ETV Bharat / entertainment

ಪರಿಣಿತಿ ಚೋಪ್ರಾ-ಹಾರ್ಡಿ ಸಂಧು ಅಭಿನಯದ ಆ್ಯಕ್ಷನ್ ಥ್ರಿಲ್ಲರ್ ಚಿತ್ರ 'ಕೋಡ್ ನೇಮ್ ತಿರಂಗಾ' ಶೀಘ್ರದಲ್ಲೇ ಬಿಡುಗಡೆ - ಪರಿಣಿತಿ ಚೋಪ್ರಾ ಮತ್ತು ಹಾರ್ಡಿ ಸಂಧು

ಪರಿಣಿತಿ ಚೋಪ್ರಾ ಮತ್ತು ಹಾರ್ಡಿ ಸಂಧು ಅಭಿನಯದ ಮುಂಬರುವ ಚಿತ್ರದ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಲಾಗಿದೆ. ಕೋಡ್ ನೇಮ್ ತಿರಂಗಾ ಎಂಬ ಚಿತ್ರ ಇದಾಗಿದ್ದು ಅಕ್ಟೋಬರ್ 14, 2022 ರಂದು ಬಿಡುಗಡೆಯಾಗಲಿದೆ.

Parineeti Chopra and Harrdy Sandhu starrer action thriller gets title, release date announced

author img

By

Published : Sep 19, 2022, 6:11 PM IST

Updated : Sep 19, 2022, 6:44 PM IST

ಮುಂಬೈ (ಮಹಾರಾಷ್ಟ್ರ): ಬಾಲಿವುಡ್​ ತಾರೆಗಳಾದ ಪರಿಣಿತಿ ಚೋಪ್ರಾ ಮತ್ತು ಹಾರ್ಡಿ ಸಂಧು ಅಭಿನಯದ ಮುಂಬರುವ ಹೊಸ ಚಿತ್ರದ ಶೀರ್ಷಿಕೆಯನ್ನು ಬಿಡುಗಡೆ ಮಾಡಲಾಯಿತು. 'ಕೋಡ್ ನೇಮ್ ತಿರಂಗಾ' ಎಂದು ಚಿತ್ರಕ್ಕೆ ಹೆಸರಿಡಲಾಗಿದ್ದು, ಚಿತ್ರದ ನಿರ್ಮಾಪಕರು ಸೋಮವಾರ ಚಿತ್ರದ ಶೀರ್ಷಿಕೆ ಮತ್ತು ಬಿಡುಗಡೆ ದಿನಾಂಕ ಬಹಿರಂಗಪಡಿಸಿದ್ದಾರೆ.

ಬೇಹುಗಾರಿಕೆಯ ಆ್ಯಕ್ಷನ್ ಥ್ರಿಲ್ಲರ್ ಇದಾಗಿದೆ. ತ್ಯಾಗ ಸೇರಿದಂತೆ ಸಾವಿನ ನಡುವೆಯೂ ಎದುರಾಳಿಗಳನ್ನು ಸದೆ ಬಡಿಯುವ ಒಂದು ಸೇನಾ ಕಾರ್ಯಾಚರಣೆ ಸುತ್ತ ಈ ಚಿತ್ರವನ್ನು ಹೆಣೆಯಲಾಗಿದೆಯಂತೆ. ರಾ ಎಜೆಂಟ್ ಆಗಿ ಕಾಣಿಸಿಕೊಳ್ಳಲಿರುವ ಪರಿಣಿತಿ ಚೋಪ್ರಾ, ಏಕ ಕಾಲದಲ್ಲಿ ಬರುವ ಸಮಸ್ಯೆಯನ್ನು ಹೇಗೆ ಎದುರಿಸಲಿದ್ದಾರೆ ಅನ್ನೋದೇ ತಿರಂಗಾ.

ಟಿ-ಸೀರೀಸ್, ರಿಲಯನ್ಸ್ ಎಂಟರ್‌ಟೈನ್‌ಮೆಂಟ್, ಫಿಲ್ಮ್ ಹ್ಯಾಂಗರ್ ಸಿದ್ಧಗೊಳ್ಳುತ್ತಿರುವ ಕೋಡ್ ನೇಮ್: ತಿರಂಗಾ ಚಿತ್ರ ಇದಾಗಿದ್ದು ನಿರ್ಮಾಪಕ ರಿಭು ದಾಸ್‌ಗುಪ್ತ ಅವರು ಅಕ್ಟೋಬರ್ 14 ರಂದು ದೊಡ್ಡ ಪರದೆಯಲ್ಲಿ ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ. ಪರಿಣಿತಿ ಚೋಪ್ರಾ ಜೊತೆಗೆ ಹಾರ್ಡಿ ಸಂಧು ನಾಯಕರಾಗಿ ನಟಿಸಿದ್ದಾರೆ. ಇವರಲ್ಲದೇ ಶರದ್ ಕೇಳ್ಕರ್, ರಜಿತ್ ಕಪೂರ್, ದಿಬ್ಯೇಂದು ಭಟ್ಟಾಚಾರ್ಯ, ಶಿಶಿರ್ ಶರ್ಮಾ, ಸಬ್ಯಸಾಚಿ ಚಕ್ರವರ್ತಿ ಮತ್ತು ದೀಶ್ ಮಾರಿವಾಲಾ ಅವರಂತಹ ಅನುಭವಿ ನಟರು ಚಿತ್ರದಲ್ಲಿದ್ದಾರೆ.

ಪರಿಣಿತಿ ಚೋಪ್ರಾ ತಮ್ಮ ಇನ್ಸ್​ಟಾಗ್ರಾಮ್​ನಲ್ಲಿ ಹಾರ್ಡಿ ಸಂಧು ಅವರ ಜೊತೆಗೆ ಕಾಣಿಸಿಕೊಂಡಿರುವ ಚಿತ್ರದ ಥಿಯೇಟ್ರಿಕಲ್ ಪೋಸ್ಟರ್​ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನು ಉಲ್ಲೇಖಿಸಿದ್ದಾರೆ. ಕೋಡ್ ನೇಮ್: ತಿರಂಗಾ ಚಿತರವು ಅಕ್ಟೋಬರ್ 14, 2022 ರಂದು ಬಿಡುಗಡೆಯಾಗಲಿದೆ. ಚಿತ್ರವನ್ನು ರಿಭು ದಾಸ್‌ಗುಪ್ತಾ ನಿರ್ದೇಶಿಸಿದ್ದಾರೆ. ಪರಿಣಿತಿ ರಾ ಏಜೆಂಟ್ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಪರಿಣಿತಿ ಚೋಪ್ರಾ ಹೇಳಿಕೊಂಡಿದ್ದಾರೆ.

Parineeti Chopra and Harrdy Sandhu starrer action thriller gets title, release date announced
ಕೋಡ್ ನೇಮ್ ತಿರಂಗಾ ಚಿತ್ರದ ಪೋಸ್ಟರ್​

ಅವರು ಹಂಚಿಕೊಂಡ ಚಿತ್ರದ ಪೋಸ್ಟರ್ ಒಂದರಲ್ಲಿ, ಕಣ್ಣು ಮುಚ್ಚಿರುವಾಗ ಮುಖಕ್ಕೆ ಗನ್ ಹಿಡಿದಿರುವುದನ್ನು ಕಾಣಬಹುದು. ಮತ್ತೊಂದು ಚಿತ್ರದಲ್ಲಿ, ಪರಿಣಿತಿ ಚೋಪ್ರಾ ತನ್ನ ಸಹ-ನಟ ಹಾರ್ಡಿ ಅಪ್ಪಿಕೊಂಡಿರುವುನ್ನು ಕಾಣಬಹುದು. ಬಹು ಬೇಡಿಕೆಯ ಗಾಯಕರಾಗಿರುವ ಹಾರ್ಡಿ ಸಂಧು ಅವರು ದೊಡದಡ ಪರದೆ ಮೂಲಕ ಪ್ರೇಕ್ಷಕರನ್ನು ಅಚ್ಚರಿಗೊಳಿಸುತ್ತಾರೆ.

ಬಿಡುಗಡೆಯ ದಿನವನ್ನು ಎದುರು ನೋಡುತ್ತಿರುವ ರಿಭು ದಾಸ್‌ಗುಪ್ತಾ, "ನನ್ನ ಮುಂದಿನ ಕೋಡ್ ನೇಮ್: ತಿರಂಗಾ ಚಿತ್ರವು ಇದೇ ಅಕ್ಟೋಬರ್ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಪ್ರೇಕ್ಷಕರು ಈ ಆ್ಯಕ್ಷನ್ ಎಂಟರ್‌ಟೈನರ್ ಅನ್ನು ಆನಂದಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ತನ್ನ ರಾಷ್ಟ್ರಕ್ಕಾಗಿ ಓರ್ವ ಸೈನಿಕ ತನ್ನ ಉಸಿರು ಕೊಡುವ ಚಿತ್ರವನ್ನು ಬೆಂಬಲಿಸದೇ ಇರದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಜಾಕ್ವೆಲಿನ್ ಫರ್ನಾಂಡೀಸ್: ಐದು ದಿನಗಳಲ್ಲಿ ಎರಡನೇ ಬಾರಿ ಗ್ರಿಲ್​

Last Updated : Sep 19, 2022, 6:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.