ETV Bharat / entertainment

'ಅನಿಮಲ್'ನ ಪಾಪ ಮೇರಿ ಜಾನ್‌: ಮಕ್ಕಳ ದಿನಾಚರಣೆಯಂದು ತಂದೆ ಮಗನ ಹಾಡು ಅನಾವರಣ - ಸಂದೀಪ್​ ರೆಡ್ಡಿ ವಂಗಾ

'ಅನಿಮಲ್' ಸಿನಿಮಾದಿಂದ ತಂದೆ ಮಗನ ಕುರಿತ ಹಾಡು 'ಪಾಪ ಮೇರಿ ಜಾನ್‌' ಅನಾವರಣಗೊಂಡಿದೆ.

Papa Meri Jaan song from Animal
ಅನಿಮಲ್ ಸಿನಿಮಾದ ಪಾಪ ಮೇರಿ ಜಾನ್‌ ಸಾಂಗ್
author img

By ETV Bharat Karnataka Team

Published : Nov 14, 2023, 2:46 PM IST

Updated : Nov 14, 2023, 4:03 PM IST

ಬಾಲಿವುಡ್​ ಸ್ಟಾರ್ ಹೀರೋ ರಣ್​ಬೀರ್​ ಕಪೂರ್ ಮತ್ತು ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯ​ ಮುಂಬರುವ ಆ್ಯಕ್ಷನ್​​ ಥ್ರಿಲ್ಲರ್ ಸಿನಿಮಾ 'ಅನಿಮಲ್'. ಚಿತ್ರ ತಯಾರಕರಿಂದು ಚಿತ್ರದ ಮೂರನೇ ಹಾಡು 'ಪಾಪ ಮೇರಿ ಜಾನ್‌' ಅನ್ನು ಅನಾವರಣಗೊಳಿಸಿದ್ದಾರೆ. ಮಕ್ಕಳ ದಿನಾಚರಣೆಯಂದು ತಂದೆ ಮಗನ ಹಾಡು ಬಿಡುಗಡೆ ಆಗಿದೆ. ಅನಿಲ್ ಕಪೂರ್ ಹಾಗೂ ರಣ್​​​ಬೀರ್ ಕಪೂರ್ ನಡುವಿನ ಸಂಬಂಧ ಈ ಚಿತ್ರದಲ್ಲಿ ಹೇಗಿರಲಿದೆ ಎಂಬುದರ ಒಂದು ಸಣ್ಣ ನೋಟವನ್ನು ಪಾಪ ಮೇರಿ ಜಾನ್‌ ಕೊಟ್ಟಿದೆ.

  • " class="align-text-top noRightClick twitterSection" data="">

ನಟ ಅನಿಲ್ ಕಪೂರ್ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಹಾಡಿನ ಫೋಸ್ಟರ್ ಹಂಚಿಕೊಂಡು, ಪಂಚ ಭಾಷೆಗಳಲ್ಲಿ ಮನಮುಟ್ಟುವ ಹಾಡು ಅನಾವರಣಗೊಂಡಿದೆ ಎಂದು ಬರೆದುಕೊಂಡಿದ್ದಾರೆ. ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಐದು ಭಾಷೆಗಳಲ್ಲಿಯೂ ಇಂದು ಸಾಂಗ್​ ರಿಲೀಸ್​ ಆಗಿದೆ. ಪಾಪ ಮೇರಿ ಜಾನ್​, ನಾನ್ನ ನೂವು ನಾ ಪ್ರಾಣಂ, ನೀ ಎನ್ ಉಲಗಮ್, ನನ್ನ ರವಿ ನೀನೆ, ನೀಯಾನಖಿಲಂ ಶೀರ್ಷಿಕೆಗಳಲ್ಲಿ ಹಾಡು ಬಿಡುಗಡೆ ಆಗಿದೆ. ಹಿಂದಿ ಆವೃತ್ತಿಯನ್ನು ಖ್ಯಾತ ಗಾಯಕ ಸೋನು ನಿಗಮ್ ಹಾಡಿದ್ದಾರೆ. ಸೋನು ಅವರ ಮಧುರ ದನಿ, ರಣ್​​ಬೀರ್ ಮತ್ತು ಅನಿಲ್ ಕಪೂರ್ ಅವರ ನಟನೆ ಈ ಚಿತ್ರದಲ್ಲಿನ ತಂದೆ ಮಗನ ನಡುವಿನ ಸೂಕ್ಷ್ಮ ವಿಚಾರಗಳನ್ನು ಅಚ್ಚುಕಟ್ಟಾಗಿ ಬಹಿರಂಗಪಡಿಸಿದೆ.

ಸಂದೀಪ್​ ರೆಡ್ಡಿ ವಂಗಾ ನಿರ್ದೇಶನದ 'ಅನಿಮಲ್' ಚಿತ್ರದ ಟೀಸರ್ ಕಳೆದ ಕೆಲ ದಿನಗಳ ಹಿಂದೆ ಬಿಡುಗಡೆ ಆಗಿದ್ದು, ತಂದೆ ಮಗನ ಸಂಬಂಧದಲ್ಲಿನ ಅಂತರವನ್ನು ಸೂಚಿಸಿತ್ತು. ಇದೀಗ ಬಿಡುಗಡೆಯಾಗಿರುವ ಈ ಹಾಡು ರಣ್​ಬೀರ್​ ಕಪೂರ್​ - ಅನಿಲ್​ ಕಪೂರ್​​ ರಿಲೇಶನ್​​ಶಿಪ್ ಬಗ್ಗೆ ಕುತೂಹಲ ಹೆಚ್ಚಿಸಿದೆ. ಈಗಾಗಲೇ ಬಿಡುಗಡೆ ಆಗಿರುವ ಹುವಾ ಮೈನ್ ಮತ್ತು ಸತ್ರಂಗ ಹಾಡುಗಳು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸ್ವೀಕರಿಸಿದೆ. ಇಂದು ರಿಲೀಸ್​ ಆಗಿರುವ 'ಪಾಪಾ ಮೇರಿ ಜಾನ್' ಪ್ರೇಕ್ಷಕರ ಮನ ಮುಟ್ಟುವಂತಿದ್ದು, ಸಿನಿಮಾ ಮೇಲಿನ ಕುತೂಹಲ ಹೆಚ್ಚಿಸುವುದರಲ್ಲಿ ಸಂದೇಹವೇ ಇಲ್ಲ.

ಇದನ್ನೂ ಓದಿ: 54th IFFI: ಗೋವಾದಲ್ಲಿ ನಡೆಯಲಿರುವ ಪ್ರತಿಷ್ಠಿತ ಚಲನಚಿತ್ರೋತ್ಸವದ ಮಾಹಿತಿ ನಿಮಗಾಗಿ

ಅನಿಮಲ್ ಸಿನಿಮಾವನ್ನು ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್ ಅವರ ಟಿ - ಸೀರೀಸ್, ಪ್ರಣಯ್ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್ ಮತ್ತು ಮುರಾದ್ ಖೇತಾನಿಯವರ ಸಿನಿ 1 ಸ್ಟುಡಿಯೋಸ್ ನಿರ್ಮಾಣ ಮಾಡಿದೆ. ತ್ರಿಪ್ತಿ ಡಿಮ್ರಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಶ್ಮಿಕಾ ಮಂದಣ್ಣ ಅವರು ರಣ್​​ಬೀರ್ ಕಪೂರ್ ಅವರ ಸಂಗಾತಿ ಗೀತಾಂಜಲಿ ಪಾತ್ರ ನಿರ್ವಹಿಸಿದ್ದಾರೆ. ಚಿತ್ರ ಆಗಸ್ಟ್ 11ಕ್ಕೆ ಬಿಡುಗಡೆಗೊಳ್ಳಲು ಸಿದ್ಧತೆ ನಡೆಸಲಾಗಿತ್ತು. ಆದರೆ, ಪೋಸ್ಟ್ ಪ್ರೊಡಕ್ಷನ್ ಕೆಲಸ ವಿಳಂಬವಾದ ಕಾರಣ ಬಿಡುಗಡೆ ದಿನಾಂಕ ಮುಂದೂಡಲಾಯ್ತು. ಡಿಸೆಂಬರ್ 1ರಂದು ಚಿತ್ರಮಂದಿರಗಳಲ್ಲಿ ಅನಿಮಲ್ ತೆರೆಕಾಣಲಿದೆ.

ಇದನ್ನೂ ಓದಿ: ಸಾಲು ಸಾಲು ಸಿನಿಮಾಗಳಲ್ಲಿ ಶ್ರೀಲೀಲಾ ಬ್ಯುಸಿ: ಹೊಸ ಚಿತ್ತಾರಗಳಲ್ಲಿ ಚೆಲುವೆ ಮಿಂಚಿಂಗ್​

Last Updated : Nov 14, 2023, 4:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.