ETV Bharat / entertainment

Parineeti Chopra - Raghav Chadha Wedding: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪರಿಣಿತಿ ಚೋಪ್ರಾ-ರಾಘವ್​ ಚಡ್ಡಾ - ಈಟಿವಿ ಭಾರತ ಕನ್ನಡ

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Parineeti Chopra, Raghav Chadha are married! Revisiting their romance timeline
ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಪರಿಣಿತಿ ಚೋಪ್ರಾ ಮತ್ತು ರಾಘವ್​ ಚಡ್ಡಾ
author img

By ETV Bharat Karnataka Team

Published : Sep 24, 2023, 8:22 PM IST

ಬಾಲಿವುಡ್​ ಪ್ರೇಮಪಕ್ಷಿಗಳಾದ ನಟಿ ಪರಿಣಿತಿ ಚೋಪ್ರಾ ಮತ್ತು ಸಂಸದ ರಾಘವ್​ ಚಡ್ಡಾ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ರಾಜಸ್ಥಾನದ ಉದಯಪುರದ ಲೀಲಾ ಪ್ಯಾಲೇಸ್ ಹೋಟೆಲ್‌ನಲ್ಲಿ ಈ ಜೋಡಿ ಕುಟುಂಬಸ್ಥರು, ಆಪ್ತರು ಮತ್ತು ಗಣ್ಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ. ಈ ವೇಳೆ ವಧು ಪರಿಣಿತಿ ಚೋಪ್ರಾ ತಿಳಿ ಬಣ್ಣದ ಲೆಹಂಗಾದಲ್ಲಿ ಸುಂದರವಾಗಿ ಕಾಣುತ್ತಿದ್ದರೆ, ರಾಘವ್​ ಚಡ್ಡಾ ಶೆರ್ವಾನಿಯಲ್ಲಿ ಮಿಂಚುತ್ತಿದ್ದರು.

ಈ ವರ್ಷದ ಮೇ ತಿಂಗಳಲ್ಲಿ ರಾಘ್​ನೀತಿ ದೆಹಲಿಯ ಕಪುರ್ತಲಾ ಹೌಸ್​ನಲ್ಲಿ ಉಂಗುರ ಬದಲಾಯಿಸಿಕೊಂಡಿದ್ದರು. ಇಂದು (ಭಾನುವಾರ) ಉದಯಪುರದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಪಿಚೋಲಾ ಸರೋವರದ ನಡುವೆ ಇರುವ ಹೋಟೆಲ್​ನಲ್ಲಿ ಪರಿಣಿತಿ ಮತ್ತು ರಾಘವ್ ಮದುವೆ ನಡೆದಿದೆ. ಮದುವೆಗೂ ಮುಂಚಿತವಾಗಿ ಶನಿವಾರ ರಾತ್ರಿ ಸಂಗೀತ ಕಾರ್ಯಕ್ರಮ ಕೂಡ ನಡೆದಿತ್ತು.

ಈ ವಿವಾಹ ಸಮಾರಂಭದಲ್ಲಿ ಬಾಲಿವುಡ್​ ಸ್ಟಾರ್​ಗಳು, ಹೆಸರಾಂತ ರಾಜಕಾರಣಿಗಳು ಭಾಗವಹಿಸಿದ್ದರು. ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಮತ್ತು ಪಂಜಾಬ್​ ಸಿಎಂ ಭಗವಂತ್​ ಮಾನ್​ ಅವರು ರಾಘವ್​ ಚಡ್ಡಾ ಅವರ ತಂದೆ ವೈಯಕ್ತಿಕವಾಗಿ ಸ್ವಾಗತಿಸಿದರು. ಪರಿಣಿತಿ ಚೋಪ್ರಾ ಆಪ್ತ ಸ್ನೇಹಿತೆ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ಬಾಲಿವುಡ್​ನ ಜನಪ್ರಿಯ ಫ್ಯಾಷನ್​ ಡಿಸೈನರ್​​ ಮನೀಶ್ ಮಲ್ಹೋತ್ರಾ, ಭಾಗ್ಯಶ್ರೀ ಮತ್ತು ಇತರರು ಇಂದು ಬೆಳಗ್ಗೆಯೇ ಉದಯಪುರಕ್ಕೆ ಆಗಮಿಸಿದ್ದಾರೆ.

ರಾಘವ್​ ಚಡ್ಡಾ ರಾಜಕಾರಣಿ ಆಗಿದ್ದರೆ, ಪರಿಣಿತಿ ಚೋಪ್ರಾ ನಟಿ. ಇವರಿಬ್ಬರ ವೃತ್ತಿ ಜೀವನವೇ ಬೇರೆ. ಮಾಡುವ ಕೆಲಸಗಳು ಕೂಡ ಬೇರೆಯೇ. ಇವರಿಬ್ಬರು ತಮ್ಮ ಕ್ಷೇತ್ರಗಳಲ್ಲಿ ಚಿರಪರಿಚಿತರು. ಪರಿಣಿತಿ ಚೋಪ್ರಾ ಸುಮಾರು ಒಂದು ದಶಕದಿಂದ ಹಿಂದಿ ಚಲನಚಿತ್ರಗಳಲ್ಲಿ ಹೆಸರುವಾಸಿಯಾಗಿದ್ದಾರೆ. ರಾಘವ್​ ಚಡ್ಡಾ ಚಿಕ್ಕ ವಯಸ್ಸಿನಲ್ಲಿಯೇ ಸಂಸದನಾಗಿ ಗುರುತಿಸಿಕೊಂಡಿದ್ದಾರೆ. ಇವರಿಬ್ಬರಿಗೂ ಅಪಾರ ಅಭಿಮಾನಿಗಳಿದ್ದಾರೆ. ಇಂದು ಇವರ ಮದುವೆಗಾಗಿ ಸಾಕಷ್ಟು ಮಂದಿ ಕಾತುರರಾಗಿದ್ದರು.

ಇದನ್ನೂ ಓದಿ: ಪರಿಣಿತಿ ರಾಘವ್​ ವಿವಾಹ: ಸಾನಿಯಾ ಮಿರ್ಜಾ ಸೇರಿ ಗಣ್ಯಾತಿಗಣ್ಯರ ಆಗಮನ - ವಿಡಿಯೋ ನೋಡಿ

ದೋಣಿಯಲ್ಲಿ ವರನ ಎಂಟ್ರಿ: ರಾಘವ್​ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ಅತ್ಯಂತ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಮಧ್ಯಾಹ್ನ 2 ಗಂಟೆಗೆ ವರ ರಾಘವ್​ ತಾಜ್​ ಲೇಕ್​ ಪ್ಯಾಲೇಸ್​ನಿಂದ 18 ದೋಣಿಗಳಲ್ಲಿ ಮದುವೆ ಮೆರವಣಿಗೆಯೊಂದಿಗೆ ಲೀಲಾ ಪ್ಯಾಲೇಸ್​ಗೆ ತೆರಳಿದರು. ಈ ವೇಳೆ ಅರವಿಂದ್​ ಕೇಜ್ರಿವಾಲ್​, ಭಗವಂತ್​ ಮಾನ್​ ಹಾಗೂ ಕ್ರಿಕೆಟಿಗ ಹರ್ಭಜನ್​ ಸಿಂಗ್ ಪಾಲ್ಗೊಂಡಿದ್ದರು. ಮದುವೆಗೆ ಅತಿಥಿಗಳು ರಾಜಸ್ಥಾನಿ ಪೇಟವನ್ನು ಧರಿಸಿದ್ದರು. ವರನ ಕುಟುಂಬ ಲೀಲಾ ಪ್ಯಾಲೇಸ್​ ತಲುಪುತ್ತಿದ್ದಂತೆ ಅವರನ್ನು ಪರಿಣಿತಿ ಚೋಪ್ರಾ ಕುಟುಂಬ ರಾಜಶೈಲಿಯಲ್ಲಿ ಸ್ವಾಗತಿಸಿದರು. ​

ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಮಾರ್ಚ್ ತಿಂಗಳಲ್ಲಿ ಪದೇ ಪದೆ ಒಟ್ಟಿಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಡೇಟಿಂಗ್​ ವದಂತಿ ಆರಂಭವಾಗಿತ್ತು. ಅದಾದ ಬಳಿಕವೂ ರೆಸ್ಟೋರೆಂಟ್​ ಹೊರಗೆ, ಏರ್​ಪೋರ್ಟ್​ಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಹಲವು ಗಣ್ಯರು ಸಹ ಪರೋಕ್ಷವಾಗಿ ಈ ಜೋಡಿ ಪ್ರೀತಿಯಲ್ಲಿರುವ ಬಗ್ಗೆ ಮಾತನಾಡಿದ್ದರು.

ನಿಶ್ಚಿತಾರ್ಥಕ್ಕೂ ಮುನ್ನ ಜೋಡಿ ಮೊಹಾಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯವನ್ನು ಒಟ್ಟಿಗೆ ವೀಕ್ಷಿಸಿ ಗಮನ ಸೆಳೆದಿದ್ದರು. ಪಂದ್ಯದ ಹಲವಾರು ಚಿತ್ರಗಳು ಮತ್ತು ವಿಡಿಯೋ ತುಣುಕುಗಳು ವೈರಲ್ ಆಗಿತ್ತು. ಒಂದು ಚಿತ್ರದಲ್ಲಿ, ಪರಿಣಿತಿ ರಾಘವ್ ಅವರ ಭುಜದ ಮೇಲೆ ಒರಗಿ ಸಖತ್​ ರೊಮ್ಯಾಂಟಿಕ್​ ಆಗಿ ಕಾಣಿಸಿಕೊಂಡಿದ್ದರು. ಪ್ರೇಕ್ಷಕರು ಸ್ಟೇಡಿಯಂನಲ್ಲಿ ನಟಿಯನ್ನು ಅತ್ತಿಗೆ ಎಂದು ಕರೆದಿದ್ದರು. ಇನ್ನು ಪರಿಣಿತಿ ಮತ್ತು ರಾಘವ್ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಒಟ್ಟಿಗೆ ವಿದ್ಯಾಭ್ಯಾಸ ಮಾಡಿದ್ದಾರೆ. ದೀರ್ಘಕಾಲದ ಸ್ನೇಹಿತರು ಕೂಡ ಹೌದು.

ಇದನ್ನೂ ಓದಿ: ರಾಘ್​ನೀತಿ ವಿವಾಹೋತ್ಸವ: ಕೇಜ್ರಿವಾಲ್​, ಭಗವಂತ್​ ಮಾನ್​ ಆಗಮನ; ಅತಿಥಿಗಳಿಗೆ ವಿಶೇಷ ಭಕ್ಷ್ಯಗಳ ತಯಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.