ETV Bharat / entertainment

ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ ಜನ್ಮದಿನ; 'ಬಾಹುಬಲಿ'ಯ ಮುಂದಿನ ಸಿನಿಮಾಗಳಿವು.. - ಈಟಿವಿ ಭಾರತ ಕನ್ನಡ

ಭಾರತೀಯ ಚಿತ್ರರಂಗದ ಜನಪ್ರಿಯ ನಟ ಪ್ರಭಾಸ್​ ಇಂದು 44ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

Pan india star prabhas 44th birthday
ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ ಜನ್ಮದಿನ; 'ಬಾಹುಬಲಿ'ಯ ಮುಂದಿನ ಸಿನಿಮಾಗಳಿವು..
author img

By ETV Bharat Karnataka Team

Published : Oct 23, 2023, 9:21 AM IST

ಇಂದು ಪ್ಯಾನ್​ ಇಂಡಿಯಾ ಸ್ಟಾರ್​​ ಪ್ರಭಾಸ್ ಜನ್ಮದಿನ. ಭಾರತೀಯ ಚಿತ್ರರಂಗದ ಜನಪ್ರಿಯ ನಟ 44ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇವರಿಗೆ ಕುಟುಂಬಸ್ಥರು, ಸ್ನೇಹಿತರು, ಸಿನಿ ತಾರೆಯರು ಹಾಗೂ ಅಭಿಮಾನಿಗಳು ಜನ್ಮದಿನದ ಶುಭಾಶಯಗಳನ್ನು ಕೋರುತ್ತಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಪ್ರಭಾಸ್, ಎಸ್​​ಎಸ್​ ರಾಜಮೌಳಿ ನಿರ್ದೇಶನದ​​ 'ಬಾಹುಬಲಿ' ಸಿನಿಮಾ ಮೂಲಕ ಭಾರತದಾದ್ಯಂತ ಜನಪ್ರಿಯತೆ ಹೆಚ್ಚಿಸಿಕೊಂಡರು. ಈ ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರಿ​ ಕ್ರೇಜ್ ಸೃಷ್ಟಿಸಿತ್ತು. ಈ ಮೂಲಕ ಪ್ರಭಾಸ್ ಫ್ಯಾನ್ ಫಾಲೋಯಿಂಗ್ ಕೂಡ ಹೆಚ್ಚಾಯಿತು.

ರಾಷ್ಟ್ರವ್ಯಾಪಿ ಖ್ಯಾತಿ ಗಳಿಸಿರುವ ನಟ ಇತ್ತೀಚಿನ ದಿನಗಳಲ್ಲಿ ಹಿಟ್​ ಜೊತೆ ಫ್ಲಾಪ್​ಗಳನ್ನು ಕೂಡ ಸ್ವೀಕರಿಸುತ್ತಿದ್ದಾರೆ. ದಕ್ಷಿಣದಿಂದ ಹಿಡಿದು ಉತ್ತರದವರೆಗೆ ಚಲನಚಿತ್ರೋದ್ಯಮದಲ್ಲಿ ಅದ್ಭುತ ತಾರೆಯಾಗಿ ಮಿಂಚುತ್ತಿದ್ದಾರೆ. ಪ್ರಭಾಸ್​ ಕೈಯಲ್ಲಿ ಈಗಾಗಲೇ ಸಾಕಷ್ಟು ಸಿನಿಮಾಗಳಿವೆ. ವಿಭಿನ್ನ ಕಥೆಗಳೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಇಂದು ನಟನ ಜನ್ಮದಿನದ ಸಲುವಾಗಿ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರಗಳ ಬಗ್ಗೆ ಇಲ್ಲಿದೆ ಮಾಹಿತಿ...

ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಪ್ರಭಾಸ್​ ಅವರಿಗೆ 'ಬಾಹುಬಲಿ' ಸಿನಿಮಾ ವಿಶ್ವದಾದ್ಯಂತ ಕ್ರೇಜ್​ ತಂದುಕೊಟ್ಟಿತು. ಇವರ ಸಿನಿ ಜೀವನದ ಪ್ರಯಾಣ ಮುಂದಿನ ತಲೆಮಾರಿಗೂ ಸ್ಫೂರ್ತಿಯಾಗಿ ಉಳಿಯಲಿದೆ. ಕಠಿಣ ಶ್ರಮ, ಛಲ, ಗುರಿ ಇದ್ದರೆ, ಅದಕ್ಕೆ ಬೇಕಾದ ತಯಾರಿ ಮಾಡಿಕೊಂಡರೆ, ಎಂತಹ ವ್ಯಕ್ತಿ ಕೂಡ ಪ್ಯಾನ್​ ಇಂಡಿಯಾ ಸ್ಟಾರ್​ ಆಗಬಹುದು ಎಂಬುದನ್ನು ಪ್ರಭಾಸ್​ ಸಾಬೀತುಪಡಿಸಿದ್ದಾರೆ. ಅವರ ಅಭಿಮಾನಿಗಳು ಸದ್ಯ 'ಬಾಹುಬಲಿ'ಗಿಂತ ಹೆಚ್ಚಿನದ್ದನ್ನು ನಟನಿಂದ ನಿರೀಕ್ಷಿಸುತ್ತಿದ್ದಾರೆ. ಅದಕ್ಕಾಗಿ ಸಾಕಷ್ಟು ಸಿನಿಮಾಗಳು ಈಗಾಗಲೇ ಸಿದ್ಧಗೊಳ್ಳುತ್ತಿವೆ.

'ಸಲಾರ್​': ಪ್ರಭಾಸ್​ ನಟನೆಯ ಮುಂಬರುವ ಬಹುನಿರೀಕ್ಷೆಯ ಚಿತ್ರ 'ಸಲಾರ್​'. 'ಕೆಜಿಎಫ್​' ಖ್ಯಾತಿಯ ಪ್ರಶಾಂತ್​ ನೀಲ್​ ನಿರ್ದೇಶನದ ಆಕ್ಷನ್​ ಥ್ರಿಲ್ಲರ್​ ಸಿನಿಮಾವಿದು. ಭಾರತ, ಯುರೋಪ್​, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ 400 ಕೋಟಿ ರೂಪಾಯಿಗಳ ಅದ್ಧೂರಿ ಬಜೆಟ್​ನಲ್ಲಿ ಚಿತ್ರ ತಯಾರಾಗುತ್ತಿದೆ. ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್​ ಬಂಡವಾಳ ಹೂಡಿದೆ. ಡಿಸೆಂಬರ್​ 22ರಂದು ಸಿನಿಮಾ ಬಿಡುಗಡೆಯಾಗಲಿದೆ. ಇಂದು ಪ್ರಭಾಸ್​ ಜನ್ಮದಿನದ ಸಲುವಾಗಿ 'ಸಲಾರ್​' ಟ್ರೇಲರ್​ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ನಟ ಪ್ರಭಾಸ್ ಇನ್​ಸ್ಟಾಗ್ರಾಮ್​ ಖಾತೆ ಮಾಯ, ಫ್ಯಾನ್ಸ್​ಗೆ ಶಾಕ್-ಇದು 'ಸಲಾರ್'​ ಪ್ರಚಾರದ ಭಾಗವೇ?

'ಕಲ್ಕಿ 2898 ಎಡಿ': ಭಾರತೀಯ ಚಿತ್ರರಂಗದ ಖ್ಯಾತ ನಟರ ಸಮಾಗಮ 'ಕಲ್ಕಿ 2898 ಎಡಿ'ಯಲ್ಲಾಗಿದೆ. ಪ್ರಭಾಸ್​ ಮುಖ್ಯಭೂಮಿಕೆಯ ಈ ಚಿತ್ರದಲ್ಲಿ ಬಿಗ್ ಬಿ ಅಮಿತಾಭ್​ ಬಚ್ಚನ್, ಕಾಲಿವುಡ್ ಸೂಪರ್​ ಸ್ಟಾರ್ ಕಮಲ್ ಹಾಸನ್, ಬಾಲಿವುಡ್​ ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ, ಫಿಟ್ನೆಸ್​ ಐಕಾನ್​​ ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಮಹಾನಟಿ ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್ ಆ್ಯಕ್ಷನ್​​ ಕಟ್​​ ಹೇಳುತ್ತಿರುವ ಬಿಗ್​ ಬಜೆಟ್​ ಸಿನಿಮಾವಿದು. ಮುಂದಿನ ವರ್ಷ 'ಕಲ್ಕಿ 2898 ಎಡಿ' ಬಿಡುಗಡೆಯಾಗಲಿದೆ.

'ಸ್ಪಿರಿಟ್'​: ಪ್ರಭಾಸ್​ ಅವರ ಮುಂದಿನ ಸಿನಿಮಾಗಳ ಸಾಲಿನಲ್ಲಿ 'ಸ್ಪಿರಿಟ್​' ಚಿತ್ರ ಕೂಡ ಇದೆ. ಸಂದೀಪ್​ ರೆಡ್ಡಿ ವಂಗಾ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾವಿದು. 400 ಕೋಟಿ ಬಜೆಟ್​ನಲ್ಲಿ ಟಿ-ಸಿರೀಸ್​ ಮುಖ್ಯಸ್ಥ ಭೂಷಣ್​ ಕುಮಾರ್​ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್​ ಪೊಲೀಸ್​ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

'ರಾಜಾ ಡಿಲಕ್ಸ್​': ದಾಸುರಿ ಮಾರುತಿ ನಿರ್ದೇಶನದ ತೆಲುಗು ಹಾರರ್​ ಕಾಮಿಡಿ ಸಿನಿಮಾ 'ರಾಜಾ ಡಿಲಕ್ಸ್​'ನಲ್ಲಿ ಪ್ರಭಾಸ್​ ಕಾಣಿಸಿಕೊಳ್ಳಲಿದ್ದಾರೆ.

ಆಕ್ಷನ್​ ಥ್ರಿಲ್ಲರ್​, ರೊಮ್ಯಾಂಟಿಕ್​, ಹಾರರ್​, ಕಾಮಿಡಿ ಕಥೆಗಳಿಂದ ಹಿಡಿದು ಪುರಾಣ, ಮಹಾಕಾವ್ಯಗಳಾಧಾರಿತ ಸಿನಿಮಾಗಳಲ್ಲೂ ಪ್ರಭಾಸ್​ ಛಾಪು ಮೂಡಿಸಿದ್ದಾರೆ. ವಿಶ್ವದಾದ್ಯಂತ ಫ್ಯಾನ್​ ಫಾಲೋವಿಂಗ್​ ಸಂಪಾದಿಸಿರುವ ನಟನಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಮುಂದಿನ ಅವರ ಸಿನಿಮಾಗಳ ಮೇಲೆ ಮುಗಿಲೆತ್ತರದ ನಿರೀಕ್ಷೆಗಳಿವೆ. ಇತ್ತೀಚೆಗಿನ ಕೆಲವು ಚಿತ್ರಗಳಲ್ಲಿ ಹಿನ್ನಡೆ ಕಂಡಿರುವ ನಟನಿಗೆ ಮುಂದಿನ ಸಿನಿಮಾಗಳು ಬ್ಲಾಕ್​ಬಸ್ಟರ್​ ಹಿಟ್​ ನೀಡಬಹುದೇ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ: ನಾಳೆ ಪ್ರಭಾಸ್​ ಜನ್ಮದಿನ: ಹೈದರಾಬಾದ್‌ನಲ್ಲಿ ಅತಿ ದೊಡ್ಡ ಕಟೌಟ್‌ಗೆ ಸಿದ್ಧತೆ, 'ಸಲಾರ್' ಟ್ರೇಲರ್ ರಿಲೀಸ್ ನಿರೀಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.