ದಿನಕ್ಕೊಂದು ಹೇಳಿಕೆಗಳನ್ನು ನೀಡೋ ಮೂಲಕ ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್. ಅತ್ಯುತ್ತಮ ಸಿನಿಮಾ, ಅದ್ಭುತ ನಟನೆ ಜೊತೆ ಜೊತೆಗೆ ಬೋಲ್ಡ್ ಹೇಳಿಕೆ. ತಮ್ಮ ಸ್ಟೇಟ್ಮೆಂಟ್ಸ್ ಮೂಲಕವೇ ಸುದ್ದಿಯಲ್ಲಿರುವ ಬಾಲಿವುಡ್ ಬ್ಯೂಟಿ. ಹೀಗೆ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುವ ಸಿನಿಮಾ ತಾರೆ ಇದೀಗ ಮತ್ತೊಂದು ವಿಚಾರವಾಗಿ ಚರ್ಚೆಯ ವಿಷಯವಾಗಿದ್ದಾರೆ.
ಕಂಗನಾ ರಣಾವತ್ ವಿರುದ್ಧ ಕಿಡಿ ಕಾರಿದ ಪಾಕ್ ನಟಿ: ಪಾಕಿಸ್ತಾನಿ ನಟಿ ನೌಶೀನ್ ಶಾ ಅವರು ಬಾಲಿವುಡ್ ನಟಿ ಕಂಗನಾ ರಣಾವತ್ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಕಂಗನಾ ರಣಾವತ್ಗೆ ಕಪಾಳ ಮೋಕ್ಷ ಮಾಡುವಷ್ಟು ಕಿಡಿಕಾರಿದ್ದಾರೆ. ಈ ಕೋಪಕ್ಕೆ ಕಾರಣವನ್ನೂ ಬಹಿರಂಗಪಡಿಸಿದ್ದಾರೆ.
ಪಾಕಿಸ್ತಾನ ಕುರಿತು ಕಂಗನಾ ಟೀಕೆ: ಕಂಗನಾ ರಣಾವತ್ ಬೋಲ್ಡ್ ಹೇಳಿಕೆಗಳಿಗೆ ಹೆಸರುವಾಸಿ. ತರಾಟೆ ತೆಗೆದುಕೊಳ್ಳಲು ನಿಂತರೆ ಯಾರನ್ನೂ ಲೆಕ್ಕಿಸುವುದಿಲ್ಲ. ಯಾರೇ ಇರ್ಲಿ ಕಂಗನಾ ಮಾತ್ರ ಡೋಂಟ್ ಕೇರ್. ಆದರೀಗ ಕಂಗನಾಗೆ ಡೋಂಟ್ ಕೇರ್ ಅಂದ್ರು ಪಾಕಿಸ್ತಾನಿ ನಟಿ ನೌಶೀನ್ ಶಾ. ನೆರೆ ರಾಷ್ಟ್ರ ಪಾಕಿಸ್ತಾನ ಕುರಿತು ಕಂಗನಾ ರಣಾವತ್ ಟೀಕಿಸಿದ್ದರು ಎಂಬ ಆರೋಪಗಳಿವೆ. ಇದು ನೌಶೀನ್ ಶಾ ಅವರಿಗೆ ಅಸಮಧಾನವನ್ನುಂಟು ಮಾಡಿದೆ. ಈ ಬಗ್ಗೆ ಕಿಡಿ ಕಾರಿದ ಪಾಕ್ ನಟಿ, ಪಾಕಿಸ್ತಾನ ಮತ್ತು ಭಾರತದ ಕಲಾವಿದರು ಪರಸ್ಪರ ಗೌರವಿಸಬೇಕು ಎಂದು ತಿಳಿಸಿದ್ದಾರೆ.
ಕಂಗನಾ ರಣಾವತ್ಗೆ ಕಪಾಳ ಮೋಕ್ಷ!: ಇನ್ನೂ ಪಾಕಿಸ್ತಾನಿ ನಟಿ ನೌಶೀನ್ ಶಾ ಅವರು ಈವರೆಗೆ ಯಾವುದೇ ಭಾರತೀಯ ನಟರನ್ನು ಭೇಟಿ ಮಾಡಿಲ್ಲ. ಆದರೆ, ಇದೀಗ ಕಂಗನಾ ರಣಾವತ್ ಅವರನ್ನು ಭೇಟಿ ಮಾಡಿ, ಎರಡು ಬಾರಿ ಕಪಾಳಮೋಕ್ಷ ಮಾಡಲು ಬಯಸಿದ್ದಾರೆ.
ಬಾಲಿವುಡ್ ನಟಿ ಕಂಗನಾ ರಣಾವತ್ ನನ್ನ ದೇಶ ಪಾಕಿಸ್ತಾನ ಕುರಿತು ಟೀಕಿಸಿದ್ದಾರೆ, ಪಾಕ್ ಸೈನ್ಯದ ಬಗ್ಗೆ ಅವಮಾನ ಮಾಡಿದ್ದಾರೆ. ಅವರ ಧೈರ್ಯಕ್ಕೆ ನನ್ನ ನಮಸ್ಕಾರ. ಆದರೆ ಅವರು ಯಾರ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುದು ಅವರಿಗೆ ತಿಳಿದಿಲ್ಲ. ಅಲ್ಲಿ ತಮ್ಮ ನಟನೆ, ನಿರ್ದೇಶನ, ನಿರ್ಮಾಣ ಸೇರಿದಂತೆ ತಮ್ಮ ಚಿತ್ರಗಳ ಕುರಿತು ಗಮನ ಹರಿಸುವುದೇ ಉತ್ತಮ ಎಂದು ಪಾಕ್ ನಟಿ ಎಚ್ಚರಿಸಿದ್ದಾರೆ.
ಇದನ್ನೂ ಓದಿ: 'ನಾನು ಸನಾತನ ಧರ್ಮದ ವಿರೋಧಿಯಲ್ಲ, ಅಸಮಾನತೆಯ ವಿರೋಧಿ': ನಟ ಚೇತನ್
ಪಾಕಿಸ್ತಾನಿ ನಟಿ ನೌಶೀನ್ ಶಾ ಇಷ್ಟಕ್ಕೆ ನಿಲ್ಲಲಿಲ್ಲ. ಮಾತು ಮುಂದುವರಿಸಿದ ಅವರು, ಪಾಕಿಸ್ತಾನಿ ಸೇನೆ ಮತ್ತು ಗುಪ್ತಚರ ಸಂಸ್ಥೆಗಳ ಬಗ್ಗೆ ಕಂಗನಾ ರಣಾವತ್ ಅವರಿಗೆ ಇಷ್ಟೊಂದು ಮಾಹಿತಿ ಹೇಗೆ ತಿಳಿದಿದೆ? ಎಂದು ಆರ್ಶರ್ಯ ವ್ಯಕ್ತಪಡಿಸಿದರು. ಪಾಕಿಸ್ತಾನಿ ಜನರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಕಂಗನಾರಿಗೆ ಹೇಗೆ ಗೊತ್ತು?. ನಮ್ಮ ಸೇನೆ ಬಗ್ಗೆ ನಿಮಗೆ ಇಷ್ಟೊಂದು ಮಾಹಿತಿ ಎಲ್ಲಿಂದ? ನಮಗೇನೇ ಈ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ, ನಿಮಗೇಗೆ? ಎಂದು ಪ್ರಶ್ನೆಗಳ ಮಳೆ ಸುರಿಸಿದ್ದಾರೆ.
ಇದನ್ನೂ ಓದಿ: ವಿಡಿಯೋ: ಅಣ್ಣ ಚಿರಂಜೀವಿ ಸರ್ಜಾ ಸಮಾಧಿ ಬಳಿ ಮಲಗಿದ ಧ್ರುವ!