ್ರದಲ್ಲಿ ಕಾಣಿಸಿಕೊಂಡರು. ಇತ್ತೀಚೆಗಷ್ಟೇ ಸಿನಿಮಾ ಬಿಡುಗಡೆ ಆಗಿದ್ದು, ಹೇಳಿಕೊಳ್ಳುವ ಹಿಟ್ ಅನ್ನಿಸಲಿಲ್ಲ. ಮುಂದೆ ಅಮರ್​ ಸಿಂಗ್​ ಚಮ್ಕಿಲಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಇಮ್ತಿಯಾಜ್ ಅಲಿ ನಿರ್ದೇಶಿಸಿದ್ದಾರೆ. ದಿಲ್ಜಿತ್ ದೋಸಾಂಜ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಸಲ್ಮಾನ್​ ಖಾನ್​ಗೆ​ 'ಫ್ಲರ್ಟಿಂಗ್ ಸ್ಕಿಲ್'​​ ಪ್ರದರ್ಶಿಸಲು ಹೇಳಿದ ಕಂಗನಾ ರಣಾವತ್- ವಿಡಿಯೋ ನೋಡಿ!

ಬಹುದಿನಗಳಿಂದ ಡೇಟಿಂಗ್​ನಲ್ಲಿದ್ದ ರಾಘ್​ನೀತಿ ಜೋಡಿ ಸೆಪ್ಟೆಂಬರ್​ 23 ಮತ್ತು 24 ರಂದು ಅದ್ಧೂರಿಯಾಗಿ ಮದುವೆಯಾದರು. ರಾಜಸ್ಥಾನದ ಉದಯಪುರದದಲ್ಲಿ ಎರಡು ಐಷಾರಾಮಿ ಹೋಟೆಲ್‌ನಲ್ಲಿ ಅದ್ಧೂರಿ ವಿವಾಹ ಸಮಾರಂಭ ನಡೆಯಿತು. ಮೇ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ವಿದ್ಯಾಭ್ಯಾಸದ ಸಂದರ್ಭದಿಂದಲೇ ಪರಿಚಿತರಾಗಿದ್ದ ರಾಘ್​ನೀತಿ ಡೇಟಿಂಗ್​ ವಿಚಾರ ಇದೇ ವರ್ಷದ ಮಾರ್ಚ್​​ನಲ್ಲಿ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: ನಾಳೆ ಪ್ರಭಾಸ್​ ಜನ್ಮದಿನ: ಹೈದರಾಬಾದ್‌ನಲ್ಲಿ ಅತಿ ದೊಡ್ಡ ಕಟೌಟ್‌ಗೆ ಸಿದ್ಧತೆ, 'ಸಲಾರ್' ಟ್ರೇಲರ್ ರಿಲೀಸ್ ನಿರೀಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.