ETV Bharat / entertainment

'ಶಾರುಖ್ ಖಾನ್​​ಗೆ ನಟನೆ ಗೊತ್ತಿಲ್ಲ, ಸುಂದರವಾಗಿಲ್ಲ': ಪಾಕಿಸ್ತಾನಿ ನಟಿ ತರಾಟೆಗೆ ತೆಗೆದುಕೊಂಡ ಫ್ಯಾನ್ಸ್ - ಮಹ್ರೂಮ್ ಬಲೋಚ್ ಟ್ರೋಲ್

ನಟ ಶಾರುಖ್ ಖಾನ್ ಅವರ ಬಗ್ಗೆ ಪಾಕಿಸ್ತಾನಿ ನಟಿ ಮಹ್ರೂಮ್ ಬಲೋಚ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Mahnoor Baloch comments on Shah Rukh
ಶಾರುಖ್ ಬಗ್ಗೆ ನಟಿ ಮಹ್ರೂಮ್ ಬಲೋಚ್ ಕಾಮೆಂಟ್
author img

By

Published : Jul 7, 2023, 4:38 PM IST

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ವಿಶ್ವಾದ್ಯಂತ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ನಟನ ವಿರುದ್ಧದ ಹೇಳಿಕೆಗಳನ್ನು ಅವರ ಕಟ್ಟಾ ಅಭಿಮಾನಿಗಳು ಸಹಿಸುವುದಿಲ್ಲ. ಇದೀಗ ಬಾಲಿವುಡ್​ ಕಿಂಗ್​​ ಖಾನ್​ ಶಾರುಖ್​ ಅವರನ್ನು ಟೀಕಿಸಿದ ಪಾಕಿಸ್ತಾನಿ ನಟಿಯನ್ನು ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

ತಮ್ಮ ವ್ಯಕ್ತಿತ್ವದಿಂದ ಎಲ್ಲರನ್ನೂ ಆಕರ್ಷಿಸುತ್ತಾರೆ: ಪಾಕಿಸ್ತಾನಿ ನಟಿ ಮಹ್ರೂಮ್ ಬಲೋಚ್ (Mahroom Baloch) ಅವರು ಪಠಾಣ್​​ ನಟನ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ನಟಿಯ ಹೇಳಿಕೆ ಬೆನ್ನಲ್ಲೇ ಅಭಿಮಾನಿಗಳು ನಟನ ಬೆಂಬಲಕ್ಕೆ ಬಂದಿದ್ದಾರೆ. ''ಶಾರುಖ್​ ಖಾನ್​ ಅವರಿಗೆ ನಟನೆ ತಿಳಿದಿಲ್ಲ ಮತ್ತು ನೋಡಲು ಸುಂದರವಾಗಿಲ್ಲ ಆದರೆ ಅವರು ತಮ್ಮ ವ್ಯಕ್ತಿತ್ವದಿಂದ ಎಲ್ಲರನ್ನೂ ಆಕರ್ಷಿಸುತ್ತಾರೆ'' ಎಂದು ಪಾಕಿಸ್ತಾನಿ ನಟಿ ತಿಳಿಸಿದ್ದಾರೆ. ಶಾರುಖ್ ಖಾನ್ ಅವರ ನಟನಾ ಸಾಮರ್ಥ್ಯದ ಬಗ್ಗೆ ಪಾಕಿಸ್ತಾನಿ ನಟಿ ಮಾಡಿದ್ದ ಕಾಮೆಂಟ್ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆಗೊಳಗಾಗಿದ್ದಾರೆ.

ಅಭಿಮಾನಿಗಳ ಕಿಡಿ: ಅಧಿಕೃತ ಯೂಟ್ಯೂಬ್ ಚಾನೆಲ್ ಒಂದು ಪೋಸ್ಟ್ ಮಾಡಿರುವ ಸಂದರ್ಶನದ ಕುರಿತು ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ. "ಇಡೀ ಜಗತ್ತಿಗೆ ಶಾರುಖ್​ ಖಾನ್​​ ಯಾರೆಂದು ತಿಳಿದಿದೆ. ನನ್ನನ್ನು ಕ್ಷಮಿಸಿ, ನೀವು ಯಾರು?" ಎಂದು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದಾರೆ. ಮತ್ತೋರ್ವ ಅಭಿಮಾನಿ ಪ್ರತಿಕ್ರಿಯಿಸಿ, "3.8 ಬಿಲಿಯನ್​​ ಜನರು ಎಸ್ಆರ್​​ಕೆ​​ ಅವರ ಶ್ರೇಷ್ಠತೆಯನ್ನು ಅರಿತಿದ್ದಾರೆ, ಅವರು ಕಿಂಗ್ ಖಾನ್" ಎಂದು ತಿಳಿಸಿದ್ದಾರೆ. ಮತ್ತೋರ್ವ ವ್ಯಕ್ತಿ ಪ್ರತಿಕ್ರಿಯಿಸಿ, "ದೇವರು ಜಗತ್ತಿನಲ್ಲಿ ಖ್ಯಾತಿ ಮತ್ತು ಗೌರವವನ್ನು ನೀಡಿದ ವ್ಯಕ್ತಿಯನ್ನು ಗೌರವಿಸಲು ಕಲಿಯಿರಿ. ಸೀಮಿತ ಕೆಲಸ ಮತ್ತು ಪ್ರತಿಭೆಗಿಂತ ಹೆಚ್ಚಾದ ಅಹಂಕಾರವನ್ನು ಹೊಂದಿರುವ ದುಃಖಭರಿತ ಕಲಾವಿದರು ನಮ್ರತೆ ಬಗ್ಗೆ ಕಲಿಯಬೇಕು" ಎಂದು ಹೇಳಿದ್ದಾರೆ.

'ಸಮರ್ಥ ನಟ ಅಲ್ಲ': ನಟ ಶಾರುಖ್ ಖಾನ್ ಆಕರ್ಷಕವಾಗಿಲ್ಲ, ಸಮರ್ಥ ನಟ ಅಲ್ಲ, ಅವರು ಸಾಂಪ್ರದಾಯಿಕ ಅರ್ಥದಲ್ಲಿ ಆಕರ್ಷಣೀಯವಾಗಿಲ್ಲ ಎಂದು ಪಾಕಿಸ್ತಾನಿ ನಟಿ ಮಹ್ರೂಮ್ ಬಲೋಚ್ ಭಾವಿಸಿದ್ದಾರೆ. ಟೀಕೆ ಮಾಡಿದ ನಂತರ ನಟನಿಗೆ "ದೊಡ್ಡ ಉದ್ಯಮಿ" ಎಂದು ಹೇಳಿದರು. ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅವರ ಬಾಹ್ಯ ನೋಟದಿಂದ ನಿರ್ಧರಿಸಲಾಗುವುದಿಲ್ಲ ಎಂಬುದನ್ನು ಸಹ ನಟಿ ಚರ್ಚಿಸಿದರು. ಶಾರುಖ್ "ಓರ್ವ ದೊಡ್ಡ ಉದ್ಯಮಿ" ಮತ್ತು "ತನ್ನನ್ನು ತಾನು ಹೇಗೆ ಮಾರ್ಕೆಟ್ ಮಾಡಿಕೊಳ್ಳಬೇಕು ಎಂಬುದು ಅವರಿಗೆ ತಿಳಿದಿದೆ" ಎಂದು ಹೇಳಿದ ಅವರು "ಅವರಿಗೆ ನಟನೆ ತಿಳಿದಿಲ್ಲ" ಎಂದು ತಿಳಿಸಿದರು.

ಇದನ್ನೂ ಓದಿ: Rishab Shetty Birthday: ಅಭಿಮಾನಿಗಳೊಂದಿಗೆ ಇಂದು 'ಕಾಡುಬೆಟ್ಟು ಶಿವ'ನ ಜನ್ಮದಿನ ಡಿವೈನ್​ ಸ್ಟಾರ್ ರಿಷಬ್‌ ಶೆಟ್ಟಿ ಮುಂದಿನ ಸಿನಿಮಾಗಳಿವು..

"ಶಾರುಖ್ ಖಾನ್ ನಿಜವಾಗಿಯೂ ಅತ್ಯುತ್ತಮ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಆದರೆ, ನೀವು ಅವರನ್ನು ಆಕರ್ಷಣೀಯ ಮಾನದಂಡಗಳ ಮೂಲಕ ನೋಡಿದರೆ ಅದಕ್ಕೆ ಅವರು ಹೊಂದಿಕೆಯಾಗುವುದಿಲ್ಲ. ಅವರು ಉತ್ತಮ ವರ್ತನೆಯಿಂದಾಗಿ ಮಾತ್ರ ಅದ್ಭುತವಾಗಿ ಕಾಣುತ್ತಾರೆ" ಎಂದು ತಿಳಿಸಿದರು. ಮಾತು ಮುಂದುವರಿಸಿ ಅವರಲ್ಲಿ ಆ ತೇಜಿಸದೇ , ಹಾಗಾಗಿ ಆಕರ್ಷಣೀಯವಾಗಿ ಕಾಣಬಹುದು. ಆ ವಿಶೇಷ ತೇಜಸ್ಸಿಲ್ಲದಿದ್ದರೂ ಅನೇಕರು ಬಹಳ ಅದ್ಭುತ, ಆಕರ್ಷಣೀಯವಾಗಿದ್ದಾರೆ. ಆದರೆ ಅವರಲ್ಲಿ ಸ್ಪೆಷಲ್​ ಆ್ಯಟಿಟ್ಯೂಡ್, ವಿಶೇಷ ತೇಜಸ್ಸಿಲ್ಲದ (aura) ಹಿನ್ನೆಲೆ ಅವರನ್ನು ಯಾರೂ ಗಮನಿಸುವುದಿಲ್ಲ ಎಂದು ಸಹ ಹೇಳಿದ್ದರು.

ಇದನ್ನೂ ಓದಿ: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತೀಯ ಸಿನಿಮಾ: ಅಮೆರಿಕದಲ್ಲಿ ಪ್ರಾಜೆಕ್ಟ್ ಕೆ ಟ್ರೇಲರ್ ಲಾಂಚ್

"ನನ್ನ ಅಭಿಪ್ರಾಯದಲ್ಲಿ, ಶಾರುಖ್ ಖಾನ್​ ನಟನೆಯನ್ನು ಅರ್ಥಮಾಡಿಕೊಂಡಿಲ್ಲ. ಅವರು ಅದ್ಭುತ ಉದ್ಯಮಿ ಮತ್ತು ಸ್ವಯಂ ಪ್ರಚಾರ ಮಾಡಿಕೊಳ್ಳುವುದರಲ್ಲಿ ಪರಿಣಿತರು. ನನ್ನ ಹೇಳಿಕೆ ತಪ್ಪಾಗಿರಬಹದು, ಅವರ ಅಭಿಮಾನಿಗಳು ಮತ್ತು ಇತರರು ಒಪ್ಪದಿದ್ದರೂ ಪರವಾಗಿಲ್ಲ. ಅವರ ವ್ಯಕ್ತಿತ್ವ ಸಕಾರಾತ್ಮಕವಾಗಿದೆ ಮತ್ತು ತಮ್ಮನ್ನು ತಾವು ಚೆನ್ನಾಗಿ ಪ್ರಮೋಟ್ ಮಾಡಿಕೊಳ್ಳುತ್ತಾರೆ, ಆದ್ರೆ ನಟನೆ ತಿಳಿದಿಲ್ಲ'' ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.